ಮೊಸರಿನ ಪ್ರಯೋಜನಗಳು, ಗುಣಲಕ್ಷಣಗಳು ಮತ್ತು ಅನಾನುಕೂಲಗಳು 2023/ Amazing Health Benefits of Curd in Kannada.

ಮೊಸರಿನ ಪ್ರಯೋಜನಗಳು, ಗುಣಲಕ್ಷಣಗಳು ಮತ್ತು ಅನಾನುಕೂಲಗಳು

ಮೊಸರು ಎಂದರೇನು ?( what is curd ? )

ಮೊಸರು  ಉದುಗುವಿಕೆ ಪ್ರಕ್ರಿಯೆಯ ಮೂಲಕ ತಯಾರಿಸಲಾದ ಹಾಲಿನ ಉತ್ಪನ್ನವಾಗಿದೆ. ನಾವು ಹಾಲನ್ನುಸುಮಾರು 30 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಕುದಿಸಿ ನಂತರ ಅದನ್ನು ತಣ್ಣಗಾಗಿಸಿ,ಉದುಗುವಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹಾಲಿಗೆ  ಒಂದು ಚಮಚ ಮೊಸರು ಸೇರಿಸಿ. ಕೆಲವು ಗಂಟೆಗಳ ನಂತರ ಬ್ಯಾಕ್ಟೀರಿಯವೂ ಗುಣಿಸಲ್ಪಟ್ಟು ಹಾಲನ್ನು ಮೊಸರಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಪೌಷ್ಟಿಕಾಂಶದ ಅಂಶದಿಂದಾಗಿ ಮೊಸರು ತಿನ್ನುವುದರಿಂದ ಅಪಾರ ಪ್ರಯೋಜನಗಳಿವೆ.

 ಮೊಸರಿನ ಅನೇಕ ಪ್ರಯೋಜನಗಳ ಕಾರಣದಿಂದ ಇದು ಪ್ರಪಂಚಾದ್ಯಂತ ನೆಚ್ಚಿನ ಆಹಾರ ಪದಾರ್ಥವಾಗಿದೆ. ಮೊಸರು ಹಾಲಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ಮೊಸರು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ತುಂಬಾ ಒಳ್ಳೆಯದು. ನಮ್ಮ ದೇಶದ ಹೊರತಾಗಿ ಬೇರೆ ದೇಶಗಳ ಜನರು ಕೂಡ ಇದನ್ನು  ತಮ್ಮ ಆಹಾರದಲ್ಲಿ ತೆಗೆದುಕೊಳ್ಳುತ್ತಾರೆ. ವೈದ್ಯರು ಮತ್ತು ಎಲ್ಲಾ ಆಹಾರ ತಜ್ಞರು ಊಟದಲ್ಲಿ ಒಂದು ಕಪ್ ಮೊಸರು ತಿನ್ನಲು ಶಿಫಾರಸ್ಸು ಮಾಡುತ್ತಾರೆ. ತಾಜಾ ಮೊಸರು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.

ಮೊಸರಿನಲ್ಲಿರುವ ಪೌಷ್ಟಿಕಾಂಶದ ಮೌಲ್ಯ . 

ಪೋಷಕಾಂಶಗಳು (100ಗ್ರಾಂ ಮೊಸರಿನಲ್ಲಿ)ಮೊತ್ತ
ಕ್ಯಾಲೋರಿಗಳು 98 ಕೆ. ಕೆ.ಎಲ್
ಕಾರ್ಬೋಹೈಡ್ರೇಟ್ ಗಳು3.4  ಗ್ರಾಂ
ಪರಿಷ್ಕರಿಸಿದ ಕೊಬ್ಬು8 ಗ್ರಾಂ
ಕೊಬ್ಬು4.3 ಗ್ರಾಂ
ಪ್ರೋಟೀನ್11 ಗ್ರಾಂ
ಪೊಟ್ಯಾಶಿಯಂ104 ಮಿ ಗ್ರಾಂ
ಸೋಡಿಯಂ364 ಮಿ ಗ್ರಾಂ
ವಿಟಮಿನ್  ಎ2%
ಮೆಗ್ನೀಷಿಯಂ2%
ಕ್ಯಾಲ್ಸಿಯಂ0.08 %
ಸತು1ಮಿ ಗ್ರಾಂ

ಮೊಸರಿನ ಪ್ರಯೋಜನಗಳು /Benefits of Curd

 ಹೃದಯಕ್ಕೆ ಮೊಸರಿನ ಪ್ರಯೋಜನಗಳು ( Good for Heart):

 ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ವಯಸ್ಸನ್ನು ನೋಡಿ ಬರುವುದಿಲ್ಲ, ಇಂದಿನ ಆಹಾರ ಪದ್ಧತಿಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು, ಮೊಸರು ಸೇವಿಸುವುದು ಅತ್ಯುತ್ತಮ, ಪ್ರತಿದಿನ ಮೊಸರು ತಿನ್ನುವುದರಿಂದ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಬಹುದು. ಮೊಸರಿನಿಂದ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ ಮತ್ತು  ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ.

 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ (Provides Strong Immunity):

 ಮೊಸರಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಗಳು ನಮ್ಮ ದೇಹದೊಳಗಿನ ಸೂಕ್ಷ್ಮಜೀವಿಗಳು ಮತ್ತು ನಮ್ಮ ಸುತ್ತಲಿನ ಗಾಳಿ ಮತ್ತು ನೀರಿನಿಂದ ಹರಡುವ ರೋಗಗಳ  ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೊಸರು ತಿನ್ನುವುದರಿಂದ ದೇಹದಲ್ಲಿ ಚೈತನ್ಯವಿರುತ್ತದೆ ಮತ್ತು ಅನೇಕ ರೋಗಗಳು ದೂರವಾಗುತ್ತವೆ.

 ಮೂಳೆಗಳನ್ನು ಬಲಪಡಿಸುತ್ತದೆ( strengthens bones and teeth):

 ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಸಮೃದ್ಧವಾಗಿರುವುದರಿಂದ ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.( Makes Digestion Better):

ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ಕರುಳಿನ ಚಟುವಟಿಕೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಮೊಸರು ಮಲಬದ್ಧತೆ, ಗ್ಯಾಸ್ ಅಸಿಡಿಟಿ ಅಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. 

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ(Helps to lose weight):

 ಮೊಸರು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿದಂತಾಗುತ್ತದೆ, ಇದರಿಂದ ಹಸಿವು ಕಡಿಮೆಯಾಗುತ್ತದೆ. ಇದರಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇದ್ದು, ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.ಮೊಸರಿನಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ . ಮೊಸರು ದೇಹದಿಂದ ಹೆಚ್ಚುವರಿ  ಕೊಬ್ಬನ್ನು ತೆಗೆದು ಹಾಕುತ್ತದೆ.

ಯೋನಿ ಸೋಂಕುಗಳನ್ನು ತಡೆಯುತ್ತ(Prevents vaginal infections):

ಮಹಿಳೆಯರು ಮೊಸರು ತಿನ್ನುವುದರಿಂದ ಈಸ್ಟ್ ಸೊಂಕಿನ ಬೆಳವಣಿಗೆಯನ್ನು ತಡೆಯಬಹುದು. ಮೊಸರಿನಲ್ಲಿರುವ ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟೀರಿಯಾದಿಂದಾಗಿ ಇದು ಯೋನಿಯ ಈಸ್ಟ್ ಸಮತೋಲನವನ್ನು ಮರುಸ್ಥಾಪಿಸುತ್ತದೆ.ಮತ್ತು ಯೋನಿ ಸೋಂಕುಗಳನ್ನು ತಡೆಯುತ್ತದೆ. 

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ(Controls high blood pressure):

ಮೊಸರಿನಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿಗೆ ಒಳ್ಳೆಯದು( Good for skin and hair)

ಮೊಸರಿನ ಪ್ರಯೋಜನಗಳು

 ಒಣ ಚರ್ಮವನ್ನು ಗುಣಪಡಿಸುತ್ತದೆ( heals dry skin)

ಮೊಸರು ಸೇವನೆಯು ಚರ್ಮವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಶುಷ್ಕ ಮತ್ತು ತುರಿಕೆ ಚರ್ಮದ ಸಮಸ್ಯೆಗೆ ನೀವು ವಿದಾಯ ಹೇಳಬಹುದು.

ಚರ್ಮದ ಪೋಷಣೆಯನ್ನು ವೃದ್ಧಿಸುತ್ತದೆ( Ensures skin nourishment)

 ಮೊಸರಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ನಂತಹ ಅಗತ್ಯ ಪೋಷಕಾಂಶಗಳು ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.

ಮೊಸರಿನ ಬಳಕೆಯು ಮೊಡವೆ ಚರ್ಮ, ಸೂರ್ಯನ ಹಾನಿ, ಸೂಕ್ಷ್ಮ ರೇಖೆಗಳು ಮತ್ತು ದೊಡ್ಡರಂದ್ರಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೊಸರು ಕಾಫಿ, ಅಲೋವೆರಾ, ಅರಿಶಿನ, ಕಿತ್ತಲೆ ಸಿಪ್ಪೆ, ಅಕ್ಕಿ ಹಿಟ್ಟು, ರೋಸ್ ವಾಟರ್ ಮತ್ತು ಇತರೆ ವಿವಿಧ ಪದಾರ್ಥಗಳೊಂದಿಗೆ ಚೆನ್ನಾಗಿ ಸಂಯೋಜಿಸಬಹುದಾಗಿದೆ, ಮತ್ತು ಇದು ಚರ್ಮಕ್ಕೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. 

ತಲೆ ಹೊಟ್ಟು ಹೋಗಲಾಡಿಸುತ್ತದೆ (ಮೊಸರಿನ ಪ್ರಯೋಜನಗಳು) ( Controls dandruff )

 ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ ಮೊಸರು ತಲೆ ಹೊಟ್ಟು ನಿವಾರಿಸಲು ಒಂದು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. 

ಮೊಸರು ಕೂದಲಿಗೆ ನೈಸರ್ಗಿಕ ಕಂಡಿಷ್ನರ್ ಇದ್ದಂತೆ ಇದು ಕೂದಲಿಗೆ ತೇವಾಂಶವನ್ನು ನೀಡುತ್ತದೆ.

ಮೊಸರಿನ ಅಡ್ಡ ಪರಿಣಾಮಗಳು( Side effects of curd)

 ಮೊಸರಿನಿಂದ ಯಾವುದೇ ನಿರ್ದಿಷ್ಟ ಪ್ರತಿಕೂಲ ಅಡ್ಡ ಪರಿಣಾಮಗಳಿದ್ದರೂ, ಅದರ ಹೆಚ್ಚಿನ ಸೇವನೆ ಬಾರಿ ಪ್ರಮಾಣದಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದಿಲ್ಲ.

  •  ಸಂಧಿವಾತ ಅಥವಾ ಕೀಲು ಸಮಸ್ಯೆ ಇರುವವರು ದಿನನಿತ್ಯದ ಮೊಸರು ಸೇವನೆಯಿಂದ ದೂರವಿರಬೇಕು. ಹುಳಿ ಆಹಾರವಾಗಿರುವುದರಿಂದ ಕೀಲು ನೋವು ಹೆಚ್ಚಾಗಬಹುದು.
  •  ರಾತ್ರಿಯಲ್ಲಿ ಮೊಸರು ತಿನ್ನುವುದು, ವಿಶೇಷವಾಗಿ ನೀವು ದುರ್ಬಲ ಜೀರ್ಣಕ್ರಿಯೆಯನ್ನು ಹೊಂದಿದ್ದರೆ ಇದು ಆಮ್ಲೀಯತೆಯನ್ನು ಉಂಟುಮಾಡಬಹುದು.
  •  ಮೊಸರಿನ ಹೆಚ್ಚಿನ ಸೇವನೆಯೂ ಕೆಮ್ಮು ಮತ್ತು ಶೀತಕ್ಕೆ ಕಾರಣವಾಗಬಹುದು. 

ಇನ್ನಷ್ಟು ಓದಿ

ತುಳಸಿ ಎಲೆಗಳ ಗುಣಲಕ್ಷಣಗಳು ಮತ್ತು ತುಳಸಿ ಎಲೆಗಳ ಅನುಕೂಲಗಳು

ಸೋಂಪು ಕಾಳಿದ ಪ್ರಯೋಜನಗಳು ಉಪಯೋಗಗಳು ಮತ್ತು ಅನಾನುಕೂಲಗಳು

 ಸೋರೆಕಾಯಿ ಅಥವಾ ಬೂದುಕುಂಬಳಕಾಯಿಯ ಜ್ಯೂಸ್ ನ ಆರೋಗ್ಯ ಪ್ರಯೋಜನಗಳು

Leave a Comment