ವಿದ್ಯಾರ್ಥಿಗಳಿಗೆ ನುಡಿಮುತ್ತುಗಳು|50+  Inspiring Quotes for Students in Kannada.

ವಿದ್ಯಾರ್ಥಿಗಳಿಗೆ ನುಡಿಮುತ್ತುಗಳು

ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ಪ್ರೇರಣೆ ಸಹಾಯ ಮಾಡುತ್ತದೆ. ಅವರ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲು, ವಿದ್ಯಾರ್ಥಿಗಳು ಸಾಮಾನ್ಯವಾಗಿ, ಪ್ರೇರಣೆ ನೀಡುವ ಉಲ್ಲೇಖಗಳಿಗಾಗಿ ಹುಡುಕುತ್ತಾರೆ. ಪ್ರೇರಣೆಯು ನಿಮ್ಮ ಆಂತರಿಕ ಪ್ರಚೋದನೆಯನ್ನು ಒತ್ತಿಸುವ ಒಂದು ರೀತಿಯ ಇಂಧನವಾಗಿದೆ, ಇದು ಯಾವುದೇ ಕಾರ್ಯವನ್ನು ಉತ್ಕೃಷ್ಟಗೊಳಿಸಲು  ನಿಮ್ಮನ್ನು ಪ್ರೇರೇಪಿಸುತ್ತದೆ.

ವಿಚಲಿತರಾಗದಂತೆ ಪ್ರಯತ್ನಿಸುವುದು ದೊಡ್ಡ ಸವಾಲಾಗಿರುತ್ತದೆ, ಹೆಚ್ಚಿನ ವಿದ್ಯಾರ್ಥಿಗಳು, ವಿಚಲತೆಯಿಂದ ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಅವರು ಅದನ್ನು ತಪ್ಪಿಸಿದರೆ, ಅದು ಮತ್ತೆ ಮನಸ್ಸಿನಲ್ಲಿ ಪ್ರತಿಫಲಿಸುವದಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ದುರಾದೃಷ್ಟವಶ ಮತ್ತೆ ಕೆಲವು ಸಮಯದ ನಂತರ ಅವರು ಅದೇ ಸಮಸ್ಯೆಯೊಂದಿಗೆ ಹೋರಾಡಲು ಪ್ರಾರಂಭಿಸುತ್ತಾರೆ.ಅಂತಹ ಸಂದರ್ಭದಲ್ಲಿ ಸಹಾಯವಾಗಲೆಂದು ಇಲ್ಲಿ ಕೆಲವು ಪ್ರಸಿದ್ಧ ಮತ್ತು ಸ್ಪೂರ್ತಿದಾಯಕ ಉಲ್ಲೇಖಗಳನ್ನು ಪಟ್ಟಿ ಮಾಡಲಾಗಿದೆ. 

ವಿದ್ಯಾರ್ಥಿಗಳಿಗೆ ನುಡಿಮುತ್ತುಗಳು

ಶಿಕ್ಷಣದ ಬೇರುಗಳು ಕಹಿ ಇರಬಹುದು, ಆದರೆ ಅದರ ಫಲ ಸಿಹಿಯಾಗಿರುತ್ತದೆ ಅರಿಸ್ಟಾಟಲ್- ಅರಿಸ್ಟಾಟಲ್ 

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು- ಸ್ವಾಮಿ ವಿವೇಕಾನಂದ 

ಇತಿಹಾಸ ಓದುವಂತಹ ವ್ಯಕ್ತಿಗಳಾಗಬೇಡಿ, ಇತಿಹಾಸ ನಿರ್ಮಿಸುವಂತ ವ್ಯಕ್ತಿಗಳಾಗಿ 

ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ,ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು  ಗ್ರಂಥಾಲಯಕ್ಕೆ ಸಮಾನ 

ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡಗಿನ ಏಕಾಗ್ರ ಚಿತ್ತ ಬದ್ಧತೆ, ಅದರಲ್ಲಿ ಪ್ರೀತಿ. 

ನಿದ್ರೆಯಲ್ಲಿ ಕಾಣುವುದು ಕನಸಲ್ಲ ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. 

ಸೋಲೆಂಬ ರೋಗಕ್ಕೆ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು, ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ. 

 ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ, ವಿಫಲತೆಯು ನನ್ನನ್ನು ಏನು ಮಾಡಲಾಗದು. 

ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ, ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ. 

ಕೇವಲ ಯಶಸ್ಸಿನ ಕಥೆಗಳನ್ನೇ ಹೆಚ್ಚು ಓದಬೇಡಿ, ಏಕೆಂದರೆ ಯಶಸ್ಸಿನ ಕಥೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ, ಸೋಲಿನ ಕಥೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು, ಕುಡಿಯೊಡೆಯುತ್ತದೆ. – ಅಬ್ದುಲ್ ಕಲಾಂ 

ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ, ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು, ಮನಸ್ಸಿಗೆ ತಾಕದಿರಲಿ. -ಅಬ್ದುಲ್ ಕಲಾಂ

ದೊಡ್ಡ ಗುರಿ,ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ದೃಢ ನಿಷ್ಠೆ, ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. – ಅಬ್ದುಲ್ ಕಲಾಂ

ಸಾಧ್ಯವೇ ಇಲ್ಲ ಎಂದು ಕೊಂಡರೆ ಏನನ್ನು ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.- ಸ್ವಾಮಿ ವಿವೇಕಾನಂದ

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ತಾರು ಅಲ್ಲ ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.- ಸ್ವಾಮಿ ವಿವೇಕಾನಂದ 

ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ, ಬದುಕಿಗೆ ಅವಮಾನ.ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು, ಹೊಸ ಮಾರ್ಗ ಸೃಷ್ಟಿಸುವ ಧೈರ್ಯ ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.

ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತದೆ, ಆದ್ದರಿಂದ ಏನನ್ನು ಯೋಚಿಸುತ್ತೀರೋ, ಅದರ ಬಗ್ಗೆ ಎಚ್ಚರದಿಂದಿರಿ. 

ಸೋಲು ಯಶಸ್ಸಿನ ಮೊದಲ ಮೆಟ್ಟಿಲು. 

ನೀವು ನಿಮ್ಮ ಗುರಿ ತಲುಪಬೇಕಾದರೆ, ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು. 

ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ,ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ. 

ಸಾಧಿಸೇ ಸಾಧಿಸುತ್ತೇನೆ ಎಂಬ ಕಿಚ್ಚನ ಮನಸ್ಸಿನ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು.

ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ

ಮಹಾನ್ ಕನಸುಗಾರರ ಕನಸುಗಳು, ಯಾವಾಗಲೂ ನನಸಾಗುತ್ತದೆ. -ಡಾ. ಎ.ಪಿ.ಜೆ ಅಬ್ದುಲ್ ಕಲಾಂ

ಸಣ್ಣ ಗುರಿಯನ್ನು ಹೊಂದುವುದು ಅಪರಾಧವಾಗಿದೆ, ಆದ್ದರಿಂದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ-. ಡಾ. ಎ.ಪಿ.ಜೆ ಅಬ್ದುಲ್ ಕಲಾಂ 

ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ- ಡಾ. ಎ.ಪಿ.ಜೆ ಅಬ್ದುಲ್ ಕಲಾಂ

ದೊಡ್ಡ ಗುರಿಯನ್ನು ಹೊಂದುವುದು, ನಿರಂತರವಾಗಿ ಜ್ಞಾನವನ್ನು ಪಡೆದುಕೊಳ್ಳುವುದು, ಪರಿಶ್ರಮ ಪಡುವುದು, ತಾಳ್ಮೆಯಿಂದಿರುವುದು ಈ ನಾಲ್ಕು ವಿಷಯಗಳನ್ನು ಅನುಸರಿಸಿದರೆ, ನೀವು ಏನನ್ನಾದರೂ ಸಾಧಿಸಬಹುದು.

ನಿಮ್ಮ ಪ್ರಯತ್ನವಿಲ್ಲದೆ, ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ, ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ, ನೀವು ವಿಫಲರಾಗಲು ಸಾಧ್ಯವಿಲ್ಲ. 

ಚಿಂತನೆ ನಿಮ್ಮ ಮೂಲ ಬಂಡವಾಳವಾಗಿದೆ, ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರ ನಿಮ್ಮ ಕಠಿಣ ಪರಿಶ್ರಮದಲ್ಲಿದೆ.

ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ, ನಿಮ್ಮಿಂದ ನಿಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತ ಬದಲಾಯಿಸುತ್ತವೆ. 

ಕಠಿಣವಾದ ಕೆಲಸಗಳು, ಅಸಾಧ್ಯವೆಂದಲ್ಲ ಕಠಿಣವಾದ ಕೆಲಸಗಳಿಗೆ ಹೆಚ್ಚಿನ ಕಷ್ಟಪಡಬೇಕಾಗುತ್ತದೆ.

ನಿಮ್ಮನ್ನು ದ್ವೇಷಿಸುವವರನ್ನು ನೀವು ಯಾವತ್ತೂ ದ್ವೇಷಿಸಬೇಡಿ, ಏಕೆಂದರೆ ನೀವು ಅವರಿಗಿಂತ ಉತ್ತಮರೆಂದು ಅವರಷ್ಟೇ ಯೋಚಿಸುತ್ತಾರೆ. 

ನೀವು ತಪ್ಪು ಮಾಡಿದಾಗ ಅದನ್ನು ಮುಜುಗರವಿಲ್ಲದೆ, ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ. 

ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ.

ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಂಟು ಮಾಡುತ್ತದೆ,ಈ ಎರಡನ್ನೂ ಓಡಿಸುವ ಏಕೈಕ ಅಸ್ತ್ರ ವಿದ್ಯೆ – ಡಾ. ಬಿಆರ್ ಅಂಬೇಡ್ಕರ್ 

ನಿನ್ನನ್ನು ನೀ ಅರಿ, ನಿನ್ನಲ್ಲೇ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳು ಅಡಗಿವೆ. 

ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಠನಾಗುತ್ತಿ, ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು- ಸ್ವಾಮಿ ವಿವೇಕಾನಂದ

 ಪ್ರಯತ್ನ ಗುಟ್ಟಾಗಿರಲಿ, ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ ಮುಟ್ಟುವಂತಿರಲಿ. 

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ ವಿನಯವನ್ನು ವಿವೇಕವನ್ನು  ಕಲಿಸುವುದೇ ವಿದ್ಯಾಭ್ಯಾಸ.’

ತಲೆ ತಗ್ಗಿಸಿ, ನಿನ್ನ ಕೆಲಸ ನೀನು ಮಾಡಿದರೆ, ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ. 

ವಿದ್ಯೆಗಿಂತ ಬೇರೆ  ಐಶ್ವರ್ಯವಿಲ್ಲ ನಿರ್ಮಲ ಸ್ವಭಾವಕ್ಕಿಂತ ಬೇರೆ ತೀರ್ಥಸ್ನಾನವಿಲ್ಲ. 

ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ ಜ್ಞಾನದಿಂದ ವಿನಯ ಬಂದರೆ, ಅದು ಅಮೃತಕ್ಕೆ ಸಮಾನ. 

ಹೇಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.

ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ ಇಲ್ಲದಿದ್ದರೆ ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟು ಬಿಡುತ್ತೀರಿ.

ನೀವು ನಿಮ್ಮನ್ನು ನಂಬದ ಹೊರತು ನೀವು ದೇವರನ್ನು ನಂಬಲು ಸಾಧ್ಯವಿಲ್ಲ.

ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ, ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು. 

ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.

ದೈಹಿಕವಾಗಿ ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ ಅದನ್ನು ವಿಷದಂತೆ ತಿರಸ್ಕರಿಸಿ. 

ಜ್ಞಾನವನ್ನು ಪಡೆಯಲು ಒಂದೇ ಒಂದು ವಿಧಾನವಿದೆ, ಅದು ಏಕಾಗ್ರತೆ. ಶಿಕ್ಷಣದ ಮೂಲತತ್ವವೆಂದರೆ ಮನಸ್ಸಿನ ಏಕಾಗ್ರತೆ.

ಜ್ಞಾನವು ನಮಗೆ ಶಕ್ತಿಯನ್ನು ನೀಡುತ್ತದೆ, ಪ್ರೀತಿ, ನಮಗೆ ಪರಿಪೂರ್ಣತೆಯನ್ನು ನೀಡುತ್ತದೆ.

ನಮಗೆ ಎಲ್ಲವೂ ತಿಳಿದಿದೆ ಎಂದು ನಾವು ಯಾವಾಗ ಅಂದುಕೊಳ್ಳುತ್ತೇವೋ, ಅಂದು ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ. 

ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

ಶಕ್ತಿಯಲ್ಲ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನು ಮಾಡಬಲ್ಲಿರಿ.

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ

ಎಂದಿಗೂ ಪ್ರಯತ್ನಿಸದವನಿಗಿಂತ ಹೋರಾಡುವವನು ಉತ್ತಮ.

ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ಸದಾ ಹೃದಯವನ್ನು ಅನುಸರಿಸಿ. 

ಮುನ್ನಡೆಯುವಾಗ ಸೇವಕರಾಗಿರಿ, ನಿಸ್ವಾರ್ಥರಾಗಿರಿ ,ಅನಂತ ತಾಳ್ಮೆ ಹೊಂದಿರಿ ಮತ್ತು ಯಶಸ್ಸು ಸದಾ ನಿಮ್ಮದಾಗಿರುತ್ತದೆ.

ವಿದ್ಯಾರ್ಥಿಗಳಿಗೆ ನುಡಿಮುತ್ತುಗಳು

Leave a Comment