ಸೋರೆಕಾಯಿ ಅಥವಾ ಬೂದುಕುಂಬಳ ಕಾಯಿಯ ಜ್ಯೂಸ್ ನ 12 ಆರೋಗ್ಯ ಪ್ರಯೋಜನಗಳು/Benefits of Ash Gourd Juice in Kannada.

ಸೋರೆಕಾಯಿ ಅಥವಾ ಬೂದುಕುಂಬಳ ಕಾಯಿಯ ಜ್ಯೂಸ್ ನ 12 ಆರೋಗ್ಯ ಪ್ರಯೋಜನಗಳು

ಸೋರೆಕಾಯಿ ಅಥವಾ ಬೂದುಕುಂಬಳ ಕಾಯಿಯ ಜ್ಯೂಸ್ ನ 12 ಆರೋಗ್ಯ ಪ್ರಯೋಜನಗಳು, ಬೂದುಕುಂಬಳ ಕಾಯಿಯನ್ನು ಅನೇಕ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಚಳಿಗಾಲದ ಕಲ್ಲಂಗಡಿ, ಮೇಣದ ಸೋರೆಕಾಯಿ, ಬಿಳಿ ಕುಂಬಳಕಾಯಿ ಮತ್ತು ಚೈನೀಸ್ ಕಲ್ಲಂಗಡಿ ಎಂದು ಕರೆಯಲ್ಪಡುವ ಬೂದುಗುಂಬಳಕಾಯಿಯು ದಕ್ಷಿಣ ಏಷ್ಯಾದ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯಲ್ಪಡುತ್ತದೆ. 

ಬೂದಕುಂಬಳಕಾಯಿಯ ಸೌಮ್ಯವಾದ ರುಚಿ ಸೌತೆಕಾಯಿಯನ್ನು ನೆನಪಿಸುತ್ತದೆ ಮತ್ತು ಇದರ ತಿರುಳು ಚೀನಿ ಮತ್ತು ಭಾರತೀಯ ಆಹಾರಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಬೂದಗುಂಬಳಕಾಯಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಪೋಷಕಾಂಶಗಳ ನಿಧಿಯಾಗಿದ್ದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯನ್ನು ತೆಗೆದು ಹಾಕುವ ಮೂಲಕ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶತಮಾನಗಳಿಂದಲೂ ಸಾಂಪ್ರದಾಯಿಕ ಚೀನಿ ಮತ್ತು ಆಯುರ್ವೇದ ಔಷಧದಲ್ಲಿ ಇದನ್ನು ಬಳಸಲಾಗುತ್ತಿದೆ. 

ಪರಿವಿಡಿ
1. ಸೋರೆಕಾಯಿ ಅಥವಾ ಬೂದುಕುಂಬಳಕಾಯಿಯ ಪ್ರಯೋಜನಗಳು
1.1 ಸೋರೆಕಾಯಿ ಅಥವಾ ಬೂದುಕುಂಬಳ ಕಾಯಿಯ12 ಆರೋಗ್ಯ ಪ್ರಯೋಜನಗಳು
  1.1.1 ತೂಕ ಇಳಿಸುವಲ್ಲಿ ಪರಿಣಾಮಕಾರಿ
  1.1.2 ಮೂತ್ರದ ಸಮಸ್ಯೆಗೆ ಪರಿಹಾರ
  1.1.3 ಹೃದಯಕ್ಕೆ ಪ್ರಯೋಜನಕಾರಿ
  1.1.4 ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ
  1.1.5 ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ
  1.1.6 ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
  1.1.7 ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ
  1.1.8 ಮೆದುಳಿನ ಆರೋಗ್ಯಕ್ಕೆ ಸಹಾಯಕಾರಿ
  1.1.9 ಸ್ನಾಯುಗಳನ್ನು ಸಡಿಲಗೊಳಿಸುತ್ತದೆ
  1.1.10  ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ರಕ್ತಸ್ರಾವ್ಯಕ್ಕೆ ಚಿಕಿತ್ಸೆ ನೀಡುತ್ತದೆ
  1.1.11 ಮಧುಮೇಹ ತಡೆಗಟ್ಟಲು ಸಹಾಯಕಾರಿ
  1.1.12 ಗರ್ಭಾವಸ್ಥೆಯಲ್ಲಿ ಬೂದುಗುಂಬಳಕಾಯಿ
 1.2 ಬೂದು ಕುಂಬಳಕಾಯಿ ರಸವನ್ನು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳು
2 FAQ 
  1. ತೂಕ ಇಳಿಸುವಲ್ಲಿ ಪರಿಣಾಮಕಾರಿ(Ash Gourd Juice for Weight Loss)

ಬೂದು ಕುಂಬಳಕಾಯಿಯು ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುತ್ತದೆ ಆದ್ದರಿಂದ ಇದರ ಸೇವನೆಯೂ ತೂಕನಷ್ಟಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ಬೂದಕುಂಬಳ ಕಾಯಿಯಲ್ಲಿ ನಾರಿನಾಂಶವೂ ಹೇರಳವಾಗಿದ್ದು ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ ಇದರಿಂದ ದೇಹದ ಬೊಜ್ಜು ಹೆಚ್ಚಾಗುವುದಿಲ್ಲ.ಮತ್ತು ಇದು ಅನೇಕ  ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ನಿಮ್ಮನ್ನು ಆರೋಗ್ಯವಾಗಿರಿಸುವಲ್ಲಿ ಹೆಚ್ಚು ಸಹಾಯಕವಾಗಿದೆ. ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ರಸವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ, ಇದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುತ್ತದೆ. 

  1. ಮೂತ್ರದ ಸಮಸ್ಯೆಗೆ ಪರಿಹಾರ( Avoids constipation Problem )

 ಮೂತ್ರ ವಿಸರ್ಜಿಸುವಾಗ ಉರಿ ಕಾಣಿಸಿಕೊಂಡರೆ ನಿತ್ಯವೂ ಒಂದು ಲೋಟ ಸೋರೆಕಾಯಿ ರಸವನ್ನು ಸೇವಿಸುವುದರಿಂದ ಪರಿಹಾರ ದೊರೆಯುತ್ತದೆ

  1.  ಹೃದಯಕ್ಕೆ ಪ್ರಯೋಜನಕಾರಿ ( Promotes Heart Health)

 ಯಾವುದೇ ಆಹಾರದಲ್ಲಿ ಕೊಲೆಸ್ಟ್ರಾಲ್ ಅಂಶವು ಇಲ್ಲದಿದ್ದರೆ, ಅದು ಹೃದಯಕ್ಕೆ ತುಂಬಾ ಒಳ್ಳೆಯದು. ಇಂತಹ ಆಹಾರಗಳಲ್ಲಿ ಸೋರೆಕಾಯಿ ಕೂಡ ಒಂದು. ಇದರೊಂದಿಗೆ ಫೈಬರ್ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು  ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ  ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ. 

  1. ನಿದ್ರಾ ಹೀನತೆಯ ಸಮಸ್ಯೆಗೆ ಪರಿಹಾರ( Promotes Good Sleep)

 ಒಬ್ಬ ವ್ಯಕ್ತಿಯು ನಿದ್ದೆ ಮಾಡದಿರುವ ಸಮಸ್ಯೆಯನ್ನು ಹೊಂದಿದ್ದರೆ ಸಂಪೂರ್ಣ ಎಳ್ಳು  ಅಥವಾ ಅದರ ಎಣ್ಣೆಯೊಂದಿಗೆ ಸೋರೆಕಾಯಿ ರಸವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ.

  1.  ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ ( Avoids Body from dehydration)

 ಅತಿಯಾದ ಬೆವರುವಿಕೆ, ಅತಿಸಾರ ಅಥವಾ ಆಯಾಸದಂತಹ ವ್ಯಕ್ತಿಯ ದೇಹದಲ್ಲಿ ನೀರಿನ ಕೊರತೆ ಇದ್ದರೆ ಅದನ್ನು ತೆಗೆದುಹಾಕಲು ಸೋರೆಕಾಯಿ ರಸ ಸಹಾಯಕವಾಗಿದೆ ಮಧುಮೇಹ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಸಾರದ ಸಂದರ್ಭದಲ್ಲಿ ಇದು ಜೀವ ಉಳಿಸುವ ಪರಿಹಾರವಾಗಿ  ಕಾರ್ಯ ನಿರ್ವಹಿಸುತ್ತದೆ.

  1.  ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ( Helps in Improving Digestion)

 ಬೂದುಗುಂಬಳಕಾಯಿಯು ಹೆಚ್ಚಾಗಿ ನೀರಿನಿಂದ ಕೂಡಿರುವುದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ ಇದರಲ್ಲಿರುವ ಹೆಚ್ಚಿನ ನಾರಿನ ಅಂಶವು ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುವುದಿಲ್ಲ ನಾರಿನಂಶವಿರುವ ಆಹಾರಗಳು ಮಲಬದ್ಧತೆ ಮತ್ತು ಹುಬ್ಬವಿಕೆಯನ್ನು ನಿವಾರಿಸುತ್ತದೆ 

ಸೋರೆಕಾಯಿ ಅಥವಾ ಬೂದುಕುಂಬಳ ಕಾಯಿಯ ಜ್ಯೂಸ್ ನ 12 ಆರೋಗ್ಯ ಪ್ರಯೋಜನಗಳು

  1.  ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ (Improves  Lungs Health)

ಕೆಮ್ಮು ಅಸ್ತಮಾ ಮತ್ತು ಇತರೆ ಉಸಿರಾಟದ ಸೋಂಕುಗಳ ಚಿಕಿತ್ಸೆಯಲ್ಲಿ ಬೂದು  ಕುಂಬಳಕಾಯಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಬೂದಕುಂಬಳಕಾಯಿ ರಸವು ಉಸಿರಾಟದ ಪ್ರದೇಶದಿಂದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಉಸಿರಾಟದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

  1. ಮೆದುಳಿನ ಆರೋಗ್ಯಕ್ಕೆ ಸಹಾಯಕಾರಿ (Ash Gourd Benefits for Brain)

ವಿವಿಧ ಅಧ್ಯಯನಗಳ ಪ್ರಕಾರ ದೇಹದಲ್ಲಿ ಕಬ್ಬಿಣದ ಕೊರತೆಯು ಮೆದುಳಿನ ಕಾರ್ಯನಿರ್ವಹಣೆ ಮತ್ತು ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕುಂಬಳಕಾಯಿ ರಸವು ಕಬ್ಬಿಣದ ಸಮೃದ್ಧ ಮೂಲವಾಗಿದ್ದು ಇದು ಮೆದುಳಿನ ಅಸ್ವಸ್ಥತೆಗಳನ್ನು ತಡೆಯುತ್ತದೆ. ಬೂದ ಕುಂಬಳಕಾಯಿ ರಸವು ಮಾನವನ ಮೆದುಳು ಮತ್ತು ಯಕೃತ್ತಿಗೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ ಮತ್ತು ಅವುಗಳನ್ನು ಆರೋಗ್ಯವಾಗಿರಿಸುತ್ತದೆ. 

  1. ಸ್ನಾಯುಗಳನ್ನು ಸಡಿಲ ಗೊಳಿಸುತ್ತದೆ ( Relaxes Muscles)

ಬೂದಕುಂಬಳಕಾಯಿಯ ತಿರುಳು ಸ್ನಾಯು  ಸಡಿಲಗೊಳಿಸುವ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಸ್ನಾಯುಗಳನ್ನು ಶಾಂತಗೊಳಿಸುತ್ತದೆ. ಆದ್ದರಿಂದ ಬೂದಕುಂಬಳಕಾಯಿ ರಸವನ್ನು ಕುಡಿಯುವುದು ನಿದ್ರಾಹೀನತೆ ಮತ್ತು ಆತಂಕದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. 

  1. ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು  ರಕ್ತಸ್ರಾವಕ್ಕೆ ಚಿಕಿತ್ಸೆ ನೀಡುತ್ತದೆ (Helps in Healing Wounds and Treats Hemorrhage)

ಬೂದ ಕುಂಬಳಕಾಯಿ ರಸದ ಮತ್ತೊಂದು ಆರೋಗ್ಯ ಪ್ರಯೋಜನವೆಂದರೆ ಅದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ರಕ್ತಸ್ರಾವ ಅಥವಾ ಆಂತರಿಕ ರಕ್ತಸ್ರಾವಕ್ಕೆ ಚಿಕಿತ್ಸೆ ನೀಡುತ್ತದೆ. ಸಂಶೋಧನೆಯ ಪ್ರಕಾರ, ಸೋರೆಕಾಯಿ ಎಲೆಗಳ ರಸವು ಮೂಗೇಟುಗಳ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ. 

  1. ಮಧುಮೇಹ ತಡೆಗಟ್ಟಲು ಸಹಾಯಕಾರಿ.( Ash Gourd Benefits for Diabetes)

 ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬೂದಕುಂಬಳಕಾಯಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಬೂದಕುಂಬಳಕಾಯಿ ರಸವು ಕಡಿಮೆ ಕಾರ್ಬೋಹೈಡ್ರೇಟ್ಸ್ ಅಂಶವನ್ನು ಹೊಂದಿರುವುದರಿಂದ ಕಡಿಮೆ ಸಕ್ಕರೆ ಆಹಾರದ ಅಗತ್ಯವಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ. ಟೈಪ್ 2  ಡಯಾಬಿಟಿಸ್ ಇರುವವರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಬೂದಕುಂಬಳಕಾಯಿ ರಸವನ್ನು ಕುಡಿಯುವುದರಿಂದ 21 ದಿನಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು  42% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  1. ಗರ್ಭಾವಸ್ಥೆಯಲ್ಲಿ ಬೂದುಕುಂಬಳಕಾಯಿ ರಸ( Ash Gourd Juice During Pregnancy)

 ಸಂಶೋಧನೆಯ ಪ್ರಕಾರ, ಫೈಬರ್ ಪ್ರೋಟೀನ್ ಸತ್ತು ಮತ್ತು ವಿಟಮಿನ್ ಬಿ1, ಬಿ2,  ಮತ್ತು ಬಿ3  ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಮಗುವಿನ  ಬೆಳವಣಿಗೆಗೆ ಅವಶ್ಯಕವಾಗಿದೆ ಬೂದಕುಂಬಳಕಾಯಿಯು ಈ ಎಲ್ಲಾ  ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಗರ್ಭಾವಸ್ಥೆಯಲ್ಲಿ ಬೂದಕುಂಬಳಕಾಯಿ ರಸವನ್ನು ಕುಡಿಯುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿಯಾಗಿದೆ.

ಬೂದಕುಂಬಳಕಾಯಿ ರಸವನ್ನು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳು/ Disadvantages of Ash Gourd

 ಬೂದಕುಂಬಳಕಾಯಿ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸಿದರು, ಅದು ಎಲ್ಲರಿಗೂ ಸೂಕ್ತವಲ್ಲ. ಬೂದಕುಂಬಳಕಾಯಿ ರಸವು ಕೆಲವು ಪೋಷಕಾಂಶಗಳನ್ನು ಹೊಂದಿದ್ದು ಅದು ಕ್ಯಾಲ್ಸಿಯಂ ನಂತಹ ಆರೋಗ್ಯಕರ ಪೋಷಕಾಂಶಗಳನ್ನು ದೇಹದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದಲ್ಲದೆ ಬೂದು ಸೋರೆಕಾಯಿ ದೇಹದೊಳಗೆ ತಂಪಾಗಿಸುವ ಪರಿಣಾಮವನ್ನು ಹೊಂದಿದ್ದು,, ಇದರಿಂದ ನಿಮಗೆ ಹೆಚ್ಚಿನ ಜ್ವರ ಇದ್ದರೆ ಅಥವಾ ನಿಮ್ಮ ದೇಹದ ಉಷ್ಣತೆಯು  ಆಗಾಗ ಏರುಪೇರು ಆಗುತ್ತಿದ್ದರೆ ಬೂದಕುಂಬಳಕಾಯಿ ರಸವನ್ನು ಕುಡಿಯುವುದು ಉತ್ತಮವಲ್ಲ. 

FAQ

ಪ್ರಶ್ನೆ1 ಬೂದ ಕುಂಬಳಕಾಯಿಗೆ ಇಂಗ್ಲಿಷ್ ನಲ್ಲಿ ಏನೆಂದು ಕರೆಯುತ್ತಾರೆ?

 ಉತ್ತರ:   ಬೂದಕುಂಬಳಕಾಯಿ ಇಂಗ್ಲಿಷ್ನಲ್ಲಿ ಆಶ್ ಗಾರ್ಡ್( Ash Gourd) ಎಂದು ಕರೆಯುತ್ತಾರೆ .

ಪ್ರಶ್ನೆ 2  ಸೋರೆಕಾಯಿಯ ಸಿಪ್ಪೆಯನ್ನು ಸಹ ಬಳಸಬಹುದೇ ? 

 ಉತ್ತರ : ಹೌದು, ನೀವು ಮೊಡವೆಗಳಿಗೆ ಸೋರೆಕಾಯಿಯ ಸಿಪ್ಪೆಯನ್ನು ಬಳಸಬಹುದು.

ಪ್ರಶ್ನೆ 3  ಸೋರೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ಆಗುವ  ಅನಾನುಕೂಲಗಳೇನು?

 ಉತ್ತರ :  ಸೋರೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ಉಸಿರಾಟದ ತೊಂದರೆ, ಪಾರ್ಶ್ವವಾಯು ಮುಂತಾದ ಅನೇಕ ರೋಗಗಳು ಬರಬಹುದು. 

ಪ್ರಶ್ನೆ 4  ಸೋರೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಬಹುದು?

 ಉತ್ತರ :  ನೀವು ಸೋರೆಕಾಯಿಯನ್ನು ಜ್ಯೂಸ್ ಮತ್ತು ತರಕಾರಿ ರೂಪದಲ್ಲಿ ಸೇವಿಸಬಹುದು.

ಇನ್ನಷ್ಟು ಓದಿ

  1. ಸೋಂಪು ಕಾಳಿನ ಪ್ರಯೋಜನಗಳು, ಉಪಯೋಗಗಳು ಮತ್ತು ಅನಾನುಕೂಲಗಳು 
  2. ಮೊಸರಿನ ಪ್ರಯೋಜನಗಳು, ಗುಣಲಕ್ಷಣಗಳು ಮತ್ತು ಅನಾನುಕೂಲಗಳು
  3.  ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು
  4. ಸೂರ್ಯ ನಮಸ್ಕಾರ ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳು 

Leave a Comment