ಖಾಶಾಬಾ ದಾದಾಸಾಹೇಬ್ ಜಾಧವ್|Khashaba Dadasaheb Jadhav Biography,The first Indian who won the Olympic Medal. 2024

ಖಾಶಾಬಾ ದಾದಾಸಾಹೇಬ್ ಜಾಧವ್,ಜೀವನ ಚರಿತ್ರೆ, ಮತ್ತು ಸಾಧನೆಗಳು.

ಖಾಶಾಬಾ ದಾದಾಸಾಹೇಬ್ ಜಾಧವ್ ಭಾರತೀಯ ಕ್ರೀಡಾಪಟು. ಅವರು ಹೆಲ್ಸಿಂಕಿಯಲ್ಲಿನಡೆದ 1952ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದ ಕುಸ್ತಿಪಟು ಎಂದು ಪ್ರಸಿದ್ಧರಾಗಿದ್ದಾರೆ. 

1952ರ ಹೆಲ್ಸಿಂಕಿಯಲ್ಲಿ ನಡೆದ ಬೇಸಿಗೆ ಒಲಂಪಿಕ್ಸ್ ನಲ್ಲಿ ಸ್ವತಂತ್ರ ಭಾರತಕ್ಕಾಗಿ ಒಲಂಪಿಕ್ ಪದಕವನ್ನು ಗೆದ್ದ ಮೊದಲ ವೈಯಕ್ತಿಕ ಕ್ರೀಡಾಪಟು ಖಾಶಾಬಾ ದಾದಾಸಾಹೇಬ್ ಜಾಧವ್, ಇವರು ಜನವರಿ 15,1926ರಲ್ಲಿ ಸತಾರದಲ್ಲಿ ಜನಿಸಿದರು. “ಪಾಕೆಟ್ ಡೈನಮೋ” ಎಂದು ಪ್ರೀತಿಯಿಂದ ಕರೆಯಲ್ಪಡುವ ಕುಸ್ತಿಪಟುವನ್ನು ಅವರ 97ನೇ ಹುಟ್ಟು ಹಬ್ಬದ ದಿನದಂದು ಗೂಗಲ್ ಡೂಡಲ್ ನಲ್ಲಿ ನೆನಪಿಸಿಕೊಳ್ಳಲಾಯಿತು. ಡೂಡಲ್ ತನ್ನ ಎದುರಾಳಿಯನ್ನು ಆಕ್ರಮಣ ಮಾಡಲು ತಯಾರಿ ನಡೆಸುತ್ತಿರುವ ರೇಖಾಚಿತ್ರವನ್ನು ಒಳಗೊಂಡಿದೆ. 

ಪೂರ್ಣ ಹೆಸರುಖಾಶಾಬಾ ದಾದಾಸಾಹೇಬ್ ಜಾಧವ್
ಅಡ್ಡ ಹೆಸರುಪಾಕೆಟ್ ಡೈನಮೋ, ಕೆ.ಡಿ
ಪೌರತ್ವಬ್ರಿಟಿಷ್ ಇಂಡಿಯಾ 1926-1947 ಭಾರತ 1947-1984
ಹುಟ್ಟಿದ ದಿನಾಂಕ15 ಜನವರಿ 1926 ಸತಾರ, ಸತಾರ ಜಿಲ್ಲೆ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
ನಿಧನ 14 ಆಗಸ್ಟ್, 1984, ಕರದ್, ಮಹಾರಾಷ್ಟ್ರ
ಕ್ರೀಡೆಕುಸ್ತಿ  (ಪ್ರೀಸ್ಟೈಲ್ )
ಪ್ರಶಸ್ತಿ ಅರ್ಜುನ ಪ್ರಶಸ್ತಿ (2000)

ಖಾಶಾಬಾ ದಾದಾಸಾಹೇಬ್ ಜಾದವ್ ಅವರು ಕುಸ್ತಿಯಲ್ಲಿ ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತ.ಅವರು 1952ರ ಹೆಲ್ಸಿಂಕಿ ಕ್ರೀಡಾಕೂಟದಲ್ಲಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದರು. ಇವರು ಜನವರಿ 15, 1926 ರಂದು ಮಹಾರಾಷ್ಟ್ರ ರಾಜ್ಯದ  ಕರದ್ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿರುವ ಗೋಲೇಶ್ವರ ಗ್ರಾಮದಲ್ಲಿ ಜನಿಸಿದರು. ಇವರು “ಪಾಕೆಟ್ ಡೈನಮೋ” ಎಂದು ಜನಪ್ರಿಯರಾಗಿದ್ದರು

ಖಾಶಾಬಾ ದಾದಾಸಾಹೇಬ್ ಜಾಧವ್ ಕುಸ್ತಿ ಕುಟುಂಬಕ್ಕೆ ಸೇರಿದವರು ಮತ್ತು ಯಾವಾಗಲೂ ಕ್ರೀಡೆಗಳ ಅದರಲ್ಲೂ ವಿಶೇಷವಾಗಿ ಕುಸ್ತಿ, ಓಟ, ಕಬಡ್ಡಿ ಮತ್ತು ಈಜುಗಳ ಅಭಿಮಾನಿಯಾಗಿದ್ದರು. ಅವರ ತಾತ ನಾನಾಸಾಹೇಬ್ ಆಗಿನ ಕಾಲದ ಪ್ರಸಿದ್ಧ ಕುಸ್ತಿಪಟವಾಗಿದ್ದರು, ಅವರ ತಂದೆ ಜಾಧವ್ ಅವರು ಕುಸ್ತಿ ತರಬೇತುದಾರರಾಗಿದ್ದರು. ಖಾಶಾಬಾ ದಾದಾಸಾಹೇಬ್ ಜಾದವ್ ಅವರು ಅವರ ತಂದೆ ದಾದಾ ಸಾಹೇಬ್ ಅವರಿಂದ ಪ್ರಾಥಮಿಕ ತರಬೇತಿಯನ್ನು ಪಡೆದರು. ಕುಟುಂಬದ ಕಿರಿಯ ಸದಸ್ಯನಾಗಿದ್ದರು  ಮತ್ತು ಅವರು ಯಾವಾಗಲೂ ಕ್ರೀಡೆಯಲ್ಲಿ ಇತರರನ್ನು ಮೀರಿಸುವಂತಹ ಉತ್ತಮ ಸಾಧನೆ ಮಾಡಿದರು. ಅವರು ಕರದ್ ಜಿಲ್ಲೆಯ ಲೋಕಮಾನ್ಯ ತಿಲಕ್ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು 1940-1947ರಲ್ಲಿ ಮುಗಿಸಿದರು. ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಓದುವಾಗ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿಪಟುವಾದರು. ಜಾದವ್ ಕುಸ್ತಿಯಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ತೋರಿದರು.

ಖಾಶಾಬಾ ದಾದಾಸಾಹೇಬ್ ಜಾಧವ್ ಅವರು ಬೇಳಾಪುರೆ ಗುರೂಜಿ ಮತ್ತು ಬಾಬುರಾವ್ ಪಲಾವ್ಡ ಅವರ ಮಾರ್ಗದರ್ಶನದಲ್ಲಿ, ತಮ್ಮ ಔಪಚಾರಿಕ ಕುಸ್ತಿ ತರಬೇತಿಯನ್ನು ಪೂರ್ಣಗೊಳಿಸಿದರು. ಅವರ ತರಬೇತಿಗಳು, ಆರಂಭದಲ್ಲಿ ಅವರನ್ನು ಸ್ಥಳೀಯ ಪ್ರದೇಶದ ಪ್ರತಿಷ್ಠಿತ  ಕುಸ್ತಿಪಟುವನ್ನಾಗಿ ಮಾಡಿತು, ಮತ್ತು ಕ್ರಮೇಣ ಅವರು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು. ಅವರ ವೇಗವು ಕುಸ್ತಿಪಟುಗಳಲ್ಲಿ, ಅವರನ್ನು ಅನನ್ಯಗೊಳಿಸಿತು, ಇದನ್ನು ಇಂಗ್ಲಿಷ್ ತರಬೇತುದಾರ  ರಿಸ್ ಗಾರ್ಡ್ನರ್ ಅವರಲ್ಲಿನ ಈ ಗುಣವನ್ನು ಗಮನಿಸಿದರು ಮತ್ತು 1948ರ ಒಲಂಪಿಕ್ ಕ್ರೀಡಾಕೂಟಗಳಿಗೆ ಮೊದಲು ತರಬೇತಿ ನೀಡಿದರು. 

ಖಾಶಾಬಾ ದಾದಾಸಾಹೇಬ್ ಜಾಧವ್ ಅವರು 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಹಲವಾರು ಕ್ರಾಂತಿಕಾರಿಗಳಿಗೆ ಆಶ್ರಯ ನೀಡುವ ಮೂಲಕ ಮತ್ತು ಬ್ರಿಟೀಷರ ವಿರುದ್ಧ ಪತ್ರಗಳನ್ನು ಪ್ರಸಾರ ಮಾಡುವ ಮೂಲಕ ಚಳುವಳಿಯಲ್ಲಿ ಕೊಡುಗೆ ನೀಡಿದರು. ಮತ್ತು ಆಗಸ್ಟ್ 15,1947 ರಂದು ಸ್ವಾತಂತ್ರ ದಿನಾಚರಣೆಯಂದು ಒಲಂಪಿಕ್ಸ್ ಸಮಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅವರು ನಿರ್ಧರಿಸಿದರು. 

ಖಾಶಾಬಾ ದಾದಾಸಾಹೇಬ್ ಜಾದವ್ ಅವರ ಕುಸ್ತಿ ವೃತ್ತಿ ಜೀವನವು 1948- 1954 ರಲ್ಲಿ ಪ್ರಾರಂಭವಾಯಿತು. ಅವರು ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರು ಅಂತರ ಕಾಲೇಜು ಮತ್ತು ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದರು. ನಂತರ ಅವರು 1948ರ ಲಂಡನ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದರು ಅಲ್ಲಿ ಅವರು ಆರನೇ ಶ್ರೇಯಾಂಕವನ್ನು ಪಡೆದರು. 

ದಾದಾಸಾಹೇಬ್ಖಾಶಾಬಾ  ಜಾದವ್ ಅವರು ಹೆಲ್ಸಿಂಕಿ ಒಲಂಪಿಕ್ಸ್ ಗೆ ಆಯ್ಕೆಯಾಗುವ ಮೊದಲು ಜಾದವ್ ಅವರು ಅಧಿಕಾರಿಗಳ ಸ್ವಜನ ಪಕ್ಷಪಾತವು ಒಲಂಪಿಕ್ಸ್ ನಲ್ಲಿ ತನ್ನ ಆಯ್ಕೆಯನ್ನು ತಡೆಯಿತು ಎಂದು ಆರೋಪಿಸಿದರು. ಅವರು ಉದ್ದೇಶಪೂರ್ವಕವಾಗಿ ಮದ್ರಾಸ್ ನ್ಯಾಷನಲ್ ನಲ್ಲಿ ಒಂದು ಅಂಕವನ್ನು ಕಡಿಮೆ ನೀಡಲಾಯಿತು. ಎಂದು ಅವರು ಹೇಳಿದ್ದಾರೆ, ಅದು ಅವರನ್ನು ಸ್ಪರ್ಧೆಯಿಂದ ಹೊರಗಿಟ್ಟಿತು. ಈ ಕುರಿತು ಅವರು ಪಟಿಯಾಲದ ಮಹಾರಾಜರಿಗೆ ನ್ಯಾಯಕ್ಕಾಗಿ ಮನವಿ ಮಾಡಿದರು. ಪಟಿಯಾಲದ ಮಹಾರಾಜರು ಕ್ರೀಡೆಯನ್ನು ಪ್ರೀತಿಸುತ್ತಿದ್ದರು ಮತ್ತು ಅವರ ಅಭಿಪ್ರಾಯವನ್ನು ಮಾನ್ಯವೆಂದು ಪರಿಗಣಿಸಲಾಗುತಿತ್ತು. ನಂತರ ಅವರು ಒಲಂಪಿಕ್ಸ್ ಟ್ರಯಲ್ಸ್ ನಲ್ಲಿ ಜಾದವ್ ನ ಪ್ರವೇಶವನ್ನು ಏರ್ಪಡಿಸಿದರು. ಅಲ್ಲಿ ಅವರು ತಮ್ಮ ಗೆಲುವನ್ನು ಪಡೆದರು ಮತ್ತು ಒಲಂಪಿಕ್ಸ್ ಗೆ ಪ್ರವೇಶ ಪಡೆದರು. ಅವರ ಭಾಗವಹಿಸುವಿಕೆಗಾಗಿ ಅವರು ತಮ್ಮ ಕುಟುಂಬದೊಂದಿಗೆ ಹಳ್ಳಿಯ ಸುತ್ತ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಣೆ ಮಾಡಿದರು. ಆ ಅವಧಿಯಲ್ಲಿ ಕ್ರೀಡೆಗಳು ವ್ಯಾಪಾರಿಕರಣವಾಗಿರಲಿಲ್ಲ ಮತ್ತು ಪ್ರಾಯೋಜಕರ ಪರಿಕಲ್ಪನೆಯು ಅಸ್ತಿತ್ವದಲ್ಲಿರಲಿಲ್ಲ ಇದಕ್ಕೆ ಪ್ರತಿಕ್ರಿಸಿದ ಜಾಧವ್ ಓದಿದ್ದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರು ಅವರ ಮನೆಯನ್ನು ಅಡಮಾನವಿಟ್ಟು 7 ಸಾವಿರ ರೂಗಳನ್ನು ನೀಡಿದರು. ತಮ್ಮ ಊರಿನ ದಾನಿಗಳು ಮತ್ತು ಕುಸ್ತಿ ಅಭಿಮಾನಿಗಳ ನೆರವಿನ ಮೂಲಕ ಅವರು ಹೆಲ್ಸಿಂಕಿ ತಲುಪಿಖಾಶಾಬಾ ದರು. ಸೊಹಚಿ 

ಖಾಶಾಬಾ ಜಾದವ್ ಬಾಟಂ ವೇಟ್ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಸತತ ಐದು ಪಂದ್ಯ ಗೆದ್ದು ಅಚ್ಚರಿ ಮೂಡಿಸಿದರು ಆದರೆ ಜಪಾನಿನ ಸೊಹಚಿ ಈಚಿ ವಿರುದ್ಧ ಸೋತರು ನಿಯಮದಂತೆ ಎರಡು ಸೆಣಸಾಟಗಳ  ನಡುವೆ 30 ನಿಮಿಷಗಳ ಬಿಡುವು ಸಹ ನೀಡದೆಯೇ ತಕ್ಷಣವೇ  ಖಾಶಾಬಾ  ಜಾದವ್ ಅವರನ್ನು ರಷ್ಯಾದ ರಶೀದ್ ಮೊಹಮ್ಮದ್ ಬಿಯೋ ವಿರುದ್ಧ ಸ್ಪರ್ಧಿಸಲು ಆದೇಶಿಸಲಾಯಿತು.  ಖಾಶಾಬಾ  ಜಾದವ್ ಪರ ಧನಿ ಎತ್ತಲು ಭಾರತದ ಯಾವ ಅಧಿಕಾರಿಯು ಹಾಜರಿರಲಿಲ್ಲ ದಣಿದಿದ್ದ  ಖಾಶಾಬಾ  ಜಾದವ್ ಸೆಮಿ ಫೈನಲ್ಸ್ ನಲ್ಲಿ ರಶೀದ್ ವಿರುದ್ಧ ಸೋತು ಹೋದರು. ಕ್ರಮವಾಗಿ ಸೊಹಚಿ ಇಚಿ ಸ್ವರ್ಣ ಪದಕ, ರಶೀದ್ ಬೆಳ್ಳಿ ಪದಕ ಮತ್ತು ಖಾಶಾಬಾ ಕಂಚಿನ ಪದಕ ಪಡೆದರು.

ಹೀಗೆ 1952ರ ಒಲಿಂಪಿಕ್ಸ್ ನಲ್ಲಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ಎಂಟು ಕಂಚಿನ ಪದಕ ವಿಜೇತರಲ್ಲಿ ಖಾಶಾಬಾ ಜಾದವ್ ಸಹ ಒಬ್ಬರಾಗಿ ಸನ್ಮಾನ ಪಡೆದರು 11 ಕ್ರೀಡೆಗಳ ಪೈಕಿ ಹಾಕಿ ತಂಡದ ಚಿನ್ನದ ಪದಕ ಮತ್ತು ಖಾಶಾಬಾ ಜಾದವ್ ವೈಯಕ್ತಿಕ ಪದಕ ಒಲಂಪಿಕ್ಸ್ ನಲ್ಲಿ ಭಾರತದ ಸಾಧನೆಯಾಯಿತು. 

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಪಡೆದು ಹಿಂದಿರುಗಿದಾಗ ಕರಾದ್  ರೈಲು ನಿಲ್ದಾಣದಲ್ಲಿ ಅದ್ಬುತ ವಿಜಯೋತ್ಸವದ ಮೂಲಕ ಸಂಭ್ರಮದಿಂದ ದಾದಾಸಾಹೇಬ್ ಖಾಶಾಬಾ  ಜಾದವ್ ಅವರನ್ನು ಸ್ವಾಗತಿಸಲಾಯಿತು. ಗೋಲೇಶ್ವರದ ವರವಲಯದಿಂದ  ಮಹಾದೇವ ದೇವಸ್ಥಾನದವರೆಗೆ 151 ಎತ್ತಿನ ಬಂಡಿಗಳನ್ನು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆ ನಡೆಸಲಾಯಿತು. ಸುಮಾರು ಏಳು ಗಂಟೆಗಳ ಕಾಲ ಮೆರವಣಿಗೆ ಮುಂದುವರೆಯಿತು. ದೇಶಕ್ಕೆ ಮೊದಲ ಒಲಂಪಿಕ್ ಚಾಂಪಿಯನ್ ನೀಡಿದ  ಖ್ಯಾತಿಯನ್ನು ಗಳಿಸಿದ ಗೋಲೇಶ್ವರ ಗ್ರಾಮ ಸಂತೋಷ ಮತ್ತು ಹೆಮ್ಮೆಯಲ್ಲಿ ಸಂಭ್ರಮಿಸಿತು. 

ಖಾಶಾಬಾ ದಾದಾಸಾಹೇಬ್ ಜಾಧವ್ 1955 ರಲ್ಲಿ ಪೊಲೀಸ್ ಪಡೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಸೇರ್ಪಡೆಗೊಂಡರು ಮತ್ತು ಪೊಲೀಸ್ ಇಲಾಖೆ ಆಯೋಜಿಸಿದ್ದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು. ದೆಹಲಿಯಲ್ಲಿ ನಡೆದ 1982ರ ಏಷಿಯನ್ ಗೇಮ್ಸ್ ನಲ್ಲಿ ಅವರನ್ನು ಗೌರವಿಸಲಾಯಿತು. ಮತ್ತು ಟಾರ್ಚ್ ರನ್ನ ಭಾಗವಾಗಿ ಮಾಡಲಾಯಿತು. ಅವರು  ಆರಕ್ಷಕ ಸಂಸ್ಥೆಯಲ್ಲಿ 27 ವರ್ಷಗಳ ಸುಧೀರ್ಘ ಸೇವೆಯನ್ನುಸಲ್ಲಿಸಿದರು. ಭಾರತ ಸರ್ಕಾರ ಖಾಶಾಬಾರಿಗೆ ಯಾವುದೇ ನಾಗರೀಕ ಪ್ರಶಸ್ತಿಯನ್ನು ಅವರ ಜೀವಮಾನದಲ್ಲಿ ನೀಡಿ ಗೌರವಿಸಲಿಲ್ಲ. ಸಹಾಯಕ ಪೊಲೀಸ್ ಆಯುಕ್ತ ದರ್ಜೆಗೆ ಏರಿದ ನಂತರ ಖಾಶಾಬಾ ಅವರು 1983 ರಲ್ಲಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಅವರ ಕೊಡುಗೆಗಳ ಹೊರತಾಗಿಯೂ ಜಾಧವ್ ಅವರಿಗೆ ಅರ್ಹವಾದ ಗೌರವವನ್ನು ನೀಡಲಾಗಲಿಲ್ಲ ಮತ್ತು ಅವರ ಪಿಂಚಣಿಗಾಗಿ ಅವರು ಹೋರಾಡಬೇಕಾಯಿತು. 

  • 1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಟಾರ್ಚ್ ರಿಲೇಯಲ್ಲಿ ಅವರನ್ನು ಸೇರಿಸುವ ಮೂಲಕ ಗೌರವಿಸಲಾಯಿತು.
  • 1992-1993ರಲ್ಲಿ ಮಹಾರಾಷ್ಟ್ರ ಸರ್ಕಾರವು ಮರಣೋತ್ತರ ಛತ್ರಪತಿ ಪುರಸ್ಕಾರವನ್ನು ನೀಡಿತು.
  • 2000 ರಲ್ಲಿ ಅವರು ಮರಣೋತ್ತರವಾಗಿ ಅರ್ಜುನ ಪ್ರಶಸ್ತಿಯನ್ನು ಪಡೆದರು.
  • 1960ರಲ್ಲಿ ಖಾಶಾಬಾ ದಾದಾ ಸಾಹೇಬ್ ಜಾಧವ್ ಅವರ ಒಲಂಪಿಕ್ಸ್ ನಲ್ಲಿನ ವಿಜಯವನ್ನು ಗೌರವಿಸಲು ಕೊಲ್ಲಾಪುರದಲ್ಲಿ ಅವರ ಶಿಲ್ಪವನ್ನು ಸ್ಥಾಪಿಸಲಾಯಿತು.
  • ಗೋಲೇಶ್ವರ ಗ್ರಾಮದಲ್ಲಿ ಕುಸ್ತಿಪಟುಗಳಿಗೆ ತರಬೇತಿ ನೀಡಲು ಕುಸ್ತಿ ಜಿಮ್ಕಾನ ಕೂಡ ಇದೆ.
  • ಅವರ ಸಾಧನೆಯನ್ನು ಗುರುತಿಸಿ ದೆಹಲಿಯಲ್ಲಿ 2010 ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕಾಗಿ ಹೊಸದಾಗಿ ನಿರ್ಮಿಸಲಾದ ಕುಸ್ತಿ ಅಂಕಣಕ್ಕೆ ಕೆ ಡಿ ಜಾಧವ್ ಅಂಕಣ ಎಂದು ಹೆಸರಿಡಲಾಗಿದೆ.
  •  ಅವರ 97ನೇ ಹುಟ್ಟು ಹಬ್ಬದ ವಾರ್ಷಿಕೋತ್ಸವದ  ಅಂಗವಾಗಿ ಜನವರಿ 15 2018ರಂದು ಗೂಗಲ್, ಡೂಡಲ್ ಮೂಲಕ ಜಾದವ್ ಅವರನ್ನು ಗೌರವಿಸಿದೆ.

ಅವರು ಕ್ರೀಡಾ ಒಕ್ಕೂಟದಿಂದ ವರ್ಷಗಳ ನಿರ್ಲಕ್ಷ್ಯವನ್ನು ಸಹಿಸಿಕೊಂಡರು ಮತ್ತು ಅವರ ಕೊನೆಯ ವರ್ಷಗಳನ್ನು ಕಡುಬಡತನದಲ್ಲಿ ಕಳೆಯಬೇಕಾಯಿತು. ಅವರು 1984ರಲ್ಲಿ ಕಾರು ಅಪಘಾತದಲ್ಲಿ, ಮರಣ ಹೊಂದಿದರು.

FAQs

ಪ್ರಶ್ನೆ1-ಖಾಶಾಬಾ ಜಾದವ್ ಎಲ್ಲಿ ಜನಿಸಿದರು?

ಉತ್ತರ- ಖಾಶಾಬಾ  ಜಾದವ್ ಅವರು ಸತಾರಾ ಸಮೀಪದ ಗೋಲೇಶ್ವರ ಗ್ರಾಮದಲ್ಲಿ ಜನಿಸಿದರು.

ಪ್ರಶ್ನೆ2- ಖಾಶಾಬಾ  ಜಾದವ್ ಯಾವಾಗ ಜನಿಸಿದರ?

ಉತ್ತರ-ಖಾಶಾಬಾ  ಜಾದವ್ ಆಗಸ್ಟ್ 15, 1926ರಲ್ಲಿ ಜನಿಸಿದರು. 

ಪ್ರಶ್ನೆ3- ಅತ್ಯಂತ ಹಳೆಯ ಒಲಂಪಿಕ್ ಕಂಚಿನ ಪದಕ ವಿಜೇತರು ಯಾರು?

ಉತ್ತರ- ಖಾಶಾಬಾ ದಾದಾಸಾಹೇಬ್ ಜಾದವ್ ಅತ್ಯಂತ ಹಳೆಯ ಒಲಂಪಿಕ್ ಕಂಚಿನ ಪದಕ ವಿಜೇತರು.

ಪ್ರಶ್ನೆ4- ಖಾಶಾಬಾ ಜಾದವ್ ಅವರಿಗೆ ಮೊದಲು ಕುಸ್ತಿಯನ್ನು ಕಲಿಸಿದವರು ಯಾರು?

ಉತ್ತರ- ಅವರ ತಂದೆ ದಾದಾಸಾಹೇಬ್ ಜಾಧವ್ ಅವರಿಗೆ ಮೊದಲು ಕುಸ್ತಿಯನ್ನು ಕಲಿಸಿದರು. 

ಪ್ರಶ್ನೆ 5-ಖಾಶಾಬಾ ಜಾದವ್ ಯಾವಾಗ ನಿಧನರಾದರು?

ಉತ್ತರ- ಖಾಶಾಬಾ ಜಾದವ್ 1984ರಲ್ಲಿ ನಿಧನರಾದರು. 

ಮತ್ತಷ್ಟು ಓದಿ 

ಏಂಜೆಲೊ ಮೊರಿಯೊಂಡೊ ಎಸ್ಪ್ರೆಸೊ  ಮಿಷನ್ ನ ತಂದೆ

ಡಾ. ಭೂಪೇನ್ ಹಜಾರಿಕಾ ಜೀವನ ಚರಿತ್ರೆ

ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ

Leave a Comment