ಪಡೋ ಪರದೇಶ ಯೋಜನೆ / ಪಡೋ ಪರದೇಶ ಯೋಜನೆ 2023 ಕನ್ನಡದಲ್ಲಿ

ಪಡೋ ಪರದೇಶ ಯೋಜನೆ (ಪಡೋ ಪರದೇಶ ಯೋಜನೆಗೆ ಬೇಕಾದ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ) 

ಸಾಮಾನ್ಯವಾಗಿ ಶಿಕ್ಷಣ ಸಾಲದ ಮೇಲಿನ ಹೆಚ್ಚಿನ ಬಡ್ಡಿದರದಿಂದಾಗಿ , ಬಡ, ಹಿಂದುಳಿದ ವರ್ಗ, ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರ ಪಡೋ ಪರದೇಶ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಓದುತ್ತಿರುವ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲದಮೇಲಿನ ಬಡ್ಡಿಗೆ  100% ರಿಯಾಯಿತಿ ನೀಡಲು ಸರ್ಕಾರ ಘೋಷಿಸಿದೆ. ಈ ಯೋಜನೆಯ ಸಹಾಯದಿಂದ ಸರ್ಕಾರವು ಅನೇಕ ನಿರ್ಗತಿಕರ ಅಗತ್ಯಗಳನ್ನು ಪೂರೈಸುತ್ತಿದೆ. ಈ ಯೋಜನೆಗೆ ಸಂಬಂಧಿಸಿದ  ಮಾಹಿತಿಯನ್ನು  ಕೆಳಗೆ ವಿವರಿಸಲಾಗಿದೆ. 

ಪಡೋ ಪ್ರದೇಶ್ ಯೋಜನೆಯ ಪ್ರಾರಂಭ (ಪಡೋ ಪರದೇಶ ಯೋಜನೆ  ಆರಂಭವಾದ ದಿನಾಂಕ)

 2013 – 2014 ಆರ್ಥಿಕ ವರ್ಷದಲ್ಲಿ,   ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್  ನಕವಿ  ಅವರು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು .

ಪಡೋ ಪರದೇಶ ಯೋಜನೆಯ ವೈಶಿಷ್ಟ್ಯಗಳು: ( ಪಡೋ ಪರದೇಶ ಯೋಜನೆಯ ಪ್ರಮುಖ ಲಕ್ಷಣಗಳು)

ಬಡ ವಿದ್ಯಾರ್ಥಿಗಳಿಗಾಗಿ ನಡೆಸುವ ಈ ಯೋಜನೆಯ ಮುಖ್ಯ ಲಕ್ಷಣಗಳನ್ನು ಕೆಳಗೆ ವಿವರಿಸಲಾಗಿದೆ

  •  ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಶಿಕ್ಷಣದ ಅಭಿವೃದ್ಧಿ: ಈ  ಯೋಜನೆಯ ಉದ್ದೇಶವು  , ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಒದಗಿಸುವುದು. ಇದರ ಅಡಿಯಲ್ಲಿ ಅವರಿಗೆ ಅಧ್ಯಯನಕ್ಕಾಗಿ ಸಾಲ ನೀಡಲಾಗುವುದು ಮತ್ತು ಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿ  ನೀಡಲಾಗುತ್ತದೆ. 
  • ಬಡ್ಡಿಗೆ  100% ಸಬ್ಸಿಡಿ: ಪ್ರಸ್ತುತ   ಬ್ಯಾಂಕ್ ನೀಡುವ ಶಿಕ್ಷಣ ಸಾಲದ ಮೇಲಿನ ಬಡ್ಡಿ ದರಗಳು ತುಂಬಾ  ಹೆಚ್ಚಾಗಿದೆ ಇದರಿಂದಾಗಿ ಅನೇಕ ಜನರು ಸಾಲವನ್ನು ತೆಗೆದುಕೊಳ್ಳುವುದಿಲ್ಲ, ಆದರೆ ಈ ಯೋಜನೆಯಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಸಾಲದ ಮೇಲಿನ ಬಡ್ಡಿಗೆ 100% ವರೆಗೆ ಸಬ್ಸಿಡಿ (ಸಹಾಯಧನವನ್ನು) ನೀಡುತ್ತದೆ. 
  •  ಕೋರ್ಸ್ ಅವಧಿಯ ವ್ಯಾಪ್ತಿ: ಯೋಜನೆಯ ಪ್ರಕಾರ ಫಲಾನುಭವಿಯು ತಾನು ಮಾಡುತ್ತಿರುವ ಕೋರ್ಸ್ ಪೂರ್ಣಗೊಳ್ಳುವವರೆಗೆ  ಸಾಲ ಮರುಪಾವತಿ ಮಾಡುವಂತಿರುವುದಿಲ್ಲ ,   ಇದರಿಂದ ವಿದ್ಯಾರ್ಥಿಗಳು  ಸಂಪೂರ್ಣ ಗಮನವನ್ನು ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
  • ಅರೆಕಾಲಿಕ ಕೋರ್ಸ್ಗಳಿಗೆ ಅನ್ವಯಿಸುತ್ತದೆ: ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಕಲಿಸುವ ಅನೇಕ ಕೋರ್ಸ್ ಗಳಿವೆ, ಅಂದರೆ ಕೋರ್ಸ್ನ ಕೆಲವು ಭಾಗವನ್ನು ಭಾರತದಲ್ಲಿ ಕಲಿಸಲಾಗುತ್ತದೆ ಮತ್ತು ಉಳಿದ ಭಾಗವನ್ನು ವಿದೇಶದಲ್ಲಿ ಕಲಿಸಲಾಗುತ್ತದೆ, ಅಂತಹ ಕೋರ್ಸ್ಗಳನ್ನು ಕಲಿಯುವ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯದಿಂದ ಪದವಿ  ಪಡೆಯುವವರೆಗೆ ಬಡ್ಡಿ  ಮೇಲೆ  ರಿಯಾಯಿತಿಯನ್ನು ಪಡೆಯುತ್ತಾರೆ .
  • ಫಲಾನುಭವಿಗಳ ಸಂಖ್ಯೆ: ಇಲ್ಲಿಯವರೆಗೆ ಸುಮಾರು 1500 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು  ಪಡೆಯಲು ಸಾಧ್ಯವಾಗುತ್ತದೆ.

ಪಡೋ ಪರದೇಶ ಯೋಜನೆಗೆ ಅರ್ಹತೆಯ ಮಾನದಂಡಗಳು:

ಯೋಜನೆಗೆ ಸರ್ಕಾರವು ಕೆಲವು ವಿಶೇಷ ಅರ್ಹತೆಗಳನ್ನು ನಿಗದಿಪಡಿಸಿದೆ ಅದನ್ನು ಕೆಳಗೆ ವಿವರಿಸಲಾಗಿದೆ

  • ಈ ಯೋಜನೆಯ ಅರ್ಜಿದಾರರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಬೇಕು, ಕ್ರಿಶ್ಚಿಯನ್ನರು ,ಮುಸ್ಲಿಮರು, ಸಿಕ್ಕರು, ಜೈನರು ,ಬೌದ್ಧರು ಮತ್ತು ಪಾರ್ಸಿಗಳು ಅಂತಹ ಜಾತಿ ಅಥವಾ ಧರ್ಮದ ಜನರು, ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಬಹುದು.
  •  ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣವನ್ನುಪಡೆಯುತ್ತಿದ್ದರೆ ಮಾತ್ರ ಈ ಸಬ್ಸಿಡಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅರ್ಜಿದಾರರು ವಿದೇಶದಿಂದ ಶಿಕ್ಷಣ ಪಡೆಯುತ್ತಿದ್ದರೆ  ಆ  ಸಂಸ್ಥೆ ಮಾನ್ಯತೆ ಪಡೆದಿರುವುದು ಕಡ್ಡಾಯವಾಗಿದೆ.
  • ಅರ್ಜಿದಾರರು ಯಾವುದೇ ಉನ್ನತ ಶಿಕ್ಷಣದ ವಿದ್ಯಾರ್ಥಿ ಯಾಗಿರಬೇಕು. ಉದಾಹರಣೆಗೆ ಅರ್ಜಿದಾರರು, ಎಂಪಿಲ್,   ಪಿ ಎಚ್ ಡಿ, ಎಂಬಿಎ ಇತ್ಯಾದಿಗಳ ವಿದ್ಯಾರ್ಥಿಯಾಗಿರುವುದು ಕಡ್ಡಾಯವಾಗಿದೆ ಆಗ ಮಾತ್ರ ನೀವು ಪ್ರಯೋಜನವನ್ನು ಪಡೆಯುತ್ತೀರಿ.
  • ಈ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ ಆದಾಯದ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಇದರಿಂದಾಗಿ  ಹೆಚ್ಚಿಗೆ ಆದಾಯ  ಹೊಂದಿರುವ ವಿದ್ಯಾರ್ಥಿಗಳು  ಈ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕುಟುಂಬದ ಆದಾಯ 600000 ಅಥವಾ ಅದಕ್ಕಿಂತ ಕಡಿಮೆ ಇರುವ ಜನರಿಗೆ ಈ ಯೋಜನೆಯಡಿ ಪ್ರಯೋಜನಗಳನ್ನು ನೀಡಲು ಸರ್ಕಾರ ಯೋಜಿಸಿದೆ.
  • ಈ ಯೋಜನೆ ಅಡಿಯಲ್ಲಿ ಸಾಲ ಪಡೆಯುವ ವಿದ್ಯಾರ್ಥಿಗಳ ಶಿಕ್ಷಣ ಸಾಲವು 20 ಲಕ್ಷಕ್ಕಿಂತ ಕಡಿಮೆಯಾಗಿರಬೇಕು, ಇದು ಯೋಜನೆಯ ಪ್ರಮುಖ  ಮಿತಿಯಾಗಿದೆ, ಇದರಿಂದಾಗಿ  ಅರ್ಜಿದಾರ ವಿದ್ಯಾರ್ಥಿಯು ಪ್ರಪಂಚದ ಯಾವುದೇ ಮೂಲೆಯಲ್ಲಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ.
  •  ಈ ಯೋಜನೆಯಡಿಯಲ್ಲಿ  ಔಪಚಾರಿಕವಾಗಿ  ಭಾರತದ  ನಾಗರಿಕರಾಗಿರುವ ಜನರಿಗೆ ಮಾತ್ರ ಸರ್ಕಾರವು  ಸಾಲವನ್ನು ನೀಡುತ್ತದೆ. ಆದ್ದರಿಂದ ಯೋಜನೆಯ ಫಲಾನುಭವಿ ಭಾರತೀಯ ಪ್ರಜೆ ಯಾಗಿರುವುದು ಕಡ್ಡಾಯವಾಗಿದೆ.

 ಈ ಯೋಜನೆಯಡಿ ಶಿಕ್ಷಣ ಸಾಲ ಪಡೆಯುವ ನಿಯಮಗಳು

  •     ಸಾಲದ ಮೊತ್ತ: ಈ ಯೋಜನೆಯಡಿಯಲ್ಲಿ , ಯಾವುದೇ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಯು ಯಾವುದೇ ಭಾರತೀಯ  ಬ್ಯಾಂಕಿನಿಂದ  ರೂ 20 ಲಕ್ಷದವರೆಗೆ  ಸಾಲವನ್ನು ಪಡೆಯಬಹುದು. ಇದರಿಂದ ಅವರು  ತಮ್ಮ ಅಧ್ಯಯನದ ಅಗತ್ಯ ವೆಚ್ಚಗಳನ್ನು ಪೂರೈಸಬಹುದು.
  •   ಬಡ್ಡಿದರ : ವಿದ್ಯಾರ್ಥಿಗಳು  ಕೋರ್ಸ್ ಪೂರ್ಣಗೊಳ್ಳುವ  ಅವಧಿಯಲ್ಲಿ ಈ ಯೋಜನೆ- ಅಡಿ ತೆಗೆದುಕೊಂಡ   ಹಣಕ್ಕೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ, ಇದಲ್ಲದೆ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕಲು ಒಂದು ವರ್ಷ ಆರು ತಿಂಗಳ ಹೆಚ್ಚುವರಿ ಕಾಲಾವಕಾಶ  ನೀಡಲಾಗುತ್ತದೆ.   ಈ ಅವಧಿ ಮುಗಿದ ನಂತರ ಫಲಾನುಭವಿಗಳು ಸಾಲದ ಸಂಪೂರ್ಣ ಬಡ್ಡಿ ಮತ್ತು  ಅಸಲಿನ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ .
  •  ಪಾವತಿ ವಿಧಾನ :  ಅರ್ಜಿದಾರರು ಈ ಯೋಜನೆ ಅಡಿ ತೆಗೆದುಕೊಂಡ ಹಣವನ್ನು ತಮ್ಮ ಬ್ಯಾಂಕ್  ಖಾತೆಯ ಮೂಲಕ ಪಡೆಯಬೇಕು.  ನೆಟ್ ಬ್ಯಾಂಕಿಂಗ್,  ಅಥವಾ  ಚೆಕ್ ಬಳಸಿ ವಿದ್ಯಾರ್ಥಿಗಳು   ಸಾಲದ ಹಣವನ್ನು ಪಡೆಯಬಹುದು . ಸಾಲ ಮತ್ತು ಸಾಲದ ಮರುಪಾವತಿಯ  ವಿಧಾನವು ಒಂದೇ ಆಗಿರುತ್ತದೆ
  •  ಸಾಲದ ಸಮಯ: ಈ ಯೋಜನೆಯಡಿ ಫಲಾನುಭವಿಯು ಉದ್ಯೋಗ ಪಡೆದ ನಂತರ ಸರ್ಕಾರವು ಒಂದುವರೆ ವರ್ಷಗಳ  ಕಾಲಾವಕಾಶವನ್ನು ನೀಡುತ್ತದೆ. ಅದರ ಅಡಿಯಲ್ಲಿ ಅವನು ತನ್ನ ಸಾಲವನ್ನು ಮರುಪಾವತಿ ಮಾಡಬಹುದು.
 ಸಬ್ಸಿಡಿ ನಿಯಮಗಳು  ( ಶಿಕ್ಷಣ ಸಾಲದ ಮೇಲಿನ  ಸಬ್ಸಿಡಿ)

 ಈ  ಯೋಜನೆಯಡಿಯಲ್ಲಿ,ಪ್ರಯೋಜನ ಪಡೆದ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಪೂರ್ಣಗೊಳ್ಳುವ ಅವಧಿಯವರೆಗಿನ ಸಾಲದ ಮೇಲಿನ ಬಡ್ಡಿಗೆ 100% ಸಬ್ಸಿಡಿಯನ್ನು ನೀಡಲಾಗುತ್ತದೆ .

ಯೋಜನೆಗೆ ಅಗತ್ಯವಿರುವ ದಾಖಲೆಗಳು( ಪಡೋ  ಪರದೇಶ ಯೋಜನೆಗೆ ಅಗತ್ಯವಿರುವ ದಾಖಲೆಗಳು)

 ಅರ್ಜಿದಾರರು   ಸಾಲದ  ಅರ್ಜಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಅರ್ಜಿಯನ್ನು ಅರ್ಜಿದಾರರು ವಿವಿಧ ಸರ್ಕಾರಿ  ಸ್ವಾಮ್ಯದ ಬ್ಯಾಂಕುಗಳಿಂದ ಪಡೆಯಬಹುದು, ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಬೇಕು

  •  ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ, ಅರ್ಜಿದಾರರ ಹೆಸರು, ವಿಳಾಸ, ವಯಸ್ಸು ಇತ್ಯಾದಿ ಮಾಹಿತಿ ಪಡೆಯಲು ಸರ್ಕಾರ ಇದನ್ನು ಬಳಸಿಕೊಳ್ಳುತ್ತದೆ. ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದು ಅವಶ್ಯಕ ಆದ್ದರಿಂದ ಅರ್ಜಿದಾರರು ಯಾವುದೇ ಬ್ಯಾಂಕ್ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
  • ಅರ್ಜಿದಾರನು ತಾನು ವಿಶ್ವವಿದ್ಯಾಲಯದಲ್ಲಿ ತೆಗೆದುಕೊಂಡ ಕೋರ್ಸ್ ನ ಪ್ರವೇಶ ದಾಖಲಾತಿಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. 
  • ಅರ್ಜಿದಾರರು ತಮ್ಮ ಕುಟುಂಬದ ಆದಾಯ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ, ಸರ್ಕಾರವು ನಿಗದಿಪಡಿಸಿದ ಆದಾಯದಮಟ್ಟಕ್ಕೆ ಅನುಗುಣವಾಗಿ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು.
  • ಅರ್ಜಿದಾರರು ಅಲ್ಪಸಂಖ್ಯಾತರು ಎಂಬ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಪ್ರಮಾಣ ಪತ್ರವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ  ದೃಢೀಕರಿಸಲ್ಪಟ್ಟಿರಬೇಕು.
ಯೋಜನೆಯಡಿ ಯಲ್ಲಿರುವ ಬ್ಯಾಂಕುಗಳು  ( ಪಡೋ ಪರ್ದೇಶ್ ಯೋಜನೆಯಲ್ಲಿರುವ ಬ್ಯಾಂಕುಗಳ ಪಟ್ಟಿ)

 ಈ  ಯೋಜನೆಯಡಿಯಲ್ಲಿ ಸರ್ಕಾರವು,  ಸರ್ಕಾರದ ಅಡಿಯಲ್ಲಿ ಇರುವ ಎಲ್ಲಾ ಬ್ಯಾಂಕುಗಳನ್ನು ಸೇರಿಸಿದೆ ,ಇದಲ್ಲದೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್, ಅಡಿಯಲ್ಲಿ ಬರುವ ಸಹಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ,ವಿವಿಧ ಸಾರ್ವಜನಿಕ ಮಲಯದ ಬ್ಯಾಂಕುಗಳು ಇತ್ಯಾದಿಗಳು ಈ ಯೋಜನೆಗಾಗಿ ಕಾರ್ಯನಿರ್ವಹಿಸುತ್ತಿವೆ.

ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು (ಕನ್ನಡದಲ್ಲಿ ಪಡೋ ಪ್ರದೇಶ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು)
  •  ಅರ್ಜಿಯನ್ನು ಪಡೆಯಲು, ಅರ್ಜಿದಾರರು   IBA ಬ್ಯಾಂಕಿಂಗ್ ಕಾನೂನು ಸಮಿತಿಯಿಂದ ಗುರುತಿಸಲ್ಪಟ್ಟ, ಯಾವುದೇ ಬ್ಯಾಂಕಿಗೆ ಹೋಗಿ ತನ್ನ ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತೋರಿಸಿ,ಅರ್ಜಿಯನ್ನು ಪಡೆಯಬೇಕು.
  •  ಬ್ಯಾಂಕಿನಿಂದ ಅರ್ಜಿದಾರರಿಗೆ ಶಿಕ್ಷಣ ಕ್ರೆಡಿಟ್  ದಾಖಲೆಯನ್ನು ನೀಡಲಾಗುತ್ತದೆ.  ಸರಿಯಾದ ಮಾಹಿತಿಯೊಂದಿಗೆ ಅದನ್ನು ಎಚ್ಚರಿಕೆಯಿಂದ ತುಂಬುವುದು ಕಡ್ಡಾಯವಾಗಿದೆ. ಲೋನ್ ಡಾಕ್ಯುಮೆಂಟ್ ಗಳನ್ನು ಸಂಪೂರ್ಣವಾಗಿ ಭರ್ತಿಮಾಡಿದ ನಂತರ, ಅರ್ಜಿದಾರರು ಅದರೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.
  •  ದಾಖಲಾತಿಗಳನ್ನು ಬ್ಯಾಂಕಿನ ಪ್ರಧಾನ ಕಛೇರಿಗೆ ಕಳಿಸಲಾಗುತ್ತದೆ, ನಂತರ ಅದನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕಳುಹಿಸಲಾಗುತ್ತದೆ, ಅದರ ನಂತರ ನಿಮ್ಮ ಲೋನ್ ಅನುಮೋದನೆಯ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ .
 ಯೋಜನೆಯ ಬಜೆಟ್ ( ಪದೋ ಪರದೇಶ್ ಯೋಜನೆಯ ಬಜೆಟ್)

ಈ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರವು ಒಟ್ಟು 7.5 ಕೋಟಿ ರೂ ಅನುದಾನವನ್ನು ನೀಡಿದೆ. ಅದಾಗಿಯೂ ಕಾಲ ನಂತರದಲ್ಲಿ ಅರ್ಜಿದಾರರ ಸಂಖ್ಯೆ ಹೆಚ್ಚಾದಂತೆ ಸರ್ಕಾರದಿಂದ ಬಜೆಟ್ ಮಾಡಲಾಗುವುದು, ಇದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು,   ಭಾರತ ಸರ್ಕಾರದ ಈ ಯೋಜನೆಯ ಮೂಲಕ ತಮ್ಮ ಜೀವನವನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.

Leave a Comment