ಗಣರಾಜ್ಯೋತ್ಸವದ ಇತಿಹಾಸ ಮತ್ತು ಪ್ರಾಮುಖ್ಯತೆ 2023/ History and Importance of Repablicday.

 ಭಾರತವು ಈ ವರ್ಷ ತನ್ನ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ, ನಮ್ಮ ದೇಶವು 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರವನ್ನು ಪಡೆದುಕೊಂಡಿತು, ಆದರೆ ಮೂರು ವರ್ಷಗಳ ನಂತರ ಅಂದರೆ ಜನವರಿ 26 1950 ರಂದು ನಮ್ಮ ದೇಶದಲ್ಲಿ ಸಂವಿಧಾನವು ಜಾರಿಗೆ ಬಂದಿತು. ಈ ಕಾರಣದಿಂದಾಗಿ ಪ್ರತಿ ವರ್ಷ ಜನವರಿ 26ರನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ.

 ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು, ನವೆಂಬರ್ 26 1949 ರಂದು ಭಾರತ ಸಂವಿಧಾನವನ್ನು, ಭಾರತ ಸಂವಿಧಾನ ಸಭೆಯು ಅಂಗೀಕರಿಸಿದ ಕಾರಣ ದೇಶದಲ್ಲಿ ಪ್ರತಿವರ್ಷ ನವೆಂಬರ್ 26ಅನ್ನು ಸಂವಿಧಾನ  ದಿನವಾಗಿ  ಆಚರಿಸಿಕೊಂಡು ಬರಲಾಗಿದೆ, ಭಾರತ ಸಂವಿಧಾನವನ್ನು ರಚಿಸುವ ಉದ್ದೇಶವನ್ನು ಹೊಂದಿದ್ದ ಸಂವಿಧಾನ ಸಭೆಯು ತನ್ನ ಮೊದಲ ಸಭೆಯನ್ನು ಡಿಸೆಂಬರ್ 9, 1946 ರಂದು ನಡೆಸಿತು. ಕೊನೆಯ ಸಭೆ ನವೆಂಬರ್ 26 1949 ರಂದು ಕೊನೆಗೊಂಡಿತು, ಒಂದು ವರ್ಷದ ತರುವಾಯ ಸಂವಿಧಾನವನ್ನು ಅಂಗೀಕಾರ ಮಾಡಲಾಯಿತು.

1930ರ ಈ ದಿನದಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ ಎಂದು ಘೋಷಿಸಿತು. ಈ ದಿನ ಭಾರತೀಯರಿಗೆ ತಮ್ಮ ಸರ್ಕಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡುವ ಶಕ್ತಿಯನ್ನು ನೆನಪಿಸಿಕೊಡುತ್ತದೆ .

 ಪ್ರತಿವರ್ಷ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ  ಜನವರಿ 26ರ ಪ್ರಮುಖ ಆಕರ್ಷಣೆ ಎಂದರೆ ಪರೇಡ್ ಇದು ದೆಹಲಿಯ ರಾಜಪತದಿಂದ ಪ್ರಾರಂಭವಾಗಿ ಇಂಡಿಯಾ ಗೇಟ್ ವರೆಗೆ ಸೇನೆ ತನ್ನ ಶಕ್ತಿಪ್ರದರ್ಶನ ತೋರಿಸುತ್ತದೆ ಈ ದಿನ ರಾಷ್ಟ್ರಪತಿಗಳು ನವ ದೆಹಲಿಯ  ರಾಜ್ ಪತ್ ನಲ್ಲಿ ಧ್ವಜಾರೋಹಣ ಮಾಡುತ್ತಾರೆ.

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ರಾಜಪಥದಲ್ಲಿ ಕಾಣಿಸಿಕೊಳ್ಳುತ್ತವೆ, ಇದು ಆಯಾ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ಗೌರವ ವಂದನೆ ಸ್ವೀಕರಿಸುತ್ತಾರೆ. ಪ್ರತಿ ವರ್ಷ ರಾಷ್ಟ್ರಪತಿಗಳು ಸಾಧನೆ ಮಾಡಿದ ಭಾರತದ ನಾಗರಿಕರಿಗೆ ಪದ್ಮಭೂಷಣ, ಪದ್ಮಶ್ರೀ, ಅಶೋಕ ಚಕ್ರ ಪ್ರಶಸ್ತಿಗಳನ್ನು ವಿತರಿಸುತ್ತಾರೆ. 

ಭಾರತದ ಮೊದಲ ಗಣರಾಜ್ಯೋತ್ಸವವನ್ನು ಜನವರಿ 26 1950 ರಂದು ಆಚರಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು, ದೆಹಲಿಯ ಇರ್ವಿನ್ ಸ್ಟೇಡಿಯಂನಲ್ಲಿ ರಾಷ್ಟ್ರಧ್ವಜವನ್ನು ಆರಿಸಿದರು, ನಂತರ ರಾಷ್ಟ್ರಗೀತೆಯನ್ನು ಹಾಡಿದರು, ಮೊದಲ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಡಾ. ಸುಕರ್ನೋ ಮತ್ತು ಅವರ ಪತ್ನಿ, ಡಾ. ರಾಜೇಂದ್ರ ಪ್ರಸಾದ್ ಅವರು ಸಶಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸಿದರು ಮತ್ತು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹದಿನೈದು ಸಾವಿರಕ್ಕೂ ಹೆಚ್ಚು ಜನ ಸಾಕ್ಷಿಯಾದರು. 

ಈ ದಿನವನ್ನು ದೇಶದ ಪ್ರತಿಯೊಂದು ಶಾಲೆ ಮತ್ತು ಕಾಲೇಜಿನಲ್ಲಿ ಆಚರಿಸಲಾಗುತ್ತದೆ, ಶಾಲೆಗಳಲ್ಲಿ ಭಾರತದ ರಾಷ್ಟ್ರಧ್ವಜವನ್ನು ಆರಿಸಲಾಗುತ್ತದೆ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪ್ರಮುಖ ದಿನದಂದು ದೇಶದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗುತ್ತದೆ, ಮತ್ತು ಅನೇಕ ದೇಶಭಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ 

ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳು

ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ಕೆಳಗೆ ತಿಳಿಸಲಿದ್ದೇವೆ, ಆ ಮುಖ್ಯ ಮಾಹಿತಿಗಳು ಕೆಳಗಿನಂತಿವೆ.

  •  1950 ರಿಂದ 1954ರ ಅವಧಿಯಲ್ಲಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಗಣರಾಜ್ಯೋತ್ಸವ ಆಚರಣೆಗಳು ನಡೆದವು, ಈ ದಿನವನ್ನು 1955 ರಿಂದ ರಾಜಪಥದಲ್ಲಿ ಆಯೋಜಿಸಲಾಗಿದೆ.
  •  ಜನವರಿ 11 1966 ರಂದು ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದ ಕಾರಣ, ಈ ದಿನದಂದು ಯಾರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಿಲ್ಲ.
  •  ಭಾರತದ ಸಂವಿಧಾನವು ಒಟ್ಟು 448 ಲೇಖನಗಳು 12 ಅನುಸೂಚಿಗಳು  ಮತ್ತು 25 ಭಾಗಗಳನ್ನು ಒಳಗೊಂಡಿದೆ. ಇದು ನಮ್ಮ ದೇಶದ ಸಂವಿಧಾನವನ್ನು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿ  ಮಾಡಿದೆ.
  •  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತೀಯ ಸಂವಿಧಾನದ  ಪಿತಾಮಹ  ಎಂದು ಕರೆಯುತ್ತಾರೆ,  ನಮ್ಮ ದೇಶದ ಸಂವಿಧಾನವನ್ನು ಇವರೇ ಸಿದ್ಧಪಡಿಸಿದ್ದಾರೆ, ಇದೇ ಸಮಯದಲ್ಲಿ ಭಾರತದ ಮೊದಲ ರಾಷ್ಟ್ರಪತಿ ಹುದ್ದೆಯ ಹೆಮ್ಮೆಯನ್ನು ರಾಜೇಂದ್ರ ಪ್ರಸಾದ್ ಹೆಚ್ಚಿಸಿದರು .
  • ಇತಿಹಾಸದಲ್ಲಿ ಮೊದಲ ಬಾರಿಗೆ, ದೇಶದ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ಅವರ ಅನಾರೋಗ್ಯದ ಕಾರಣ ಅವರು ಗಣರಾಜ್ಯೋತ್ಸವದಂದು ಗೌರವ ವಂದನೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. 
  • ಭಾರತೀಯ ರಾಷ್ಟ್ರೀಯಕಾಂಗ್ರೆಸ್, ಜನವರಿ 26 1930ನ್ನು ಸ್ವತಂತ್ರ ದಿನ ಎಂದು ಘೋಷಿಸಿತು, ಆದರೆ 1947ರಲ್ಲಿ ಆಗಸ್ಟ್ 15 ಅಧಿಕೃತ ಸ್ವತಂತ್ರ ದಿನವಾಗಿ ಹೊರಹೊಮ್ಮಿತು, ಅದರ ನಂತರ 1930ರ ಘೋಷಣೆಯನ್ನು ಸ್ಮರಣೀಯವಾಗಿರಿಸಲು 26 ಜನವರಿ 1950 ರಂದು ಹೊಸ ಭಾರತೀಯ ಸಂವಿಧಾನವನ್ನು ಜಾರಿಗೆ ತರಲಾಯಿತು.
  • . ಈ ದಿನದ ಮುಖ್ಯ ಕಾರ್ಯಕ್ರಮವೆಂದರೆ, ಭಾರತದ ಸೈನಿಕರಿಗೆ ಅವರ ಶೌರ್ಯವನ್ನು ಗೌರವಿಸಲು ಪರಮ ವೀರ ಚಕ್ರ, ಅಶೋಕ ಚಕ್ರ, ಮತ್ತು ವೀರ ಚಕ್ರದಂತಹ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

Leave a Comment