ನುಡಿಮುತ್ತುಗಳು|ಜೀವನದ ನುಡಿಮುತ್ತುಗಳು| ಸಾಧನೆ ನುಡಿಮುತ್ತುಗಳು|100+ Inspiring Quotes in Kannada.

ನುಡಿಮುತ್ತುಗಳು, ಕನ್ನಡದಲ್ಲಿ ನುಡಿಮುತ್ತುಗಳು. ಸ್ಪೂರ್ತಿದಾಯಕ ನುಡಿಮುತ್ತುಗಳು, ಸಾಧನೆಯ ನುಡಿಮುತ್ತುಗಳು. 

ನುಡಿಮುತ್ತುಗಳು

ಒಳ್ಳೆಯ ಆಲೋಚನೆಗಳು ಮತ್ತು ಒಳ್ಳೆಯ ಅಭ್ಯಾಸ ನಮ್ಮನ್ನು ಸದಾ ಕಾಪಾಡುತ್ತದೆ.

ಗೆಲ್ಲುವವರೆಗೂ ಯಾರೂ ನಮ್ಮ ಕಥೆಯನ್ನು ಕೇಳುವುದಿಲ್ಲ ಆದ್ದರಿಂದ ಮಾತನಾಡುವ ಮುನ್ನ ಗೆಲ್ಲಬೇಕು.

ನಿಮ್ಮ ಸಂತೋಷಕ್ಕೆ ಯಾರು ಕಾರಣರಲ್ಲ ನಿಮ್ಮ ಸಂತೋಷಕ್ಕೆ ನಿಮ್ಮ ಅಂತರಂಗವೇ ಕಾರಣ. 

ನಿಮ್ಮ ಜೀವನ ಅಮೂಲ್ಯವಾಗಿದೆ ಇತರರು ಅದನ್ನು ನಾಶಮಾಡಲು ಬಿಡಬೇಡಿ.

ನಿಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಿ, ಮತ್ತು ಅದನ್ನು ಪೂರೈಸಲು ಬದುಕಿ. 

ಆರಂಭ ಮಾಡಲು ಸಾಧಕನಾಗಬೇಕಿಲ್ಲ ಆದರೆ ಸಾಧನೆ ಮಾಡಲು ಆರಂಭ ಮಾಡಲೇಬೇಕು. 

ಸಾಧಿಸಿದೆ ಎಂದು ಬೀಗದೆ ಇನ್ನೂ ಹೊಸದನ್ನು ಸಾಧಿಸುವೆ ಎಂದು ಮುನ್ನಡೆ. 

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು- ಸ್ವಾಮಿ ವಿವೇಕಾನಂದ 

ನಿನ್ನ  ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದವರನ್ನು ಮರೆಯಬೇಡ ,ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ.

ಜ್ಞಾನವು ನಮಗೆ ಶಕ್ತಿಯನ್ನು ನೀಡುತ್ತದೆ, ಪ್ರೀತಿ, ನಮಗೆ ಪರಿಪೂರ್ಣತೆಯನ್ನು ನೀಡುತ್ತದೆ.

ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ, ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು, ಮನಸ್ಸಿಗೆ ತಾಕದಿರಲಿ. -ಅಬ್ದುಲ್ ಕಲಾಂ

ಶಿಕ್ಷಣದ ಬೇರುಗಳು ಕಹಿ ಇರಬಹುದು, ಆದರೆ ಅದರ ಫಲ ಸಿಹಿಯಾಗಿರುತ್ತದೆ-, ಅರಿಸ್ಟಾಟಲ್ 

ಇತಿಹಾಸ ಓದುವಂತಹ ವ್ಯಕ್ತಿಗಳಾಗಬೇಡಿ, ಇತಿಹಾಸ ನಿರ್ಮಿಸುವಂತ ವ್ಯಕ್ತಿಗಳಾಗಿ 

ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ,ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು  ಗ್ರಂಥಾಲಯಕ್ಕೆ ಸಮಾನ 

ನುಡಿಮುತ್ತುಗಳು

ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡಗಿನ ಏಕಾಗ್ರ ಚಿತ್ತ ಬದ್ಧತೆ, ಅದರಲ್ಲಿ ಪ್ರೀತಿ. 

ನಿದ್ರೆಯಲ್ಲಿ ಕಾಣುವುದು ಕನಸಲ್ಲ ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. 

ಸೋಲೆಂಬ ರೋಗಕ್ಕೆ, ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು, ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ. 

ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ, ವಿಫಲತೆಯು ನನ್ನನ್ನು ಏನು ಮಾಡಲಾಗದು. 

ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ, ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ. 

ಕೇವಲ ಯಶಸ್ಸಿನ ಕಥೆಗಳನ್ನೇ ಹೆಚ್ಚು ಓದಬೇಡಿ, ಏಕೆಂದರೆ ಯಶಸ್ಸಿನ ಕಥೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ, ಸೋಲಿನ ಕಥೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು, ಕುಡಿಯೊಡೆಯುತ್ತದೆ. – ಅಬ್ದುಲ್ ಕಲಾಂ 

ದೊಡ್ಡ ಗುರಿ,ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ದೃಢ ನಿಷ್ಠೆ, ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. – ಅಬ್ದುಲ್ ಕಲಾಂ

ಸಾಧ್ಯವೇ ಇಲ್ಲ ಎಂದು ಕೊಂಡರೆ ಏನನ್ನು ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.- ಸ್ವಾಮಿ ವಿವೇಕಾನಂದ

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ತಾರು ಅಲ್ಲ ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.- ಸ್ವಾಮಿ ವಿವೇಕಾನಂದ 

ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ, ಬದುಕಿಗೆ ಅವಮಾನ.ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು, ಹೊಸ ಮಾರ್ಗ ಸೃಷ್ಟಿಸುವ ಧೈರ್ಯ ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.

ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತದೆ, ಆದ್ದರಿಂದ ಏನನ್ನು ಯೋಚಿಸುತ್ತೀರೋ, ಅದರ ಬಗ್ಗೆ ಎಚ್ಚರದಿಂದಿರಿ. 

ಸೋಲು ಯಶಸ್ಸಿನ ಮೊದಲ ಮೆಟ್ಟಿಲು. 

ನೀವು ನಿಮ್ಮ ಗುರಿ ತಲುಪಬೇಕಾದರೆ, ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು. 

ನುಡಿಮುತ್ತುಗಳು

ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ,ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ. 

ಸಾಧಿಸೇ ಸಾಧಿಸುತ್ತೇನೆ ಎಂಬ ಕಿಚ್ಚನ ಮನಸ್ಸಿನ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು.

ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ

ಮಹಾನ್ ಕನಸುಗಾರರ ಕನಸುಗಳು, ಯಾವಾಗಲೂ ನನಸಾಗುತ್ತದೆ. -ಡಾ. ಎ.ಪಿ.ಜೆ ಅಬ್ದುಲ್ ಕಲಾಂ

ಸಣ್ಣ ಗುರಿಯನ್ನು ಹೊಂದುವುದು ಅಪರಾಧವಾಗಿದೆ, ಆದ್ದರಿಂದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ-. ಡಾ. ಎ.ಪಿ.ಜೆ ಅಬ್ದುಲ್ ಕಲಾಂ 

ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ- ಡಾ. ಎ.ಪಿ.ಜೆ ಅಬ್ದುಲ್ ಕಲಾಂ

ದೊಡ್ಡ ಗುರಿಯನ್ನು ಹೊಂದುವುದು, ನಿರಂತರವಾಗಿ ಜ್ಞಾನವನ್ನು ಪಡೆದುಕೊಳ್ಳುವುದು, ಪರಿಶ್ರಮ ಪಡುವುದು, ತಾಳ್ಮೆಯಿಂದಿರುವುದು ಈ ನಾಲ್ಕು ವಿಷಯಗಳನ್ನು ಅನುಸರಿಸಿದರೆ, ನೀವು ಏನನ್ನಾದರೂ ಸಾಧಿಸಬಹುದು.

ನಿಮ್ಮ ಪ್ರಯತ್ನವಿಲ್ಲದೆ, ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ, ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ, ನೀವು ವಿಫಲರಾಗಲು ಸಾಧ್ಯವಿಲ್ಲ. 

ಚಿಂತನೆ ನಿಮ್ಮ ಮೂಲ ಬಂಡವಾಳವಾಗಿದೆ, ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರ ನಿಮ್ಮ ಕಠಿಣ ಪರಿಶ್ರಮದಲ್ಲಿದೆ.

ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ, ನಿಮ್ಮಿಂದ ನಿಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತ ಬದಲಾಯಿಸುತ್ತವೆ. 

ಕಠಿಣವಾದ ಕೆಲಸಗಳು, ಅಸಾಧ್ಯವೆಂದಲ್ಲ ಕಠಿಣವಾದ ಕೆಲಸಗಳಿಗೆ ಹೆಚ್ಚಿನ ಕಷ್ಟಪಡಬೇಕಾಗುತ್ತದೆ.

ನಿಮ್ಮನ್ನು ದ್ವೇಷಿಸುವವರನ್ನು ನೀವು ಯಾವತ್ತೂ ದ್ವೇಷಿಸಬೇಡಿ, ಏಕೆಂದರೆ ನೀವು ಅವರಿಗಿಂತ ಉತ್ತಮರೆಂದು ಅವರಷ್ಟೇ ಯೋಚಿಸುತ್ತಾರೆ. 

ನೀವು ತಪ್ಪು ಮಾಡಿದಾಗ ಅದನ್ನು ಮುಜುಗರವಿಲ್ಲದೆ, ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ. 

ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ.

ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಂಟು ಮಾಡುತ್ತದೆ,ಈ ಎರಡನ್ನೂ ಓಡಿಸುವ ಏಕೈಕ ಅಸ್ತ್ರ ವಿದ್ಯೆ – ಡಾ. ಬಿಆರ್ ಅಂಬೇಡ್ಕರ್ 

ನಿನ್ನನ್ನು ನೀ ಅರಿ, ನಿನ್ನಲ್ಲೇ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳು ಅಡಗಿವೆ. 

ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಠನಾಗುತ್ತಿ, ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು- ಸ್ವಾಮಿ ವಿವೇಕಾನಂದ

 ಪ್ರಯತ್ನ ಗುಟ್ಟಾಗಿರಲಿ, ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ ಮುಟ್ಟುವಂತಿರಲಿ. 

ನುಡಿಮುತ್ತುಗಳು

ತಲೆ ತಗ್ಗಿಸಿ, ನಿನ್ನ ಕೆಲಸ ನೀನು ಮಾಡಿದರೆ, ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ. 

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ ವಿನಯವನ್ನು ವಿವೇಕವನ್ನು  ಕಲಿಸುವುದೇ ವಿದ್ಯಾಭ್ಯಾಸ.’

ವಿದ್ಯೆಗಿಂತ ಬೇರೆ  ಐಶ್ವರ್ಯವಿಲ್ಲ ನಿರ್ಮಲ ಸ್ವಭಾವಕ್ಕಿಂತ ಬೇರೆ ತೀರ್ಥಸ್ನಾನವಿಲ್ಲ. 

ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ ಜ್ಞಾನದಿಂದ ವಿನಯ ಬಂದರೆ, ಅದು ಅಮೃತಕ್ಕೆ ಸಮಾನ. 

ಹೇಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.

ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ ಇಲ್ಲದಿದ್ದರೆ ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟು ಬಿಡುತ್ತೀರಿ.

ನೀವು ನಿಮ್ಮನ್ನು ನಂಬದ ಹೊರತು ನೀವು ದೇವರನ್ನು ನಂಬಲು ಸಾಧ್ಯವಿಲ್ಲ.

ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ, ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು. 

ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.

ದೈಹಿಕವಾಗಿ ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ ಅದನ್ನು ವಿಷದಂತೆ ತಿರಸ್ಕರಿಸಿ. 

ಜ್ಞಾನವನ್ನು ಪಡೆಯಲು ಒಂದೇ ಒಂದು ವಿಧಾನವಿದೆ, ಅದು ಏಕಾಗ್ರತೆ. ಶಿಕ್ಷಣದ ಮೂಲತತ್ವವೆಂದರೆ ಮನಸ್ಸಿನ ಏಕಾಗ್ರತೆ.

ನಮಗೆ ಎಲ್ಲವೂ ತಿಳಿದಿದೆ ಎಂದು ನಾವು ಯಾವಾಗ ಅಂದುಕೊಳ್ಳುತ್ತೇವೋ, ಅಂದು ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ. 

ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

ಶಕ್ತಿಯಲ್ಲ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನು ಮಾಡಬಲ್ಲಿರಿ.

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ

ಎಂದಿಗೂ ಪ್ರಯತ್ನಿಸದವನಿಗಿಂತ ಹೋರಾಡುವವನು ಉತ್ತಮ.

ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ಸದಾ ಹೃದಯವನ್ನು ಅನುಸರಿಸಿ. 

ಮುನ್ನಡೆಯುವಾಗ ಸೇವಕರಾಗಿರಿ, ನಿಸ್ವಾರ್ಥರಾಗಿರಿ ,ಅನಂತ ತಾಳ್ಮೆ ಹೊಂದಿರಿ ಮತ್ತು ಯಶಸ್ಸು ಸದಾ ನಿಮ್ಮದಾಗಿರುತ್ತದೆ.

ಹೇಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.

ಮನುಷ್ಯನಲ್ಲಿ ಪರಿಪೂರ್ಣತೆಯನ್ನು  ತರುವುದೇ ಶಿಕ್ಷಣ. 

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ   ಕರೆದುಕೊಂಡು ಹೋಗುವ ಶಬ್ದವೇ ಗುರು.

ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

ಕಷ್ಟಗಳನ್ನು ಎದುರಿಸಿದಷ್ಟು ನೀನು  ಬಲಶಾಲಿಯಾಗುವೆ. ಆದ್ದರಿಂದ ಕಷ್ಟಗಳು ಬಂದಾಗ ಅಂಜ ಬೇಡ ಅದನ್ನು ಧೈರ್ಯದಿಂದ ಎದುರಿಸು.

ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ

ಕಾಲ ಕೆಟ್ಟಿದೆ ಎಂದು ಜನರು ಹೇಳುತ್ತಾರೆ, ಆದರೆ ಕಾಲ ಕೆಡುವುದಿಲ್ಲ ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ

ನುಡಿಮುತ್ತುಗಳು

ನೀವು ಏನೆಂದು ಭಾವಿಸುತ್ತೀರಿ ನೀವು ಅದೇ ಆಗುತ್ತೀರಿ. ದುರ್ಬಲರು .ಎಂದು ನೀವು ಭಾವಿಸಿದರೆ ನೀವೇ ದುರ್ಬರು, ನೀವು ಬಲಶಾಲಿ ಎಂದು ಭಾವಿಸಿದರೆ ನೀವೇ ಬಲಶಾಲಿ

ನನಗೆ ಬೇಕಾದದ್ದು ಕಬ್ಬಿಣದ ಸ್ನಾಯುಗಳು ಉಕ್ಕಿನ ನರಗಳು ಮತ್ತು ಸಿಡಿಲಿನಂತ ಮನಸ್ಸುಗಳು ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ. 

ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ಸದಾ ಹೃದಯವನ್ನು ಅನುಸರಿಸಿ. 

ಮನಸ್ಸನ್ನು ಶಕ್ತಿಯುತವೂ, ಶಿಸ್ತು ಬದ್ಧವೂ  ಆಗಿಸುವುದರಲ್ಲಿಯೇ  ಜ್ಞಾನದ ಮೌಲ್ಯವಿರುವುದು.

ಯಾರು ನಿಮಗೆ ಕಲಿಸಲಾರರು, ಯಾರು ನಿಮ್ಮನ್ನು ಆಧ್ಯಾತ್ಮಿಕ ವ್ಯಕ್ತಿಗಳನ್ನಾಗಿ ಮಾಡಲಾರರು ನಿಮಗೆ ನೀವೇ ಗುರುಗಳು ನಿಮ್ಮ ಆತ್ಮದ   ಹೊರತಾದ ಬೇರೆ ಶಿಕ್ಷಕರಿಲ್ಲ.

ಎಷ್ಟು ಹೆಚ್ಚು ಹೊರಬಂದು ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯ ಶುದ್ಧವಾಗುತ್ತದೆ ಮತ್ತು ಅಂತವರಲ್ಲಿ ದೇವರು ಇರುತ್ತಾನೆ. 

ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.

ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ.

ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗೆ ಇಡುತ್ತದೆ. 

ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತದೆ. ಕೆಲಸವಿಲ್ಲದ  ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ. 

ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ.

ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು, ಅವರು ನಿನ್ನ ಎದುರು ಸುಳಿದಾಗೆಲ್ಲ ನಿನ್ನಲ್ಲಿ ಬದುಕುವಲ್ಲಿ ಎಚ್ಚೆತ್ತುಕೊಳ್ಳುತ್ತದೆ.

ಇತರರಿಗಾಗಿ ಯಾರು ಮರುಗುತ್ತಾರೋ ಅವರೇ ನಿಜವಾಗಿ ಬದುಕಿರುವವರು, ಉಳಿದವರು ಬದುಕಿದ್ದು ಸತ್ತಂತೆ. 

ನಾವು  ಸೋಲಬಾರದು,  ಮತ್ತು ಸಮಸ್ಯೆಗಳು ನಮ್ಮನ್ನು ಸೋಲಿಸಲು ನಾವು ಬಿಡಬಾರದು. 

ಕನಸನ್ನು ನನಸಾಗಿಸುವ ಮೊದಲು, ಕನಸು ಕಾಣುವುದು ಅವಶ್ಯಕ.

ನಮ್ಮ  ಮಕ್ಕಳು ಸುಂದರ  ಭವಿಷ್ಯವನ್ನು ಪಡೆಯಲು ಇಂದೇ ತ್ಯಾಗ ಮಾಡೋಣ. 

ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಬೇಕಾದರೆ, ಮತ್ತು ಒಂದು ಸುಂದರ ರಾಷ್ಟ್ರವಾಗಬೇಕಾದರೆ, ಸಮಾಜದ ಮೂರು ಪ್ರಮುಖ ಸದಸ್ಯರು ಬದಲಾವಣೆಯನ್ನು ಮಾಡಬಹುದು ಎಂದು ನಾನು ಬಲವಾಗಿ ನಂಬುತ್ತೇನೆ, ಅವರೇ ತಂದೆ, ತಾಯಿ ಮತ್ತು ಗುರು. 

ನಿಮ್ಮ ಗುರಿಯನ್ನು ನೀವು ತಲುಪುವವರೆಗೆ ಎಂದಿಗೂ ಹೋರಾಟವನ್ನು ನಿಲ್ಲಿಸಬೇಡಿ. ನೀವು ಅನನ್ಯರು, ಜೀವನದಲ್ಲಿ ಗುರಿಯನ್ನು ಹೊಂದಿರಿ, ನಿರಂತರವಾಗಿ ಜ್ಞಾನವನ್ನು ಸಂಪಾದಿಸಿ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠ ಜೀವನವನ್ನು  ಅರಿತುಕೊಂಡು ಮುಂದೆ ಸಾಗಿ.

ನಾವು ಸ್ವತಂತ್ರರೆಲ್ಲದಿದ್ದರೆ ಯಾರು ನಮ್ಮನ್ನು ಗೌರವಿಸುವುದಿಲ್ಲ.

ಧರ್ಮ ಸ್ಥಾಪನೆಗಾಗಿ ಯಾರನ್ನಾದರೂ ಕೊಲ್ಲುವುದನ್ನು ಯಾವುದೇ ಧರ್ಮದಲ್ಲಿ ಉಲ್ಲೇಖಿಸಲಾಗಿಲ್ಲ. 

ಎತ್ತರವನ್ನು ತಲುಪಲು ಶಕ್ತಿ, ಎಂದರೆ ಸಾಮರ್ಥ್ಯ ಬೇಕು, ಅದು ಎವರೆಸ್ಟ್ ನ ಎತ್ತರವಾಗಿರಲಿ ಅಥವಾ ನಿಮ್ಮ ವೃತ್ತಿಜೀವನವಾಗಿರಲಿ. 

ನುಡಿಮುತ್ತುಗಳು

ಯುದ್ಧವು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.

ನೀವು ನೋಡಿ, ಕಷ್ಟಪಟ್ಟು ಕೆಲಸ ಮಾಡುವವರಿಗೆ ಮಾತ್ರ ದೇವರು ಸಹಾಯ ಮಾಡುತ್ತಾನೆ. ಈ ತತ್ವವು ತುಂಬಾ  ಸ್ಪಷ್ಟವಾಗಿದೆ.

ಪ್ರಶ್ನೆಗಳನ್ನು ಕೇಳುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವಾಗಿದೆ. ಆದ್ದರಿಂದ ಅವರು ಪ್ರಶ್ನೆಗಳನ್ನು ಕೇಳಲಿ. 

ಕಾವ್ಯವು ಅತ್ಯುನ್ನತ ಸಂತೋಷ ಅಥವಾ ಆಳವಾದ ದುಃಖದಿಂದ ಹೊರ ಒಮ್ಮುತ್ತದೆ.  

ಶ್ರೇಷ್ಠ ಶಿಕ್ಷಕರು, ಜ್ಞಾನ, ಉತ್ಸಾಹ,ಮತ್ತು ಸಹಾನುಭೂತಿಯಿಂದ ಹೊರ ಹೊಮ್ಮುತ್ತಾರೆ. 

ಸ್ವಾವಲಂಬನೆ ಯೊಂದಿಗೆ ಸ್ವಾಭಿಮಾನ ಬರುತ್ತದೆ . ಎಂದು ನಿಮಗೆ ತಿಳಿದಿಲ್ಲವೇ ?

ವಿಜ್ಞಾನವು ಮಾನವೀಯತೆಗೆ ಒಂದು ಸುಂದರ ಕೊಡುಗೆಯಾಗಿದೆ. ನಾವು ಅದನ್ನು ವಿರೂಪಗೊಳಿಸಬಾರದು.

ಅಂತಿಮವಾಗಿ ಶಿಕ್ಷಣದ ನಿಜವಾದ ಅರ್ಥ, ಸತ್ಯದ ಅನ್ವೇಷಣೆಯಾಗಿದೆ, ಇದು ಜ್ಞಾನ ಮತ್ತು ಜ್ಞಾನೋದಯದ ಮೂಲಕ ಅಂತ್ಯವಿಲ್ಲದ ಪ್ರಯಾಣವಾಗಿದೆ.

ಸೋಲಿನ ಕಹಿ ಮಾತ್ರೆಯನ್ನು ಸವಿಯದ ಹೊರತು ಯಶಸ್ಸಿಗೆ ಹಂಬಲಿಸಲು ಸಾಧ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ 

ಹೃದಯದಲ್ಲಿ ಸದಾಚಾರ ಇದ್ದಾಗ ಮನೆಯಲ್ಲಿ ಸಾಮರಸ್ಯ ಇರುತ್ತದೆ, ಮನೆಯಲ್ಲಿ ಸಾಮರಸ್ಯ ಇದ್ದಾಗ ರಾಷ್ಟ್ರದಲ್ಲಿ ಸುವ್ಯವಸ್ಥೆ ಇರುತ್ತದೆ, ರಾಷ್ಟ್ರದಲ್ಲಿ ಸುವ್ಯವಸ್ಥೆ ಇದ್ದಾಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.

ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದ್ದು, ಆದರೆ ಪ್ರತಿಯೊಂದು ಕಪ್ಪು  ಹಲಗೆ ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.

ಇತರರಿಗಾಗಿ ನಿಮ್ಮ ನಂಬಿಕೆಯನ್ನು ಎಂದಿಗೂ ಬಿಟ್ಟು ಕೊಡಬೇಡಿ, ಏಕೆಂದರೆ   ಈ  ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರು ನಿಭಾಯಿಸಲು ಸಾಧ್ಯವಿಲ್ಲ. 

ಶಿಕ್ಷಕರಿಗೆ ಸೃಜನಶೀಲ  ಮನಸ್ಸಿರಬೇಕು. 

ನುಡಿಮುತ್ತುಗಳು, ಕನ್ನಡದಲ್ಲಿ ನುಡಿಮುತ್ತುಗಳು

Leave a Comment