ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು 2023| Inspirational quotes of Swami Vivekananda in Kannada.

ಸ್ವಾಮಿ  ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು.| Inspirational quotes of Swami Vivekananda in Kannada

ಸ್ವಾಮಿ ವಿವೇಕಾನಂದರು 1863  ಜನವರಿ 12  ರದ್ದು ಕೊಲ್ಕತ್ತಾದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತಾ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ  ಇವರು ಸ್ವಾಮಿ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು.  ಇವರು ನಮ್ಮ ದೇಶದ  ವೀರ ಸನ್ಯಾಸಿ, ಮತ್ತು ಅಪ್ರತಿಮ ಆಧ್ಯಾತ್ಮಿಕ ಚಿಂತಕರು. ತಮ್ಮ ತತ್ವ ಆದರ್ಶಗಳಿಂದ ಎಲ್ಲರ ಬದುಕಿನಲ್ಲೂ ಸ್ಪೂರ್ತಿ ತುಂಬಿದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಹೇಳಿದ ಕೆಲವು ಸ್ಪೂರ್ತಿದಾಯಕ ನುಡಿಮುತ್ತುಗಳು ಈ ಕೆಳಗಿನಂತಿವೆ

ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು

1  ಹೇಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.

-ಸ್ವಾಮಿ  ವಿವೇಕಾನಂದ

2  ಮನುಷ್ಯನಲ್ಲಿ ಪರಿಪೂರ್ಣತೆಯನ್ನು  ತರುವುದೇ ಶಿಕ್ಷಣ. 

-ಸ್ವಾಮಿ  ವಿವೇಕಾನಂದ

3   ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ   ಕರೆದುಕೊಂಡು ಹೋಗುವ ಶಬ್ದವೇ ಗುರು.

-ಸ್ವಾಮಿ  ವಿವೇಕಾನಂದ

4   ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ, ಬದುಕಿಗೆ ಅವಮಾನ.

-ಸ್ವಾಮಿ  ವಿವೇಕಾನಂದ

5   ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ದಾರರು ಮತ್ತಾರು ಅಲ್ಲ, ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

-ಸ್ವಾಮಿ  ವಿವೇಕಾನಂದ

6   ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

-ಸ್ವಾಮಿ  ವಿವೇಕಾನಂದ

7  ಸಾಧ್ಯವೇ ಇಲ್ಲ  ಎಂದುಕೊಂಡರೆ ಏನನ್ನು ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ ?
 ಗೆದ್ದರೆ ಸಂತೋಷ ಸೋತರೆ ಅನುಭವ.

-ಸ್ವಾಮಿ  ವಿವೇಕಾನಂದ

8   ಕಷ್ಟಗಳನ್ನು ಎದುರಿಸಿದಷ್ಟು ನೀನು  ಬಲಶಾಲಿಯಾಗುವೆ. ಆದ್ದರಿಂದ ಕಷ್ಟಗಳು ಬಂದಾಗ ಅಂಜ ಬೇಡ ಅದನ್ನು ಧೈರ್ಯದಿಂದ ಎದುರಿಸು.

-ಸ್ವಾಮಿ  ವಿವೇಕಾನಂದ

9  ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ

-ಸ್ವಾಮಿ  ವಿವೇಕಾನಂದ

10   ಕಾಲ ಕೆಟ್ಟಿದೆ ಎಂದು ಜನರು ಹೇಳುತ್ತಾರೆ, ಆದರೆ ಕಾಲ ಕೆಡುವುದಿಲ್ಲ ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.

-ಸ್ವಾಮಿ  ವಿವೇಕಾನಂದ

ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು

11  ಶಕ್ತಿಯಲ್ಲ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನು ಮಾಡಬಲ್ಲಿರಿ.

-ಸ್ವಾಮಿ  ವಿವೇಕಾನಂದ

12   ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ

-ಸ್ವಾಮಿ  ವಿವೇಕಾನಂದ

13   ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ

-ಸ್ವಾಮಿ  ವಿವೇಕಾನಂದ

14   ಎಂದಿಗೂ ಪ್ರಯತ್ನಿಸದವನಿಗಿಂತ ಹೋರಾಡುವವನು ಉತ್ತಮ

-ಸ್ವಾಮಿ  ವಿವೇಕಾನಂದ

15   ನೀವು ಏನೆಂದು ಭಾವಿಸುತ್ತೀರಿ ನೀವು ಅದೇ ಆಗುತ್ತೀರಿ. ದುರ್ಬಲರು .ಎಂದು ನೀವು ಭಾವಿಸಿದರೆ ನೀವೇ ದುರ್ಬರು, ನೀವು ಬಲಶಾಲಿ ಎಂದು ಭಾವಿಸಿದರೆ ನೀವೇ ಬಲಶಾಲಿ

-ಸ್ವಾಮಿ  ವಿವೇಕಾನಂದ

16   ನನಗೆ ಬೇಕಾದದ್ದು ಕಬ್ಬಿಣದ ಸ್ನಾಯುಗಳು ಉಕ್ಕಿನ ನರಗಳು ಮತ್ತು ಸಿಡಿಲಿನಂತ ಮನಸ್ಸುಗಳು ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ. 

-ಸ್ವಾಮಿ  ವಿವೇಕಾನಂದ

17   ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಿ ಇಲ್ಲವಾದರೆ ಜಗತ್ತಿನಲ್ಲಿ ಒಬ್ಬ ಅದ್ಭುತ ವ್ಯಕ್ತಿಯನ್ನು ನೀವು ಕಳೆದುಕೊಳ್ಳುತ್ತೀರಿ

-ಸ್ವಾಮಿ  ವಿವೇಕಾನಂದ

18   ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ಸದಾ ಹೃದಯವನ್ನು ಅನುಸರಿಸಿ. 

-ಸ್ವಾಮಿ  ವಿವೇಕಾನಂದ

19  ಮುನ್ನಡೆಯುವಾಗ ಸೇವಕರಾಗಿರಿ, ನಿಸ್ವಾರ್ಥರಾಗಿರಿ ,ಅನಂತ ತಾಳ್ಮೆ ಹೊಂದಿರಿ ಮತ್ತು ಯಶಸ್ಸು ಸದಾ ನಿಮ್ಮದಾಗಿರುತ್ತದೆ.

-ಸ್ವಾಮಿ  ವಿವೇಕಾನಂದ

20    ಮನಸ್ಸನ್ನು ಶಕ್ತಿಯುತವೂ, ಶಿಸ್ತು ಬದ್ಧವೂ  ಆಗಿಸುವುದರಲ್ಲಿಯೇ  ಜ್ಞಾನದ ಮೌಲ್ಯವಿರುವುದು.

-ಸ್ವಾಮಿ  ವಿವೇಕಾನಂದ

ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು

21  ಯಾರು ನಿಮಗೆ ಕಲಿಸಲಾರರು, ಯಾರು ನಿಮ್ಮನ್ನು ಆಧ್ಯಾತ್ಮಿಕ ವ್ಯಕ್ತಿಗಳನ್ನಾಗಿ ಮಾಡಲಾರರು ನಿಮಗೆ ನೀವೇ ಗುರುಗಳು ನಿಮ್ಮ ಆತ್ಮದ   ಹೊರತಾದ ಬೇರೆ ಶಿಕ್ಷಕರಿಲ್ಲ.

-ಸ್ವಾಮಿ  ವಿವೇಕಾನಂದ

22  ಎಷ್ಟು ಹೆಚ್ಚು ಹೊರಬಂದು ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯ ಶುದ್ಧವಾಗುತ್ತದೆ ಮತ್ತು ಅಂತವರಲ್ಲಿ ದೇವರು ಇರುತ್ತಾನೆ. 

-ಸ್ವಾಮಿ  ವಿವೇಕಾನಂದ

23  ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.

-ಸ್ವಾಮಿ  ವಿವೇಕಾನಂದ

24  ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ.

-ಸ್ವಾಮಿ  ವಿವೇಕಾನಂದ

25   ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗೆ ಇಡುತ್ತದೆ. 

-ಸ್ವಾಮಿ  ವಿವೇಕಾನಂದ

26   ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತದೆ. ಕೆಲಸವಿಲ್ಲದ  ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ. 

-ಸ್ವಾಮಿ  ವಿವೇಕಾನಂದ

27  ನಿನ್ನ  ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದವರನ್ನು ಮರೆಯಬೇಡ ,ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ.

-ಸ್ವಾಮಿ  ವಿವೇಕಾನಂದ

28   ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ.

-ಸ್ವಾಮಿ  ವಿವೇಕಾನಂದ

29  ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು, ಅವರು ನಿನ್ನ ಎದುರು ಸುಳಿದಾಗೆಲ್ಲ ನಿನ್ನಲ್ಲಿ ಬದುಕುವಲ್ಲಿ ಎಚ್ಚೆತ್ತುಕೊಳ್ಳುತ್ತದೆ.

-ಸ್ವಾಮಿ  ವಿವೇಕಾನಂದ

30   ಇತರರಿಗಾಗಿ ಯಾರು ಮರುಗುತ್ತಾರೋ ಅವರೇ ನಿಜವಾಗಿ ಬದುಕಿರುವವರು, ಉಳಿದವರು ಬದುಕಿದ್ದು ಸತ್ತಂತೆ. 

-ಸ್ವಾಮಿ  ವಿವೇಕಾನಂದ

31   ಅದೃಷ್ಟ ಎಂದರೆ ಆಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಆಕಾಶವನ್ನು ಸೃಷ್ಟಿಸಿಕೊಳ್ಳುವವನು. 

-ಸ್ವಾಮಿ  ವಿವೇಕಾನಂದ

Leave a Comment