ತುಳಸಿ ಎಲೆಗಳ ಗುಣಲಕ್ಷಣಗಳು ಮತ್ತು ತುಳಸಿ ಎಲೆಗಳ ಅನುಕೂಲಗಳು
ಭಾರತದಲ್ಲಿ ತುಳಸಿ ಸಸ್ಯವು ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ. ಮತ್ತು ಇದನ್ನು ಮನೆಯ ಮುಂದೆ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳಲ್ಲದೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ ತುಳಸಿ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಮನೆಯ ಅಂಗಳದಲ್ಲಿ ತುಳಸಿ ಇದ್ದರೆ ರೋಗಗಳು ಮನೆ ಒಳಗೆ ಬರುವುದಿಲ್ಲ ಎಂಬ ಮಾತಿದೆ. ಪ್ರತಿಯೊಬ್ಬ ಹಿಂದೂ ಮಹಿಳೆಯು ತುಳಸಿಯನ್ನು ಬೆಳಗ್ಗೆ ಪೂಜಿಸುತ್ತಾಳೆ. ತುಳಸಿಯನ್ನು ಹಲವು ಕಾಲದಿಂದಲೂ ಔಷಧಿಯಾಗಿ ನೋಡಲಾಗುತ್ತಿದೆ. ಅದರ ಎಲೆಗಳಿಂದ ಹಿಡಿದು ಕಾಂಡದವರೆಗೆ ಎಲ್ಲವೂ ಒಂದಲ್ಲ ಒಂದು ಪ್ರಯೋಜನವನ್ನು ನೀಡುತ್ತವೆ.
ಭಾರತದಲ್ಲಿ ಹಿಂದೂ ಜನರು ತುಳಸಿಯನ್ನು ದೇವತೆ ಎಂದು ಪರಿಗಣಿಸುತ್ತಾರೆ. ಮತ್ತು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅವಳನ್ನು ಪೂಜಿಸುತ್ತಾರೆ. ತುಳಸಿ ವಿವಾಹವು ಬಹಳ ಪ್ರಸಿದ್ಧವಾದ ಹಬ್ಬವಾಗಿದೆ. ಇದನ್ನು ದೀಪಾವಳಿಯ ನಂತರ ಮಾಡಲಾಗುತ್ತದೆ. ಹಿಂದುಗಳು ತುಳಸಿಯನ್ನು ದೇವರಿಗೆ ಪ್ರಸಾದದ ಜೊತೆಗೆ ಅರ್ಪಿಸುತ್ತಾರೆ. ತುಳಸಿಯನ್ನು ಅನೇಕ ಔಷಧಗಳಲ್ಲಿಯೂ ಬಳಸುತ್ತಾರೆ ಇದನ್ನು ಮನೆಯಲ್ಲಿಯೇ ಬಳಸುವುದರಿಂದ ನಾವು ಅನೇಕ ರೋಗಗಳಿಂದ ಸುಲಭವಾಗಿ ಮುಕ್ತರಾಗಬಹುದು.
ಪರಿವಿಡಿ 1 ತುಳಸಿ ಎಲೆಗಳ ಗುಣಲಕ್ಷಣಗಳು 1.1. ತುಳಸಿ ಎಲೆಗಳ ಬಳಕೆ 1.2. ತುಳಸಿ ಎಲೆಯ ಪ್ರಯೋಜನಗಳು 1.3. ತುಳಸಿ ಎಲೆಗಳಿಂದ ಆರೋಗ್ಯಕಾಗುವ ಪ್ರಯೋಜನಗಳು 1.3.1. ಜ್ವರವನ್ನು ಕಡಿಮೆ ಮಾಡುತ್ತದೆ 1.3.2. ಮಧುಮೇಹದ ವಿರುದ್ಧ ಕೆಲಸ ಮಾಡುತ್ತದೆ 1.3.3. ಒತ್ತಡವನ್ನು ನಿವಾರಿಸುತ್ತದೆ 1.3.4. ಕಿಡ್ನಿ ಕಲ್ಲುಗಳ ಸಮಸ್ಯೆಯನ್ನು ನಿವಾರಿಸುತ್ತದೆ 1.3.5. ಕ್ಯಾನ್ಸರ್ ನಂತಹ ಭಯಾನಕ ರೋಗಗಳನ್ನು ದೂರ ಮಾಡುತ್ತದೆ 1.3.6. ಧೂಮಪಾನವನ್ನು ತೊರೆಯಲು ಸಹಾಯ ಮಾಡುತ್ತದೆ 1.3.7.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 1.3.8. ನೋವನ್ನು ಕಡಿಮೆ ಮಾಡುತ್ತದೆ 1.3.9. ಅತಿಸಾರ ಮತ್ತು ವಾಂತಿಯನ್ನು ನಿಲ್ಲಿಸುತ್ತದೆ 1.3.2 ತ್ವಜೆಯ ಮೇಲೆ ತುಳಸಿ ಎಲೆಗಳ ಪ್ರಯೋಜನ 1.3.3. ಕೂದಲಿಗೆ ತುಳಸಿ ಎಲೆಗಳ ಪ್ರಯೋಜನ |
ತುಳಸಿ ಎಲೆಗಳ ಗುಣಲಕ್ಷಣಗಳು
1 | ತುಳಸಿಯನ್ನು ಹಚ್ಚುವುದರಿಂದ ಸುತ್ತಲೂ ಪರಿಮಳ ಹರಡುತ್ತದೆ |
2 | ಇದು ದೇಹದ ಆಂತರಿಕ ಸಮಸ್ಯೆಗಳನ್ನು ನಿವಾರಿಸುತ್ತದೆ |
3 | ಶೀತ ಮತ್ತು ಕೆಮ್ಮು ಬರದಂತೆ ತಡೆಯುತ್ತದೆ |
4 | ಗಾಳಿಯನ್ನು ಶುದ್ಧೀಕರಿಸುತ್ತದೆ |
5 | ತಾಜಾತನವನ್ನು ನೀಡುತ್ತದೆ |
6 | ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುತ್ತದೆ |
ತುಳಸಿ ಎಲೆಗಳ ಬಳಕೆ ( Uses of Tulsi Leaves )
- ಇದನ್ನು ರುಬ್ಬಿಕೊಂಡು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.
- ತುಳಸಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ಇದನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ಮಾಯವಾಗುತ್ತದೆ.
- ತುಳಸಿ ಎಣ್ಣೆಯನ್ನು ನೋವು ನಿವಾರಕವಾಗಿ ಬಳಸಲಾಗುತ್ತದೆ.
- ತುಳಸಿ ಎಲೆಗಳನ್ನು ಅನೇಕ ಪಾನೀಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ತುಳಸಿ ಎಲೆಯ ಪ್ರಯೋಜನಗಳು ಮತ್ತು ಲಾಭಗಳು ( Benefits of Tulsi Leaves for Health )
ತುಳಸಿ ಎಲೆಗಳಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು
ಜ್ವರವನ್ನು ಕಡಿಮೆ ಮಾಡುತ್ತದೆ
ತುಳಸಿಯು ಆಂಟಿ ಬ್ಯಾಕ್ಟೀರಿಯಲ್ ಆಂಟಿ ಫಂಗಲ್ ಮತ್ತು ಆಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಇದು ಜ್ವರವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಜ್ವರದ ಸೊಂಕಾಗಲಿ ಅಥವಾ ಮಲೇರಿಯಾ ಆಗಲಿ ತುಳಸಿಯು ಅದನ್ನು ತಗ್ಗಿಸುವ ಸಾಮರ್ಥ್ಯ ಹೊಂದಿದೆ. ಆಯುರ್ವೇದದಲ್ಲಿ ಮುಖ್ಯವಾಗಿ ಜ್ವರದ ಸಮಯದಲ್ಲಿ ತುಳಸಿ ಕಷಾಯವನ್ನು ಕುಡಿಯಲು ಸೂಚಿಸಲಾಗುತ್ತದೆ ಇದನ್ನು ಕುಡಿಯುವುದರಿಂದ ಬಹಳ ಬೇಗ ಲಾಭ ಸಿಗುತ್ತದೆ. ಇದು ವಿಶೇಷವಾಗಿ ಮಕ್ಕಳಿಗೆ ಒಳ್ಳೆಯದು.
ಕಷಾಯವನ್ನು ತಯಾರಿಸುವ ವಿಧಾನ – ಸ್ವಲ್ಪ ತುಳಸಿ ಎಲೆಗಳು ಮತ್ತು ಏಲಕ್ಕಿ ಪುಡಿಯನ್ನು ಅರ್ಧ ಲೀಟರ್ ನೀರಿನಲ್ ಲಿಸೇರಿಸಿ ಅದು ಅರ್ಧಕ್ಕೆ ಕಡಿಮೆಯಾಗುವವರಿಗೆ ಕುದಿಸಬೇಕು, ಇದಕ್ಕೆ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿಕೊಳ್ಳಬಹುದು ಇದನ್ನು ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ರೋಗಿಗೆ ನೀಡಬೇಕು
ಮಧು ಮೇಹದ ವಿರುದ್ಧ ಕೆಲಸ ಮಾಡುತ್ತದೆ
ತುಳಸಿ ದೇಹದಲ್ಲಿ ಇನ್ಸುಲಿನ್ ತಯಾರಿಸುವ ಮತ್ತು ನಿರ್ವಹಿಸುವ ಅಂಶವನ್ನು ಪ್ರಚೋದಿಸುತ್ತದೆ. ತುಳಸಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒತ್ತಡವನ್ನು ನಿವಾರಿಸುತ್ತದೆ
ಸಂಶೋಧನೆಯ ಪ್ರಕಾರ ತುಳಸಿ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಹಾರ್ಮೋನ್ ಗಳನ್ನು ಪ್ರಚೋದಿಸುತ್ತದೆ. ಇದನ್ನು ಆಂಟಿ ಸ್ಟ್ರೆಸ್ ಏಜೆಂಟ್ ಎಂದು ಕರೆಯುತ್ತಾರೆ. ತುಳಸಿ ನಮ್ಮ ಎಲ್ಲಾ ಜೀವಕೋಶಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಚೆನ್ನಾಗಿ ಪರಿಚಲನೆ ಮಾಡುತ್ತದೆ. ಅತಿಯಾದ ಒತ್ತಡದ ಸಂದರ್ಭದಲ್ಲಿ ವೈದ್ಯರು ತುಳಸಿ ತಿನ್ನಲು ಸಲಹೆ ನೀಡುತ್ತಾರೆ, ಅತಿಯಾದ ಒತ್ತಡದ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ 10 ರಿಂದ 12 ತುಳಸಿ ಎಲೆಗಳನ್ನು ಅಗಿಯಿರಿ ಒತ್ತಡವು ಸಾಕಷ್ಟು ಕಡಿಮೆಯಾಗುತ್ತದೆ.
ಕಿಡ್ನಿ ಕಲ್ಲುಗಳ ಸಮಸ್ಯೆಗಳನ್ನು ನಿವಾರಿಸುತ್ತದೆ
ಕಿಡ್ನಿಯಲ್ಲಿ ಕಲ್ಲು ಇದ್ದರೆ ತುಳಸಿಯಿಂದ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. ಮೂತ್ರಪಿಂಡದ ಕಲ್ಲುಗಳು ಮುಖ್ಯವಾಗಿ ರಕ್ತದಲ್ಲಿ ಯೂರಿಕ್ ಆಮ್ಲದ ಹೆಚ್ಚಳದಿಂದ ಉಂಟಾಗುತ್ತದೆ. ತುಳಸಿಯು ಈ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ತುಳಸಿಯಲ್ಲಿರುವ ಎಣ್ಣೆಯು ಈ ಕಲ್ಲನ್ನು ನಾಶಪಡಿಸುತ್ತದೆ ಮತ್ತು ತುಳಸಿಯು ಒಂದು ರೀತಿಯ ನೋವು ನಿವಾರಕವಾಗಿದೆ, ಆದ್ದರಿಂದ ಇದು ಮೂತ್ರಪಿಂಡದ ಕಲ್ಲುಗಳಿಂದ ಉಂಟಾಗುವ ನೋವಿನಿಂದ ಕೂಡ ಪರಿಹಾರ ನೀಡುತ್ತದೆ.
ತುಳಸಿ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ, ಕನಿಷ್ಠ ಆರು ತಿಂಗಳವರೆಗೆ ಪ್ರತಿದಿನ ಸೇವಿಸುವುದರಿಂದ ಯಾವುದೇ ಚಿಕಿತ್ಸೆ ಇಲ್ಲದೆ ಮೂತ್ರಪಿಂಡ ಕಲ್ಲುಗಳ ಸಮಸ್ಯೆಯಿಂದ ಹೊರ ಬರಬಹುದು.
ಕ್ಯಾನ್ಸರ್ ನಂತಹ ಭಯಾನಕ ರೋಗಗಳನ್ನು ದೂರ ಮಾಡುತ್ತದೆ
ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ತಂಬಾಕಿನಿಂದ ಉಂಟಾಗುವ ಸ್ತನ ಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್ ಗೆ ಪರಿಹಾರ ನೀಡುತ್ತದೆ. ಪ್ರತಿದಿನ ತುಳಸಿಯನ್ನು ಜಗಿಯುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದಿಲ್ಲ.
ಧೂಮಪಾನವನ್ನು ತೊರೆಯಲು ಸಹಾಯ ಮಾಡುತ್ತದೆ
ತುಳಸಿಯು ಆಂಟಿ ಸ್ಟ್ರೆಸ್ ಏಜೆಂಟ್ ಗಳನ್ನು ಹೊಂದಿದೆ. ಇದು ಧೂಮಪಾನವನ್ನು ತ್ಯಜಿಸಲು ಸಹ ಸಹಾಯ ಮಾಡುತ್ತದೆ. ಕಡಿಮೆಯಾದ ಒತ್ತಡವು ಸಿಗರೇಟ್ ಸೇದುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನೀವು ಸುಲಭವಾಗಿ ಧೂಮಪಾನವನ್ನು ತ್ಯಜಿಸಬಹುದು. ಸಿಗರೇಟ್ ಸೇದುವ ಆಸೆ ಮೂಡಿದ ಕೂಡಲೇ ತುಳಸಿ ಎಲೆಗಳನ್ನು ತೆಗೆದುಕೊಂಡು ಜಗಿಯಲು ಪ್ರಾರಂಭಿಸಿದರೆ ಸ್ವಲ್ಪ ಸಮಯದೊಳಗೆ ನಿಮ್ಮ ಸಿಗರೇಟ್ ಸೇದುವ ಬಯಕೆ ಕಡಿಮೆಯಾಗುತ್ತದೆ. ಇದಲ್ಲದೆ ತುಳಸಿಯನ್ನು ಜಗಿಯುವುದರಿಂದ ಮತ್ತೊಂದು ಪ್ರಯೋಜನವಿದೆ ಇಷ್ಟು ವರ್ಷಗಳ ಕಾಲ ಧೂಮಪಾನದಿಂದ ನಿಮ್ಮ ದೇಹಕ್ಕೆ ಉಂಟಾದ ಹಾನಿಯನ್ನು ತುಳಸಿಯಿಂದ ಸರಿಪಡಿಸಬಹುದಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತುಳಸಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಶೀತ ,ಕೆಮ್ಮು ಜ್ವರ ,ದೇಹದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ತುಳಸಿಯನ್ನು ಚಹಾ ದೊಂದಿಗೆ ಬೆರೆಸಿ ಕುಡಿಯುವುದು ಶೀತ ಮತ್ತು ಮಳೆಯ ದಿನಗಳಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.ಇದರಿಂದ ಸುತ್ತಲೂ ಹರಡುವ ಎಲ್ಲಾ ರೋಗಗಳಿಂದ ನೀವು ರಕ್ಷಿಸಲ್ಪಡುತ್ತೀರಿ.
ನೋವನ್ನು ಕಡಿಮೆ ಮಾಡುತ್ತದೆ
ತುಳಸಿ ಎಲೆಗಳು ಯಾವುದೇ ಕಾರಣದಿಂದ ಉಂಟಾಗುವ ತಲೆನೋವನ್ನು ಗುಣಪಡಿಸುತ್ತದೆ. ತುಳಸಿಯು ನೋವನ್ನು ನಿವಾರಿಸುವ ಅಂಶವನ್ನು ಒಳಗೊಂಡಿದೆ ಇದನ್ನುತಿನ್ನುವುದರಿಂದ ನೀವು ಎಲ್ಲಾ ರೀತಿಯ ನೋವಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ಪಡೆಯಬಹುದು.
ಬಳಸುವ ವಿಧಾನ- ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿ. ಸ್ವಲ್ಪ ತಣ್ಣಗಾದ ನಂತರ ಅದರಲ್ಲಿ ಒಂದು ಟವಲ್ ಅನ್ನು ಹದ್ದಿ ಅದನ್ನು ಚೆನ್ನಾಗಿ ಹಿಂಡಿ ನಿಮ್ಮ ತಲೆಯ ಮೇಲೆ ಕಟ್ಟಿಕೊಳ್ಳಿ ತಲೆ ನೋವು ಬಹಳ ಬೇಗ ಗುಣವಾಗುತ್ತದೆ. ಇದಲ್ಲದೆ ತುಳಸಿ ಎಲೆಗಳ ಬದಲು ತುಳಸಿ ಎಣ್ಣೆಯನ್ನು ಉಪಯೋಗಿಸಬಹುದು.
ಅತಿಸಾರ ಮತ್ತು ವಾಂತಿಯನ್ನು ಕಡಿಮೆ ಮಾಡುತ್ತದೆ
ತುಳಸಿ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಅತಿಸಾರದ ಸಮಯದಲ್ಲಿ ತುಳಸಿ ಎಲೆಗಳನ್ನು ರುಬ್ಬಿ ಅದರಲ್ಲಿ ಜೇನು ಮತ್ತು ಜೀರಿಗೆ ಪುಡಿಯನ್ನು ಬೆರೆಸಿ ಪ್ರತಿ ಎರಡು ಗಂಟೆಗಳಿಗೊಮ್ಮೆ ರೋಗಿಗೆ ನೀಡುವುದರಿಂದ ಸಾಕಷ್ಟು ಪ್ರಯೋಜನ ಸಿಗುತ್ತದೆ. ಅಲ್ಲದೆ ವಾಂತಿಯಾದರೆ ತುಳಸಿ ರಸಕ್ಕೆ ಶುಂಠಿರಸ ಮತ್ತು ಚಿಕ್ಕ ಏಲಕ್ಕಿ ಪುಡಿ ಬೆರೆಸಿ ಕುಡಿಯಬೇಕು.
ಇತರ ಪ್ರಯೋಜನಗಳು
- ನೀವು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರೆ ತುಳಸಿ ಎಲೆಗಳನ್ನು ಕಪ್ಪು ಉಪ್ಪಿನೊಂದಿಗೆ ಬೆರೆಸಿ ಜಗಿಯಬೇಕು.
- ಕುಷ್ಟರೋಗದಂತಹ ರೋಗವು ತುಳಸಿಯಿಂದ ಗುಣವಾಗುತ್ತದೆ ತುಳಸಿ ಪೇಸ್ಟ್ ಹಚ್ಚುವುದರಿಂದ ಇದು ಕ್ರಮೇಣವಾಗಿ ಗುಣವಾಗುತ್ತದೆ .
- ಕಿವಿ ನೋವು ಶ್ರವಣದೋಷವಿದ್ದರೆ ತುಳಸಿ ರಸಕ್ಕೆ ಕರ್ಪೂರವನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ಕಿವಿಗೆ ಹಚ್ಚಿದರೆ ಬಹುಬೇಗ ಪರಿಹಾರ ಸಿಗುತ್ತದೆ.
- ತುಳಸಿಯನ್ನು ಜಗಿಯುವುದರಿಂದ ಪ್ರತಿಯೊಬ್ಬರ ನೆನಪಿನ ಶಕ್ತಿ ಹೆಚ್ಚುತ್ತದೆ.
ತುಳಸಿ ಎಲೆಯಿಂದ ತ್ವಜೆಗೆ ಆಗುವ ಪ್ರಯೋಜನಗಳು
ತುಳಸಿಯು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ
- ಅನೇಕ ಕಾಸ್ಮೆಟಿಕ್ ಉತ್ಪನ್ನ ಕಂಪನಿಗಳು ತುಳಸಿಯನ್ನು ತಮ್ಮ ಉತ್ಪನ್ನಗಳಲ್ಲಿ ಒಂದು ಘಟಕ ಅಂಶವಾಗಿ ಬಳಸುತ್ತವೆ. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಬ್ಯಾಕ್ಟೀರಿಯದಿಂದ ರಕ್ಷಿಸುತ್ತದೆ.
- ತುಳಸಿ ಎಲೆಗಳನ್ನು ಒಣಗಿಸಿ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ. ಇದು ನಿಮ್ಮ ತ್ವಜೆಯ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರೊಂದಿಗೆ ಮೊಡವೆ ಸಮಸ್ಯೆಯು ಕಡಿಮೆಯಾಗುತ್ತದೆ. ತ್ವಜೆ ಆರೋಗ್ಯವಾಗಿರುತ್ತದೆ.
- ಕಡಲೆ ಹಿಟ್ಟು ಮತ್ತು ತುಳಸಿ ಪೇಸ್ಟ್ ಅನ್ನು ಚರ್ಮಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ತುಳಸಿ ಎಲೆಗಳನ್ನು ತ್ವಜೆ ಮೇಲೆ ಉಜ್ಜುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
- ಆಯುರ್ವೇದದ ಪ್ರಕಾರ ತುಳಸಿ ಎಲೆಗಳು ಚರ್ಮದ ದೊಡ್ಡ ಸಮಸ್ಯೆಗಳನ್ನು ನಿವಾರಿಸಬಲ್ಲದು ಇದಕ್ಕಾಗಿ ತುಳಸಿ ಪೇಸ್ಟ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ.
ಕೂದಲಿಗೆ ತುಳಸಿ ಎಲೆಗಳ ಪ್ರಯೋಜನಗಳು
ತುಳಸಿ ಎಲೆಗಳು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಕೂದಲಿಗೆ ಹಲವಾರು ಪ್ರಯೋಜನಗಳಿವೆ.
- ತಲೆ ಒಟ್ಟು ಮತ್ತು ತುರಿಕೆ, ಕೂದಲು ಉದುರುವಿಕೆಗೆ ಮುಖ್ಯ ಕಾರಣ. ಅಂತಹ ಪರಿಸ್ಥಿತಿಯಲ್ಲಿ ತುಳಸಿ ಎಣ್ಣೆಯ ಕೆಲವು ಅನಿಗಳನ್ನು ಪ್ರತಿದಿನ ಹಚ್ಚುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
- ತುಳಸಿ ದಾಸವಾಳ ಮತ್ತು ಬೇವಿನ ಎಲೆಗಳ ಪೇಸ್ಟನ್ನು ಹಚ್ಚುವುದರಿಂದ ನಿಮ್ಮ ಕೂದಲಿನ ಬೇರುಗಳಲ್ಲಿ ಉಂಟಾಗುವ ತುರಿಕೆ ಕಡಿಮೆಯಾಗುತ್ತದೆ. ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.
- ಪ್ರತಿದಿನ ತುಳಸಿ, ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಸದೃಢವಾಗುತ್ತದೆ.
- ಪ್ರತಿದಿನ ತುಳಸಿ ಎಲೆಗಳನ್ನು ತಿನ್ನುವುದರಿಂದ ಅಥವಾ ತುಳಸಿ ರಸವನ್ನು ಕುಡಿಯುವುದರಿಂದ ಕೂದಲು ಆರೋಗ್ಯವಾಗಿರುತ್ತದೆ.
- ತೆಂಗಿನ ಎಣ್ಣೆಯಲ್ಲಿ ತುಳಸಿ ಪುಡಿಯನ್ನು ಬೆರೆಸಿ ಕೂದಲಿನ ಬೇರುಗಳಿಗೆ ಮಸಾಜ್ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಉದ್ದ, ದಪ್ಪ ಮತ್ತು ಹೊಳೆಯುವಂತಾಗುತ್ತದೆ.