ಸ್ತ್ರೀಯರೇ ಆಗಿರಲಿ ಪುರುಷರೇ ಆಗಿರಲಿ ಸೌಂದರ್ಯ ಎಲ್ಲರಿಗೂ ಮುಖ್ಯ. ಪ್ರತಿಯೊಬ್ಬರು ತಮ್ಮ ಮುಖವು ನಿರ್ಮಲವಾಗಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಆಧುನಿಕ ಯುಗದಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸದೆ ಇರುವುದರಿಂದ ತ್ವಚೆಯ ನೈಸರ್ಗಿಕ ಹೊಳಪು ಕಳೆಗುಂದುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಜನರು ಮುಖದಲ್ಲಿ ಸ್ವಲ್ಪ ಒಳಪನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಕ್ರೀಮ್ ಗಳನ್ನು ಹಚ್ಚಿಕೊಳ್ಳುತ್ತಾರೆ. ಹಾಗಾದರೆ ಚರ್ಮದ ಬಣ್ಣವನ್ನು ಸುಧಾರಿಸಲು ಮನೆ ಮದ್ದುಗಳನ್ನು ಏಕೆ ಅಳವಡಿಸಿಕೊಳ್ಳಬಾರದು, ಇದರಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಈ ಲೇಖನದಲ್ಲಿ ಮೈಬಣ್ಣವನ್ನು ತಿಳಿಗೊಳಿಸಲು ಸುಲಭವಾಗಿ ಮನೆಯಲ್ಲೇ ತಯಾರಿಸುವಂತಹ ಫೇಸ್ ಪ್ಯಾಕ್ ಗಳ ಬಗ್ಗೆ ನಾವು ತಿಳಿಯೋಣ.
ಮುಖದ ಸೌಂದರ್ಯವನ್ನು ಹೆಚ್ಚಿಸಲು ಮನೆಮದ್ದುಗಳು( Home remedies for Face beauty )
ಮುಖವನ್ನು ಸ್ವಚ್ಛಗೊಳಿಸಲು ಮತ್ತು ತಿಳಿಗೊಳಿಸಲು ಸುಲಭವಾದ ಮನೆಮದ್ದುಗಳನ್ನು ನಾವು ಕೆಳಗೆ ನೀಡಿದ್ದೇವೆ. ಇಲ್ಲಿ ಅವುಗಳ ಬಳಕೆಯ ವಿಧಾನದ ಜೊತೆಗೆ ಅವು ಮುಖಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ವಿವರಿಸಿದ್ದೇವೆ. ಯಾವುದೇ ಫೇಸ್ ಪ್ಯಾಕ್ ಅನ್ನು ಬಳಸುವ ಮೊದಲು ಅದರ ಪ್ಯಾಚ್ ಪರೀಕ್ಷೆಯನ್ನು ಮಾಡಿ. ಅಲ್ಲದೆ ನೀವು ಯಾವುದೇ ವಸ್ತುಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಅದನ್ನು ಬಳಸಬೇಡಿ.
ಪರಿವಿಡಿ 1. ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಮದ್ದುಗಳು 1.1. ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು 1.2. ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಇನ್ನೂ ಕೆಲವು ಮಾರ್ಗಗಳು |
1. ನಿಂಬೆ ರಸ
ಬೇಕಾಗುವ ವಸ್ತುಗಳು
- ಒಂದು ಚಮಚ ತಾಜಾ ನಿಂಬೆರಸ
- ಮೂರರಿಂದ ನಾಲ್ಕು ಚಮಚ ನೀರು
ಬಳಸುವವಿಧಾನ-
ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿಕೊಳ್ಳಿ, ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಪ್ರಯೋಜನ ಗಳು
ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಸುಲಭವಾದ ಮನೆಮದ್ದುಗಳಲ್ಲಿ ನಿಂಬೆ ಮೊದಲನೇ ಸ್ಥಾನವನ್ನು ಪಡೆಯುತ್ತದೆ. ನಿಂಬೆ ರಸವು ನೈಸರ್ಗಿಕವಾಗಿ ಚರ್ಮವನ್ನು ಬಿಳಿ ಮಾಡುವ ಏಜೆಂಟಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇದು ಚರ್ಮದ ಟೋನನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ ನಿಂಬೆಹಣ್ಣು ಚರ್ಮಗಳನ್ನು ತಿಳಿಗೊಳಿಸುವ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಚರ್ಮದ ಮೇಲೆ ನಿಂಬೆ ಪ್ಯಾಕನ್ನು ಹಚ್ಚಿದ ನಂತರ ಕೆಲವು ಗಂಟೆಗಳ ಕಾಲ ಬಿಸಿಲಿಗೆ ಹೋಗಬೇಡಿ.
2. ಅರಿಶಿಣ
ಬೇಕಾಗುವ ವಸ್ತುಗಳು
- ಕಾಲು ಟೀ ಚಮಚ ಅರಿಶಿಣ
- ಎರಡು ಚಮಚ ಕಡಲೆಹಿಟ್ಟು
- ಒಂದು ವರೆ ಚಮಚ ಮೊಸರು
ಬಳಸುವ ವಿಧಾನ
ಒಂದು ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ, ನಂತರ ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಇದು ನಿಮ್ಮ ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಹರಿಶಿನ ಫೇಸ್ ಪ್ಯಾಕ್ ಚರ್ಮದಲ್ಲಿ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಅರಿಶಿಣವನ್ನು ಸೌಂದರ್ಯವರ್ಧಕಗಳು ಮತ್ತು ಸಂಸ್ಕ್ರೀನ್ ತಯಾರಿಸುವ ವಿವಿಧ ಕಂಪನಿಗಳು ಬಳಸುತ್ತವೆ. ಇದು ತ್ವಚೆಯ ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಚರ್ಮದ ಕಾಯಿಲೆಗಳ ವಿರುದ್ಧ ಹೋರಾಡುವುದರ ಜೊತೆಗೆ ಈ ಮಿಶ್ರಣವು ಸೂರ್ಯನಿಂದ ಉಂಟಾಗುವ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.
3. ಹಾಲು ಅಥವಾ ಹಾಲಿನ ಪುಡಿ
ಬೇಕಾಗುವ ವಸ್ತುಗಳು
- ಮೂರರಿಂದ ನಾಲ್ಕು ಸ್ಪೂನ್ ಕಚ್ಚ ಹಾಲು
- ಐಚ್ಚಿಕ ಹಾಲಿನ ಪುಡಿ
ಬಳಸುವವಿಧಾನ
ಹಸಿ ಹಾಲಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಸ್ವಚ್ಛಗೊಳಿಸಿ, ಹತ್ತು ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಹಸಿ ಹಾಲು ಸಿಗದಿದ್ದರೆ ಹಾಲಿನ ಪುಡಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, ಸ್ವಲ್ಪ ಸಮಯದ ನಂತರ ಚರ್ಮವನ್ನು ತೊಳೆಯಿರಿ.
ಪ್ರಯೋಜನ ಗಳು
ಒಣ ಚರ್ಮಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ, ಇದು ಚರ್ಮಕ್ಕೆ ಅತ್ಯುತ್ತಮವಾದ ಒಳಪನ್ನು ನೀಡಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲೆ ಬ್ಲೀಚಿಂಗ್ ಪರಿಣಾಮವನ್ನು ಬೀರುತ್ತದೆ. ಇದು ಚರ್ಮದ ವರ್ಣ ದ್ರವ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಹಾಲಿನ ಬಳಕೆಯಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೆ ಬ್ಲಾಕೆಡ್ಸ್ ಮತ್ತು ವೈಟ್ ಹೆಡ್ಸ್ ಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
4. ಟೊಮೆಟೊ ರಸ
ಬೇಕಾಗುವ ವಸ್ತುಗಳು –
- ಎರಡು ಚಮಚ ಕಡಲೆಹಿಟ್ಟು
- ಮೂರು ಚಮಚ ಟೊಮೇಟೊ ರಸ
- ಒಂದು ಚಮಚ ಗುಲಾಬಿ ನೀರು
ಬಳಸುವ ವಿಧಾನ
ಕಡಲೆ ಹಿಟ್ಟು ಟಮೊಟೊರಸ ಮತ್ತು ರೋಜ್ ವಾಟರ್ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಿ, ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಮುಖವನ್ನು ಸ್ವಚ್ಛಗೊಳಿಸಲು ಟೊಮೊಟೊವನ್ನು ಪರಿಹಾರವಾಗಿ ಬಳಸಬಹುದು, ಟಮೋಟದಲ್ಲಿ ಇರುವ ಫ್ಲೈವರ್ ನೈಟ್ಸ್ ಸಂಯುಕ್ತಗಳು ಮತ್ತು ಎಕ್ಟಿಂಗ್ ಫೈಬರ್ ಗಳು ಶುದ್ಧೀಕರಣ ಕ್ರಿಯೆಯ ಗುಣಗಳನ್ನು ಹೊಂದಿವೆ. ಇವೆರಡು ಚರ್ಮವನ್ನು ಮೃದುಗೊಳಿಸಲು ಮತ್ತು ಅದರ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಟೊಮೆಟೊ ರಸವನ್ನು ಹಚ್ಚುವುದರಿಂದ ಚರ್ಮಕ್ಕೆ ಹೊಳಪು ತರಲು ಸಹಾಯ ಮಾಡುತ್ತದೆ.
5. ರೋಜ್ ವಾಟರ್
ಬೇಕಾಗುವ ವಸ್ತುಗಳು
- ಎರಡು ಟೀ ಚಮಚ ಗುಲಾಬಿ ನೀರು
ಬಳಸುವ ವಿಧಾನ
ಹತ್ತಿಯನ್ನು ರೋಸ್ ವಾಟರ್ ನಲ್ಲಿ ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯನ್ನು ಪ್ರತಿ ರಾತ್ರಿ ಮಲಗುವ ಮುನ್ನ ಪುನರಾವರ್ತಿಸಬೇಕು.ಮತ್ತು ಬೆಳಗ್ಗೆ ಮಾಯಿಶ್ಚರೈಸರ್ ಹಚ್ಚುವ ಮೊದಲು ಮುಖಕ್ಕೆ ಇದನ್ನು ಹಚ್ಚಿಕೊಳ್ಳಬೇಕು.
ಪ್ರಯೋಜನಗಳು
ಚರ್ಮದ ಬಣ್ಣಕ್ಕೆ ನೇರಳಾತೀತ ಕಿರಣವು ಒಂದು ಕಾರಣ, ಈ ಕಿರಣಗಳ ಕಾರಣದಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ರೂಪಗೊಳ್ಳಲು ಪ್ರಾರಂಭಿಸುತ್ತವೆ. ಈ ಸಂದರ್ಭದಲ್ಲಿ ರೋಜ್ ವಾಟರ್ ಬಳಕೆ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ ರೋಜ್ ವಾಟರ್ ಉತ್ಕರ್ಷಣ ನಿರೋಧಕ ಪರಿಣಾಮಗಳಲ್ಲಿ ಸಮೃದ್ಧವಾಗಿದೆ. ಇದು U V ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಈ ಕಾರಣಕ್ಕಾಗಿ ರೋಜ್ ವಾಟರ್ ಅನ್ನು ಮೈಬಣ್ಣವನ್ನು ತಿಳಿಗೊಳಿಸಲು ಉಪಯೋಗಿಸಲಾಗುತ್ತದೆ.
6. ಪಪ್ಪಾಯಿ
ಬೇಕಾಗುವ ವಸ್ತುಗಳು
- ಪಪ್ಪಾಯಿ ಹಣ್ಣಿನ ಕೆಲವು ತುಂಡುಗಳು
ಬಳಸುವ ವಿಧಾನ
ಪಪ್ಪಾಯಿ ಹಣ್ಣಿನ ತುಂಡುಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ, ನಂತರ ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ತ್ವಜೆಯ ಒಳಪಿಗೆ ಪಪ್ಪಾಯವನ್ನು ಮನೆಮದ್ದಾಗಿ ಬಳಸುವುದು ಉತ್ತಮವಾಗಿದೆ. ಪಪ್ಪಾಯಿ ಹಣ್ಣಿನಲ್ಲಿರುವ ಪಪೈನ್ ಕಿಣ್ವ ಎಕ್ಸಪಲ್ಲಿಯೇಷನ್ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತದೆ. ವಾಸ್ತವವಾಗಿ ಚರ್ಮವನ್ನು ಸುಂದರವಾಗಿಡಲು ಎಕ್ಸ್ ಪೊಲೀಸಷನ್ ಅಗತ್ಯ. ಇದು ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಮತ್ತು ಚರ್ಮವನ್ನು ತೇವ, ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಹೈಪರ್ಪಿಗ್ಮೆಂಟೇಶನ್ ಅಂದರೆ ಕಲೆಗಳನ್ನು ಕಡಿಮೆ ಮಾಡುತ್ತದೆ.
7. ಕಡಲೆಹಿಟ್ಟು
ಬೇಕಾಗುವ ವಸ್ತುಗಳು
- ಎರಡು ಚಮಚ ಕಡಲೆ ಹಿಟ್ಟು
- ಕಾಲು ಟೀ ಚಮಚ ಅರಿಶಿಣ
- ಎರಡರಿಂದ ಮೂರು ಚಮಚ ಹಾಲು
ಬಳಸುವ ವಿಧಾನ
ಒಂದು ಬಟ್ಟಲಿನಲ್ಲಿ ಕಡಲೆಹಿಟ್ಟು ಅರಿಶಿನ ಮತ್ತು ಹಾಲು ಸೇರಿಸಿ ಮಿಶ್ರಣ ಮಾಡಿ. ನಂತರ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಸುಮಾರು 15 ರಿಂದ 20 ನಿಮಿಷಗಳ ನಂತರ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಇದು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕಡಲೆಹಿಟ್ಟು ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಎಣ್ಣೆಯನ್ನು ಹೀರಿಕೊಳ್ಳುವ ಮೂಲಕ ಕಡಲೆಹಿಟ್ಟು ಆಂಟಿ ಪಿಂಪಲ್ ಏಜೆಂಟಾಗಿ ಕಾರ್ಯನಿರ್ವಹಿಸುತ್ತದೆ. ಹಾಲಿನ ಪ್ರಯೋಜನಗಳು ಸಹ ಹಲವು ಅವುಗಳನ್ನು ಮೇಲೆ ತಿಳಿಸಿದ್ದೇವೆ.
8. ಅಲೋವೆರಾ / ಲೋಳೆಸರ
ಬೇಕಾಗುವ ವಸ್ತುಗಳು
- ಅಗತ್ಯವಿರುವಷ್ಟು ಅಲೋವೆರಾ ಜೆಲ್
ಬಳಸುವ ವಿಧಾನ
ಅಗತ್ಯಕ್ಕೆ ತಕ್ಕಂತೆ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು, 15 ನಿಮಿಷ ಆರಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಪ್ರಯೋಜನ
ಚರ್ಮವನ್ನು ತಿಳಿಗೊಳಿಸಲು ಅಲೋವೆರವನ್ನು ಸುಲಭವಾದ ಮನೆ ಮದ್ದಾಗಿ ಬಳಸುವುದು ಪ್ರಯೋಜನಕಾರಿಯಾಗಿದೆ. ಇದು ಅಲೋಸಿನ್ ಸಂಯುಕ್ತವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ಇದನ್ನು ನೈಸರ್ಗಿಕ ಚರ್ಮದ ಬಿಳಿ ಮಾಡುವ ಏಜೆಂಟ್ ಎಂದು ಪರಿಗಣಿಸಲಾಗುತ್ತದೆ. ಅಲೋವೆರಾ ಚರ್ಮವನ್ನು ತಿಳಿಗೊಳಿಸುವ ಗುಣಲಕ್ಷಣಗಳ ಜೊತೆಗೆ ಆದ್ರಕ ಮತ್ತು ವಿರೋಧಿ ಪರಿಣಾಮಗಳನ್ನು ಹೊಂದಿದೆ, ಇವುಗಳು ಮುಖದ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ವಯಸ್ಸಾದ ಚಿಹ್ನೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
9.ಮುಲ್ತಾನಿ ಮಿಟ್ಟಿ
ಬೇಕಾಗುವ ವಸ್ತುಗಳು
- ಎರಡು ಟೀ ಚಮಚ ಮುಲ್ತಾನಿ ಮಿಟ್ಟಿ
- ಮೂರು ಚಮಚ ರೋಸ್ ವಾಟರ್
ಬಳಸುವ ವಿಧಾನ
ಒಂದು ಬಟ್ಟಲಿನಲ್ಲಿ ಮುಲ್ತಾನಿ ಮಿಟ್ಟಿ ಮತ್ತು ರೋಜ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ, ಮುಖದ ಎಲ್ಲಾ ಕಡೆ ಹಚ್ಚಿಕೊಳ್ಳಿ 15 ರಿಂದ 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನ
ಮುಲ್ತಾನಿ ಮಿಟ್ಟಿ ತ್ವಚೆಗೆ ಉತ್ತಮ ಮನೆಮದ್ದಾಗಿದೆ. ಈ ಜೇಡಿ ಮಣ್ಣು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಮುಲ್ತಾನಿ ಮಿಟ್ಟಿ ಚರ್ಮಕ್ಕೆ ತಾಜಾತನ ಮತ್ತು ಒಳಪನ್ನು ತರುತ್ತದೆ. ಅಲ್ಲದೆ ಈ ಜೇಡಿಮಣ್ಣು ಹೀರಿಕೊಳ್ಳುವ ವಸ್ತುವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದ ಕೊಳಕು ಮತ್ತು ಹೆಚ್ಚುವರಿ ಎಣ್ಣೆಯನ್ನು ಸ್ವಚ್ಛಗೊಳಿಸುವ ಮೂಲಕ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
10.ಜೇನುತುಪ್ಪ
ಬೇಕಾಗುವ ವಸ್ತುಗಳು
- ಎರಡು ಟೀ ಚಮಚ ಜೇನುತುಪ್ಪ
- 1/2 ಟೀ ಚಮಚ ಅರಿಶಿಣ
ಬಳಸುವ ವಿಧಾನ
ಒಂದು ಬಟ್ಟಲಿನಲ್ಲಿ ಜೇನುತುಪ್ಪ ಮತ್ತು ಅರಿಶಿನವನ್ನು ಮಿಶ್ರಣ ಮಾಡಿ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಈ ಮಿಶ್ರಣವು ಸಂಪೂರ್ಣವಾಗಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಮುಖವನ್ನು ತಕ್ಷಣವೇ ಸ್ವಚ್ಛಗೊಳಿಸುವುದು ಹೇಗೆ ಎಂದು ಯಾರಾದರೂ ತಮ್ಮ ಮನಸ್ಸಿನಲ್ಲಿ ಪ್ರಶ್ನೆಯನ್ನು ಹೊಂದಿದ್ದರೆ ನಾವು ಅವರಿಗೆ ಜೇನುತುಪ್ಪವನ್ನು ಬಳಸಲು ಶಿಫಾರಸು ಮಾಡುತ್ತೇವೆ. ಚರ್ಮದ ಟೋನ್ ಸುಧಾರಿಸಲು ಅರಿಶಿಣವು ಸಹಾಯ ಮಾಡುತ್ತದೆ. ಅಲ್ಲದೆ ಈ ಪ್ಯಾಕ್ ನಲ್ಲಿ ಜೇನುತುಪ್ಪವನ್ನು ಬಳಸುವುದರಿಂದ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ ತ್ವಚೆಯನ್ನು ಯವ್ವನವಾಗಿಸಲು ಮತ್ತು ದೀರ್ಘಕಾಲದವರೆಗೆ ಸುಕ್ಕುಗಳಿಂದ ರಕ್ಷಿಸಲು ಜೇನುತುಪ್ಪ ಸಹಕಾರಿಯಾಗಿದೆ.
11. ಶ್ರೀಗಂಧದ ಪುಡಿ
ಬೇಕಾಗುವ ವಸ್ತುಗಳು
- ಒಂದು ಚಮಚ ಕಡಲೆ ಹಿಟ್ಟು
- ಅರ್ಧ ಚಮಚ ಶ್ರೀಗಂಧದ ಪುಡಿ
- ಮೂರು ಚಮಚ ಹಾಲು
ಬಳಸುವ ವಿಧಾನ
ಕಡಲೆ ಹಿಟ್ಟು ಶ್ರೀಗಂಧದ ಪುಡಿ ಮತ್ತು ಹಾಲು ಬೆರೆಸಿ ಪೇಸ್ಟ್ ತಯಾರಿಸಿ, ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಶ್ರೀಗಂಧದಿಂದ ಚರ್ಮಕ್ಕೆ ಅನೇಕ ಪ್ರಯೋಜನಗಳಿವೆ . ಶ್ರೀಗಂಧವು ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ, ಮತ್ತು ಹೊಳೆಯುವ ಮತ್ತು ಆರೋಗ್ಯಕರವಾಗಿಸುತ್ತದೆ ಅಲ್ಲದೆ ಇದು ಚರ್ಮವನ್ನು ತಂಪಾಗಿಸಲು ಮತ್ತು ಮೃದುವಾಗಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳಿಂದಾಗಿ ಇದು ಮೊಡವೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ.
12.ಸೌತೆಕಾಯಿ
ಬೇಕಾಗುವ ವಸ್ತುಗಳು
- ಅರ್ಧ ಚಮಚ ಸೌತೆಕಾಯಿಯ ರಸ
- ಒಂದು ಚಮಚ ಕಡಲೆಹಿಟ್ಟು
ಬಳಸುವ ವಿಧಾನ
ಕಡ್ಲೆಹಿಟ್ಟಿನೊಂದಿಗೆ ಸೌತೆಕಾಯಿ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು 15 ರಿಂದ 20 ನಿಮಿಷಗಳ ನಂತರ ಬೆರಳುಗಳಿಂದ ಮುಖದ ಮೇಲೆ ಲಘು ಮಸಾಜ್ ಮಾಡಿ, ನಂತರ ತಣ್ಣೀರಿನಿಂದ ತೊಳೆಯಿರಿ
ಪ್ರಯೋಜನಗಳು
ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ತ್ವಚೆಯನ್ನು ತಿಳಿಗೊಳಿಸಲು ಉತ್ತಮ ಮನೆ ಮದ್ದಾಗಿ ಬಳಸಬಹುದು. ಸೌತೆಕಾಯಿ ರಸವು ಮಾಯ್ಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರೊಂದಿಗೆ ಚರ್ಮವನ್ನು ಬಿಗಿಗೊಳಿಸಲು ಇದು ಉಪಯುಕ್ತವಾಗಿದೆ.ಇದನ್ನು ಬಳಸಿದಾಗ ಇದು ಮುಖದ ಕೊಳಕು ಮತ್ತು ಸತ್ತ ಜೀವಕೋಶಗಳನ್ನು ತೆಗೆದು ಹಾಕುವುದರ ಜೊತೆಗೆ ರಂದ್ರಗಳನ್ನುಮುಚ್ಚಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತಾಜಾ ಮತ್ತು ಮೃದುವಾಗಿ ಕಾಣುವಂತೆ ಮಾಡುವುದರ ಜೊತೆಗೆ ಕಲೆಗಳನ್ನು ಕಡಿಮೆ ಮಾಡುತ್ತದೆ.
13. ಕಿತ್ತಲೆ ಹಣ್ಣಿನ ಸಿಪ್ಪೆ
ಬೇಕಾಗುವ ವಸ್ತುಗಳು
- ಎರಡು ಟೀ ಚಮಚ ಕಿತ್ತಲೆ ಸಿಪ್ಪೆ
- ಮೂರರಿಂದ ನಾಲ್ಕು ಟೀ ಚಮಚ ರೋಜ್ ವಾಟರ್
ಬಳಸುವ ವಿಧಾನ
ಕಿತ್ತಲೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ಸಿಪ್ಪೆಗಳು ಚೆನ್ನಾಗಿ ಒಣಗಿದ ನಂತರ ಅವುಗಳನ್ನು ಪುಡಿ ಮಾಡಿ. ಆ ಪುಡಿಯನ್ನು ರೋಜ್ ವಾಟರ್ ನಲ್ಲಿ ಅಗತ್ಯವಿರುವಂತೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಿ, ಅದು ಒಣಗಿದ ನಂತರ ನಿಮ್ಮ ಕೈಗಳನ್ನು ಒದ್ದೆ ಮಾಡುವ ಮೂಲಕ ಮತ್ತು ನಿಮ್ಮ ಬೆರಳುಗಳಿಂದ ನಿಮ್ಮ ಮುಖವನ್ನು ಮಸಾಜ್ ಮಾಡುವ ಮೂಲಕ ಫೇಸ್ ಪ್ಯಾಕ್ ಅನ್ನು ತೆಗೆಯಿರಿ, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಪ್ರಯೋಜನಗಳು
UV ಕಿರಣಗಳಿಂದಾಗಿ ಮೆಲನಿನ್ ವರ್ಣ ದ್ರವ್ಯವೂ ಹೆಚ್ಚಾಗುತ್ತದೆ, ಮತ್ತು ಚರ್ಮದ ಬಣ್ಣವೂ ಗಾಢವಾಗುತ್ತದೆ, ಇದನ್ನು ಕಡಿಮೆ ಮಾಡಲು ಕಿತ್ತಲೆ ಸಿಪ್ಪೆಯನ್ನು ಬಳಸಬಹುದು ವಾಸ್ತವವಾಗಿ ಅದರ ಸಿಪ್ಪೆಗಳು ಪಾಲಿಮೆತಾಕ್ಸಿ ಪ್ಲವರ್ನೈಟ್ಸ್ ಗಳನ್ನು ಹೊಂದಿರುತ್ತದೆ. ಇದು U V ಕಿರಣಗಳು ಮತ್ತು ಅವುಗಳಿಂದ ಉಂಟಾಗುವ ಹಾನಿಗಳಿಂದ ರಕ್ಷಿಸುತ್ತದೆ.
14.ಕ್ಯಾರೆಟ್ ಮತ್ತು ಅವಕಾಡೊ/ಬೆಣ್ಣೆ ಹಣ್ಣು
ಬೇಕಾಗುವ ವಸ್ತುಗಳು
- ಒಂದು ಚಮಚ ಕ್ಯಾರಟ್ ರಸ
- ಅವಕಾಡೊ ಎಣ್ಣೆ
ಬಳಸುವ ವಿಧಾನ
ಕ್ಯಾರೆಟ್ ರಸಕ್ಕೆ ಅವಕಾಡೊ ಎಣ್ಣೆಯನ್ನು ಸೇರಿಸಿ ಅದನ್ನು ಅತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ 15ರಿಂದ 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಕ್ಯಾರೆಟ್ ಗಳು ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು U V ಕಿರಣಗಳಿಂದ ಚರ್ಮದ ಮೇಲೆ ಆಗುವ ಹಾನಿಯಿಂದ ರಕ್ಷಿಸುತ್ತದೆ. ಉದಾಹರಣೆಗೆ ಕೆಂಪು ಚುಕ್ಕಿಗಳು ಮತ್ತು ಸೊಕ್ಕುಗಳು. ಅಲ್ಲದೆ ಅವಕಾಡೊ ಎಣ್ಣೆಯಲ್ಲಿರುವ ವಿಟಮಿನ್ ಎ, ಸಿ ಮತ್ತು ಡಿ ಹಾನಿಗೊಳಗಾದ ಮತ್ತು ಬಿರುಕು ಬಿಟ್ಟ ಚರ್ಮವನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತದೆ.
15.ಕೇಸರಿ
ಬೇಕಾಗುವ ವಸ್ತುಗಳು
- ಕೇಸರಿಯ ಕೆಲವು ದಳಗಳು
- ಅರ್ಧ ಚಮಚ ಶ್ರೀಗಂಧದ ಪುಡಿ
- ಎರಡು ಚಮಚ ಹಾಲು
ಬಳಸುವ ವಿಧಾನ
ಕೇಸರಿಯನ್ನು ಹಾಲಿನಲ್ಲಿ ಒಂದು ಗಂಟೆ ನೆನೆಸಿಡಿ, ನಂತರ ಅದಕ್ಕೆ ಶ್ರೀಗಂಧದ ಗುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ನಂತರ ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿಕೊಳ್ಳಿ 15 ರಿಂದ 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಕೇಸರಿಯಿಂದ ತ್ವಚೆಗೆ ಅನೇಕ ಪ್ರಯೋಜನಗಳಿವೆ, ಇದನ್ನುಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಚರ್ಮವು ಕಾಂತಿಯುತವಾಗುತ್ತದೆ, ಮತ್ತು ಕಲೆಗಳು ಕಡಿಮೆ ಆಗುತ್ತದೆ. ಇದು ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕೇಸರಿಯನ್ನು ಸಂಸ್ಕ್ರೀನ್ ಮತ್ತು ಮಾಯ್ಶ್ಚರೈಸರ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಈ ಎಲ್ಲಾ ಪ್ರಯೋಜನಗಳು ಕೇಸರಿಯಲಿರುವ ಸಫರನಾಲ್ ರಾಸಾಯನಿಕ ಸಂಯುಕ್ತದಿಂದ ಆಗುತ್ತದೆ.
16.ಅಕ್ಕಿ ಹಿಟ್ಟು
ಬೇಕಾಗುವ ವಸ್ತುಗಳು
- ಒಂದು ಚಮಚ ಅಕ್ಕಿ ಹಿಟ್ಟು
- ಅರ್ಧ ಟೀ ಚಮಚ ಅರಿಶಿಣ
- ಅಗತ್ಯವಿರುವಷ್ಟು ಗುಲಾಬಿ ಜಲ
ಬಳಸುವ ವಿಧಾನ
ಎಲ್ಲಾ ಪದಾರ್ಥಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ, ನಂತರ ಈ ಫೇಸ್ ಮಾಸ್ಕನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ನಂತರ ಕಣ್ಣೀರಿನಿಂದ ತೊಳೆಯಿರಿ.
ಪ್ರಯೋಜನಗಳು
ತ್ವಚೆಗೆ ಬಣ್ಣವನ್ನು ತಿಳಿಗೊಳಿಸಲು ಅಕ್ಕಿ ಹಿಟ್ಟನ್ನು ಬಳಸುವುದು ಪ್ರಯೋಜನಕಾರಿಯಾಗಿದೆ. ಸಂಶೋಧನೆಯ ಪ್ರಕಾರ ಅಕ್ಕಿ ನೈಸರ್ಗಿಕ ಚರ್ಮದ ಬಿಳಿ ಮಾಡುವ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತದೆ. ಈ ಕಾರಣಕ್ಕಾಗಿ ಚರ್ಮದ ಬಣ್ಣವನ್ನು ತಿಳಿಗೊಳಿಸಲು ಇದನ್ನು ಸುಲಭವಾದ ಮನೆ ಮದ್ದಾಗಿ ಬಳಸಬಹುದು.
17.ಓಟ್ಸ್
ಬೇಕಾಗುವ ವಸ್ತುಗಳು
- ಮೂರು ಟೀ ಚಮಚ ಓಟ್ಸ್
- ಎರಡು ಚಮಚ ಮೊಸರು ಅಥವಾ ರೋಜ್ ವಾಟರ್
ಬಳಸುವ ವಿಧಾನ
ಓಟ್ಸ್ ಅನ್ನು ಪುಡಿ ಮಾಡಿ ಅದಕ್ಕೆ ಮೊಸರು ಅಥವಾ ರೋಜ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ 15 ರಿಂದ 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ
ಪ್ರಯೋಜನಗಳು
ಮುಖವನ್ನು ಸ್ವಚ್ಛಗೊಳಿಸಲು ಓಟ್ಸ್ ಅನ್ನು ಪರಿಹಾರವಾಗಿ ಬಳಸಬಹುದು,ಚರ್ಮದ ಮೇಲಿನ ಪದರವನ್ನು ಸ್ವಚ್ಛಗೊಳಿಸಲು ಇದು ಸಹಕಾರಿಯಾಗಿದೆ. ಇದು ತ್ವಜೆಯ ಸತ್ತ ಜೀವಕೋಶಗಳನ್ನು ತೆಗೆದು ಹಾಕುವುದಲ್ಲದೆ ಇದು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ.
18.ಹೆಸರುಬೇಳೆ
ಬೇಕಾಗುವ ವಸ್ತುಗಳು
- ಹೆಸರುಬೇಳೆ ಮೂರು ಚಮಚ
- ಒಂದು ಕಪ್ ನೀರು
ಬಳಸುವ ವಿಧಾನ
ಹೆಸರು ಬೇಳೆಯನ್ನು ಒಂದು ಕಪ್ ನೀರಿನಲ್ಲಿ ಇಡೀ ರಾತ್ರಿ ನೆನೆಸಿ. ಬೆಳಗ್ಗೆ ಅದಕ್ಕೆ ಸ್ವಲ್ಪ ನೀರು ಅಥವಾ ರೋಜ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ. ಪೇಸ್ಟನ್ನು ಮುಖಕ್ಕೆ ಹಚ್ಚಿಕೊಳ್ಳಿ ಈ ಫೇಸ್ ಪ್ಯಾಕ್ ಒಣಗಿದ ನಂತರ ನಿಧಾನವಾಗಿ ಕೈಗಳಿಂದ ಮುಖವನ್ನು ಮಸಾಜ್ ಮಾಡುತ್ತಾ ತೊಳೆಯರಿ.
ಪ್ರಯೋಜನಗಳು
ಇದು ಚರ್ಮದ ಬಣ್ಣವನ್ನು ತಿಳಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದು ಅತ್ಯುತ್ತಮ ಎಸ್ಪೋಲಿಯಟರ್ ಎಂದು ಪರಿಗಣಿಸಲಾಗುತ್ತದೆ. ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಅಲ್ಲದೆ ಚರ್ಮದ ಒಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
19.ಬಾಳೆಹಣ್ಣು
ಬೇಕಾಗುವ ವಸ್ತುಗಳು
- ಒಂದು ಕಳಿತ ಬಾಳೆಹಣ್ಣು
- ಒಂದು ಟೀ ಚಮಚ ಮುಲ್ತಾನಿ ಮಿಟ್ಟಿ
ಬಳಸುವ ವಿಧಾನ
ಬಾಳೆಹಣ್ಣು ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ, ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಪ್ರಯೋಜನಗಳು
ಮುಖದ ಕಾಂತಿಯನ್ನು ಹೆಚ್ಚಿಸಲು ಬಾಳೆಹಣ್ಣು ಅತ್ಯುತ್ತಮ ಮನೆ ಮದ್ದು. ಬಾಳೆಹಣ್ಣು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ, ಮತ್ತು ಚರ್ಮದ ಸುಕ್ಕುಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
20. ಹಸಿರು ಚಹಾ
ಬೇಕಾಗುವ ವಸ್ತುಗಳು
- ಹಸಿರು ಚಹಾದ ಎರಡು ಚೀಲಗಳು
- ಒಂದು ಟೀ ಚಮಚ ನಿಂಬೆರಸ
- ಒಂದು ಚಮಚ ಜೇನುತುಪ್ಪ
ಬಳಸುವ ವಿಧಾನ
ಹಸಿರು ಚಹಾ ಚೀಲವನ್ನು ಕತ್ತರಿಸಿ ಅದರ ಪುಡಿಯನ್ನು ಹೊರತೆಗೆಯಿರಿ. ಪುಡಿಯಲ್ಲಿ ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ.ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ.
ಪ್ರಯೋಜನಗಳು
ಹಸಿರು ಚಹಾದಲ್ಲಿ ಅನೇಕ ಫೈಟೋ ನ್ಯೂಟ್ರಿಯೆಂಟ್ಗಳು ಕಂಡುಬರುತ್ತವೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಯೌವ್ವನವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ಚರ್ಮಕ್ಕೆ ಒಳಪನ್ನು ತರುತ್ತದೆ.
ಚರ್ಮದ ಬಣ್ಣವನ್ನು ಸುಧಾರಿಸಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು/. ಸ್ಕಿನ್ ಲೈಟ್ನಿಂಗ್ ಗಾಗಿ ಆಹಾರ ಪದ್ಧತಿ
ಚರ್ಮದ ಬಣ್ಣವನ್ನು ತಿಳಿಗೊಳಿಸಲು ಅನೇಕ ಆಹಾರಗಳು ಲಭ್ಯವಿದೆ. ಚರ್ಮದ ಬಣ್ಣವು ಜೆನೆಟಿಕ್ಸ್ ಮೆಲನಿನ್ ಪ್ರಮಾಣ, ನೀವು ವಾಸಿಸುವ ಸ್ಥಳ ಇತ್ಯಾದಿಗಳಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ. ಈ ಕಾರಣಕ್ಕಾಗಿ ನಾವು ಕೆಲವು ಆಹಾರಗಳ ಬಗ್ಗೆ ಕೆಳಗೆ ತಿಳಿಸಿದ್ದೇವೆ ಇದು ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ’
ಏನನ್ನು ತಿನ್ನಬೇಕು
1. ವಿಟಮಿನ್ C ಮತ್ತು E ಯಥೇಚ್ಛವಾಗಿರುವ ಆಹಾರಗಳನ್ನು ಸೇವಿಸಬೇಕು.
2. ನಿಮ್ಮ ಆಹಾರದಲ್ಲಿ ಟೊಮೆಟೊ ಮತ್ತು ಕ್ಯಾರೆಟ್ ಗಳನ್ನು ಸೇರಿಸಿ ಇದರಲ್ಲಿ ಕೆರಟಿನೈಡ್ಗಳು ಇರುತ್ತವೆ.
3. ತಾಜಾ ಹಣ್ಣುಗಳು ಮತ್ತು ತರಕಾರಿಗಳು.
4. ಬಾದಾಮಿ ಮತ್ತು ಗೋಡಂಬಿ ಯಂತಹ ಒಣ ಹಣ್ಣುಗಳು.
5. ಆಹಾರದಲ್ಲಿ ಮೊಸರನ್ನು ಸೇವಿಸಿ.
6. ಬಾಳೆಹಣ್ಣುಗಳನ್ನು ಸೇವಿಸಿ.
7. ಒಮೇಗಾ 3 ಕೊಬ್ಬಿನ ಆಮ್ಲಗಳು ಯತೇಚ್ಛವಾಗಿರುವ ಮೀನು ಮತ್ತು ಇತರ ಸಮುದ್ರ ಆಹಾರವನ್ನು ಸೇವಿಸಿ.
8. ಎಳೆನೀರನ್ನು ಸೇವಿಸಿ.
9. ವಿಟಮಿನ್ ಸಿ ಹೊಂದಿರುವ ಕಿತ್ತಳೆ ಮತ್ತು ನಿಂಬೆ ಹಣ್ಣುಗಳನ್ನು ಸೇವಿಸಿ.
10. ಸಾಕಷ್ಟು ನೀರು ಕುಡಿಯಿರಿ ಇದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ.
ಏನನ್ನು ತಿನ್ನಬಾರದು
1.ಎಣ್ಣೆಯಿಂದ ಕರೆದ ಆಹಾರಗಳನ್ನು ಸೇವಿಸಬೇಡಿ.
2. ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನಬೇಡಿ.
3. ತ್ವರಿತ ಆಹಾರವನ್ನು ( Fast foods ) ಸೇವಿಸಬೇಡಿ.
4. ಚಹಾ ಮತ್ತು ಕಾಫಿಯ ಬದಲಿಗೆ ಹಸಿರು ಚಹಾ ವನ್ನು ಕುಡಿಯಿರಿ.
5. ಎಪ್ಪುಗಟ್ಟಿದ ( Frozen foods ) ಮತ್ತು ಪ್ಯಾಕ್ ಮಾಡಿದ ಆಹಾರವನ್ನು ಸೇವಿಸಬೇಡಿ.
ಚರ್ಮದ ಬಣ್ಣವನ್ನು ತಿಳಿಗೊಳಿಸಲು ಇನ್ನೂ ಕೆಲವು ಮಾರ್ಗಗಳುಮುಖವನ್ನು
ಸ್ವಚ್ಛವಾಗಿಟ್ಟುಕೊಳ್ಳಿ ನೀವು ಹೊರಗಿನಿಂದ ಬಂದಾಗಲೆಲ್ಲ ಸೌಮ್ಯವಾದ ಫೇಸ್ ವಾಶ್ ನಿಂದ ಮುಖವನ್ನು ತೊಳೆಯಿರಿ. ಇದರಿಂದ ಮುಖದಲ್ಲಿರುವ ಕೊಳೆ, ದೂಳು, ಮಣ್ಣು ಇತ್ಯಾದಿಗಳು ನಿವಾರಣೆಯಾಗಿ ಚರ್ಮ ಸ್ವಚ್ಛವಾಗಿರುತ್ತದೆ.
ಸ್ಕ್ರಬ್- ಇದು ಚರ್ಮದ ಎಕ್ಸ್ಪೋಲಿಯೇಶನ್ ಗೆ ಸಹಾಯ ಮಾಡುತ್ತದೆ. ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಮತ್ತು ಮುಖವನ್ನು ಆಳವಾಗಿ ಸ್ವಚ್ಛಗೊಳಿಸಲು ಇದು ಅತ್ಯಗತ್ಯ.
ಸನ್ ಸ್ಕ್ರೀನ್-ಬಿಸಿಲು ಮತ್ತು ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಂಸ್ಕ್ರೀನ್ ಬಳಸಿ.
ಜಲ ಸಂಚಯನ– ಚರ್ಮಕ್ಕೆ ನೀರು ಅತ್ಯಗತ್ಯ ಚರ್ಮದಲ್ಲಿರುವ ವಿಷ ವಸ್ತುಗಳನ್ನು ಹೊರಹಾಕಲು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ನೀರು ಸಹಾಯಕವಾಗಿದೆ.
ಸಾಕಷ್ಟು ನಿದ್ದೆಚರ್ಮವನ್ನು ಸುಂದರವಾಗಿಡಲು ಸಾಕಷ್ಟು ನಿದ್ರೆ ಅತ್ಯಗತ್ಯ, ನಿದ್ರೆಯ ಕೊರತೆಯು ಚರ್ಮದ ಮೇಲೆ ವಯಸ್ಸಾದ ಅಕಾಲಿಕ ಚಿಹ್ನೆಗಳನ್ನು ಉಂಟುಮಾಡುತ್ತದೆ.
ಏನನ್ನು ಮಾಡಬಾರದು
ಆಲ್ಕೋಹಾಲ್ ಸೇವನೆ-NCBI ಪ್ರಕಟಿಸಿದ ಸಂಶೋಧನೆಯ ಪ್ರಕಾರ ಆಲ್ಕೋಹಾಲ್ ಸೇವನೆಯು ಮುಖದ ಮೇಲೆ ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
ಧೂಮಪಾನ ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ, ಇದು ವಯಸ್ಸಾದ ಲಕ್ಷಣಗಳನ್ನು ತರಲು ಪ್ರಮುಖ ಕಾರಣವಾಗುವುದು.
ಮೇಕಪ್ ರಾತ್ರಿ ಮಲಗುವ ಮುನ್ನ ಯಾವಾಗಲೂ ಮೇಕಪ್ ತೆಗೆಯಿರಿ. ಹಾಗೆ ಮಾಡಲು ವಿಫಲವಾದರೆ ಮೇಕಪ್ ತ್ವಜೆಗೆ ಹಾನಿ ಉಂಟುಮಾಡುತ್ತದೆ ಮತ್ತು ನೈಸರ್ಗಿಕ ಒಳಪನ್ನು ಕಡಿಮೆ ಮಾಡುತ್ತದೆ.
ರಾಸಾಯನಿಕ ಉತ್ಪನ್ನಗಳು ತ್ವಜೆಯನ್ನು ಸುಂದರವಾಗಿಡಲು ಆದಷ್ಟು ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ, ನೈಸರ್ಗಿಕ ಮತ್ತು ಮನೆಮದ್ದುಗಳು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ.
ಒತ್ತಡ ಒತ್ತಡವನ್ನು ಕಡಿಮೆ ಮಾಡಿ, ಇದು ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮತ್ತು ಚರ್ಮವನ್ನು ವಯಸ್ಸಾದಂತೆ ಮಾಡುತ್ತದೆ.