ತಲೆ ಹೊಟ್ಟು ನಿವಾರಣೆಗೆ ಸುಲಭ ನೈಸರ್ಗಿಕ ಮನೆಮದ್ದುಗಳು 2023 ( Simple Home remedies for Dandruff in Kannada)

ತಲೆ ಹೊಟ್ಟು ನಿವಾರಣೆಗೆ ಸುಲಭ  ನೈಸರ್ಗಿಕ ಮನೆಮದ್ದುಗಳು

 ಕೂದಲು ನಮ್ಮ ವ್ಯಕ್ತಿತ್ವದ ಪ್ರಮುಖ ಭಾಗವಾಗಿದೆ. ಮತ್ತು ಕೂದಲನ್ನು ಆರೋಗ್ಯಕರವಾಗಿರಿಸಲು ವಿಶೇಷವಾಗಿ ಮಹಿಳೆಯರು ಅನೇಕ ಕಸರತ್ತುಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ ಕೂದಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನುಪ್ರತಿಯೊಬ್ಬರು ಎದುರಿಸುತ್ತಾರೆ  ಅವುಗಳಲ್ಲಿ ತಲೆ ಹೊಟ್ಟು ಅತ್ಯಂತ ಸಾಮಾನ್ಯವಾಗಿದೆ. ತಲೆ ಹೊಟ್ಟು ತೆಗೆದುಹಾಕುವ ಕ್ರಮಗಳನ್ನು ಆರಂಭದಲ್ಲಿ ತೆಗೆದುಕೊಳ್ಳದಿದ್ದರೆ  ಅದು ಕೂದಲಿಗೆ  ಹಾನಿಯನ್ನು ಉಂಟುಮಾಡುತ್ತದೆ.  ಅಂತಹ ಪರಿಸ್ಥಿತಿಯಲ್ಲಿ ತಲೆ ಹೊಟ್ಟು ನಿವಾರಣೆಗೆ ಕೆಲವು ನೈಸರ್ಗಿಕ ಮತ್ತು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಈ ಲೇಖನದಲ್ಲಿ ಅಂತಹ ಕೆಲವು ಮನೆಮದ್ದುಗಳನ್ನು ನಿಮಗೆ ತಿಳಿಸಲಿದ್ದೇವೆ.

ತಲೆ ಹೊಟ್ಟು ನಿವಾರಣೆಗೆ ಸುಲಭ ನೈಸರ್ಗಿಕ ಮನೆಮದ್ದುಗಳು (Home remedies for Dandruff in Kannada) 

 ಬೇವಿನ ಎಲೆ

ಒಂದು ಕಪ್ ನೀರಿನಲ್ಲಿ ಒಂದು ಹಿಡಿ ಬೇವಿನ ಎಲೆಗಳನ್ನು ಚೆನ್ನಾಗಿ ಕುದಿಸಿ ಆ ಎಲೆಗಳನ್ನು ಪೇಸ್ಟ್ ಮಾಡಿ ಪೇಸ್ಟ್ ತಣ್ಣಗಾದಾಗ ಅದನ್ನು ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ ನಂತರ ಶಾಂಪೂ ಮತ್ತು ಕಂಡಿಷ್ನರ್ ಬಳಸಿ ಕೂದಲನ್ನು ತೊಳೆಯಿರಿ. 

ಬೇವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಅವುಗಳೆಂದರೆ, ಜೀವರೋಧಿ  ಉರಿಯುತದ ಗುಣ ಮತ್ತು ಆಂಟಿ ಫಂಗಲ್. ಬೇವಿನಲ್ಲಿರುವ ಆಂಟಿ ಫಂಗಲ್ ಗುಣವು  ತಲೆಹೊಟ್ಟಿಗೆ  ಹೆಚ್ಚು ಪರಿಣಾಮಕಾರಿಯಾಗಿದೆ.

 ನಿಂಬೆರಸ

 ತೆಂಗಿನ ಎಣ್ಣೆಯೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಸ್ನಾನ ಮಾಡುವ ಮೊದಲು ಮಿಶ್ರಣವನ್ನು ತಲೆಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ, ಅರ್ಧ ಗಂಟೆಯ ನಂತರ ಶಾಂಪೂವಿನಿಂದ ಕೂದಲನ್ನು ತೊಡೆಯಿರಿ.

ನಿಂಬೆಯಲ್ಲಿರುವ ಶಿಲೀಂದ್ರ ವಿರೋಧಿ ಗುಣಲಕ್ಷಣಗಳು ತಲೆ ಹೊಟ್ಟಿನ  ನಿವಾರಣೆಗೆ ಸಹಾಯ ಮಾಡುತ್ತದೆ.

 ಟೀ ಟ್ರೀ ಆಯಿಲ್

ಟೀ ಟ್ರೀ ಎಣ್ಣೆಯನ್ನು ಬಾದಾಮಿ ಅಥವಾ ಜೋಜೋಬಾ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹತ್ತಿಯ ಸಹಾಯದಿಂದ ಎಣ್ಣೆಯನ್ನು ತಲೆಗೆ ಹಚ್ಚಿ, ಇದನ್ನು ರಾತ್ರಿ ಮಲಗುವ ಮೊದಲು ಹಚ್ಚಿ ಮರುದಿನ ಶಾಂಪು ಮಾಡಿ. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ  ಪುನರಾವರ್ತಿಸಿ.

 ಚಹಾ ಮರದ ಎಣ್ಣೆಯಲ್ಲಿರುವ ಶಿಲೀಂದ್ರ ವಿರೋಧಿ ಗುಣಗಳು ತಲೆ ಒಟ್ಟಿಗೆ ಪರಿಣಾಮಕಾರಿಯಾಗಿದೆ. ಇದು ತಲೆಯಲ್ಲಿನ ಸಿಲಿಂದ್ರಗಳ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಟೀ ಟ್ರೀ ಎಣ್ಣೆಯು  ತಲೆ ಹೊಟ್ಟು ಕಡಿಮೆ ಮಾಡಲು ಉತ್ತಮ ಮನೆಮದ್ದಾಗಿದೆ.

 ಮೊಸರು

ಒಂದು ಕಪ್ ಮೊಸರನ್ನು ತೆಗೆದುಕೊಂಡು ತಲೆಗೆ ಹಚ್ಚಿ ಸುಮಾರು 30 ರಿಂದ 40 ನಿಮಿಷಗಳ ಕಾಲ ಬಿಡಿ, ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.

 ಮೊಸರಿನಲ್ಲಿ ಲ್ಯಾಕ್ಟೋಬ್ಯಾಸಿಲಸ್, ಪ್ಯಾರಾಕೇಸಿ ಬ್ಯಾಕ್ಟೀರಿಯಗಳು ಇರುತ್ತವೆ. ಈ ಬ್ಯಾಕ್ಟೀರಿಯಗಳು ತಲೆ ಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತವೆ.

 ಆಪಲ್ ಸೈಡರ್ ವಿನೆಗರ್

ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ, ನಂತರ ಈ ಮಿಶ್ರಣವನ್ನು ಕೂದಲು ಮತ್ತು ಬುರುಡೆಗೆ ಹಚ್ಚಿ ಸುಮಾರು 20 ರಿಂದ 30 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.

 ಆಪಲ್ ಸೈಡರ್ ವಿನೆಗರ್ ಬುರುಡೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಆಮ್ಲಗಳು ನೆತ್ತಿಯ ph ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಈಸ್ಟ್ ನಿರ್ಮಾಣವನ್ನು ಕಡಿಮೆ ಮಾಡುತ್ತದೆ, ಮತ್ತು ತಲೆ ಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ.

 ಅಲೋವೆರಾ

 ಸ್ಥಾನ ಮಾಡುವ ಮೊದಲು ಅಲೋವೆರಾ ಜೆಲ್ ಅನ್ನು ತಲೆ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ ಸುಮಾರು 30 ರಿಂದ 40 ನಿಮಿಷಗಳ ಕಾಲ ಬಿಡಿ, ನಂತರ ಶಾಂಪೂವಿನಿಂದ ತೊಳೆಯಿರಿ. 

 ಅಲೋವೆರಾ ನೈಸರ್ಗಿಕ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಅಲೋವೆರದಲ್ಲಿ ಕಂಡುಬರುವ ಈ ಗುಣಲಕ್ಷಣಗಳು ತಲೆ ಹೊಟ್ಟು ಸಮಸ್ಯೆಯನ್ನು ನಿವಾರಿಸುವ ಮೂಲಕ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. 

 ಅಡಿಗೆ ಸೋಡಾ

 2 ರಿಂದ 3 ಚಮಚ ಅಡಿಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲನ್ನು ಒದ್ದೆ ಮಾಡಿ ಬೇಕಿಂಗ್ ಸೋಡವನ್ನು ತಲೆಬುರುಡೆಗೆ ಸಂಪೂರ್ಣವಾಗಿ ಹಚ್ಚಿ. ಸುಮಾರು 30 ರಿಂದ 40 ನಿಮಿಷಗಳ ನಂತರ ಕೂದಲನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ.

ವಾಸ್ತವವಾಗಿ ಅಡಿಗೆ ಸೋಡಾ ಫಂಗಲ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಈ ಗುಣವು ತಲೆ ಹೊಟ್ಟು ನಿವಾರಣೆಗೆ ಪರಿಣಾಮಕಾರಿಯಾಗಿದೆ. 

ನೆಲ್ಲಿಕಾಯಿ

 ತೆಂಗಿನಎಣ್ಣೆ ಅಥವಾ ಆಲಿವ್  ಎಣ್ಣೆಗೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಅದನ್ನು ಬಿಸಿ ಮಾಡಿ, ಎಣ್ಣೆ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಿ. ಎಣ್ಣೆಯು ಕಂದು ಬಣ್ಣಕ್ಕೆ ತಿರುಗಿದಾಗ ಅದನ್ನು ತಣ್ಣಗಾಗಲು ಬಿಡಿ. ನಂತರ ಎಣ್ಣೆಯನ್ನು ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿರಿ  10-15 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. 

ನೆಲ್ಲಿಕಾಯಿಯಲ್ಲಿ ವಿಟಮಿನ್ ಎ ಮತ್ತು ಸಿ ಕಂಡುಬರುತ್ತದೆ, ಈ ಎರಡು ಪೋಷಕಾಂಶಗಳು ತಲೆ ಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

 ಮೆಂತ್ಯ 

ಸುಮಾರು ಎರಡರಿಂದ ಮೂರು ಟೀ ಚಮಚ ಒಣ ಮೆಂತ್ಯವನ್ನು  ಇಡೀ ರಾತ್ರಿ ನೆನೆಸಿ ಬೆಳಿಗ್ಗೆ ಇದನ್ನು ಚೆನ್ನಾಗಿ ರುಬ್ಬಿ  ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿಸುಮಾರು 30 ರಿಂದ 40 ನಿಮಿಷಗಳ ಕಾಲ ಬಿಡಿ ನಂತರ ಶಾಂಪೂವಿನಿಂದ ತೊಳೆಯಿರಿ.

FAQ

ಪ್ರಶ್ನೆ1 ತಲೆ ಹೊಟ್ಟು ಇದ್ದರೆ ನಾವು ಪ್ರತಿದಿನ ಕೂದಲನ್ನು  ತೊಳೆಯಬೇಕು?

 ಉತ್ತರ  ಇಲ್ಲ,  ಪ್ರತಿದಿನ ನಿಮ್ಮ ಕೂದಲನ್ನು  ತೊಳೆಯುವುದರಿಂದ ತಲೆ ಹೊಟ್ಟು ಸಮಸ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ.

 ಪ್ರಶ್ನೆ 2.  ತಲೆ ಹೊಟ್ಟು ಕೂದಲು ಉದುರುವಿಕೆಗೆ ಕಾರಣವಾಗಬಹುದೇ? 

 ಉತ್ತರ  ಹೌದು,  ಇದು ಕೂದಲು ಉದುರುವ ಸಮಸ್ಯೆಯನ್ನು ಉಂಟುಮಾಡುತ್ತದೆ.

 ಪ್ರಶ್ನೆ 3. ತಲೆ ಹೊಟ್ಟು ಮೊಡವೆಗಳಿಗೆ ಕಾರಣವಾಗಬಹುದಾ?

 ಉತ್ತರ  ಹೌದು, ತಲೆ ಹೊಟ್ಟು ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಪ್ರಶ್ನೆ4.  ತಲೆ ಹೊಟ್ಟು ಬೂದು ಕೂದಲಿಗೆ ಕಾರಣವಾಗಬಹುದೇ

 ಉತ್ತರ  ಇಲ್ಲ.

Leave a Comment