ಕಲ್ಲಂಗಡಿ ಮತ್ತು ಅದರ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು 2023( Amazing Health Benefits of watermelon and its seeds)

ಕಲ್ಲಂಗಡಿ ಮತ್ತು ಅದರ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು 2023 ( Amazing Health Benefits of watermelon and its seeds)

 ಬೇಸಿಗೆ ಕಾಲವು ಬರಲಿದ್ದು, ಅದರೊಂದಿಗೆ ನೀರು ತುಂಬಿದ ಕಲ್ಲಂಗಡಿ  ಹಣ್ಣುಗಳು  ಮಾರುಕಟ್ಟೆಗೆ ಬರಲಿವೆ. ಕತ್ತರಿಸಿದ ಕಲ್ಲಂಗಡಿ, ಕೆಂಪಾಗಿರುವುದನ್ನು  ನೋಡಿದ ಕೂಡಲೇ ಎಲ್ಲರ ಬಾಯಲ್ಲಿ ನೀರು ಇರುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸುವ ದೇಹವನ್ನು ತಂಪಾಗಿಸುವ ಉಲ್ಲಾಸ ನೀಡುವ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುವ ಈ  ಹಣ್ಣು ನಮ್ಮ ದೇಹವನ್ನು ಆರೋಗ್ಯವಾಗಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು  ಉತ್ತಮ ಗುಣಗಳನ್ನು ಹೊಂದಿರುವ ಕಲ್ಲಂಗಡಿ  ಹಣ್ಣಿನ ಜೊತೆಗ  ಅದರ ಸಿಪ್ಪೆ ಮತ್ತು ಬೀಜಗಳು ಸಹ ಅನೇಕ ಉತ್ತಮ ಗುಣಗಳಿಂದ ಕೂಡಿದೆ. ಹಾಗಾದರೆ ಮೊದಲು ನಾವು ಕಲ್ಲಂಗಡಿ ಹಣ್ಣಿನ ವಿಶೇಷತೆಯ ಬಗ್ಗೆ  ಮತ್ತು ಅದನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ  ತಿಳಿಯೋಣ. 

ಕಲ್ಲಂಗಡಿ ಮತ್ತು ಅದರ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು.

 ಕಲ್ಲಂಗಡಿ ಹಣ್ಣಿನ ಪ್ರಯೋಜನಗಳು (Advantages of watermelon)

(ಕಲ್ಲಂಗಡಿ ಮತ್ತು ಅದರ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು)
  •  ನೀವು  ಸ್ತೂಲ ಕಾಯದವರಾಗಿದ್ದರೆ, ಮತ್ತು ನಿಮ್ಮ ತೂಕದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಕಲ್ಲಂಗಡಿ ಈ ಸಮಸ್ಯೆಯನ್ನು ತಡೆದು ಹಾಕಲು ಸಹಾಯ ಮಾಡುತ್ತದೆ. ನೀವು ಡಯಟ್ ಮಾಡುವಾಗ ಇದನ್ನು ತಿನ್ನುವುದರಿಂದ ಸಾಕಷ್ಟು ನೀರಿನ ಅಂಶ ಸಿಗುತ್ತದೆ. ಇದರಲ್ಲಿ ಫೈಬರ್ ಇರುವುದರಿಂದ ನಿಮ್ಮ ಹೊಟ್ಟೆಯು ಸಹ ತುಂಬಿದಂತೆ ಅನಿಸುತ್ತದೆ. ಕಲ್ಲಂಗಡಿಯಲ್ಲಿ ಸಿಟ್ರಲಿನ್ ಎಂಬ ಅಂಶವು ಇರುತ್ತದೆ, ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  •  ಬೇಸಿಗೆಯಲ್ಲಿ ಅತಿಯಾದ ಬಿಸಿಲಿನಿಂದ ದೇಹವು ನಿರ್ಜಲೀಕರಣ ಆಗುವ ಸಂಭವವಿರುತ್ತದೆ. ಇದನ್ನು ತಪ್ಪಿಸಲು ಕಲ್ಲಂಗಡಿಯ ಸೇವನೆಯೂ ಪ್ರಯೋಜನಕಾರಿಯಾಗಿದೆ. ಏಕೆಂದರೆ ಕಲ್ಲಂಗಡಿಯಲ್ಲಿ 92 %  ನೀರಿನೊಂದಿಗೆ ಎಲೆಕ್ಟ್ರೋಲೈಟ್ ಗಳ ಉಪಸ್ಥಿತಿ ಇದ್ದು, ಇದು ದೇಹದ  ಬಳಲಿಕೆಯನ್ನು ತಡೆಗಟ್ಟುತ್ತದೆ.
  •  ಕಲ್ಲಂಗಡಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಬೀಟಾ ಕೆರೋಟಿನ್ ಅಂಶವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ  ಮಾಡಲು ಸಹಾಯ ಮಾಡುತ್ತದೆ.
  •  ಕಲ್ಲಂಗಡಿಯಲ್ಲಿ ಆಂಟಿ ಆಕ್ಸಿಡೆಂಟ್  ಹೇರಳವಾಗಿರುವುದರಿಂದ ಕಲ್ಲಂಗಡಿ ಹಣ್ಣುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಕರುಳಿನ ಕ್ಯಾನ್ಸರ್ ಮತ್ತು ಮಧುಮೇಹದಿಂದ ರಕ್ಷಿಸುತ್ತದೆ.
  •  ಕಲ್ಲಂಗಡಿಯಲ್ಲಿ ಪೊಟ್ಯಾಶಿಯಂ ಕೂಡ ಹೇರಳವಾಗಿ ಲಭ್ಯವಿದೆ. ಪೋಟಾಸಿಯಂ ದೇಹದಲ್ಲಿನ ನರಮಂಡಲವನ್ನು ಸರಿಪಡಿಸುತ್ತದೆ. ಇದರೊಂದಿಗೆ ಕಲ್ಲಂಗಡಿ ಸೇವನೆಯು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
  •  ಕಲ್ಲಂಗಡಿ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ, ಇದು ವಯಾಗ್ರದಂತೆಯೇ ಪರಿಣಾಮಕಾರಿ ಎಂದು ನಂಬಲಾಗಿದೆ, ಕಲ್ಲಂಗಡಿಯಲ್ಲಿ ಸಿಟ್ರಲಿನ್ ಎಂಬ ವಸ್ತು ಇರುವುದೇ ಇದಕ್ಕೆ ಕಾರಣ. 
  • ಕಲ್ಲಂಗಡಿಯಲ್ಲಿರುವ ವಿಟಮಿನ್ ಬಿ6  ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದನ್ನು ಸೇವಿಸುವುದರಿಂದ ಬುದ್ಧಿ ಚುರುಕಾಗುತ್ತದೆ, ಬೇಸಿಗೆ ಕಾಲದಲ್ಲಿ ವಿದ್ಯಾರ್ಥಿಗಳು ಕಲ್ಲಂಗಡಿ ಹಣ್ಣನ್ನು ಮಿತವಾಗಿ ಸೇವಿಸಬೇಕು.
  •  ನಿಯಮಿತವಾಗಿ ಕಲ್ಲಂಗಡಿ ಹಣ್ಣನ್ನು ಸಮತೋಲನ ಪ್ರಮಾಣದಲ್ಲಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
  •  ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರೊಂದಿಗೆ ಹೃದಯ ಮತ್ತು ಮನಸ್ಸಿಗೆ ತಂಪು ನೀಡುತ್ತದೆ, ಪರಿಣಾಮವಾಗಿ ಇದನ್ನು ಸೇವಿಸುವ ವ್ಯಕ್ತಿಯ ಮನಸ್ಸು ಶಾಂತವಾಗಿರುತ್ತದೆ,  ಕೋಪವು ಕಡಿಮೆಯಾಗುತ್ತದೆ.

 ನಾವೆಲ್ಲರೂ ತುಂಬಾ ಉತ್ಸಾಹದಿಂದ ಕಲ್ಲಂಗಡಿ ತಿನ್ನುತ್ತೇವೆ ಆದರೆ ಅದರ ಬೀಜಗಳನ್ನು ಎಸೆಯುತ್ತೇವೆ ಆದರೆ ಕಲ್ಲಂಗಡಿ ಬೀಜಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿದೆ.  ಕಲ್ಲಂಗಡಿ ಬೀಜದ ಗುಣಗಳ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲದ ಕಾರಣ ನಾವು ಅದನ್ನು ಎಸೆಯುತ್ತೇವೆ. ಆದರೆ ಕಲ್ಲಂಗಡಿ ಬೀಜದಿಂದ ನಮ್ಮ ದೇಹ ಮತ್ತು ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

ಕಲ್ಲಂಗಡಿ ಮತ್ತು ಅದರ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು.

ಕಲ್ಲಂಗಡಿ  ಬೀಜಗಳ ಪ್ರಯೋಜನಕಾರಿ ಗುಣಗಳು (Benefits of watermelon seeds)

  •  ಕಲ್ಲಂಗಡಿ ಬೀಜಗಳಲ್ಲಿ ಕಬ್ಬಿಣ ಪೊಟ್ಯಾಶಿಯಂ ಮತ್ತು ವಿಟಮಿನ್ ಗಳು ಹೇರಳವಾಗಿ ಲಭ್ಯವಿದೆ ಇದನ್ನು ಜಗಿಯುವುದರಿಂದ ದೃಷ್ಟಿ ಚುರುಕಾಗುತ್ತದೆ, ಚರ್ಮವು ಹೊಳೆಯುತ್ತದೆ, ಕೂದಲು ದಟ್ಟವಾಗುತ್ತದೆ, ಮತ್ತು ಇಡೀ ದೇಹಕ್ಕೆ ಪ್ರಯೋಜನಕಾರಿಯಾಗಿದೆ.
  •  ಕಲ್ಲಂಗಡಿ ಬೀಜಗಳ  ಸೇವನೆಯೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಬೀಜಗಳಲ್ಲಿ ನಾರಿನಂತ ಅಂಶಗಳಿರುವುದೇ ಇದಕ್ಕೆ ಕಾರಣ. ಉರಿದ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಮಾಲೆಯಂತಹ ರೋಗಗಳನ್ನು ಕಡಿಮೆ ಮಾಡಬಹುದು. 
  •  ಕಲ್ಲಂಗಡಿಯಲ್ಲಿ ಮೆಗ್ನೀಷಿಯಂ ಕೂಡ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ, ಇದು ಹೃದಯದ ಕಾರ್ಯ ಚಟುವಟಿಕೆಯನ್ನು ಸಮತೋಲದಲ್ಲಿ ಇಡಲು ಸಹಕರಿಸುತ್ತದೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ರಕ್ಷಿಸುತ್ತದೆ.
  •  ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ ಚಹಾದಂತೆ  ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು, ಮತ್ತು ಇದು ಮೂತ್ರಪಿಂಡದ ರೋಗಗಳನ್ನು ತಡೆಯುತ್ತದೆ.
  •  ಕಲ್ಲಂಗಡಿ ಬೀಜಗಳನ್ನು ರುಬ್ಬಿ ಪೇಸ್ಟ್ ನಂತೆ ಮಾಡಿ ತಲೆಗೆ ಎಣ್ಣೆಯಂತೆ  ಉಜ್ಜಿದರೆ ದೀರ್ಘಕಾಲದ ತಲೆನೋವಿನ ಸಮಸ್ಯೆ ದೂರವಾಗುತ್ತದೆ. 
  •  ಕಲ್ಲಂಗಡಿ ಬೀಜಗಳನ್ನು ಪುಡಿ ಮಾಡಿ ನಿಯಮಿತವಾಗಿ ಸೇವಿಸುವುದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
  •   ವಾಸಿಯಾಗದ ಚರ್ಮರೋಗಗಳಿಗೆ ಕಲ್ಲಂಗಡಿ ಕಾಳುಗಳನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಹಚ್ಚಿದರೆ ಖಂಡಿತ ಪ್ರಯೋಜನವಾಗುತ್ತದೆ.

 ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದನ್ನು ಆನಂದಿಸಿ,  ಆದರೆ ಅದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಕಲ್ಲಂಗಡಿಯನ್ನು ಕತ್ತರಿಸಿ ದೀರ್ಘಕಾಲದವರೆಗೆ ಇಟ್ಟುಕೊಳ್ಳಬೇಡಿ, ಹೀಗೆ ಮಾಡುವುದರಿಂದ ಅದು ಕಲುಷಿತಗೊಳ್ಳುತ್ತದೆ. ಮತ್ತು ಅದರಲ್ಲಿರುವ ಪೌಷ್ಟಿಕಾಂಶದ ಅಂಶವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವಿಸಬಾರದು, ಎಂಬುದನ್ನು ನೆನಪಿನಲ್ಲಿಡಿ. ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತರ ಇದನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ರಾತ್ರಿಯಲ್ಲಿ ಇದನ್ನು ಸೇವಿಸುವುದನ್ನು ತಪ್ಪಿಸಿ. ಕಲ್ಲಂಗಡಿ ತಿನ್ನಲು ಉತ್ತಮ ಸಮಯ, ದಿನದ ಮಧ್ಯಾಹ್ನ ಎಂದು ಪರಿಗಣಿಸಲಾಗುತ್ತದೆ. ಕಲ್ಲಂಗಡಿ ತಿಂದ ನಂತರ ನೀರು ಕುಡಿಯಬಾರದು,  ನೀವು ಕಲ್ಲಂಗಡಿ ತಿಂದ ನಂತರ ನೀರು ಕುಡಿದರೆ ಅದು ಸರಿಯಾಗಿ ಜೀರ್ಣವಾಗಲು ಮತ್ತು ದೇಹದಲ್ಲಿ ಕರಗಲು ಸಾಧ್ಯವಾಗುವುದಿಲ್ಲ. ಮತ್ತು ಅದರ ಪ್ರಯೋಜನಗಳಿಂದ ನೀವು ವಂಚಿತರಾಗುತ್ತೀರಿ. ಒಂದೇ ಸಮಯದಲ್ಲಿ ಹೆಚ್ಚು ಕಲ್ಲಂಗಡಿ ಸೇವಿಸುವುದು ಸಹ ಹಾನಿಕಾರಕವಾಗಿದೆ ಅದಕ್ಕಾಗಿಯೇ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಿರಿ.

Leave a Comment