ಸ್ವಾತಂತ್ರ್ಯ ದಿನದ ಪ್ರಬಂಧ 2023
ಆಗಸ್ಟ್ 15 1947 ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ, ನಮ್ಮ ಭಾರತೀಯ ಸ್ವಾತಂತ್ರ ಹೋರಾಟಗಾರರು ಭಾರತ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರವನ್ನು ತಂದುಕೊಟ್ಟರು. ಭಾರತದ ಸ್ವಾತಂತ್ರ್ಯ ದೊಂದಿಗೆ ಭಾರತೀಯರು ತಮ್ಮ ಮೊದಲ ಪ್ರಧಾನಮಂತ್ರಿಯಾಗಿ ಜವಹರಲಾಲ್ ನೆಹರು ಅವರನ್ನು ಆಯ್ಕೆ ಮಾಡಿದರು, ಅವರು ರಾಷ್ಟ್ರ ರಾಜಧಾನಿ ನವ ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂದು ಪ್ರತಿಯೊಬ್ಬ ಭಾರತೀಯನು ಈ ವಿಶೇಷ ದಿನವನ್ನು ಹಬ್ಬದಂತೆ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.
ಭಾರತೀಯ ಸ್ವಾತಂತ್ರ್ಯ ದಿನಾಚರಣೆ 2023ರಂದು ಸಣ್ಣ ಮತ್ತು ದೀರ್ಘ ಪ್ರಬಂಧ( Short and Long Essay on Independence Day/15 August 2023 in Kannada)
ಸ್ವತಂತ್ರ್ಯ ದಿನದ ಪ್ರಬಂಧ -1( 250-300 ಪದಗಳು) – (77ನೇ ಸ್ವಾತಂತ್ರ್ಯ ದಿನದ ಪ್ರಬಂಧ)-( Essay on 77th Independence Day)
ಮುನ್ನುಡಿ
1947 ಆಗಸ್ಟ್ 15,ರಂದು ಭಾರತವು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು.ಇದರ ನೆನಪಿಗಾಗಿ ಸ್ವಾತಂತ್ರ್ಯ ದಿನವನ್ನು ಪ್ರತಿವರ್ಷ ಈ ದಿನದಂದು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಮಹಾನ್ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ಅವರ ನಾಯಕತ್ವದಲ್ಲಿ ಸ್ವಾತಂತ್ರವನ್ನು ಪಡೆದ ಭಾರತದ ಜನರು ಶಾಶ್ವತವಾಗಿ ಸ್ವತಂತ್ರರು.
ಸ್ವಾತಂತ್ರ್ಯ ದಿನದ ಇತಿಹಾಸ
ಆಗಸ್ಟ್ 15 1947, ಜವಹರ್ ಲಾಲ್ ನೆಹರು ಸ್ವಾತಂತ್ರದ ನಂತರ ಭಾರತದ ಮೊದಲ ಪ್ರಧಾನ ಮಂತ್ರಿಯಾದರು, ಅವರು ದೆಹಲಿಯ ಕೆಂಪು ಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ಈ ದಿನದಂದು ಧ್ವಜಾರೋಹಣ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಇತ್ಯಾದಿಗಳನ್ನು ನಡೆಸಲಾಗುತ್ತದೆ.ಇತರ ಪ್ರಧಾನ ಮಂತ್ರಿಗಳು ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.ಈ ದಿನದಂದು ಅನೇಕ ಜನರು ತಮ್ಮ ಬಟ್ಟೆ ಮನೆ ಮತ್ತು ವಾಹನಗಳ ಮೇಲೆ ಧ್ವಜಗಳನ್ನು ಹಾಕುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಸ್ವಾತಂತ್ರ್ಯ ದಿನದ ಅರ್ಥ
ಸ್ವಾತಂತ್ರ ದಿನಾಚರಣೆಯ ಅರ್ಥವೆಂದರೆ, ಔಪಚಾರಿಕವಾಗಿ ಧ್ವಜಾರೋಹಣ ಮಾಡುವುದು ಮಾತ್ರವಲ್ಲ, ಸ್ವಾತಂತ್ರದ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಹುತಾತ್ಮರ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಮತ್ತು ಅವರಿಗೆ ಗೌರವ ಸೂಚಿಸುವುದು.
ತೀರ್ಮಾನ
ಭಾರತವು ವಿವಿಧ ಧರ್ಮ,ಜಾತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಕೋಟ್ಯಾಂತರ ಜನರು ಒಟ್ಟಿಗೆ ವಾಸಿಸುವ ದೇಶವಾಗಿದೆ, ಮತ್ತು ಈ ಸ್ವಾತಂತ್ರ್ಯ ದಿನಾಚರಣೆಯ ಹಬ್ಬವನ್ನು ಪೂರ್ಣ ಸಂತೋಷದಿಂದ ಆಚರಿಸುವ ದೇಶವಾಗಿದೆ. ಈ ದಿನದಂದು ಭಾರತೀಯರಾಗಿ ನಾವು ಹೆಮ್ಮೆ ಪಡಬೇಕು ಮತ್ತು ಯಾವುದೇ ರೀತಿಯ ಆಕ್ರಮಣ ಅಥವಾ ಅವಮಾನದಿಂದ ನಮ್ಮ ತಾಯ್ನಾಡನ್ನು ರಕ್ಷಿಸಲು ನಾವು ಸದಾ ಸಿದ್ಧವಾಗಿರುತ್ತೇವೆ ಮತ್ತು ದೇಶಭಕ್ತರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು.
ಸ್ವಾತಂತ್ರ್ಯ ದಿನದ ಪ್ರಬಂಧ -2 ( 400 ಪದಗಳು) – Essay on 15th August
1947ರ ಆಗಸ್ಟ್ 15 ರಂದು ಭಾರತವು ಬ್ರಿಟೀಷರ ಆಳ್ವಿಕೆ ಇಂದ ಸ್ವಾತಂತ್ರ ಪಡೆದುಕೊಂಡಿತು ಆದ್ದರಿಂದ ಈ ದಿನವು ಎಲ್ಲಾ ಭಾರತೀಯರಿಗೆ ಪ್ರಮುಖ ದಿನವಾಗಿದೆ, ಪ್ರತಿ ವರ್ಷ ಈದಿನವನ್ನು ಸ್ವಾತಂತ್ರ ದಿನವಾಗಿ ಸಂಭ್ರಮ ಮತ್ತು ಸಡಗರ ದಿಂದ ಆಚರಿಸಲಾಗುತ್ತದೆ. ಗಾಂಧಿ, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಸಾವಿರಾರು, ದೇಶಭಕ್ತರ ಬಲಿದಾನದ ನಂತರ ಭಾರತವು ಸ್ವತಂತ್ರವಾಯಿತು. ಇಂದು ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಪರಿಗಣಿಸಲ್ಪಟ್ಟಿದೆ.
ಎಲ್ಲಾ ಭಾರತೀಯರು ಈ ಸ್ವಾತಂತ್ರೋತ್ಸವವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ, ಅಂದರೆ ಆಚರಣೆಯ ಸ್ಥಳವನ್ನು ಅಲಂಕರಿಸುವುದು, ಚಲನಚಿತ್ರಗಳನ್ನು ನೋಡುವುದು, ತಮ್ಮ ಮನೆಗಳಲ್ಲಿ, ರಾಷ್ಟ್ರಧ್ವಜವನ್ನು ಹಾರಿಸುವುದು, ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡುವುದು ಮತ್ತು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರೀಯ ಹೆಮ್ಮೆಯ ಈ ಹಬ್ಬವನ್ನು ಭಾರತ ಸರ್ಕಾರವು ಅತ್ಯಂತ ಸಡಗರ ದಿಂದ ಆಚರಿಸುತ್ತದೆ. ಈ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ಭಾರತದ ಪ್ರಸ್ತುತ ಪ್ರಧಾನ ಮಂತ್ರಿಯಿಂದ ದ್ವಜಾರೋಹಣ ಮಾಡಲಾಗುತ್ತದೆ. ಮತ್ತು ಅದರ ನಂತರ ಭಾರತೀಯ ಸೇನಾ ಪಡೆಗಳಿಂದ ಪರೇಡ್, ವಿವಿಧ ರಾಜ್ಯಗಳ ಟ್ಯಾಬ್ಲೆಕ್ಸ್ ಪ್ರಸ್ತುತ ಮತ್ತು ರಾಷ್ಟ್ರಗೀತೆಯ ಟ್ಯೂನ್ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಆಚರಣೆಯ ವಿಶೇಷವೆಂದರೆ ಇಡೀ ವಾತಾವರಣವು ದೇಶ ಪ್ರೇಮದಿಂದ ತುಂಬಿರುತ್ತದೆ.
ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಮುಖ್ಯ ಅತಿಥಿಗಳಾಗಿ ಅದೇ ಉತ್ಸಾಹದಿಂದ ರಾಜ್ಯಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕೆಲವರು ಬೆಳಗ್ಗೆಯೇ ತಯಾರಾಗಿ ಪ್ರಧಾನಿ ಭಾಷಣಕ್ಕೆ ಕಾಯುತ್ತಾರೆ. ಭಾರತದ ಸ್ವಾತಂತ್ರ್ಯದ ಇತಿಹಾಸದಿಂದ ಪ್ರಭಾವಿತರಾದ ಕೆಲವರು ಆಗಸ್ಟ್ 15 ರಂದು ದೇಶಭಕ್ತಿಯ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಮಹಾತ್ಮ ಗಾಂಧೀಜಿಯವರ ಅಹಿಂಸ ಚಳುವಳಿಯಿಂದಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾಕಷ್ಟು ಬಲ ಮತ್ತುಆತ್ಮವಿಶ್ವಾಸ ದೊರೆಯಿತು, 200 ವರ್ಷಗಳ ಸುದೀರ್ಘ ಹೋರಾಟದ ನಂತರ ಬ್ರಿಟೀಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯಕ್ಕಾಗಿ ನಡೆದ ಉಗ್ರ ಹೋರಾಟವು ಧರ್ಮ, ವರ್ಗ, ಜಾತಿ, ಸಂಸ್ಕೃತಿ ಅಥವಾ ಸಂಪ್ರದಾಯವನ್ನು ಲೆಕ್ಕಿಸದೆ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಪ್ರತಿಯೊಬ್ಬ ಭಾರತೀಯರನ್ನು ಒಂದುಗೂಡಿಸುವ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು. ಅರುಣ ಆಸಿಫ್ ಅಲಿ, ಅನಿಬೆಸೆಂಟ್, ಕಮಲಾ ನೆಹರು, ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರಂತಹ ಮಹಿಳೆಯರು ಸಹ ಅಡುಗೆ ಮನೆಯನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ವಾತಂತ್ರ್ಯ ದಿನದ ಪ್ರಬಂಧ- 3 ( 500 ಪದಗಳು) – ಸ್ವಾತಂತ್ರ್ಯ ದಿನದ ಇತಿಹಾಸ( History of Independence day)
ಮುನ್ನುಡಿ
1947 ಆಗಸ್ಟ್ 15 ನಮ್ಮ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ದಿನಾಂಕ. ಅಂತಹ ಒಂದು ದಿನ ಭಾರತ ಸ್ವತಂತ್ರವಾದಾಗ ಬ್ರಿಟಿಷರು ಭಾರತವನ್ನು ತೊರೆಯಬೇಕಾಯಿತು. ಇನ್ನೂರು ವರ್ಷಗಳ ಗುಲಾಮಗಿರಿ ಯಿಂದ ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡೆವು ಆದ್ದರಿಂದ ಈ ದಿನದ ಆಚರಣೆಯನ್ನು ಅಷ್ಟೇ ವಿಜೃಂಭಣೆಯಿಂದ ಮಾಡಲಾಗುತ್ತದೆ. ಮತ್ತು ಬಹುಷ್ಯ ಇಂದಿಗೂ ನಾವು ಅದನ್ನು ಅದೇ ಉತ್ಸಾಹದಿಂದ ಆಚರಿಸಲು ಇದು ಮುಖ್ಯ ಕಾರಣವಾಗಿದೆ.
ಸ್ವಾತಂತ್ರ್ಯ ದಿನದ ಸುವರ್ಣ ಇತಿಹಾಸ (History of Indian Independence Day)
ಬ್ರಿಟೀಷರು ಭಾರತವನ್ನು ವಶ ಪಡಿಸಿಕೊಂಡ ನಂತರ ನಾವು ನಮ್ಮ ದೇಶದಲ್ಲಿ ಗುಲಾಮರಾಗಿದ್ದೇವು ಮೊದಲು ಹಣ, ಧಾನ್ಯ, ಭೂಮಿ, ಹೀಗೆ ಎಲ್ಲವೂ ನಮ್ಮದಾಗಿತ್ತು ಆದರೆ ಬ್ರಿಟಿಷರು ಬಂದ ನಂತರ ನಮಗೆ ಯಾವುದರ ಮೇಲು ಹಕ್ಕಿಲ್ಲದಂತೆ ಆಯಿತು ಅವರು ಅನಿಯಂತ್ರಿತ ಸುಂಕವನ್ನು ಸಂಗ್ರಹಿಸುತ್ತಿದ್ದರು ಮತ್ತು ಇಂಡಿಗೋ ಮತ್ತು ಇತರೆ ವಾಣಿಜ್ಯ ಬೆಳೆಗಳಂತಹ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದರು ಇದು ವಿಶೇಷವಾಗಿ ಬಿಹಾರದ ಚಂಪಾರನ್ ನಲ್ಲಿ ಕಂಡುಬಂದಿತು, ನಾವು ಅವರನ್ನು ವಿರೋಧಿಸಿದಾಗಲೆಲ್ಲ ಜಲಿಯನ್ ವಾಲಾಬಾಗ್ ಹತ್ಯಾಕಂಡ ದಂತಹ ಅದಕ್ಕಿಂತ ದೊಡ್ಡ ಪ್ರತಿರೋಧವನ್ನು ನಾವು ಪಡೆಯುತ್ತಿದ್ದೆವು.
ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಸುಲಿಗೆಯ ಕಥೆಗಳಿಗೆ ಕೊರತೆ ಇರಲಿಲ್ಲ, ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯಶಾಲಿ ಚಳುವಳಿಗಳಿಗೂ ಕೊರತೆ ಇರಲಿಲ್ಲ, ಅವರ ಅವಿರತ ಪ್ರಯತ್ನದ ಫಲವೇ ಇಂದು ನಮಗೆ ಇತಿಹಾಸವಾಗಿದೆ. ಬ್ರಿಟಿಷರು ನಮ್ಮನ್ನು ಕೆಟ್ಟದಾಗಿ ಲೂಟಿ ಮಾಡಿದರು ಅದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಇಂದು ಅವರ ರಾಣಿಯ ಕಿರೀಟವನ್ನು ಅಲಂಕರಿಸುತ್ತಿರುವ ಕೊಹಿನೂರ್ ವಜ್ರ. ಅಂದರೆ ನಮ್ಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯು ಇನ್ನೂ ಅತ್ಯಂತ ಉದಾತ್ತವಾಗಿದೆ ಮತ್ತು ಬಹುಷ್ಯ ನಮ್ಮ ದೇಶದಲ್ಲಿ ಅತಿಥಿಗಳನ್ನು ದೇವರಂತೆ ಪೂಜಿಸಲಾಗುತ್ತದೆ ಮತ್ತು ಬ್ರಿಟಿಷರು ಭಾರತಕ್ಕೆ ಬಂದಾಗಲೆಲ್ಲ ನಾವು ಅವರನ್ನು ಸ್ವಾಗತಿಸುತ್ತೇವೆ ಆದರೆ ಇತಿಹಾಸವನ್ನು ಎಂದು ಬರೆಯುವುದಿಲ್ಲ ಅದನ್ನು ನೆನಪಿಸಿಕೊಳ್ಳುತ್ತೇವೆ.
ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ( Contribution of Freedom Fighters)
ಗಾಂಧೀಜಿಯವರಂತಹ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದರು ಮತ್ತು ಅತ್ಯಂತ ಜನಪ್ರಿಯರಾಗಿದ್ದರು. ಸತ್ಯ ಅಹಿಂಸೆಯ ಪಾಠವನ್ನು ಎಲ್ಲರಿಗೂ ಹೇಳಿಕೊಟ್ಟ ಅವರು ಅಹಿಂಸೆಯೇ ದೊಡ್ಡ ಅಸ್ತ್ರವಾಗಿ ಹೊರಹೊಮ್ಮಿ ದುರ್ಬಲರ ಬದುಕಿನಲ್ಲೂ ಬರವಸೆಯ ದೀಪವನ್ನು ಬೆಳಗಿಸಿದರು. ಗಾಂಧೀಜಿಯವರು ದೇಶದಿಂದ ಅನೇಕ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಶ್ರಮಿಸಿದರು ಮತ್ತು ಎಲ್ಲಾ ವರ್ಗಗಳನ್ನು ಒಟ್ಟುಗೂಡಿಸಿದ್ದರು, ಇದರಿಂದಾಗಿ ಈ ಹೋರಾಟ ಸುಲಭವಾಯಿತು.ಅವರು ಜನರಿಗೆ ಪ್ರೀತಿ ಪಾತ್ರರಾಗಿದ್ದರು ಮತ್ತು ಜನರು ಅವರನ್ನು ಬಾಪು ಎಂದು ಕರೆಯುತ್ತಿದ್ದರು.
ಸೈಮನ್ ಆಯೋಗದ ವಿರುದ್ಧ ಎಲ್ಲರೂ ಶಾಂತಿಯುತವಾಗಿ ಪ್ರತಿಪಡಿಸುತ್ತಿದ್ದರು, ಆದರೆ ಅಷ್ಟರಲ್ಲಿ ಬ್ರಿಟಿಷರು ಲಾಟಿ ಚಾರ್ಜ್ ಮಾಡಿದರು ಮತ್ತು ಲಾಲಾ ಲಜಪತ್ ರಾಯ್ ಅವರು ಸಾವನ್ನಪ್ಪಿದ್ದರು. ಇದರಿಂದ ನೊಂದ ಭಗತ್ ಸಿಂಗ್,ಸುಖದೇವ್, ರಾಜಗುರು, ಬ್ರಿಟಿಷ್ ಸೌಡರ್ಸ್ಗಳನ್ನು ಕೊಂದರು ಮತ್ತು ಪ್ರತಿಯಾಗಿ ಅವರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಅವರು ನಗುತ್ತಾ ನೇಣುಗಂಬ ಏರಿದರು .
ಈ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಗಣೇಶ್ ಶಂಕರ್ ವಿದ್ಯಾರ್ಥಿ, ರಾಜೇಂದ್ರ ಪ್ರಸಾದ್, ಮೌಲಾನ ಅಬ್ದುಲ್ ಕಲಾಂ ಆಜಾದ್ ಮುಂತಾದ ನೂರಾರು ಹೆಸರುಗಳಿದ್ದು ಅವರ ಕೊಡುಗೆ ಅನುಪಮವಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಹಬ್ಬ( Independence Day Festival )
ಸ್ವತಂತ್ರ ಭಾರತದಲ್ಲಿ ಈ ಹಬ್ಬವನ್ನು ಆಚರಿಸುವ ವಿಭಿನ್ನ ವಿಧಾನಗಳಿವೆ ಒಂದು ವಾರ ಮುಂಚಿತವಾಗಿ, ಮಾರುಕಟ್ಟೆಗಳು ಕಂಗೊಳಿಸುತ್ತವೆ ಎಲ್ಲೆಡೆ ಮೂರು ಬಣ್ಣದ ರಂಗೋಲಿ ಗಳನ್ನು ಮಾರಾಟ ಮಾಡಲಾಗುತ್ತದೆ, ಮತ್ತು ಎಲ್ಲೆಡೆ ಮೂರು ಬಣ್ಣದ ದೀಪಗಳು. ಇಡೀ ಜಗತ್ತು ಈ ಬಣ್ಣಗಳಲ್ಲಿ ಮುಳುಗಿದಂತೆ ಗೋಚರಿಸುತ್ತದೆ. ಎಲ್ಲೆಡೆ ಸಂತೋಷದ ವಾತಾವರಣವಿರುತ್ತದೆ, ಮತ್ತು ಎಲ್ಲೆಡೆ ದೇಶಭಕ್ತಿಯ ಗೀತೆಗಳು ಮೊಳಗುತ್ತವೆ. ಇಡೀ ದೇಶವು ಈ ಹಬ್ಬವನ್ನು ಹಾಡುತ್ತಾ, ಕುಣಿಯುತ್ತ ಆಚರಿಸುತ್ತದೆ. ಜನರು ಸ್ವತಃ ನೃತ್ಯ ಮಾಡುತ್ತಾರೆ ಮತ್ತು ಇತರರನ್ನು ನೃತ್ಯ ಮಾಡಲು ಒತ್ತಾಯಿಸುತ್ತಾರೆ. ಇಡೀ ದೇಶ ಒಗ್ಗಟ್ಟಾಗುತ್ತದೆ ಮತ್ತು ಅದು ಕೂಡ ಯಾವುದೇ ಧರ್ಮ, ಜಾತಿ ಮತ್ತು ಲಿಂಗ ಭೇದವಿಲ್ಲದ ರೀತಿಯಲ್ಲಿ.
ತೀರ್ಮಾನ
ಸ್ವಾತಂತ್ರ ದಿನಾಚರಣೆ ನಮ್ಮ ರಾಷ್ಟ್ರೀಯ ಹಬ್ಬವಾಗಿರುವುದರಿಂದ ಈ ದಿನ ರಾಷ್ಟ್ರೀಯ ರಜೆ ಘೋಷಿಸಲಾಗುತ್ತದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಆದರೆ ಈ ದಿನವನ್ನು ಆಚರಿಸಲು ಜನರು ಉತ್ಸಾಹದಿಂದ ಒಗ್ಗೂಡುತ್ತಾರೆ, ಮತ್ತು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಗುತ್ತದೆ, ತ್ರಿವರ್ಣ ಧ್ವಜವನ್ನು ಆರಿಸಲಾಗುತ್ತದೆ, ಮತ್ತು ಸಿಹಿ ಹಂಚಲಾಗುತ್ತದೆ.
ಸ್ವಾತಂತ್ರ್ಯ ದಿನದ ಪ್ರಬಂಧ- 4 (600 ಪದಗಳು )- ( Important Timelines of Independence Day )
ಮುನ್ನುಡಿ
ಭಾರತದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದು ನಮ್ಮ ಸ್ವಾತಂತ್ರ್ಯ ದಿನ, ಭಾರತ ಸ್ವತಂತ್ರವಾದ ದಿನ. ಬ್ರಿಟಿಷರು ಭಾರತವನ್ನು ತೊರೆದ ದಿನ. ಈ ಸ್ವಾತಂತ್ರ್ಯ ದಿನ ಪ್ರತಿಯೊಬ್ಬ ಭಾರತೀಯರಿಗೂ ಅಗತ್ಯವಾಗಿತ್ತು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವು ಹಲವು ವಿಧಗಳಲ್ಲಿ ವಿಭಿನ್ನವಾಗಿತ್ತು, ಸ್ವಾತಂತ್ರ ಬಂದ ನಂತರ ನಾವು ದೈಹಿಕವಾಗಿ ಅಥವಾ ಮಾನಸಿಕವಾಗಿ ಗುಲಾಮರಾಗಿರಲಿಲ್ಲ ಮುಕ್ತವಾಗಿ ಮಾತನಾಡಲು ಓದಲು ಬರೆಯಲು ಮತ್ತು ತಿರುಗಾಡಲು ನಮಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾತಂತ್ರ್ಯ ಸಿಕ್ಕಿತು.
ಮಹತ್ವದ ಐತಿಹಾಸಿಕ ಕ್ಷಣ
ಭಾರತಕ್ಕೆ ಬ್ರಿಟಿಷರ ಆಗಮನ( British arrival in India )
ಭಾರತವನ್ನು ಚಿನ್ನದ ಹಕ್ಕಿ ಎಂದು ಕರೆಯುತ್ತಿದ್ದ ಆ ದಿನಗಳು. 17ನೇ ಶತಮಾನದಲ್ಲಿ ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು, ಆ ಸಮಯದಲ್ಲಿ ಭಾರತವನ್ನು ಮೊಘಲರು ಆಳುತ್ತಿದ್ದರು. ಕ್ರಮೇಣ ಬ್ರಿಟಿಷರು ವ್ಯಾಪಾರದ ನೆಪದಲ್ಲಿ ತಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಂಡರು ಮತ್ತು ಯುದ್ಧದಲ್ಲಿ ಅನೇಕ ರಾಜರನ್ನು ಮೋಸದಿಂದ ಸೋಲಿಸಿದರು ಮತ್ತು ಅವರ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. 18ನೇ ಶತಮಾನದ ವೇಳೆಗೆ ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವ ಮೂಲಕ ಅದು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡಿತು.
ಗುಲಾಮಗಿರಿಯಲ್ಲಿ ಭಾರತ(India as a Slave)
ನಾವು ಗುಲಾಮರಾಗಿದ್ದೇವೆ ಎಂದು ನಾವು ಅರಿತುಕೊಳ್ಳುವ ವೇಳೆಗೆ ನಾವು ನೇರವಾಗಿ ಬ್ರಿಟಿಷ್ ಆಡಳಿತದ ಅಡಿಯಲ್ಲಿದ್ದೆವು. ಆರಂಭದಲ್ಲಿ ಬ್ರಿಟಿಷರು ನಮಗೆ ಶಿಕ್ಷಣ ನೀಡುವ ಮೂಲಕ ಅಥವಾ ನಮ್ಮ ಬೆಳವಣಿಗೆಯನ್ನು ಪ್ರಶಂಸಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರಲು ಪ್ರಾರಂಭಿಸಿದರು, ನಂತರ ನಿಧಾನವಾಗಿ ಅವರ ನಡವಳಿಕೆಯಲ್ಲಿ ತೋರಿಸತೊಡಗಿದರು ಮತ್ತು ಅವರು ನಮ್ಮನ್ನು ಆಳಲು ಪ್ರಾರಂಭಿಸಿದರು.
ಬ್ರಿಟಿಷರು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಎಲ್ಲಾ ರೀತಿಯಲ್ಲೂ ಶೋಷಣೆ ಮಾಡಿದರು. ಈ ಅವಧಿಯಲ್ಲಿ ಅನೇಕ ಯುದ್ಧಗಳು ಸಹ ನಡೆದವು. ಅದರಲ್ಲಿ ಪ್ರಮುಖವಾದದ್ದು ಎರಡನೆಯ ಮಹಾಯುದ್ಧವಾಗಿದೆ, ಇದಕ್ಕಾಗಿ ಭಾರತೀಯರನ್ನು ಬಲವಂತವಾಗಿ ಸೈನ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳಲಾಯಿತು. ಭಾರತೀಯರಿಗೆ ನಮ್ಮ ದೇಶದಲ್ಲಿ ಅಸ್ತಿತ್ವವೇ ಇರಲಿಲ್ಲ ಬ್ರಿಟಿಷರು ಜಲಿಯನ್ ವಾಲಾಬಾಗ್ ನಂತಹ ಅತ್ಯಾಕಾಂಡಗಳನ್ನು ನಡೆಸಿದರು ಮತ್ತು ಭಾರತೀಯರು ಅವರ ಗುಲಾಮರಾಗಿ ಉಳಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪನೆ(National Congress Party Founded)
ಈ ಹೋರಾಟದ ವಾತಾವರಣದ ಮಧ್ಯೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು 64 ವ್ಯಕ್ತಿಗಳು ಒಟ್ಟಾಗಿ ಸ್ಥಾಪಿಸಿದರು ಇದರಲ್ಲಿ ದಾದಾಬಾಯಿ ನವರೋಜಿ ಮತ್ತು AO ಹ್ಯೂಮ್
ಪ್ರಮುಖ ಪಾತ್ರ ವಹಿಸಿದರು ಮತ್ತು ಕ್ರಮೇಣ ಕ್ರಾಂತಿಕಾರಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾರಂಭಿಸಿದರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದಲ್ಲಿ ಭಾಗವಹಿಸಲು ಪ್ರಾರಂಭಿಸಿದರು.
ಈ ಅನುಕ್ರಮದಲ್ಲಿ ಇಂಡಿಯನ್ ಮುಸ್ಲಿಂ ಲೀಗ್ ಕೂಡ ಸ್ಥಾಪನೆಯಾಯಿತು. ಇಂತಹ ಹಲವು ಪಕ್ಷಗಳು ಮುಂದೆ ಬಂದಿದ್ದು ಅವರ ಅಪಾರ ಕೊಡುಗೆಯಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದಕ್ಕಾಗಿ ಅನೇಕ ವೀರರನ್ನು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಹಲವರನ್ನು ಗಲ್ಲಿಗೇರಿಸಲಾಯಿತು ಅನೇಕ ತಾಯಂದಿರು ಮಕ್ಕಳನ್ನು ಕಳೆದುಕೊಂಡರು. ಹಲವು ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ವಿಧವೆಯರಾದರು.
ಕೋಮು ಗಲಭೆಗಳು ಮತ್ತು ಭಾರತದ ವಿಭಜನೆ(Communal Riots and Partition of India)
ಈ ರೀತಿಯಾಗಿ ಬ್ರಿಟಿಷರು ದೇಶವನ್ನು ತೊರೆದು ಹೋದರು ಮತ್ತು ನಾವು ಸ್ವತಂತ್ರರಾದೆವು, ಆದರೆ ಇನ್ನೊಂದು ಕೋಮು ದಾಳಿಯ ಯುದ್ಧವು ನಮಗಾಗಿ ಕಾದಿತ್ತು. ಸ್ವಾತಂತ್ರ್ಯ ಬಂದ ಕೂಡಲೇ ಕೋಮುಗಲಭೆ, ಭುಗಿಲೆದ್ದಿತು, ನೆಹರು ಮತ್ತು ಜಿನ್ನಾ ಇಬ್ಬರು ಪ್ರಧಾನಿಯಾಗಬೇಕಿತ್ತು, ಇದರ ಪರಿಣಾಮವಾಗಿ ದೇಶ ವಿಭಜನೆಯಾಯಿತು.
ಭಾರತ ಮತ್ತು ಪಾಕಿಸ್ತಾನದ ಹೆಸರುಗಳಿಂದ ಹಿಂದು ಮತ್ತು ಮುಸ್ಲಿಂ ರಾಷ್ಟ್ರವನ್ನು ಸ್ಥಾಪಿಸಲಾಯಿತು. ಗಾಂಧೀಜಿಯವರ ಉಪಸ್ಥಿತಿಯಿಂದಾಗಿ ಈ ದಾಳಿಗಳು ಕಡಿಮೆಯಾದವು, ಆದರೂ ಸಾವಿನ ಸಂಖ್ಯೆ ಲಕ್ಷಗಳಲ್ಲಿತ್ತು. ಒಂದೆಡೆ ಸ್ವಾತಂತ್ರ್ಯದ ವಾತಾವರಣವಿದ್ದರೆ ಇನ್ನೊಂದೆಡೆ ನರಮೇದ ದೃಶ್ಯ, ದೇಶವನ್ನು ವಿಭಜಿಸಲಾಯಿತು ಮತ್ತು ಆಗಸ್ಟ್ 14 ಅನ್ನು ಪಾಕಿಸ್ತಾನದ ಸ್ವಾತಂತ್ರ್ಯ ದಿನ ಮತ್ತು 15 ಆಗಸ್ಟ್ ಅನ್ನು ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಿಸಲಾಯಿತು.
ಮುಕ್ತ ಭಾರತ ಮತ್ತು ಸ್ವಾತಂತ್ರ್ಯ ದಿನ(Free India and Independence Day)
ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರ ಪ್ರತಿ ವರ್ಷ ನಾವು ನಮ್ಮ ಅಮರ ವೀರ ಸೈನಿಕರನ್ನು ಮತ್ತು ಗಲಭೆಯಲ್ಲಿ ಸತ್ತ ಅಮಾಯಕ ರನ್ನು ಸ್ಮರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಸೇರಿ ಈ ದಿನವನ್ನು ಆಚರಿಸಲಾಗುತ್ತದೆ.
ಇಡೀ ದೇಶ ಒಗ್ಗೂಡಿದಾಗ ಸ್ವಾತಂತ್ರದ ಕನಸು ನನಸಾಯಿತು. ಹೌದು ಭಗತ್ ಸಿಂಗ್, ಸುಖದೇವ್ ಗಲ್ಲಿಗೇರಿದ ರಾಜ್ ಗುರು, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್ ಮುಂತಾದ ಕೆಲವು ಪ್ರಮುಖ ದೇಶಭಕ್ತರನ್ನು ನಾವು ಎಂದಿಗೂ ಮರೆಯಲಾಗದು. ಅನ್ನಿ ಬೆಸೆಂಟ್ ಸರೋಜಿನಿ ನಾಯ್ಡು ಮತ್ತು ಇತರ ಅನೇಕ ಮಹಿಳೆಯರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಹೊಸ ಯುಗದಲ್ಲಿ ಸ್ವಾತಂತ್ರ್ಯ ದಿನದ ಅರ್ಥ(Meaning of Independence Day in New Era)
ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳನ್ನು ಬಹಳ ಸಂಭ್ರಮದಿಂದ ಮಾಡಲಾಗುತ್ತದೆ, ಪ್ರತಿ ವರ್ಷ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಅದರ ನಂತರ ಕೆಲವು ದೇಶಭಕ್ತಿಯ ಕಾರ್ಯಕ್ರಮಗಳನ್ನು ರಾಷ್ಟ್ರಗೀತೆ ಮತ್ತು ಅವರ ಭಾಷಣದೊಂದಿಗೆ ಪ್ರಸ್ತುತ ಪಡಿಸಲಾಗುತ್ತದೆ, ಅದನ್ನು ನಾವು ದೆಹಲಿಗೆ ಹೋಗಿ ನೋಡಬಹುದು ಅಥವಾ ನೇರ ಪ್ರಸಾರದಿಂದ ಮನೆಯಲ್ಲಿ ಕುಳಿತು ನೋಡಿ ಆನಂದಿಸಬಹುದು.
ಪ್ರತಿವರ್ಷ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಬೇರೆ ದೇಶದಿಂದ ಕರೆಯುತ್ತಾರೆ. ಸ್ವಾತಂತ್ರ್ಯ ದಿನವೂ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗುತ್ತದೆ. ಇದು ಇಡೀ ದೇಶವು ಒಗ್ಗಟ್ಟಿನಿಂದ ಆಚರಿಸುವಂತಹ ಹಬ್ಬವಾಗಿದೆ ಆದರೆ ಪ್ರತಿಯೊಬ್ಬರು ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಕೆಲವರು ಈ ದಿನವನ್ನು ಹೊಸ ಬಟ್ಟೆ ಧರಿಸಿ ಆಚರಿಸುತ್ತಾರೆ, ಮತ್ತು ಕೆಲವರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಆಚರಿಸುತ್ತಾರೆ.
ತೀರ್ಮಾನ
ಅಮರ ವೀರರ ತ್ಯಾಗ ಬಲಿದಾನದ ಜೊತೆಗೆ ಇತಿಹಾಸವನ್ನು ಮರೆಯಬಾರದು, ವ್ಯಾಪಾರದ ನೆಪದಲ್ಲಿ ಯಾರಿಗೂ ಮತ್ತೆ ಆಡಳಿತ ನಡೆಸಲು ಅವಕಾಶ ನೀಡಬಾರದು ಮತ್ತು ನಮ್ಮ ಭವ್ಯ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದು ಈ ಹಬ್ಬವು ನೆನಪಿಸುತ್ತದೆ. ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿಯೊಬ್ಬರಿಗೂ ವಿಭಿನ್ನ ವಿಧಾನಗಳಿದ್ದರೂ ಉದ್ದೇಶ ಒಂದೇ ಆಗಿರುತ್ತದೆ. ಎಲ್ಲರೂ ದೇಶಕ್ಕಾಗಿ ಒಂದು ದಿನ ಒಟ್ಟಿಗೆ ಸೇರುತ್ತಾರೆ, ರುಚಿಕರವಾದ ಭಕ್ಷಗಳನ್ನು ತಿನ್ನುತ್ತಾರೆ ಮತ್ತು ಶುಭಾಶಯ ಕೋರುತ್ತಾ ಸ್ನೇಹಿತರನ್ನು ಅಭಿನಂದಿಸುತ್ತಾರೆ.
ಸ್ವಾತಂತ್ರ್ಯ ದಿನದ ಪ್ರಬಂಧ- 5 (1000 ಪದಗಳಲ್ಲಿ)-ಗುಲಾಮಗಿರಿಯಿಂದ ಸ್ವಾತಂತ್ರ್ಯಕ್ಕೆ. ( Essay on 15th august/Independence Day from Slavery to Freedom)
ಮುನ್ನುಡಿ
ಆಗಸ್ಟ್ 15 ನಮ್ಮ ಭಾರತೀಯ ಪ್ರಜಾಪ್ರಭುತ್ವ ಮತ್ತು ಭಾರತೀಯರಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನಾವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡೆವು, ಸುಮಾರು 200 ವರ್ಷಗಳ ನಂತರ ನಮ್ಮ ದೇಶವು ಆಗಸ್ಟ್ 15 1947 ರಂದು ಬ್ರಿಟಿಷರ ದೌರ್ಜನ್ಯ ಮತ್ತು ಗುಲಾಮಗಿರಿ ಯಿಂದ ಸಂಪೂರ್ಣವಾಗಿ ಮುಕ್ತವಾಯಿತು. ಇದು ಭಾರತೀಯರಿಗೆ ಅತ್ಯಂತ ವಿಶೇಷ ಮತ್ತು ಸುವರ್ಣ ದಿನವಾಗಿದೆ, ಮತ್ತು ನಾವೆಲ್ಲರೂ ಒಟ್ಟಾಗಿ ಈ ಸ್ವಾತಂತ್ರ್ಯ ದಿನವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ. ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಪೂರ್ಣಗೊಂಡಿವೆ, ಆದರೆ ಇಂದಿಗೂ ನಮ್ಮ ಕಣ್ಣುಗಳು ಈ ಸ್ವಾತಂತ್ರದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತವೆ.
ಭಾರತೀಯ ಸ್ವಾತಂತ್ರ್ಯ ದಿನದ ಇತಿಹಾಸ(Indian History of Freedom)
ಭಾರತಕ್ಕೆ ಬ್ರಿಟಿಷರ ಆಗಮನ( Arrival of British to India)
ಸುಮಾರು 400 ವರ್ಷಗಳ ಹಿಂದೆ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ವ್ಯಾಪಾರ ಮಾಡುವ ಗುರಿಯೊಂದಿಗೆ ಭಾರತಕ್ಕೆ ಬಂದಿತು. ಆ ದಿನಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತದ ಭಾಗವಾಗಿತ್ತು. ಬ್ರಿಟಿಷರು ಇಲ್ಲಿ ತಮ್ಮ ವ್ಯವಹಾರದ ಜೊತೆಗೆ ಜನರ ಬಡತನ ಅಸಹಾಯಕತೆ ಮತ್ತು ದೌರ್ಬಲ್ಯಗಳನ್ನು ಗಮನಿಸಲು ಪ್ರಾರಂಭಿಸಿದರು ಮತ್ತು ಅವರಿಂದ ಬಲವಂತದ ಲಾಭವನ್ನು ಪಡೆಯಲು ಪ್ರಾರಂಭಿಸಿದರು.
ಬ್ರಿಟಿಷರು ಕ್ರಮೇಣ ಭಾರತೀಯರ ಅಸಹಾಯಕತೆಯ ಲಾಭವನ್ನು ಪಡೆಯಲು ಪ್ರಾರಂಭಿಸಿದರು ಮತ್ತು ಅವರನ್ನು ಗುಲಾಮರನ್ನಾಗಿ ಮಾಡುವ ಮೂಲಕ ಅವರನ್ನು ಹಿಂಸಿಸಲು ಪ್ರಾರಂಭಿಸಿದರು ಮತ್ತು ಮುಖ್ಯವಾಗಿ ಅವರು ಬಡವರು ಮತ್ತು ಅಸಹಾಯಕರನ್ನು ತಮ್ಮ ಸಾಲದ ಸುಳಿಯಲ್ಲಿ ಸಿಲುಕಿಸಿ ನಿಗ್ರಹಿಸುತ್ತಿದ್ದರು. ಸಾಲ ಮರುಪಾವತಿಸದೆ ಇದ್ದವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡು ಮನಬಂದಂತೆ ಕೆಲಸ ಮಾಡಿಸಿ ಚಿತ್ರಹಿಂಸೆ ನೀಡತೊಡಗಿದರು. ಒಂದೊಂದಾಗಿ ರಾಜ್ಯಗಳನ್ನು ಮತ್ತು ರಾಜರನ್ನು ಅದೀನಗೊಳಿಸುತ್ತಾ ಹೋದರು ಮತ್ತು ಬಹುತೇಕ ಇಡೀ ಭಾರತದ ಮೇಲೆ ಹಿಡಿತ ಸಾಧಿಸಿದರು.
ಭಾರತೀಯರ ಮೇಲಿನ ದೌರ್ಜನ್ಯಗಳು(Atrocities on Indians)
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರು ಅನಿಯಂತ್ರಿತ ತೆರಿಗೆಗಳನ್ನು ಸಂಗ್ರಹಿಸುವುದು ಅವರ ಕೃಷಿ ಭೂಮಿ ಮತ್ತು ಧಾನ್ಯಗಳನ್ನು ಸ್ವಾಧೀನ ಪಡಿಸಿಕೊಳ್ಳುವುದು ಮುಂತಾದ ರೀತಿಯಲ್ಲಿ ಜನರನ್ನು ಹಿಂಸಿಸಲು ಪ್ರಾರಂಭಿಸಿದರು. ಇದರಿಂದ ಇಲ್ಲಿನ ಜನರು ಸಾಕಷ್ಟು ದೌರ್ಜನ್ಯಗಳನ್ನು ಅನುಭವಿಸಬೇಕಾಯಿತು. ಈ ದುಷ್ಕೃತ್ಯವನ್ನು ವಿರೋಧಿಸಿದಾಗ ಜಲಿಯನ್ ವಾಲಾಬಾಗ್ ಘಟನೆಯಂತೆ ಗುಂಡು ಹಾರಿಸಲಾಯಿತು.
ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯ ಜನರ ಆಕ್ರೋಶ(Anger of Indians against British rule)
ಭಾರತೀಯರ ಬಗೆಗಿನ ಬ್ರಿಟಿಷರ ಧೋರಣೆ ಮತ್ತು ಅವರ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು, ಇದರಿಂದ ಭಾರತೀಯರಲ್ಲಿ ಕೋಪ ಮತ್ತು ಸೇಡಿನ ಕಿಚ್ಚು ಹೆಚ್ಚುತ್ತಿತ್ತು. ಬ್ರಿಟಿಷರ ಈ ಅನಾಗರಿಕ ವರ್ತನೆಯ ಕಿಚ್ಚು 1857ರಲ್ಲಿ ಮಂಗಲ್ ಪಾಂಡೆಯ ಬಂಡಾಯದ ರೂಪದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಮಂಗಲ್ ಪಾಂಡೆಯ ಈ ದಂಗೆಯಿಂದಾಗಿ,ಅವರನ್ನು ಕೊಲ್ಲಲಾಯಿತು, ಇದರಿಂದಾಗಿ ಬ್ರಿಟಿಷರ ಮೇಲೆ ಜನರ ಕೋಪವು ಮತ್ತಷ್ಟು ಹೆಚ್ಚಾಯಿತು ಮತ್ತು ಹೊಸ ಚಳುವಳಿಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು.
ಸ್ವಾತಂತ್ರ್ಯದ ಬೇಡಿಕೆ(Demand for Freedom)
ಬ್ರಿಟಿಷರ ಹೆಚ್ಚುತ್ತಿರುವ ದೌರ್ಜನ್ಯದಿಂದ ಜನರಲ್ಲಿ ಕೋಪ ಹೆಚ್ಚಾಯಿತು ಮತ್ತು ಅವರ ಸ್ವಾತಂತ್ರ್ಯದ ಬೇಡಿಕೆಯು ಮುನ್ನೆಡೆಗೆ ಬರಲು ಪ್ರಾರಂಭಿಸಿತು. ಇದರಿಂದಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಅನೇಕ ಆಂದೋಲನಗಳು ಮತ್ತು ಚಕಮಕ್ಕಿಗಳ ಘಟನೆಗಳು ಹೆಚ್ಚುತ್ತಲೇ ಇದ್ದವು. ಮಂಗಲ್ ಪಾಂಡೆ 1857ರಲ್ಲಿ ಪ್ರತಿಭಟನೆಯ ಮೂಲಕ ಸ್ವಾತಂತ್ರ್ಯವನ್ನು ಒತ್ತಾಯಿಸಿದ ಮೊದಲಿಗರಾಗಿದ್ದರು ಮತ್ತು ಇದರಿಂದಾಗಿ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಕ್ರಮೇಣ, ಬ್ರಿಟಿಷರ ದಬ್ಬಾಳಿಕೆಯಿಂದ ಸ್ವಾತಂತ್ರ್ಯವನ್ನು ಬೇಡುವ ಧ್ವನಿಗಳು ಭಾರತದ ಇತರ ಸ್ಥಳಗಳಿಂದಲೂ ಬರಲಾರಂಬಿಸಿದವು.
ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ ಹೋರಾಟಗಾರರ ಪ್ರಮುಖ ಕೊಡುಗೆಗಳು( Important Contribution of Freedom Fighters for Freedom)
ಬ್ರಿಟಿಷರ ದಬ್ಬಾಳಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ,ಇದರಲ್ಲಿ ಅತ್ಯಂತ ಹೆಚ್ಚಿನ ಕೊಡುಗೆ ಮಹಾತ್ಮ ಗಾಂಧಿಯವರದು. ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಆಡಳಿತವನ್ನು ಗಾಂಧೀಜಿ ಸತ್ಯ ಮತ್ತು ಹಿಂಸೆಯಂತಹ ಎರಡು ಅಸ್ತ್ರಗಳಿಂದ ಸೋಲಿಸಲು ಪಣ ತೊಟ್ಟರು. ಮಹಾತ್ಮ ಗಾಂಧಿಯವರು ಸತ್ಯ ಮತ್ತುಅಹಿಂಸೆಯನ್ನು ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡರು ಮತ್ತು ಜನರನ್ನು ಪ್ರೇರೇಪಿಸಿದರು ಮತ್ತು ಅದನ್ನು ಅಳವಡಿಸಿಕೊಳ್ಳಲು ಮತ್ತು ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಡಲು ಜನರನ್ನು ಸಿದ್ಧಗೊಳಿಸಿದರು. ದೇಶದ ಜನತೆ ಅವರನ್ನು ಸಾಕಷ್ಟು ಬೆಂಬಲಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಜನರು ಅವರನ್ನು ಪ್ರೀತಿ ಮತ್ತು ಗೌರವದಿಂದ ಬಾಪು ಎಂದು ಕರೆಯುತ್ತಿದ್ದರು.
ಸ್ವಾತಂತ್ರ್ಯಕ್ಕಾಗಿ ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಡೀ ಭಾರತವು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದರೂ, ಕೆಲವು ಜನರು ತಮ್ಮ ನಾಯಕತ್ವ, ತಂತ್ರ ಮತ್ತು ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದರು.
ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಬಾಲಗಂಗಾಧರ ತಿಲಕ್ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಜನರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು. ಕೆಲವರು ಮುಖ್ಯವಾಗಿ ಸತ್ಯ ಮತ್ತು ಅಹಿಂಸೆಯನ್ನು ಅಳವಡಿಸಿಕೊಂಡು ತಮ್ಮ ಹೋರಾಟವನ್ನು ಮುಂದುವರಿಸಿದರು. ಮತ್ತೊಂದೆಡೆ ಬ್ರಿಟಿಷ್ ಆಡಳಿತದ ವಿರುದ್ಧ ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಂಡ ಕೆಲವು ಸ್ವಾತಂತ್ರ ಹೋರಾಟಗಾರರು ಇವರಿಗೆ ಕ್ರಾಂತಿಕಾರಿ ಎಂದು ಹೆಸರಿಸಲಾಯಿತು. ಈ ಕ್ರಾಂತಿಕಾರಿಗಳು ಮುಖ್ಯವಾಗಿ ಬ್ರಿಟಿಷರ ವಿರುದ್ಧ ತಮ್ಮದೇ ಸಂಘಟನೆ ಮಾಡಿಕೊಂಡು ಹೋರಾಡಿದರು ಮುಖ್ಯವಾಗಿ ಮಂಗಲ್ ಪಾಂಡೆ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ರಾಜಗುರು ಮುಂತಾದ ಅನೇಕ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು.
ಪ್ರತಿಯೊಬ್ಬರ ಅಚಲ ಶಕ್ತಿ ಮತ್ತು ಸ್ವಾತಂತ್ರ್ಯದ ಪ್ರಯತ್ನಗಳು ಬ್ರಿಟಿಷರ ಆಳ್ವಿಕೆಯನ್ನು ಬೆಚ್ಚಿ ಬೀಳಿಸಿತು ಮತ್ತು ಬ್ರಿಟಿಷರನ್ನು ಆಗಸ್ಟ್ 15 1947 ರಂದು ಭಾರತವನ್ನು ತೊರೆಯುವಂತೆ ಮಾಡಿತು. ಈ ಐತಿಹಾಸಿಕ ದಿನವನ್ನು ನಾವು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತೇವೆ.
ಸ್ವಾತಂತ್ರ್ಯ ದಿನದ ಆಚರಣೆ( celebration of Independence day)
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಜನರ ಅವಿರತ ಪ್ರಯತ್ನ ಮತ್ತು ತ್ಯಾಗದ ನಂತರ ಆಗಸ್ಟ್ 15 1947 ರಂದು ಬ್ರಿಟಿಷರ ದೌರ್ಜನ್ಯ ಮತ್ತು ಗುಲಾಮಗಿರಿ ಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ಅಂದಿನಿಂದ ಇಂದಿನವರೆಗೆ ನಾವು ಈ ಐತಿಹಾಸಿಕ ದಿನವನ್ನು ಸ್ವಾತಂತ್ರದ ದಿನವಾಗಿ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಈ ರಾಷ್ಟ್ರೀಯ ಸ್ವತಂತ್ರೋತ್ಸವವನ್ನು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತದೆ ಇದರ ಆಚರಣೆಯ ಸೊಬಗನ್ನು ಎಲ್ಲಾ ಸರ್ಕಾರಿ, ಖಾಸಗಿ ಸಂಸ್ಥೆಗಳು, ಶಾಲೆಗಳು, ಕಚೇರಿಗಳು ಮತ್ತು ಮಾರುಕಟ್ಟೆಗಳಲ್ಲಿಯೂ ಕಾಣಬಹುದು.
ಸ್ವಾತಂತ್ರ ದಿನಾಚರಣೆಯ ಈ ಆಚರಣೆಯನ್ನು ದೆಹಲಿಯ ಕೆಂಪು ಕೋಟೆಯಲ್ಲಿ ಭಾರತದ ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಧ್ವಜವನ್ನು ಹಾರಿಸುತ್ತಾರೆ ಮತ್ತು ಅನೇಕ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಈ ದಿನದಂದು ಎಲ್ಲೆಡೆ ಜನರು ದೇಶಭಕ್ತಿಯ ವಾತಾವರಣದಲ್ಲಿ ಮುಳುಗಿ ಸಂಭ್ರಮಿಸುತ್ತಾರೆ.
ತೀರ್ಮಾನ
ಆಗಸ್ಟ್ 15ನ್ನು ಐತಿಹಾಸಿಕ ರಾಷ್ಟ್ರೀಯ ದಿನ ಎಂದು ಕರೆಯಲಾಗುತ್ತದೆ ಮತ್ತು ನಾವು ಈ ದಿನವನ್ನು ಪ್ರತಿ ವರ್ಷ ಸ್ವಾತಂತ್ರ್ಯ ದಿನವೆಂದು ಆಚರಿಸುತ್ತೇವೆ. ಎಲ್ಲಾ ಸರ್ಕಾರಿ ಸಂಸ್ಥೆಗಳು, ಶಾಲೆಗಳು ಮತ್ತು ಮಾರುಕಟ್ಟೆಗಳಲ್ಲಿ ಅದರ ಸಂಭ್ರಮವನ್ನು ಕಾಣಬಹುದು ಮತ್ತು ಈ ದಿನ ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸಿಕೊಳ್ಳಲಾಗುತ್ತದೆ. ದೇಶ ಪ್ರೇಮದ ಧನಿ ಎಲ್ಲೆಡೆ ಕೇಳಿ ಬರುತ್ತದೆ. ಒಬ್ಬರನ್ನೊಬ್ಬರು ಭೇಟಿಯಾಗಿ ಸ್ವಾತಂತ್ರ್ಯಕ್ಕಾಗಿ ಅಭಿನಂದಿಸಿ ಶುಭಾಶಯ ಕೋರುತ್ತಾರೆ ಮತ್ತು ಅವರ ಬಾಯಿ ಸಿಹಿ ಮಾಡಿಕೊಳ್ಳುತ್ತಾರೆ.
FAQ
ಪ್ರಶ್ನೆ1–ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಉತ್ತರ- ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ ದಿನವನ್ನು ಆಚರಿಸಲಾಗುತ್ತದೆ.
ಪ್ರಶ್ನೆ2- ಸ್ವಾತಂತ್ರ್ಯ ದಿನದಂದು ಧ್ವಜವನ್ನು ಎಲ್ಲಿ ಹಾರಿಸಲಾಗುತ್ತದೆ ?
ಉತ್ತರ- ಸ್ವಾತಂತ್ರ್ಯ ದಿನದಂದು ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜವನ್ನು ಹಾರಿಸಲಾಗುತ್ತದೆ.
ಪ್ರಶ್ನೆ 3- ಸ್ವಾತಂತ್ರ್ಯ ದಿನದಂದು ಯಾರು ಧ್ವಜಾರೋಹಣ ಮಾಡುತ್ತಾರೆ ?
ಉತ್ತರ- ಸ್ವಾತಂತ್ರ್ಯ ದಿನದಂದು ದೇಶದ ಪ್ರಧಾನಿಯವರು ಧ್ವಜಾರೋಹಣ ಮಾಡುತ್ತಾರೆ.
ಪ್ರಶ್ನೆ 4- ಆಗಸ್ಟ್ 15ರ ದಿನಾಂಕವನ್ನು ಸ್ವಾತಂತ್ರ ಯಾಗಿ ಯಾರು ಆಯ್ಕೆ ಮಾಡಿದರು ?
ಉತ್ತರ- ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನಾಂಕವನ್ನು ಲಾರ್ಡ್ ಮೌಂಟ್ ಬ್ಯಾಟನ್ ಆಯ್ಕೆ ಮಾಡಿದರು.