ಶಿಕ್ಷಕರ ದಿನಾಚರಣೆ ಭಾಷಣ|Teacher’s Day Powerful Speech in Kannada 2023 (Shikshakara Dinacharane Bhashana) 

ಶಿಕ್ಷಕರ ದಿನಾಚರಣೆ ಭಾಷಣ.

ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ, ಅವರು ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಶಿಕ್ಷಕರಾಗಿದ್ದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5 1888ರಂದು ಜನಿಸಿದರು ಅವರ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆಯನ್ನು 1962 ರಿಂದ ಆಚರಿಸಲು ಪ್ರಾರಂಭಿಸಲಾಯಿತು.

ಈ ಸಂದರ್ಭವನ್ನು ಆಚರಿಸಲು, ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಕೊಡುಗೆಯನ್ನು ಗುರುತಿಸುವ ಕೆಲವು ಕಾರ್ಯಕ್ರಮಗಳನ್ನು (ಹಾಡುಗಳು ಮತ್ತು ನಾಟಕಗಳನ್ನು) ಪ್ರಸ್ತುತಪಡಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನದ ಭಾಷಣವನ್ನು ಸಹ ಸೆಪ್ಟೆಂಬರ್ 5ರಂದು ನೀಡಲಾಗುತ್ತದೆ. 

ಈ ದಿನದಂದು ಎಲ್ಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಕಾರ್ಡುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಕೆಲವರು ಚಾಕೊಲೇಟ್ ಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಶಿಕ್ಷಕರ ದಿನಾಚರಣೆಯನ್ನು ನನ್ನ ಜನ್ಮದಿನವನ್ನಾಗಿ ಆಚರಿಸದೆ ಗುರುವಿನ ಗೌರವಾರ್ಥವಾಗಿ ಶಿಕ್ಷಕರ ದಿನವನ್ನಾಗಿ ಆಚರಿಸುವುದು ನನಗೆ ತುಂಬಾ ಹೆಮ್ಮೆ ಯಾಗುತ್ತದೆ ಎಂದು ಅವರು ಹೇಳಿದರು.

ಶಿಕ್ಷಕರ ದಿನದಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುತ್ತಾ ನಾವು ಎಲ್ಲಾ ಶಿಕ್ಷಕರನ್ನು ಗೌರವಿಸೋಣ ಮತ್ತು ಅವರಿಗೆ ಧನ್ಯವಾದಗಳನ್ನು ಅರ್ಪಿಸೋಣ. ನಮ್ಮ ದೇಶದಲ್ಲಿ ಶಿಕ್ಷಕರ ದಿನಾಚರಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ ಮತ್ತು ಎಲ್ಲಾ ಗುರುಗಳನ್ನು ಗೌರವಿಸುವ ವಿಧಾನವು ಭಾರತದ ದೇಶದಲ್ಲಿ ವಿಶೇಷವಾಗಿದೆ ಮತ್ತು ವಿಭಿನ್ನವಾಗಿದೆ.

ಶಿಕ್ಷಕರ  ದಿನಾಚರಣೆ ಭಾಷಣ-1

ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಹ

ಗುರು ಸಾಕ್ಷಾತ್, ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ 

ಗುರು ಹಿರಿಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಗೌರವಾನ್ವಿತಾ ಪ್ರಾಂಶುಪಾಲರೆ ಶಿಕ್ಷಕರೇ ಮತ್ತು ನನ್ನ ಎಲ್ಲಾ ಆತ್ಮೀಯ ಸಹಪಾಠಿಗಳೆ ಇಂದು, ನಾವೆಲ್ಲರೂ ಬಹಳ ಮಹತ್ವದ ದಿನದ ಸಂದರ್ಭ ದಲ್ಲಿ ಇಲ್ಲಿ ಸೇರಿದ್ದೇವೆ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ನೀಡಿದ ನನ್ನ ಎಲ್ಲಾ ಶಿಕ್ಷಕರಿಗೆ ನಾನು ಮೊದಲು, ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ನಮ್ಮ ಎಲ್ಲಾ ಶಿಕ್ಷಕರಿಗೆ ಬಹಳ ವಿಶೇಷವಾದ ದಿನವಾಗಿದೆ, ಗುರುವಿನ ಋಣವನ್ನು ಎಂದಿಗೂ ತೀರಿಸಲಾಗದಿದ್ದರೂ ಇಂದಿನ ಈ ಶುಭ ಸಂದರ್ಭದಲ್ಲಿ ನನ್ನ ಶಿಕ್ಷಕರ ಬಗ್ಗೆ ನನ್ನ ಭಾವನೆಗಳನ್ನು, ಪ್ರಸ್ತುತಪಡಿಸಲು ನಾನು ಬಯಸುತ್ತೇನೆ. ಭಾರತದಂತಹ ದೇಶದಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ, ಗುರುವಿಗೆ ದೇವರು ಮತ್ತು ಪೋಷಕರಿಗಿಂತ ಹೆಚ್ಚಿನ ಸ್ಥಾನವಿದೆ. ಶಿಕ್ಷಣವು ಮಾನವನ ಬೆಳವಣಿಗೆಯ ಮೊದಲ ಹೆಜ್ಜೆಯಾಗಿದ್ದು, ಅದು ಮಾನವನನ್ನು ತನ್ನ ಜೀವನದಲ್ಲಿ ನಿರಂತರವಾಗಿ ಮುನ್ನೆಡೆಸುತ್ತದೆ ಮತ್ತು ಒಬ್ಬ ವ್ಯಕ್ತಿಯು ಶಿಕ್ಷಕರಿಲ್ಲದೆ,  ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡುವುದು ಒಂದು ಶ್ರೇಷ್ಠ ಸೇವೆ.

ಪ್ರಾಚೀನ ಭಾರತದಲ್ಲಿ ರಾಜ ಮಹಾರಾಜರು, ಶಿಕ್ಷಣ ಪಡೆಯಲು, ಗುರುಕುಲಕ್ಕೆ ಹೋಗುತ್ತಿದ್ದರು. ಮತ್ತು ಗುರುಕುಲದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಧರ್ಮ ಗ್ರಂಥಗಳು ಮತ್ತು ಸಾಮಾಜಿಕ ಮೌಲ್ಯಗಳ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸಲಾಗುತ್ತಿತ್ತು. ಗುರು ಎಂಬುದು ಸಂಸ್ಕೃತ ಪದ ವಾಗಿದ್ದು ಇದರರ್ಥ ಶಿಕ್ಷಕ ಮಾರ್ಗದರ್ಶಿ ಅಥವಾ ತಜ್ಞ. ಕಾಲಾನಂತರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ, ಅನೇಕ ಬದಲಾವಣೆಗಳು ಆಗಿವೆ ಮತ್ತು ಶಿಕ್ಷಕರ ಬೋಧನಾ ವಿಧಾನಗಳಲ್ಲಿಯೂ ಬದಲಾವಣೆಗಳು ಕಂಡುಬಂದಿವೆ, ಇದು ಶಿಕ್ಷಣದಲ್ಲಿ ಅಗತ್ಯವಾಗಿದೆ. ಪ್ರಾಚೀನ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಪ್ರತಿಯೊಂದು ಆದೇಶವನ್ನು ಪಾಲಿಸುತ್ತಿದ್ದರು. ಆದರೆ ಈಗ ಅದು ಅಪರೂಪವಾಗಿ ಕಂಡುಬರುತ್ತದೆ. ಒಬ್ಬ ಶಿಕ್ಷಕ ತನ್ನ ಜೀವನದಲ್ಲಿ ಸಾಮಾನ್ಯ ಜನರಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಆದರೆ ಅವನು ತನ್ನ ಸಮಸ್ಯೆಗಳನ್ನು ಬದಿಗಿಟ್ಟು ತನ್ನ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ವನ್ನು ನೀಡುತ್ತಾನೆ.

ಭಾರತವು ತನ್ನ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ರೂಪದಲ್ಲಿ ಪಡೆಯಿತು, ರಾಧಾಕೃಷ್ಣನ್ ಅವರು, ರಾಷ್ಟ್ರಪತಿಗಳಲ್ಲದೆ ಶಿಕ್ಷಕರು ಆಗಿದ್ದರು. 1936 ರಿಂದ 1952ರ ವರೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ, ಪ್ರಾಂಶುಪಾಲರಾಗಿಯು ಸೇವೆ ಸಲ್ಲಿಸಿದರು. ಭಾರತ ರತ್ನ ಪಡೆದ ಭಾರತದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ದೃಷ್ಟಿಯಲ್ಲಿ” ಶಿಕ್ಷಕನು ವಿದ್ಯಾರ್ಥಿಯ ಮನಸ್ಸಿನಲ್ಲಿ ಸತ್ಯವನ್ನು ಒತ್ತಾಯಿಸುವವರಲ್ಲ ಆದರೆ, ನಾಳಿನ ಸವಾಲುಗಳಿಗೆ ಅವನನ್ನು ಸಿದ್ಧಪಡಿಸುವನೇ ನಿಜವಾದ ಶಿಕ್ಷಕ”

ಶಿಕ್ಷಕರ ದಿನವನ್ನು  ಭಾರತದಲ್ಲಿ ಮೊದಲು 1962 ರಲ್ಲಿ ಆಯೋಜಿಸಲಾಯಿತು ಮತ್ತು ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್  5ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಣ, ವಾತ್ಸಲ್ಯ, ಶಿಸ್ತಿನ ಬೀಜಗಳನ್ನು ಶಿಕ್ಷಕರಿಂದ ವಿದ್ಯಾರ್ಥಿ ಜೀವನದಲ್ಲಿ ಬಿತ್ತಲಾಗುತ್ತದೆ. ಒಬ್ಬ ಶಿಕ್ಷಕ ನಮಗೆ ಪುಸ್ತಕದ ಜ್ಞಾನವನ್ನು ಮಾತ್ರವಲ್ಲದೇ ಸಾಮಾಜಿಕ, ನೈತಿಕ ಮೌಲ್ಯಗಳ ಜ್ಞಾನವನ್ನು ನೀಡುತ್ತಾನೆ. ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ, ರಾಜ ಮಹಾರಾಜರಿಂದ ಗುರುಗಳಿಗೆ ದೇವರ ಸಮಾನ ಸ್ಥಾನ ಸಿಕ್ಕಿದೆ.,ಪಾಲಕರು ಮಗುವಿಗೆ ಜನ್ಮ ನೀಡುತ್ತಾರೆ ಮತ್ತು ಶಿಕ್ಷಣದ ಮೂಲಕ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಆ ಮಗುವನ್ನು ಆದರ್ಶ 

ಪ್ರಜೆಯನ್ನಾಗಿ ಮಾಡುವ ಪಾತ್ರ ವನ್ನು ಶಿಕ್ಷಕರು ವಹಿಸುತ್ತಾರೆ, ಇದರಿಂದಾಗಿ ಮಗು ತನ್ನ ಜೀವನದ ಅನೇಕ ಹಂತಗಳಲ್ಲಿ ತನ್ನ ಶಿಕ್ಷಕರು ತೋರಿಸಿದ ಮಾರ್ಗವನ್ನು ಅನುಸರಿಸಿ, ಯಶಸ್ವಿ ವ್ಯಕ್ತಿಯಾಗುತ್ತದೆ. ಕೊನೆಯಲ್ಲಿ ನನ್ನ ಭಾಷಣವನ್ನು ಮುಗಿಸುತ್ತ ಶಿಕ್ಷಕರಿಗೆ, ಈ ಒಂದು ಸಾಲನ್ನು ಪ್ರಸ್ತುತಪಡಿಸಲು, ನಾನು ಬಯಸುತ್ತೇನೆ.

ಗುರುವೆಂದರೆ ವ್ಯಕ್ತಿಯಲ್ಲ ಒಂದು ಶಕ್ತಿ

ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ

ಕರೆದುಕೊಂಡು ಹೋಗುವ ಶಕ್ತಿಯೇ ಗುರು.

 ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು. 

ಶಿಕ್ಷಕರ ದಿನಾಚರಣೆ ಭಾಷಣ-2

ನನ್ನ ಎಲ್ಲಾ ಗೌರವಾನ್ವಿತ ಶಿಕ್ಷಕರಿಗೆ ಮತ್ತು ನನ್ನ ಆತ್ಮೀಯ ಸ್ನೇಹಿತರಿಗೆ, ನನ್ನ ನಮನಗಳು. ನೀವೆಲ್ಲರೂ ತಿಳಿದಿರುವಂತೆ ಇಂದು ನಾವು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿ ಸೇರಿದ್ದೇವೆ ಮತ್ತು ಈ ಶುಭ ಸಂದರ್ಭದಲ್ಲಿ ಕೆಲವು ಸಾಲುಗಳೊಂದಿಗೆ ನನ್ನ ಭಾಷಣವನ್ನು ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸಲು, ನಾನು ಅನುಮತಿಯನ್ನು ಬಯಸುತ್ತೆನೆ. 

ಅಜ್ಞಾನವೆಂಬ ಕತ್ತಲೆಯಿಂದ

ಜ್ಞಾನವೆಂಬ ಬೆಳಕಿಗೆ ಕರೆದೊಯ್ದು

ಜೀವನದ ದೀಪ ಬೆಳಗಿಸಿದ

ಎಲ್ಲಾ ಗುರುಗಳಿಗೂ ನಮ್ಮ ಕೋಟಿ ಕೋಟಿ ನಮನಗಳು

ಶಿಕ್ಷಕರು, ಸಮಾಜದ ಪ್ರಮುಖ ಭಾಗವಾಗಿದ್ದು ಅವರು ನಮಗೆ ಸರಿಯಾದ ಜೀವನ ಮಾರ್ಗವನ್ನು ತೋರಿಸುತ್ತಾರೆ. ಪ್ರತಿವರ್ಷ ಸೆಪ್ಟೆಂಬರ್ 5 ರಂದು ಅವರ ಕೊಡುಗೆ ಮತ್ತು ಅವರ ಸರಿಯಾದ ಮಾರ್ಗದರ್ಶನಕ್ಕಾಗಿ ಶಿಕ್ಷಕರನ್ನು ಗೌರವಿಸಲಾಗುತ್ತದೆ. ಈ ದಿನದಂದು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿವಿಧ ರೀತಿಯ ಉಡುಗೊರೆ ಗಳನ್ನು ನೀಡುತ್ತಾರೆ. ತನ್ನ ಸುತ್ತಲಿನ ಪರಿಸರವನ್ನು ಶಿಕ್ಷಣದ ಬೆಳಕಿನಿಂದ ಬೆಳಗಿಸುವ ಜ್ಞಾನದೀಪವೆ ಶಿಕ್ಷಕ. ಪೋಷಕರ ನಂತರ ಮಗುವಿನ ಬೆಳವಣಿಗೆಯಲ್ಲಿ, ಪ್ರಮುಖ ಪಾತ್ರ ವಹಿಸುವ ಏಕೈಕ  ವ್ಯಕ್ತಿ ಶಿಕ್ಷಕ. ಶಿಕ್ಷಕರ ದಿನವನ್ನು ಪ್ರಪಂಚದ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ಯಾವುದೇ ದೇಶದ ಪ್ರಗತಿಯು ಆ ದೇಶದ ವಿದ್ಯಾವಂತ ನಾಗರಿಕರ ಮೇಲೆ ಅವಲಂಬಿತವಾಗಿದೆ. ಸೀಮಿತ ವಿಧಾನಗಳಲ್ಲಿಯೂ ಸಹ ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರು ಪ್ರತಿ ಸವಾಲನ್ನು ಎದುರಿಸುತ್ತಾರೆ. ಭಾರತಕ್ಕೆ ಅನೇಕ ಮಹಾನ್ ಪುರುಷರನ್ನು ನೀಡಿದ ಭಾರತಾಂಬೆಯ ಮಡಿಲಲ್ಲಿ ಅಂತಹ ಅನೇಕ ಗುರುಗಳು ಇದ್ದಾರೆ.

ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವ ಎಲ್ಲರಿಗೂ ಚಿರಪರಿಚಿತ. ವಿವೇಕಾನಂದರಿಗೆ ದೇವರ ದರ್ಶನ ಮಾಡಿಸಿದ ರಾಮಕೃಷ್ಣ ಪರಮಹಂಸರು ಇಂತಹ ಮಹಾನ್ ವ್ಯಕ್ತಿಯ ಗುರುಗಳು. ಶಿಕ್ಷಕರ ಪ್ರಾಮುಖ್ಯತೆಯ ಪರಿಚಯವನ್ನು ನೀಡುವ ಇಂತಹ ಅನೇಕ ಉದಾಹರಣೆಗಳಿವೆ. ಏಕಲವ್ಯನಂತಹ ಶಿಷ್ಯನು ಗುರುವಿಗೆ ತನ್ನ ಹೆಬ್ಬೆರಳನ್ನು ದಕ್ಷಿಣೆಯಾಗಿ ನೀಡಿದ ಭಾರತ ಇದು. ಏಕಲವ್ಯನಂತಹ ನಮ್ಮ ಗುರುಗಳು ಅಥವಾ ಶಿಕ್ಷಕರನ್ನು ನಾವು ಯಾವಾಗಲೂ ಗೌರವಿಸಬೇಕು. ಕೊನೆಯಲ್ಲಿ ನನ್ನ ಪುಟ್ಟ ಭಾಷಣವನ್ನು ಈ ಸಾಲಿನೊಂದಿಗೆ ಮುಗಿಸಲು ನಾನು ಬಯಸುತ್ತೇನೆ. 

ಮುಗ್ಧ ಮನದಲ್ಲಿ ಅಕ್ಷರವ ಬಿತ್ತಿ

ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ

ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು

ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 

ಶಿಕ್ಷಕರ  ದಿನಾಚರಣೆ ಭಾಷಣ-3  

ಎಲ್ಲಾ ಶಿಕ್ಷಕರಿಗೆ ಮತ್ತು ಆತ್ಮೀಯ ಸಹಪಾಠಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.ನಿಮಗೆಲ್ಲಾ ತಿಳಿದಿರುವಂತೆ ಇಂದು ನಾವು ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಇಲ್ಲಿ ಸೇರಿದ್ದೇವೆ.ಇಲ್ಲಿ ನಾನು ನನ್ನ ಎಲ್ಲಾ ಗೌರವಾನ್ವಿತ ಶಿಕ್ಷಕರು ಮತ್ತು ಎಲ್ಲಾ ಸಹಪಾಠಿಗಳು,ಸಹೋದರ ಸಹೋದರಿಯರನ್ನು ಹೃತ್ಪೂರಕವಾಗಿ ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇಂದು ಸೆಪ್ಟೆಂಬರ್ 5 ಮತ್ತು ಪ್ರತಿ ವರ್ಷ ನಾವೆಲ್ಲರೂ ಸೆಪ್ಟೆಂಬರ್ ಐದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.

ಇದಲ್ಲದೆ ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು ಏಕೆಂದರೆ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗುವ ಮುನ್ನ ಗೌರವಾನ್ವಿತ ಶಿಕ್ಷಕರಾಗಿಯೂ ಗುರುತಿಸಿಕೊಂಡಿದ್ದರು.ಆದ್ದರಿಂದಲೇ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಶಿಕ್ಷಕರ ದಿನಾಚರಣೆ  ದೇಶದ ಎಲ್ಲಾ ಶಿಕ್ಷಕರಿಗೆ ಗೌರವ ಸಲ್ಲಿಸುವ ವಿಶೇಷ ದಿನವಾಗಿದೆ, ಏಕೆಂದರೆ ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಅವರೆಲ್ಲರೂ ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ಮಾಡುತ್ತಾರೆ.

 ಶಿಕ್ಷಕರು ಯಾವಾಗಲೂ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಪ್ರೀತಿಸುತ್ತಾರೆ, ಯಾವುದೇ ವಿದ್ಯಾರ್ಥಿಯನ್ನು ತಾರತಮ್ಯ ಮಾಡದೇ ಎಲ್ಲಾ ವಿದ್ಯಾರ್ಥಿಗಳನ್ನು, ಸಮಾನವಾಗಿ ನೋಡುತ್ತಾರೆ. 

ದೇಶದ ಉತ್ತಮ ಪ್ರಜೆಗಳಾಗಲು ನಮ್ಮ ಪೋಷಕರು ನಮ್ಮೆಲ್ಲರನ್ನು ಶಾಲೆಗೆ ಕಳುಹಿಸುತ್ತಾರೆ. ಅಲ್ಲಿ ವಿದ್ಯಾರ್ಥಿಯ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ  ಜೊತೆಗೆ  ಅವರನ್ನು ಯಶಸ್ವಿಗೊಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ.

 ನಮ್ಮ ಶಿಕ್ಷಕರು ಮಾಡಿದ ಕೆಲಸವನ್ನು ನಾವು ಅಂಗೀಕರಿಸುತ್ತೇವೆ ಮತ್ತು ಪ್ರಶಂಶಿಸುತ್ತೇವೆ. ಶಿಕ್ಷಣ ನೀಡುವುದು ಒಂದು ದೊಡ್ಡ ಜವಾಬ್ದಾರಿಯುತ ಸೇವೆ ಮತ್ತು ಈ ಶಿಕ್ಷಣವು ಇಂದಿನಿಂದಲ್ಲಾ ಅನಾದಿಕಾಲದಿಂದಲೂ ನಡೆಯುತ್ತಿರುವುದರಿಂದ ನಾವು ಅವರನ್ನು ಯಾವಾಗಲೂ ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ.

ನಾವು ನಮ್ಮ ಅಜ್ಜಿ ಮತ್ತು ತಂದೆ ತಾಯಿಯ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಯಾವಾಗ ಗುರು ಪದ್ಧತಿಯ ಅಭ್ಯಾಸ ಪ್ರಾರಂಭವಾಯಿತು ಅಂದಿನಿಂದ  ಬೋಧನೆಯು ಒಂದು ವೃತ್ತಿಯಾಗಿ ಹೊರಹೊಮ್ಮಿತು. ಪ್ರಾಚೀನ ಕಾಲದಲ್ಲಿ ಋಷಿಮುನಿಗಳ ಮೂಲಕ ಶಿಕ್ಷಣವನ್ನು ಜನರು ಸ್ವೀಕರಿಸಿದರು. ಗುರು ಎಂಬ ಪದವು ಸಂಸ್ಕೃತ ಪದವಾಗಿದ್ದು ಇದರರ್ಥ ಶಿಕ್ಷಕ ಮಾರ್ಗದರ್ಶಿ ಅಥವಾ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವರು.

 ನಮ್ಮ ಜೀವನದ ಮೊದಲ ಗುರುಗಳು ನಮ್ಮ ಹೆತ್ತವರು ಅವರು ಜೀವನದ ಕಷ್ಟಕರ ಸಂದರ್ಭಗಳಲ್ಲಿ ಹೇಗೆ ಯಶಸ್ವಿಯಾಗಬೇಕೆಂದು ನಮಗೆ ಕಲಿಸುತ್ತಾರೆ.ಆದರೆ ಗುರು ಪ್ರತಿಯೊಬ್ಬರ ಜೀವನಕ್ಕೆ ಅತ್ಯಮೂಲ್ಯ ವ್ಯಕ್ತಿಯಾಗಿರುತ್ತಾರೆ, ನಮ್ಮ ಶಿಕ್ಷಕರು ನಮಗೆ  ಶಿಕ್ಷಣದ ಸರಿಯಾದ ಜ್ಞಾನವನ್ನು ನೀಡುತ್ತಾರೆ ಅದು ನಮ್ಮ ಆಸಕ್ತಿಗೆ ತಕ್ಕಂತೆ ಕಲಿಸುವ ಮೂಲಕ  ನಾವು ಯಶಸ್ಸಿನ ಶಿಖರವನ್ನು ತಲುಪಲು ನಮಗೆ ಮಾರ್ಗದರ್ಶನ ನೀಡುತ್ತದೆ.ಇಂದು ಶಿಕ್ಷಕರ ದಿನದ ಈ ಸಂದರ್ಭದಲ್ಲಿ ನಾವು ಅವರನ್ನು ಸಣ್ಣ ರೀತಿಯಲ್ಲಿ ಗೌರವಿಸೋಣ

ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 

ಶಿಕ್ಷಕರ ದಿನಾಚರಣೆ ಭಾಷಣ-4  

 ಶಿಕ್ಷಕರ ದಿನಾಚರಣೆಯನ್ನು ಭಾರತದಲ್ಲಿ ಮೊದಲ ಬಾರಿಗೆ 1962ರಲ್ಲಿ ಆಯೋಜಿಸಲಾಯಿತು. ಭಾರತದಲ್ಲಿ ಇದನ್ನು ಪ್ರತಿವರ್ಷ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ.ಭಾರತದ 2ನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರು ಅದ್ಭುತ ಶಿಕ್ಷಕರಾಗಿರುವುದಕ್ಕೆ, ಪ್ರಮುಖ ಉದಾಹರಣೆ.

ಶಿಕ್ಷಕರ ದಿನಾಚರಣೆ  ಶಿಕ್ಷಕರನ್ನು ಗೌರವಿಸುವ ಅತ್ಯಂತ ಮಹತ್ವದ ದಿನವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರೆ ಅದರ ಪ್ರಕಾರ ಅವರು ತಮ್ಮ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಲು ಸಹಾಯ ಮಾಡುತ್ತಾರೆ. ನಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಗುರು ನಮಗೆ ಸರಿಯಾದ ಮಾರ್ಗವನ್ನು ತೋರಿಸಲು ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುವ ಮೂಲಕ ಅವನ ಭವಿಷ್ಯಕ್ಕೆ ಹೊಸ ಜೀವನವನ್ನು ನೀಡುವ ಶಿಕ್ಷಕನು ಯಶಸ್ವಿ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಯೊಂದಿಗೆ ನಿಸ್ವಾರ್ಥವಾಗಿ ಸಹಕರಿಸುವ ಪ್ರಮುಖ ಭಾಗವಾಗಿತ್ತಾರೆ. ಶಿಕ್ಷಣವು ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಗತ್ಯವಾಗಿದೆ ಅವರು ತಮ್ಮ ಶ್ರಮದ ಆಧಾರದ ಮೇಲೆ ಮತ್ತು ಶಿಕ್ಷಕರ ಸಹಾಯದಿಂದ ಜೀವನದ ಪ್ರತಿಯೊಂದು ಅಂತವನ್ನು ಯಶಸ್ವಿಯಾಗಿ ಸಾಧಿಸುತ್ತಾರೆ.

ನಮ್ಮ ಪೋಷಕರು ನಮಗೆ ಜನ್ಮ ನೀಡಿದಾಗ ಅವರು ನಮ್ಮ ಜೀವನದ ಮೊದಲ ಗುರುಗಳಾಗುತ್ತಾರೆ. ನಂತರ ನಮ್ಮ ಶಿಕ್ಷಕರು ನಮ್ಮ ಸರಿ ತಪ್ಪುಗಳನ್ನು ಗುರುತಿಸುತ್ತಾರೆ ಮತ್ತು ನಮ್ಮ ಚಾರಿತ್ರೆಯನ್ನು ಸರಿಯಾಗಿ ನಿರ್ಮಿಸುತ್ತಾರೆ. ಸರಿಯಾದ ಮಾರ್ಗದರ್ಶನದ ಜೊತೆಗೆ ಶಿಕ್ಷಕರು ಕೂಡ ನಮ್ಮ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಶ್ರಮಿಸುತ್ತಾರೆ ಅದಕ್ಕಾಗಿಯೇ ಶಿಕ್ಷಕರ ಸ್ಥಾನವನ್ನು ಪೋಷಕರಿಗಿಂತ ಉನ್ನತವೆಂದು ಹೇಳಲಾಗುತ್ತದೆ. ಶಿಕ್ಷಣವಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ ಏಕೆಂದರೆ ಶಿಕ್ಷಣವಿಲ್ಲದೆ ನಾವು ಏನನ್ನು ಸಾಧಿಸಲು  ಸಾಧ್ಯವಿಲ್ಲ.ನಮ್ಮ ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಅದೇ ರೀತಿ ಜೀವನದಲ್ಲಿ ಮುನ್ನಡೆಯಲು ಮತ್ತು ಯಶಸ್ಸಿನ ಉತ್ತುಂಗಕೇರಲು ಶಿಕ್ಷಣ ಮತ್ತು ಶಿಕ್ಷಕರು ಬಹಳ ಮುಖ್ಯ. 

ಒಬ್ಬ ಶಿಕ್ಷಕ ಮಾತ್ರ ನಿಸ್ವಾರ್ಥವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಮತ್ತು ಸರಿಯಾದ ಮಾರ್ಗದರ್ಶನವನ್ನು ನೀಡಬಲ್ಲನು. ಶಿಕ್ಷಕರು ನಮ್ಮೊಳಗಿನ ಎಲ್ಲಾ ದುಷ್ಟತನವನ್ನು ತೊಡೆದು ಹಾಕುವ ಮೂಲಕ ನಮ್ಮನ್ನು ಉತ್ತಮ ಮಾನವರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಶಿಕ್ಷಕರಿಲ್ಲದಿದ್ದರೆ ವಿದ್ಯಾರ್ಥಿಯ ಜೀವನವು   ಅರ್ಥವಿಲ್ಲದಂತಾಗುತ್ತದೆ ಅಂದರೆ ಅವನ ಜೀವನದಲ್ಲಿ ಯಾವುದೇ ಗುರಿ ಇರುವುದಿಲ್ಲ.

ಒಂದು ಮಗು ಈ ಭೂಮಿಯಲ್ಲಿ ಜನಿಸಿದಾಗ ಅವನ ಮೊದಲ ಗುರು ತಾಯಿ. ಮಗುವಿನ ಮೊದಲ ಪಾಠಶಾಲೆ ತಾಯಿಯ ಮಡಿಲು ಎಂದು ಹೇಳಲಾಗುತ್ತದೆ. ಕ್ರಮೇಣ ಅದೇ ಮಗು ಬೆಳೆದಾಗ ಅವನ ಸುತ್ತಲಿನ ಕುಟುಂಬದ ಎಲ್ಲಾ ಸಂಬಂಧಿಕರು, ಅವನ ಶಿಕ್ಷಕರಂತೆ ವರ್ತಿಸುತ್ತಾರೆ ಅದರ ನಂತರ ಮಗು ಬೆಳೆದ ನಂತರ ಅವನು ಶಿಕ್ಷಣಕ್ಕಾಗಿ ಶಾಲೆಗೆ ಹೋಗುತ್ತಾನೆ. ಅಲ್ಲಿ ಅವರ ಗುರುಗಳು ಅವರ ಶಿಕ್ಷಕರು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಮತ್ತು ಚೊಕ್ಕಾಣಿ ಹಿಡಿಯಲು ಅವರನ್ನು ಪ್ರೇರೇಪಿಸುತ್ತಾರೆ. 

ನಮ್ಮ ಜೀವನದಲ್ಲಿ ನಮಗೆ ಬದುಕಲು ಸರಿಯಾದ ದಾರಿ ತೋರಿಸಿ, ಸರಿದಾರಿಯಲ್ಲಿ ನಡೆಯುವಂತೆ ಮಾಡುವವರು ನಮ್ಮ ಗುರುಗಳು.ನಾವು ಅವರೆಲ್ಲರನ್ನೂ ಗೌರವಿಸುವುದು, ಮುಖ್ಯ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗುರುವಿನ ಅವಶ್ಯಕತೆ ಇದೆ, ಏಕೆಂದರೆ ಶಿಕ್ಷಕನು ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತಾನೆ. ನಮ್ಮ ಜೀವನದಲ್ಲಿ ಗುರುವಿಲ್ಲದಿದ್ದರೆ ಒಳ್ಳೆಯ ಕೆಲಸ ಅಥವಾ ಜೀವನವನ್ನು ಕಲ್ಪಿಸಿ ಕೊಳ್ಳುವುದು ಅಷ್ಟೇ ಕಷ್ಟವಾಗುತ್ತದೆ. ಗುರುವಿಲ್ಲದೆ ಜೀವನ ಅಪೂರ್ಣ ನಮ್ಮ ಜೀವನದಲ್ಲಿ ಬೆಳಕು ಚೆಲ್ಲಲು ಸರಿಯಾದ ದಿಕ್ಕನ್ನು ತೋರಿಸಿದ ಎಲ್ಲಾ ಶಿಕ್ಷಕರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು ನಿಮಗೆಲ್ಲರಿಗೂ ದೀರ್ಘ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.

ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 

ಶಿಕ್ಷಕರ ದಿನಾಚರಣೆಯ ಬಗ್ಗೆ 10 ಸಾಲುಗಳು

1. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

2. ಶಿಕ್ಷಕರ ದಿನವನ್ನು ಜಾಗತಿಕವಾಗಿ ಅಕ್ಟೋಬರ್ 5ರಂದು ಆಚರಿಸಲಾಗುತ್ತದೆ.

3.ಭಾರತದ ಮೊದಲ ಉಪ ರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

4.ಡಾ. ಸರ್ವಪಲ್ಲಿ, ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5 1888 ರಂದು ಜನಿಸಿದರು.

5.ಡಾ. ಸರ್ವಪಲ್ಲಿ, ರಾಧಾಕೃಷ್ಣನ್ ಅವರು ತಮ್ಮ ಜನ್ಮ ದಿನದಂದು ಶಿಕ್ಷಕರನ್ನು, ಗೌರವಿಸಲು ಶಿಕ್ಷಕರ ದಿನಾಚರಣೆಯನ್ನು, ಪ್ರಾರಂಭಿಸಲು ಹೇಳಿದರು.

6.ಶಿಕ್ಷಕರ ದಿನವೂ ಶಿಕ್ಷಕರಿಗೆ ಗೌರವವನ್ನು ನೀಡುವ ದಿನವಾಗಿದೆ.

7. ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗೌರವ ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.

8. ಶಿಕ್ಷಕರ ದಿನಾಚರಣೆ ನಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವವನ್ನು ತಿಳಿಸುತ್ತದೆ.

9. ತನ್ನ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜ್ಞಾನವನ್ನು ನೀಡುವವನು ಶಿಕ್ಷಕ.

10.ನಾವು ಎಂದಿಗೂ ನಮ್ಮ ಶಿಕ್ಷಕರನ್ನು ಅವಮಾನಿಸಬಾರದು. 

FAQ

ಪ್ರಶ್ನೆ 1- ಭಾರತದಲ್ಲಿ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ- ಭಾರತದಲ್ಲಿ ಪ್ರತಿ ವರ್ಷ ಸೆಪ್ಟಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಪ್ರಶ್ನೆ2- ಶಿಕ್ಷಕರ ದಿನವನ್ನು ಏಕೆ ಆಚರಿಸಲಾಗುತ್ತದೆ?

ಉತ್ತರ- ಮಕ್ಕಳ ಭವಿಷ್ಯವನ್ನು ನಿರ್ಮಿಸುವಲ್ಲಿ ಶಿಕ್ಷಕರ ಶ್ರಮವನ್ನು ಗೌರವಿಸಲು ಮತ್ತು ಪ್ರಶಂಸಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. 

ಪ್ರಶ್ನೆ3- ಯಾರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಗುರುತಿಸಲಾಗಿದೆ?

ಉತ್ತರ- ಡಾ. ಸರ್ವಪಲ್ಲಿ, ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಗುರುತಿಸಲಾಗಿದೆ.

ಪ್ರಶ್ನೆ4- ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಯಾವಾಗ ಜನಿಸಿದರು?

ಉತ್ತರ- ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5 1888ರಂದು ಜನಿಸಿದರು.

ಪ್ರಶ್ನೆ5- ಅಂತರಾಷ್ಟ್ರೀಯ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಉತ್ತರ- ಅಂತರಾಷ್ಟ್ರೀಯ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್  5ರಂದು ಆಚರಿಸಲಾಗುತ್ತದೆ.

ಮತ್ತಷ್ಟು ಓದಿ

ಶಿಕ್ಷಕರ ದಿನಾಚರಣೆ, ಮಹತ್ವ ಪ್ರಬಂಧ

ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಜೀವನ ಚರಿತ್ರೆ

Leave a Comment