ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ
ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಸಣ್ಣ ಮತ್ತು ದೀರ್ಘ ಪ್ರಬಂಧಗಳು.
ಭಾರತವು ಹಬ್ಬಗಳ ನಾಡು. ಭಾರತವು ವಿವಿಧತೆಯಲ್ಲಿ ಏಕತೆಯ ಭೂಮಿಯಾಗಿದೆ. ಭಾರತದ ಜನರು ತಮ್ಮ ಪ್ರಾದೇಶಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ,ಭಾಷಾ ವ್ಯತ್ಯಾಸಗಳನ್ನು ಲೆಕ್ಕಿಸದೆ ಒಟ್ಟಾಗಿದ್ದಾರೆ. ಭಾರತದ ರಾಷ್ಟ್ರೀಯ ಹಬ್ಬಗಳು ಜನರನ್ನು ಏಕತೆ ಮತ್ತು ಸಹೋದರತ್ವದ ಕೊಂಡಿಯಲ್ಲಿ ಬೆಸೆಯುತ್ತದೆ. ಅವು ರಾಷ್ಟ್ರೀಯ ಏಕೀಕರಣವನ್ನು ಸಹ ಉತ್ತೇಜಿಸುತ್ತದೆ.
ಭಾರತವು ಹಲವಾರು ಧಾರ್ಮಿಕ ಹಬ್ಬಗಳನ್ನು ಮತ್ತು ಮೂರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತದೆ. ಗಾಂಧಿ ಜಯಂತಿ (ಅಕ್ಟೋಬರ್ 2), ಗಣರಾಜ್ಯೋತ್ಸವ (ಜನವರಿ 26) ಮತ್ತು ಸ್ವಾತಂತ್ರ ದಿನ( ಆಗಸ್ಟ್ 15) ಇವು ದೇಶದಲ್ಲಿ ಆಚರಿಸಲಾಗುವ ಮೂರು ರಾಷ್ಟ್ರೀಯ ಹಬ್ಬಗಳಾಗಿವೆ. ಭಾರತ ಸರ್ಕಾರವು ದೇಶದ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರೀಯ ರಜಾ ದಿನವನ್ನು ಘೋಷಿಸಿದೆ.
ಈ ಹಬ್ಬಗಳನ್ನು ದೇಶಾದ್ಯಂತ ಎಲ್ಲಾ ಶಾಲಾ ಕಾಲೇಜುಗಳು, ಕಚೇರಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ. ರಾಷ್ಟ್ರೀಯ ರಜಾ ದಿನವನ್ನು ರಾಷ್ಟ್ರೀಯ ಮತ್ತು ದೇಶಭಕ್ತಿಯ ಉತ್ಸಾಹದಿಂದ, ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.ಭಾರತದ ನಾಗರಿಕರು ತಮ್ಮ ಜಾತಿ ಮತ್ತು ಧರ್ಮದ ವಿಭಜನೆಗಳನ್ನು ಮೀರಿ ಒಟ್ಟಿಗೆ ಆಚರಿಸುವ ಕೆಲವು ಅಪರೂಪದ ಹಬ್ಬಗಳಾಗಿವೆ. ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಶ್ರೀಮಂತರು, ಬಡವರು, ವಿದ್ಯಾವಂತರು ಮತ್ತು ಅನಕ್ಷರಸ್ಥರು ಎಲ್ಲರೂ ತಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ವೀರರನ್ನು ಸ್ಮರಿಸುತ್ತಾರೆ ಮತ್ತು ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ.
ಭಾರತದ ರಾಷ್ಟ್ರೀಯ ಹಬ್ಬಗಳ ಪ್ರಬಂಧ 10 ಸಾಲುಗಳಲ್ಲಿ
- ರಾಷ್ಟ್ರೀಯ ಹಬ್ಬಗಳು, ಪ್ರತಿ ದೇಶದ ಹೆಮ್ಮೆ
- ಭಾರತವು ಮೂರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತದೆ ಅವುಗಳೆಂದರೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಮತ್ತು ಗಾಂಧಿ ಜಯಂತಿ.
- ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸರ್ಕಾರವು ಆ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ರಜಾ ದಿನವೆಂದು ಘೋಷಿಸುತ್ತದೆ.
- ಗಣರಾಜ್ಯೋತ್ಸವವು ಜನವರಿ 26ರಂದು ಬರುತ್ತದೆ ಮತ್ತು ದೇಶದ ಸಂವಿಧಾನದ ಪ್ರಾರಂಭದ ನೆನಪಿಗಾಗಿ ಆಚರಿಸಲಾಗುತ್ತದೆ.
- ರಾಷ್ಟ್ರ ರಾಜಧಾನಿಯಲ್ಲಿ ಅಧ್ಯಕ್ಷರು, ಈ ದಿನದ ಅಧ್ಯಕ್ಷತೆ ವಹಿಸುತ್ತಾರೆ.
- ಬ್ರಿಟಿಷರಿಂದ ಭಾರತವು ಸ್ವಾತಂತ್ರ್ಯ ಪಡೆದ ನೆನಪಿಗಾಗಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
- ಈ ದಿನದಂದು ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿಗಳು ಆಚರಣೆಯ ಅಧ್ಯಕ್ಷತೆ ವಹಿಸುತ್ತಾರೆ.
- ಗಾಂಧಿ ಜಯಂತಿಯನ್ನು ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ. ಇದನ್ನು ಗಾಂಧೀಜಿಯವರ ಜನ್ಮ ವಾರ್ಷಿಕೋತ್ಸವದಂದು ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.
- ಗಾಂಧಿ ಜಯಂತಿಯಂದು ಜನರಿಗೆ ಅಹಿಂಸೆ ಮತ್ತು ಸ್ವಚ್ಛತೆಯ ಬಗ್ಗೆ ಮತ್ತು ಗಾಂಧೀಜಿಯವರ ಬೋಧನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
- ರಾಷ್ಟ್ರೀಯ ಹಬ್ಬಗಳ ಆಚರಣೆಯು ಭಾರತೀಯರಾಗಿ ನಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತವೆ.
ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ-1 (200 ಪದಗಳು)
ಭಾರತವು ಮೂರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತದೆ, ಅವುಗಳೆಂದರೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ಮತ್ತು ಗಾಂಧಿ ಜಯಂತಿ. ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ವಿವಿಧ ರಾಜ್ಯಗಳ ಧಾರ್ಮಿಕ ಹಬ್ಬಗಳಂತೆ ವಿಜ್ರಂಬಣೆಯಿಂದ ಆಚರಿಸಲಾಗುತ್ತದೆ. ಮೂರು ಹಬ್ಬಗಳಲ್ಲಿ ನಮ್ಮ ದೇಶದ ಪ್ರಜೆಗಳು ದೇಶಭಕ್ತಿಯ ಭಾವದಲ್ಲಿ ಮುಳುಗಿರುತ್ತಾರೆ. ಈ ಹಬ್ಬಗಳನ್ನು ಆಚರಿಸಲು ವಿವಿಧ ದೊಡ್ಡ ಮತ್ತು ಸಣ್ಣ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ.
ಶಾಲಾ-ಕಾಲೇಜುಗಳು, ಕಚೇರಿಗಳು ಮತ್ತು ಮಾರುಕಟ್ಟೆಗಳನ್ನು, ಹೂವುಗಳು, ಧ್ವಜಗಳು ಮತ್ತು ತ್ರಿವರ್ಣ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಈ ಆಚರಣೆಯ ಅಂಗವಾಗಿ ನಾಟಕಗಳು, ಕವನ ವಾಚನಗಳು, ಚರ್ಚೆಗಳು, ಅಲಂಕಾರಿಕ ಹುಡುಗಿ ಸ್ಪರ್ಧೆಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶಾಲೆಗಳು ಕಚೇರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಆಚರಣೆಗಳು ಹೆಚ್ಚು ವಿಜೃಂಭಣೆಯಿಂದ ನಡೆಯುತ್ತವೆ, ಈ ಹಬ್ಬಗಳನ್ನು ಆಚರಿಸಲು ವಿವಿಧ ವಸತಿ ಪ್ರದೇಶಗಳು (ಹೌಸಿಂಗ್ ಸೊಸೈಟಿಗಳು), ಸಂಘ ಸಂಸ್ಥೆಗಳು ಕೂಡ ಸೇರಿಕೊಳ್ಳುತ್ತದೆ. ಅವರು ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಧ್ವಜಾರೋಹಣವನ್ನು ಮಾಡುವ ಮೂಲಕ ಇದನ್ನು ಆಚರಿಸುತ್ತಾರೆ. ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ, ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತದೆ ಮತ್ತು ಜನರಿಗೆ ಸಿಹಿ ಅಥವಾ ಲಘು ಉಪಹಾರವನ್ನು ಏರ್ಪಡಿಸಲಾಗುತ್ತದೆ.
ನಮ್ಮ ಮಹಾನ್ ನಾಯಕರನ್ನು ಗೌರವಿಸಲು ಮತ್ತು ಅವರ ಕಾರ್ಯಗಳಿಂದ ಸ್ಫೂರ್ತಿ ಪಡೆಯಲು ಈ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಆಯೋಜಿಸಲಾದ ಕಾರ್ಯಕ್ರಮಗಳು ನಮ್ಮ ನೆರೆಯವರು ಸಹೋದ್ಯೋಗಿಗಳು ಮತ್ತು ಇತರ ಹತ್ತಿರದ ಮತ್ತು ಆತ್ಮೀಯರೊಂದಿಗೆ ಬಾಂಧವ್ಯಕ್ಕೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ-2 (300 ಪದಗಳು)
ಪೀಠಿಕೆ
ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಮತ್ತು ಗಣರಾಜ್ಯೋತ್ಸವ ಭಾರತದ ಮೂರು ಪ್ರಮುಖ ರಾಷ್ಟ್ರೀಯ ಹಬ್ಬಗಳು. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಮತ್ತು ಪ್ರಸ್ತುತತೆ ಇದೆ. ಇವುಗಳನ್ನು ವಿವಿಧ ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಈ ಪ್ರತಿಯೊಂದು ಹಬ್ಬಗಳು ಮತ್ತು ಅವುಗಳ ಪ್ರಾಮುಖ್ಯತೆಯ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.
ಸ್ವಾತಂತ್ರ್ಯ ದಿನಾಚರಣೆ
ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು ಗಳಿಸಿತು. ಅಂದಿನಿಂದ ಪ್ರತಿವರ್ಷ ಆಗಸ್ಟ್,15ನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥವಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅವರ ಪರಾಕ್ರಮವನ್ನು ಈ ದಿನ ಸ್ಮರಿಸಲಾಗುತ್ತದೆ. ಸ್ವಾತಂತ್ರ್ಯ ಚಳುವಳಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಶೌರ್ಯವನ್ನು ನಿರೂಪಿಸುವ ಭಾಷಣಗಳನ್ನು ಮಹಾನ್ ಚೇತನಗಳನ್ನು ಗೌರವಿಸಲು ಮತ್ತು ದೇಶದ ಯುವಕರಿಗೆ ಸ್ಪೂರ್ತಿ ನೀಡಲು, ನೀಡಲಾಗುತ್ತದೆ. ದೇಶದ ವಿವಿದೆಡೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಗಣರಾಜ್ಯೋತ್ಸವ
ಭಾರತದ ಸಂವಿಧಾನವು ಜನವರಿ 26,1950 ರಂದು ರೂಪಗೊಂಡಿತು. ಇದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಸಂವಿಧಾನದ ರಚನೆಯೊಂದಿಗೆ, ಭಾರತವು ಸಾರ್ವಭೌಮ ರಾಷ್ಟ್ರವಾಯಿತು. ಜನವರಿ 26ರಂದು ದೇಶದಲ್ಲಿ ಗಣರಾಜ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಮುಖ್ಯ ಗಣರಾಜ್ಯೋತ್ಸವ ಕಾರ್ಯಕ್ರಮವು ನವದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೆರವಣಿಗೆಗಳು, ನೃತ್ಯಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದು ಭಾರತದ ಸಂವಿಧಾನದ ಗೌರವದ ಸಂಕೇತವಾಗಿದೆ. ಈ ದಿನವನ್ನು ಆಚರಿಸಲು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಗಾಂಧಿ ಜಯಂತಿ
ಗಾಂಧಿ ಜಯಂತಿಯನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ. ಇದು ಅತ್ಯಂತ ಪ್ರೀತಿಯ ಭಾರತೀಯ ನಾಯಕರಲ್ಲಿ ಒಬ್ಬರಾದ ಮಹಾತ್ಮ ಗಾಂಧಿಯವರ ಜನ್ಮದಿನ. ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು ಮತ್ತು ಬ್ರಿಟಿಷರನ್ನು ಓಡಿಸಲು ಹಲವಾರು ಭಾರತೀಯರು ಸೇರಿಕೊಂಡರು. ಅವರ ಸಿದ್ಧಾಂತಗಳು ಮತ್ತು ನಮ್ಮ ದೇಶದ ಸ್ವಾತಂತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು, ಈ ದಿನವನ್ನು ಆಚರಿಸಲಾಗುತ್ತದೆ.
ತೀರ್ಮಾನ
ಹೀಗಾಗಿ ಭಾರತದ ಎಲ್ಲಾ ಮೂರು ರಾಷ್ಟ್ರೀಯ ಹಬ್ಬಗಳು ಅದರ ನಾಗರೀಕರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅವುಗಳನ್ನು ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.
ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ-4 (400 ಪದಗಳು)
ಪೀಠಿಕೆ
ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳು, ಪ್ರಮುಖ ಆಚರಣೆಗಳಿಗೆ ಕರೆ ನೀಡುವ ಪ್ರಮುಖ ಘಟನೆಗಳಾಗಿವೆ. ಈ ಪ್ರತಿಯೊಂದು ಹಬ್ಬವನ್ನು ತನ್ನದೇ ಆದ ರೀತಿಯಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ ಎಂಬ ಮೂರು ರಾಷ್ಟ್ರೀಯ ಹಬ್ಬಗಳನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ತಿಳಿಯೋಣ
ಸ್ವಾತಂತ್ರ ದಿನಾಚರಣೆ
ದೆಹಲಿಯ ಕೆಂಪು ಕೋಟೆಯಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ದೇಶದ ಪ್ರಧಾನ ಮಂತ್ರಿಗಳು ಪ್ರತಿವರ್ಷ ಆಗಸ್ಟ್ 15 ರಂದು ಈ ಐತಿಹಾಸಿಕ ಸ್ಥಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. 1947ರ ಆಗಸ್ಟ್ 15ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಧ್ವಜಾರೋಹಣ ಮಾಡಿದ ನಂತರ ಮತ್ತು ದೇಶವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರವನ್ನು ಪಡೆದ ನಂತರ ಈ ಆಚರಣೆಯು ಪ್ರಾರಂಭವಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷವೂ 21 ಗನ್ ಶಾರ್ಟ್ ಗಳನ್ನು ಹಾರಿಸಲಾಗುತ್ತದೆ. ನಂತರ ದೇಶದ ಪ್ರಧಾನಿ, ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ದ್ವಜಾರೋಹಣವನ್ನು ಸಹ ಮಾಡಲಾಗುತ್ತದೆ. ಈ ಸಂದರ್ಭವನ್ನು ಆಚರಿಸಲು ದೇಶದಾದ್ಯಂತ ಶಾಲೆಗಳು, ಕಾಲೇಜುಗಳು, ಕಚೇರಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಗಣರಾಜ್ಯೋತ್ಸವ ಆಚರಣೆ
ದೇಶದ ಸಂವಿಧಾನಿಕ ಮುಖ್ಯಸ್ಥರಾದ ಭಾರತದ ರಾಷ್ಟ್ರಪತಿಗಳು ಪ್ರತಿ ವರ್ಷ ಜನವರಿ 26ರಂದು ನವದೆಹಲಿಯ ರಾಜಪಥದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಇದರ ನಂತರ ರಾಷ್ಟ್ರೀಯ ಕೆಡೆಟ್ ಕ್ರಾಪ್ಸ್ ಮತ್ತು ಭಾರತೀಯ ಸೇನೆಯ ಪೆರೇಡ್ ಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಿವಿಧ ಭಾರತೀಯ ರಾಜ್ಯಗಳ ಸಂಸ್ಕೃತಿಯನ್ನು ಪ್ರದರ್ಶಿಸುವ ರೋಮಾಂಚಕ ಮತ್ತು ಸುಂದರವಾದ ಟ್ಯಾಬ್ಲೋವನ್ನು ಸಹ ಮೆರವಣಿಗೆ ಮಾಡಲಾಗುತ್ತದೆ. ಶಾಲಾ ವಿದ್ಯಾರ್ಥಿಗಳು ರಾಜ ಪಥದಲ್ಲಿ ನೃತ್ಯ ಗಳನ್ನು ಪ್ರದರ್ಶಿಸುತ್ತಾರೆ. ಮತ್ತು ಇತರ ಪ್ರದರ್ಶನ ಗಳನ್ನು ನೀಡುತ್ತಾರೆ.
ಈ ದಿನ ದೇಶಕ್ಕಾಗಿ ವೀರವೇಷದಿಂದ ಹೋರಾಡಿದ ಯೋಧರನ್ನು ಸ್ಮರಿಸಿ ಗೌರವಿಸಲಾಗುತ್ತದೆ. ರಾಷ್ಟ್ರಪತಿಗಳು ಈ ವೀರ ವ್ಯಕ್ತಿಗಳಿಗೆ ಅಶೋಕ ಚಕ್ರ ಮತ್ತು ಕೀರ್ತಿಚಕ್ರ ನೀಡಿ ಗೌರವಿಸುತ್ತಾರೆ. ವಿವಿಧ ರಾಜ್ಯಗಳ ರಾಜ್ಯಪಾಲರು, ತಮ್ಮ ರಾಜ್ಯಗಳಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುತ್ತಾರೆ. ಶಾಲೆಗಳು, ಕಚೇರಿಗಳು ಮತ್ತು ಇತರ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವದ ಆಚರಣೆಗಳನ್ನು ಸಹ ಮಾಡಲಾಗುತ್ತದೆ.
ಗಾಂಧಿ ಜಯಂತಿ ಆಚರಣೆ
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಈ ದಿನದಂದು ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳು ಮತ್ತು ಕಛೇರಿಗಳು ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧಿಯವರ ಸಾಧನೆಗಳು ಮತ್ತು ಕೊಡುಗೆಗಳ ಕುರಿತು, ಭಾಷಣಗಳನ್ನು ನೀಡಲಾಗುತ್ತದೆ. ಪ್ರಾರ್ಥನಾ ಸಭೆಗಳು ನಡೆಯುತ್ತವೆ ಮತ್ತು ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ವಿವಿಧ ಸಚಿವರು, ಗಾಂಧೀಜಿ ಅವರ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ. ಅವರ ಹೊಗಳಿಕೆಯಲ್ಲಿ ಹಾಡುಗಳನ್ನು ಹಾಡಲಾಗುತ್ತದೆ. ಗಾಂಧಿ ಜಯಂತಿಯ ಅಂಗವಾಗಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಸಹ ನಡೆಸಲಾಗುತ್ತದೆ.
ತೀರ್ಮಾನ
ದೇಶದ ಎಲ್ಲಾ ಮೂರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಲ್ಲಿ ಭಾರತದ ನಾಗರಿಕರು, ಪೂರ್ಣ ಹೃದಯದಿಂದ ಭಾಗವಹಿಸುತ್ತಾರೆ. ಈ ಹಬ್ಬಗಳಲ್ಲಿ ಪ್ರಜೆಗಳಲ್ಲಿ ದೇಶಪ್ರೇಮ, ದೇಶಭಕ್ತಿ ಮೂಡುತ್ತದೆ.
ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ-4 (500 ಪದಗಳು)
ಪೀಠಿಕೆ
ಭಾರತವು ಸಾಂಸ್ಕೃತಿಕವಾಗಿ ವೈವಿಧ್ಯಮಯ ದೇಶವಾಗಿದೆ. ಇದು ಅನೇಕ ಧರ್ಮಗಳು ಜಾತಿಗಳು ಮತ್ತು ಸಮುದಾಯಗಳಿಗೆ ನೆಲೆಯಾಗಿದೆ. ಆಯಾ ಹಬ್ಬಗಳನ್ನು ಆಯಾ ಸಮುದಾಯಗಳಲ್ಲಿ ಆಚರಿಸುವ ರೀತಿಯಲ್ಲಿ ಜನರು, ಅನೇಕ ವಿಭಿನ್ನ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಈ ರಾಷ್ಟ್ರೀಯ ಹಬ್ಬದ ದಿನಗಳು, ಭಾರತೀಯ ಇತಿಹಾಸದ ಅಧ್ಯಾಯಗಳಲ್ಲಿ ಅಗಾಧವಾದ ಮಹತ್ವವನ್ನು ಪಡೆದಿದೆ. ರಾಷ್ಟ್ರೀಯ ಹಬ್ಬಗಳು ದೇಶಭಕ್ತಿಯ ಭಾವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ಎಲ್ಲಾ ಭಿನ್ನಾಭಿಪ್ರಾಯಗಳ ಹೊರತಾಗಿಯು ನಮ್ಮ ದೇಶದ ಮೇಲಿನ ನಮ್ಮ ಪ್ರೀತಿಯು ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ಭಾರತದ ಇತಿಹಾಸದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳಲು ನಾವು ಈ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳಾಗಿ ಸ್ವಾತಂತ್ರ ದಿನ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ.
ಸ್ವಾತಂತ್ರ ದಿನಾಚರಣೆ
ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ ದಿನವನ್ನು ಆಚರಿಸಲಾಗುತ್ತದೆ ಈ ದಿನ 1947ರಲ್ಲಿ ಬ್ರಿಟಿಷರ ಇನ್ನೂರು ವರ್ಷಗಳ, ಭಾರತದ ವಾಸಾಹತುಶಾಹಿಯು ಕೊನೆಗೊಂಡಿತು. ಬ್ರಿಟಿಷ್ ಆಳ್ವಿಕೆಯ ಸಂಕೋಲೆಯಿಂದ ದೇಶವನ್ನು ಮತ್ತು ಅದರ ನಾಗರೀಕರನ್ನು ಮುಕ್ತಗೊಳಿಸಲು ಇದು ಸುದೀರ್ಘ ಹೋರಾಟವನ್ನು ತೆಗೆದುಕೊಂಡಿತು. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ಭಗತ್ ಸಿಂಗ್, ಸರೋಜಿನಿ ನಾಯ್ಡು ಮತ್ತು ಬಾಲ ಗಂಗಾಧರ ತಿಲಕ್ ಅಂತವರನ್ನು ಈ ದಿನದಂದು ಗೌರವಿಸಲಾಗುತ್ತದೆ. ಈ ದಿನ ಭಾರತ ಮತ್ತು ಪಾಕಿಸ್ತಾನದ ವಿಭಜನೆಯನ್ನು ಸಹ ಸೂಚಿಸುತ್ತದೆ. ಈ ದಿನದ ಸ್ಮರಣಾರ್ಥವಾಗಿ ರಾಷ್ಟ್ರಪತಿಗಳು ಮೊದಲು ಆಗಸ್ಟ್ 15 ರ ಮುನ್ನದಿನದಂದು ಮಾಧ್ಯಮಗಳ ಪ್ರಸಾರದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.
ದಿನದ ಬೆಳಿಗ್ಗೆ ಪ್ರಸ್ತುತ ಪ್ರಧಾನಿ ನವದೆಹಲಿಯ ಕೆಂಪು ಕೋಟೆಗೆ ಆಗಮಿಸುತ್ತಾರೆ ಮತ್ತು ಗೌರವ ಸಿಬ್ಬಂದಿ ಅವರನ್ನು ಸ್ವಾಗತಿಸುತ್ತಾರೆ. ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ ಮತ್ತು ನಂತರ ರಾಷ್ಟ್ರದ್ಯಾಂತ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡುತ್ತಾರೆ. (1947 ರಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಮಾಡಿದ ರೀತಿಯಲ್ಲಿಯೇ). ಈ ದಿನದಂದು ಭಾರತೀಯ ಮಿಲಿಟರಿ ಮತ್ತು ಅರೆಸೇನ ಪಡೆಗಳಿಂದ ಮೆರವಣಿಗೆ ಮಾಡಲಾಗುತ್ತದೆ. ಶಾಲಾ ಮಕ್ಕಳಿಂದ ಆಯ್ದ ಪ್ರದರ್ಶನಗಳನ್ನು ಸಹ ನಡೆಸಲಾಗುತ್ತದೆ. ಧ್ವಜಾರೋಹಣವನ್ನು ಭಾರತದಾದ್ಯಂತ ಮಾಡಲಾಗುತ್ತದೆ ಮುಖ್ಯವಾಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ. ದೇಶದ ಪ್ರತಿಯೊಂದು ಸರ್ಕಾರಿ ಕಟ್ಟಡವು, ಅದರ ತಾರಸಿಯ ಮೇಲೆ ತ್ರಿವರ್ಣವನ್ನು ಹಾರಿಸುತ್ತದೆ. ಮಕ್ಕಳು ಮತ್ತು ಹಿರಿಯರು ಗಾಳಿಪಟಗಳನ್ನು ಹಾರಿಸುವುದನ್ನು ಮತ್ತು ನಮ್ಮ ತ್ರಿವರ್ಣಗಳೊಂದಿಗೆ ಆಟವಾಡುವುದನ್ನು ಆನಂದಿಸುತ್ತಾರೆ. ಹೊಸ ಪೀಳಿಗೆಗೆ ಮುಕ್ತ ಗಾಳಿಯಲ್ಲಿ ಉಸಿರಾಡಲು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಕೊಡುಗೆಗಳು ಮತ್ತು ತ್ಯಾಗಗಳನ್ನು ನೆನಪಿಸಲು ವಿಭಿನ್ನ ನಾಟಕಗಳು ಮತ್ತು ಚಲನಚಿತ್ರಗಳನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಗಣರಾಜ್ಯೋತ್ಸವ ಆಚರಣೆ
ಜನವರಿ 26, 1950ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಮತ್ತು ನಮ್ಮ ದೇಶವು ಗಣರಾಜ್ಯವಾಯಿತು. 1929ರ ಈ ದಿನದಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷ್ ಆಡಳಿತವು ನೀಡುತ್ತಿದ್ದ ಡೊಮಿನಿಯನ್ ಸ್ಥಾನಮಾನದ ವಿರುದ್ಧ ಪೂರ್ಣ ಸ್ವರಾಜ್ಯ ಎಂದು ಘೋಷಿಸಿತು. ಸಂವಿಧಾನದ ಅಂತಿಮ ಕರುಡು ಸಿದ್ಧವಾಗಲು ಎರಡು ವರ್ಷ 11 ತಿಂಗಳು ತೆಗೆದುಕೊಂಡಿತು. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಖಾತ್ರಿ ಪಡಿಸಲಾದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳನ್ನು ಒಳಗೊಂಡಿತ್ತು. ಇದರ ಸ್ಮರಣಾರ್ಥ ಆಚರಣೆಯು ರಾಷ್ಟ್ರಪತಿ ಭವನದಿಂದ ರಾಜಪಥದ ವರೆಗೆ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ರಾಷ್ಟ್ರಪತಿಗಳು ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸುತ್ತಾರೆ. ಶಶಸ್ತ್ರ ಪಡೆಗಳು ಇಂಡಿಯಾ ಗೇಟ್ ಕಡೆಗೆ ಸಾಗುತ್ತದೆ, ಧ್ವಜಾರೋಹಣವನ್ನು ಮಾಡಲಾಗುತ್ತದೆ ಮತ್ತು ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ರಕ್ಷಣಾ ಸಚಿವಾಲಯದಿಂದ ಆಯ್ಕೆಯಾದ ವಿವಿಧ ರಾಜ್ಯಗಳ ಪ್ರಶಸ್ತ್ರ ಪಡೆಗಳು ಮತ್ತು ಫಲಕಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಗೌರವಿಸಲು ವಿದೇಶಿ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಗಣರಾಜ್ಯೋತ್ಸವ ದಿನದಂದು ಜನರು ಮೆರವಣಿಗೆಯನ್ನು ವೀಕ್ಷಿಸಲು ಮುಂಜಾನೆ ಸೇರುತ್ತಾರೆ.
ಗಾಂಧಿ ಜಯಂತಿ ಆಚರಣೆ
ಮಹಾತ್ಮ ಗಾಂಧಿ ಎಂದು ಕರೆಯಲ್ಪಡುವ ರಾಷ್ಟ್ರಪಿತ ಮೋಹನ್ ದಾಸ್ ಕರಮಚಂದ್ ಗಾಂಧಿ ಅವರನ್ನು ಸ್ಮರಿಸಲು ಅವರ ಜನ್ಮ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ. ಇದು ಅಕ್ಟೋಬರ್ 2ರಂದು ಬರುತ್ತದೆ ಅವರು ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಮತ್ತು ಅಹಿಂಸೆಯ ಸಿದ್ಧಾಂತಗಳಿಗೆ ಹೆಸರುವಾಸಿಯಾಗಿದ್ದರು. ಅವರ ನಂಬಿಕೆಗಳು ಇಂದಿಗೂ ಆಚರಣೆಯಲ್ಲಿವೆ. ಪ್ರಧಾನಮಂತ್ರಿಯವರು ಅವರ ಸಮಾಧಿ ಸ್ಥಳ ರಾಜಘಟ್ ನಲ್ಲಿ ಗೌರವ ಸಲ್ಲಿಸುತ್ತಾರೆ. ಶಾಲೆಗಳಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಗಳು, ಕವಿತೆ ವಾಚನ ಮತ್ತು ಅಹಿಂಸೆಯನ್ನು ಉತ್ತೇಜಿಸುವ ಫಲಕಗಳನ್ನು ತಯಾರಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ದಿನವನ್ನು ಮಹಾತ್ಮ ಗಾಂಧಿಯವರ ಗೌರವಾರ್ಥ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ತೀರ್ಮಾನ
ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಮಹಾನ್ ನಾಯಕರ ಗೌರವಾರ್ಥವಾಗಿ ಮತ್ತು ಅವರ ಅಪ್ರತಿಮ ಕಾರ್ಯಗಳಿಂದ ಸ್ಪೂರ್ತಿ ಪಡೆಯಲು ಬಹಳ ಮುಖ್ಯವಾದ ದಿನಗಳಾಗಿವೆ. ಇಷ್ಟು ವರ್ಷಗಳ ನಂತರವು ನಮ್ಮ ದೇಶದ ಇತಿಹಾಸವನ್ನು ನಮ್ಮ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳಲು ಇದು ನಮಗೆ ಅವಕಾಶ ನೀಡುತ್ತದೆ. ಇದು ನಾಗರೀಕರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರ ಒಂದಾಗಲು ಅನುಕೂಲ ಮಾಡಿಕೊಡುತ್ತದೆ. ಈ ದಿನಗಳನ್ನು ಆಚರಿಸಲು ಆಯೋಜಿಸಲಾದ ಕಾರ್ಯಕ್ರಮಗಳು ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತವೆ ಮತ್ತು ನಮ್ಮ ನೆರೆ ಹೊರೆಯವರು ಸಹೋದ್ಯೋಗಿಗಳು ಮತ್ತು ಇತರೆ ಹತ್ತಿರದ ಮತ್ತು ಆತ್ಮೀಯರೊಂದಿಗೆ ದೇಶಭಕ್ತಿಯ ಬಗ್ಗೆ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ. ಶಾಲೆಯ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ದೇಶಭಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ.
ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ-5
1947ರಿಂದ, ಅಂದರೆ ದೇಶಕ್ಕೆ ಸ್ವತಂತ್ರ ಬಂದ ನಂತರ ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿವೆ. ಅಂದಿನಿಂದ ಇಂದಿನವರೆಗೆ ನಾವು ಅವುಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ಈ ಹಬ್ಬಗಳು ನಮ್ಮ ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು ಕೆಳಗಿನಂತಿವೆ.
ಕ್ರಮ ಸಂಖ್ಯೆ | ರಾಷ್ಟ್ರೀಯ ಹಬ್ಬದ ಹೆಸರು | ರಾಷ್ಟ್ರೀಯ ಹಬ್ಬದ ದಿನಾಂಕ |
1 | ಸ್ವಾತಂತ್ರ ದಿನಾಚರಣೆ | ಆಗಸ್ಟ್ 15 |
2 | ಗಣರಾಜ್ಯೋತ್ಸವ | ಜನವರಿ 26 |
3 | ಗಾಂಧಿ ಜಯಂತಿ | ಅಕ್ಟೋಬರ್ 2 |
ಇವು ನಮ್ಮ ರಾಷ್ಟ್ರೀಯ ಹಬ್ಬಗಳಾಗಿದ್ದು, ಇದಲ್ಲದೆ ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆಗಳು ಕೂಡ ರಾಷ್ಟ್ರೀಯ ರಜಾ ದಿನಗಳಾಗಿವೆ. ಅವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ ಹೋರಾಟಗಾರರ ಸ್ವರ್ಣಾರ್ಥಕವಾಗಿ ಆಚರಿಸಲಾಗುತ್ತದೆ. ಇದಲ್ಲದೆ ಈ ವಿಶೇಷ ದಿನದಂದು ಮಹಾನ್ ಸ್ವಾತಂತ್ರ ಹೋರಾಟಗಾರರಾದ ಸರ್ದಾರ್ ವಲ್ಲಭಾಯಿ ಪಟೇಲ್, ಭಗತ್ ಸಿಂಗ್, ಡಾ. ಅಂಬೇಡ್ಕರ್ ಮುಂತಾದ ನಾಯಕರುಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಹಬ್ಬಗಳು ದೇಶಕ್ಕೆ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ನೀಡುತ್ತವೆ. ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಆದ್ದರಿಂದ ಇವು ಇತರ ಹಬ್ಬಗಳಿಗಿಂತ ವಿಶೇಷವಾಗಿರುತ್ತದೆ. ಈ ಹಬ್ಬಗಳನ್ನು ಆಚರಿಸಲು ಸರ್ಕಾರ ವಿಶೇಷ ಸಿದ್ಧತೆಗಳನ್ನು ಮಾಡುತ್ತದೆ. ಇಡಿ ದೇಶವು ನವ ವಧುವಿನಂತೆ ಅಲಂಕರಿಸಲ್ಪಡುತ್ತದೆ,ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನ ಸಿಗುತ್ತದೆ.ಈ ವಿಶೇಷ ದಿನದಂದು ಪ್ರತಿ ರಾಜ್ಯ,ಪ್ರತಿ ಜಿಲ್ಲೆ ಯ ಮತ್ತು ಪ್ರತಿಯೊಂದು ಸರ್ಕಾರಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮತ್ತು ಎಲ್ಲೆಡೆ ಏಕರೂಪವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಭಾರತದ ರಾಜಧಾನಿ ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮ್ಮ ದೇಶದ ಮಿಲಿಟರಿ ಶಕ್ತಿಯನ್ನು ಸಹ ಪ್ರದರ್ಶಿಸಲಾಗುತ್ತದೆ. ಈ ದಿನದಂದು ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ, ಇದರಲ್ಲಿ ದೇಶಕ್ಕಾಗಿ ಅದ್ಭುತ ಕೆಲಸ ಮಾಡಿದವರನ್ನು ಗೌರವಿಸಲಾಗುತ್ತದೆ. ಈ ದಿನದಂದು ದೇಶದ ಜನರು ಸಂದೇಶಗಳು ಮತ್ತು ಕಾರ್ಡ್ ಗಳನ್ನು ನೀಡುವ ಮೂಲಕ ಪರಸ್ಪರ ಅಭಿನಂದಿಸುತ್ತಾರೆ.
ಸ್ವಾತಂತ್ರ್ಯ ದಿನ
1947 ರಲ್ಲಿ, 200 ವರ್ಷಗಳ ನಂತರ ಬ್ರಿಟಿಷ್ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಾವು ಪ್ರತಿ ವರ್ಷ ಆಗಸ್ಟ್ 15 ಅನ್ನು ಸ್ವಾತಂತ್ರ ದಿನವನ್ನಾಗಿ ಆಚರಿಸುತ್ತೇವೆ. ಮತ್ತು ಅತಿ ಹೆಚ್ಚಿನ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಸಡಗರ ಮತ್ತು ಸಂಭ್ರಮದ ದಿನವಾಗಿದೆ. ಈ ದಿನದಂದು ಪ್ರತಿಯೊಬ್ಬರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರನ್ನು ಸ್ಮರಿಸುತ್ತಾರೆ, ಪ್ರತಿಯೊಬ್ಬರು ಅವರಿಗೆ ಗೌರವ ಸಲ್ಲಿಸುತ್ತಾರೆ. ಈ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ದೊಡ್ಡ ನಾಯಕರು ನಮ್ಮ ದೇಶದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಒಂದಲ್ಲ ಒಂದು ಜಿಲ್ಲೆಯಲ್ಲಿ ಹಾರಿಸುತ್ತಾರೆ. ಕೆಂಪುಕೋಟೆಯಿಂದ ದೇಶದ ಹೆಸರಿನಲ್ಲಿ ಪ್ರಧಾನಿ ಭಾಷಣವನ್ನು ಮಾಡುತ್ತಾರೆ. ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಹೊಸ ಯೋಜನೆಗಳ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.ಮತ್ತು ದೇಶದ ಸೇನೆಗೆ ಪ್ರಧಾನಿ ನಮನ ಸಲ್ಲಿಸುತ್ತಾರೆ.
ಈ ದಿನದ ಸಿದ್ಧತೆಗಳು ಶಾಲಾ-ಕಾಲೇಜುಗಳಲ್ಲಿ ಮುಂಚಿತವಾಗಿಯೇ ಪ್ರಾರಂಭವಾಗುತ್ತದೆ. ಈ ದಿನವನ್ನು ಭಾಷಣ, ಹಾಡು, ನೃತ್ಯಗಳೊಂದಿಗೆ ಆಚರಿಸಲಾಗುತ್ತದೆ. ಬಳಿಕ ಬಹುಮಾನ ವಿತರಣೆಯು ನಡೆಯುತ್ತದೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲದೆ, ಜಿಲ್ಲೆಯಾದ್ಯಂತ ಇದನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಅಲ್ಲಿ ಎಲ್ಲಾ ಶಾಲಾ ಕಾಲೇಜು ಮಕ್ಕಳು ಭಾಗವಹಿಸುತ್ತಾರೆ. ಇಲ್ಲಿ ನೃತ್ಯ, ಪರೇಡ್, ಮೆರವಣಿಗೆ, ಭಾಷಣ, ಗಾಯನ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇದರೊಂದಿಗೆ ಈ ದಿನಕ್ಕೆ ಕೆಲವು ದಿನಗಳ ಮೊದಲು ವಿವಿಧ ಆಟಗಳು, ಚರ್ಚೆಗಳು, ಮುಖವರಣಿಕೆ ಮುಂತಾದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳು ದೇಶದ ನಾಗರೀಕರ ಏಕತೆಯನ್ನು ಬಲಪಡಿಸುತ್ತವೆ. ಈ ದಿನ ಟಿವಿ, ರೇಡಿಯೋಗಳಲ್ಲಿ ಸ್ವಾತಂತ್ರ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಬರುತ್ತವೆ.
ಗಣರಾಜ್ಯ ದಿನ
ಜನವರಿ 26, 1950 ರಂದು, ಸ್ವತಂತ್ರ ಭಾರತದ ಸಂವಿಧಾನವು ಜಾರಿಗೆ ಬಂದಿತು. ಅಂದಿನಿಂದ ಪ್ರತಿ ವರ್ಷ ನಾವು ಜನವರಿ 26ರಂದು ಗಣರಾಜ್ಯ ದಿನವನ್ನಾಗಿ ಆಚರಿಸುತ್ತೇವೆ. ಈ ದಿನದಂದು ಪ್ರಧಾನಿಯವರು ಇಂಡಿಯಾ ಗೇಟ್ ನಲ್ಲಿ ದೇಶದ ಎಲ್ಲಾ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಈ ದಿನವೂ ಭಾರತದ ಪ್ರತಿಯೊಬ್ಬ ನಾಗರೀಕನ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನ ಭಾರತವು ಸಂಪೂರ್ಣ ಗಣರಾಜ್ಯವಾಯಿತು. ದೇಶವು ತನ್ನದೇ ಆದ ಸರ್ಕಾರವನ್ನು ನಡೆಸುವ ಹಕ್ಕನ್ನು ಪಡೆದುಕೊಂಡಿತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ ದಿನಾಚರಣೆ ರೀತಿಯಲ್ಲಿ ಎಲ್ಲಾ ಕಡೆ ಧ್ವಜಾರೋಹಣ ಮಾಡಲಾಗುತ್ತದೆ. ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಮತ್ತು ಭಾಷಣ ಮಾಡಲಾಗುತ್ತದೆ. ದೆಹಲಿಯ ರಾಜಪತನದಲ್ಲಿ ಇದಕ್ಕಾಗಿ ವಿಶೇಷ ಸಿದ್ಧತೆ ಮಾಡಲಾಗುತ್ತದೆ. ದೆಹಲಿಯ ಶಾಲಾ ಮಕ್ಕಳಿಂದ ವಿಶೇಷ ಜಾನಪದ ನೃತ್ಯವನ್ನು ಆಯೋಜಿಸಲಾಗುತ್ತದೆ. ಈ ದಿನ ವಿದೇಶದ ನಾಯಕರನ್ನು ಭಾರತದಲ್ಲಿ ಅತಿಥಿಯಾಗಿ ಕರೆಯುತ್ತಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಯು ಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು 2015ರಲ್ಲಿ ಅವರ ಮೊದಲ ಗಣರಾಜ್ಯೋತ್ಸವದಂದು ಕರೆಯಲಾಯಿತು. ಈ ಕಾರ್ಯಕ್ರಮವು ರಾಜಪಥದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ.
ಈ ದಿನದಂದು ಶೌರ್ಯ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನದಂತಹ ವಿಶೇಷ ಗೌರವಗಳನ್ನು ನೀಡಲಾಗುತ್ತದೆ. ಈ ಹಬ್ಬವನ್ನು ದೇಶದ ಪ್ರತಿಯೊಂದು ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ, ಅಲ್ಲಿಯೂ ಸಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು ಸೇನಾಪರೇಡಿಗೆ ಸೆಲ್ಯೂಟ್ ಮಾಡುತ್ತಾರೆ.
ಗಾಂಧಿ ಜಯಂತಿ
ನಮ್ಮ ದೇಶದ ಪಿತಾಮಹ ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜನ್ಮದಿನವನ್ನು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಎಂದು ಭಾರತಾದ್ಯಂತ ಆಚರಿಸಲಾಗುತ್ತದೆ. ಹುತಾತ್ಮ ಗಾಂಧೀಜಿಯವರು ತಮ್ಮ ಕಠಿಣ ಪರಿಶ್ರಮದಿಂದ ಭಾರತ ದೇಶಕ್ಕೆ ಸ್ವಾತಂತ್ರ ನೀಡಿದರು. ಅಹಿಂಸಾವಾದಿ ಗಾಂಧೀಜಿಯವರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದರಾಗಿದ್ದರು, ಅವರು ಕೇವಲ ದೇಶದ ಸ್ವಾತಂತ್ರವನ್ನು ಪ್ರೀತಿಸುತ್ತಿದ್ದರು. ರಾಷ್ಟ್ರೀಯ ಹಬ್ಬದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ ಈ ದಿನವನ್ನು ಸ್ವಾತಂತ್ರ ದಿನ ಮತ್ತು ಗಣರಾಜ್ಯೋತ್ಸವ ದಿನದ ರೀತಿ ವಿಜೃಂಭಣೆಯಿಂದ ಆಚರಿಸುವುದಿಲ್ಲ. ಆದರೆ ಈ ದಿನ ಪ್ರತಿಯೊಬ್ಬ ಭಾರತೀಯನಿಗೆ ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಗಾಂಧೀಜಿ ಸದಾ ಸತ್ಯಗ್ರಹ ಮತ್ತು ಅಹಿಂಸೆಯೊಂದಿಗೆ ನಿಂತವರು. ತಮ್ಮ ಮೌಲ್ಯಗಳನ್ನು ಅನುಸರಿಸಿ ದೇಶಕ್ಕೆ ಸ್ವತಂತ್ರವನ್ನು ನೀಡಿದ್ದರು. ಈ ದಿನ ಸರ್ಕಾರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅವರ ಬಗ್ಗೆ ಭಾಷಣಗಳನ್ನು ಆಯೋಜಿಸಲಾಗುತ್ತದೆ.
ಈ ದಿನದಂದು ಪ್ರಧಾನಿ, ರಾಷ್ಟ್ರಪತಿ ಮತ್ತು ದೇಶದ ಪ್ರತಿಯೊಬ್ಬ ಪ್ರಮುಖ ನಾಯಕರು ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್ ಘಾಟ್ ಹೋಗಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸುತ್ತಾರೆ. ಇಲ್ಲಿ ವಿಶೇಷ ಪ್ರಾರ್ಥನಾ ಸಭೆಯನ್ನು ಸಹ ಆಯೋಜಿಸಲಾಗುತ್ತದೆ. ಇದರೊಂದಿಗೆ ಗಾಂಧೀಜಿಯವರ ಜೀವನಾಧಾರಿತ ಭಾಷಣ, ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಬಂಧ, ಸೃಜನಶೀಲ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದರೊಂದಿಗೆ ಮಕ್ಕಳು ಗಾಂಧೀಜಿಯನ್ನು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳಲು ಸಹಾಯವಾಗುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು.
ಮೇಲೆ ತಿಳಿಸಿದ ದಿನಗಳನ್ನು ಹೊರತುಪಡಿಸಿ ಲಾಲಾ ಲಜ್ಪತ್ ರಾಯ್, ರಾಣಿ ಲಕ್ಷ್ಮೀಬಾಯಿ, ಸುಭಾಷ್ ಚಂದ್ರ ಬೋಸ್ ಮುಂತಾದ ಇನ್ನು ಕೆಲವು ಸ್ಮರಣೀಯ ದಿನಗಳಿವೆ. ಇವರೆಲ್ಲರೂ ನಮ್ಮ ದೇಶದ ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರು, ದೇಶವನ್ನು ಸ್ವತಂತ್ರಗೊಳಿಸುವುದು ತನ್ನ ಆದ್ಯ ಕರ್ತವ್ಯವೆಂದು ಪರಿಗಣಿಸಿದವರು, ಈ ಎಲ್ಲಾ ದಿನಗಳನ್ನು ಸಣ್ಣ ರೀತಿಯಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯವಾಗಿ ಈ ಹಬ್ಬಗಳು ನಮ್ಮ ದೇಶವನ್ನು ಒಗ್ಗೂಡಿಸುತ್ತವೆ. ಇಲ್ಲಿ ಯಾವುದೇ ಜಾ,ತಿ ಧರ್ಮ, ಸಮಾಜವು ಈ ಹಬ್ಬಗಳನ್ನು ಆಚರಿಸದಂತೆ ಒತ್ತಾಯಿಸುವುದಿಲ್ಲ.
ರಾಷ್ಟ್ರೀಯ ಹಬ್ಬಗಳನ್ನು ಭಾರತೀಯರು ಹೇಗೆ ಆಚರಿಸುತ್ತಾರೆ
- ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
- ಈ ದಿನ ವಿದ್ಯಾರ್ಥಿಗಳು . ದೇಶಭಕ್ತಿಯ ನಾಟಕಗಳನ್ನು ಪ್ರದರ್ಶಿಸುತ್ತಾರೆ.
- ಕೆಲವು ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
- ದಿನದಂದು ದೇಶದ ವೀರ ಸೈನಿಕರು ಮತ್ತು ದೇಶದ ಹಿತಕ್ಕೋಸ್ಕರ ಕೆಲಸ ಮಾಡುವ ಜನರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
- ಈ ದಿನಗಳಂದು ಭಾರತೀಯರು ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ ಮತ್ತು ದೇಶಭಕ್ತರನ್ನು ಹೊಗಳುತ್ತಾರೆ.
- ಬಾಪೂಜಿ ಅವರ ಜೀವನ ಚರಿತ್ರೆಯನ್ನು ಗಾಂಧಿ ಜಯಂತಿ ದಿನ ಹೇಳಲಾಗುತ್ತದೆ, ಮತ್ತು ಅವರು ಭಾರತಕ್ಕಾಗಿ ಏನು ಮಾಡಿದರು ಎಂದು ತಿಳಿಸಲಾಗುತ್ತದೆ.
- ರಾಷ್ಟ್ರೀಯ ಹಬ್ಬಗಳು ರಾಷ್ಟ್ರೀಯ ರಜಾ ದಿನಗಳಾಗಿದ್ದರು ರಾಷ್ಟ್ರೀಯ ಹಬ್ಬಗಳೆಂದು ಶಾಲೆಗಳು ಮತ್ತು ಕಚೇರಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ತೀರ್ಮಾನ
ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಮಹಾನ್ ನಾಯಕರ ಗೌರವಾರ್ಥವಾಗಿ ಮತ್ತು ಅವರ ಅಪ್ರತಿಮ ಕಾರ್ಯಗಳಿಂದ ಸ್ಪೂರ್ತಿ ಪಡೆಯಲು ಬಹಳ ಮುಖ್ಯವಾದ ದಿನಗಳಾಗಿವೆ. ಇಷ್ಟು ವರ್ಷಗಳ ನಂತರವೂ ನಮ್ಮ ದೇಶದ ಇತಿಹಾಸವನ್ನು ನಮ್ಮ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳಲು ಇದು ನಮಗೆ ಅವಕಾಶ ನೀಡುತ್ತದೆ. ಇದು ನಾಗರೀಕರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಒಂದಾಗಲು ಅನುಕೂಲ ಮಾಡಿಕೊಡುತ್ತದೆ. ಈ ದಿನಗಳನ್ನು ಆಚರಿಸಲು ಆಯೋಜಿಸಲಾದ ಕಾರ್ಯಕ್ರಮಗಳು ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತದೆ ಮತ್ತು ನಮ್ಮ ನೆರೆಹೊರೆಯವರು ಸಹೋದ್ಯೋಗಿಗಳು ಮತ್ತು ಇತರೆ ಹತ್ತಿರದ ಮತ್ತು ಆತ್ಮೀಯರೊಂದಿಗೆ ದೇಶಭಕ್ತಿಯ ಬಗ್ಗೆ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ. ಶಾಲೆಯ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ದೇಶಭಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ.
FAQ
ಪ್ರಶ್ನೆ1- ಭಾರತದ ರಾಷ್ಟ್ರೀಯ ಹಬ್ಬಗಳು ಯಾವುವು?
ಉತ್ತರ- ಸ್ವಾತಂತ್ರ ದಿನ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿಯನ್ನು ಭಾರತವು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸುತ್ತದೆ.
ಪ್ರಶ್ನೆ2- ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮಹತ್ವವೇನು?
ಉತ್ತರ- ರಾಷ್ಟ್ರೀಯ ಹಬ್ಬಗಳು ದೇಶದ ಜನರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ ಮತ್ತು ರಾಷ್ಟ್ರದ ನಾಗರೀಕರನ್ನು ಒಟ್ಟುಗೂಡಿಸುತ್ತದೆ.
ಪ್ರಶ್ನೆ3- ರಾಷ್ಟ್ರೀಯ ಅಹಿಂಸಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ- ಅಕ್ಟೋಬರ್ 2 ರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.