ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ| ಇತಿಹಾಸ, ಮಹತ್ವ, ಆಚರಣೆ,ಭಾಷಣ | International women’s Day,History, Importance and Celabaration in Kannada 2024

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ,ಇತಿಹಾಸ, ಮಹತ್ವ, ಆಚರಣೆ,ಭಾಷಣ

ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಇದನ್ನು ಕೇಳುವುದಕ್ಕೆ ತುಂಬಾ ಹಿತವಾಗಿದೆ ಎನಿಸುತ್ತದೆ, ಆದರೆ ಈ ವಿಷಯವನ್ನು ಯೋಚಿಸಿ ನೋಡಿದಾಗ ಮಹಿಳೆಯರಿಗೆ ಗೌರವವನ್ನು ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ಒಂದು ದಿನವನ್ನು ಪರಿಗಣಿಸುವ ಅಗತ್ಯವಿದೆಯ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಮೊದಲಿನಿಂದಲೂ ಇದರ ಉದ್ದೇಶ ಮಹಿಳೆಯರನ್ನು ಗೌರವಿಸುವುದು ಮಾತ್ರವೇ ಅಥವಾ ಅವರು ತಮ್ಮ ಸಮಸ್ಯೆಗಳಿಂದ ಬೇಸತ್ತು ಈ ದಿನವನ್ನು ಆಚರಿಸಲು ಪ್ರಾರಂಭಿಸಿದ್ದಾರೆಯೇ?, ಭಾರತದಂತೆಯೇ ಪ್ರಪಂಚದಾದ್ಯಂತ ಮಹಿಳೆಯರು, ತಮ್ಮ ಹಕ್ಕು ಮತ್ತು  ಗೌರವವನ್ನು ಪಡೆಯಲು, ಸವಾಲುಗಳನ್ನು ಎದುರಿಸಬೇಕಾಗಿತ್ತೆ? ಹೀಗೆ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಇಂದು ಈ ಲೇಖನದ ಮೂಲಕ ನಾವು ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತಿದ್ದೇವೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಇದು ನಿಮಗೆ ಉಪಯುಕ್ತವಾಗಲಿದೆ ಎಂದು ನಾವು ಭಾವಿಸುತ್ತೇವೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಬಂಧ

ಹೆಸರುಅಂತರಾಷ್ಟ್ರೀಯ ಮಹಿಳಾ ದಿನ
ಆಚರಿಸುವ ದಿನಾಂಕಮಾರ್ಚ್ 8
ಪ್ರಾರಂಭವಾದ ವರ್ಷ1911 ರಲ್ಲಿ
ಪ್ರಾರಂಭವಾದ ಸ್ಥಳನ್ಯೂಯಾರ್ಕ್
ಈ ವರ್ಷ ಎಷ್ಟನೇ  ಮಹಿಳಾ ದಿನ113ನೇ 
2024ರ ವಿಷಯಅವಳನ್ನು ಎಣಿಸಿ (ಆರ್ಥಿಕ ಸಬಲೀಕರಣದ ಮೂಲಕ ಲಿಂಗ ಸಮಾನತೆಯನ್ನು ವೇಗಗೊಳಿಸುವುದು) 

ಪ್ರತಿವರ್ಷದಂತೆ ಈ ವರ್ಷವು ಅಂದರೆ, 2024ರಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಮಹಿಳೆಯರ ಗೌರವಾರ್ಥವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಯೋಜಿಸಲಾಗುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಪಂಚದ 27ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ವಿಶ್ವಸಂಸ್ಥೆಯ ಅನುಮೋದನೆಯ ನಂತರ ಪ್ರತಿವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ದಿನವೂ ಪ್ರಪಂಚದಾದ್ಯಂತ ಮಹಿಳೆಯರಿಗೆ ಮೀಸಲಾದ ದಿನವಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಎಲ್ಲಾ ಕ್ಷೇತ್ರಗಳ ಮಹಿಳೆಯರನ್ನು ಗೌರವಿಸಲಾಗುತ್ತದೆ. ಮಹಿಳಾ ದಿನಾಚರಣೆಯಂದು ಮಹಿಳೆಯರ ಹಕ್ಕುಗಳನ್ನು ವಿವರಿಸಲಾಗುತ್ತದೆ. ಕೆಲವೆಡೆ ಮಹಿಳಾ ದಿನಾಚರಣೆಯಂದು ತಮ್ಮ ಅಜ್ಜಿ, ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಉಡುಗೊರೆಗಳನ್ನು ನೀಡಿದರೆ ಇತರೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗೌರವಿಸಲಾಗುತ್ತದೆ. 

ಅಂತಾರಾಷ್ಟ್ರೀಯ ಮಹಿಳಾ ದಿನ ಎಂದರೇನು?

ಅಂತರ್ರಾಷ್ಟ್ರೀಯ ಮಹಿಳಾ ದಿನವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಆಚರಿಸಲು ಸಮರ್ಪಿಸಲಾಗಿದೆ. ಮಹಿಳೆಯರಿಗಾಗಿ ಸಾಮೂಹಿಕವಾಗಿ ಸ್ಥಾಪಿತವಾದ ಈ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಮೇಲೆ ಕೇಂದ್ರೀಕರಿಸುತ್ತದೆ. ಮಹಿಳೆಯರು ಮತ್ತು ಪುರುಷರ ಹೋಲಿಕೆ, ಅವರ ಆದಾಯ ಶಿಕ್ಷಣ ಮತ್ತು ಕೆಲಸದ ಸಮಯವನ್ನು ಆಧರಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಜಾಗತಿಕ  ಆಚರಣೆಯು ಮಹಿಳೆಯರು ಎಷ್ಟು ಸಬಲರಾಗಿದ್ದಾರೆ. ಎಂಬುದರ ಪ್ರತಿಬಿಂಬವಾಗಿದೆ. ಈ ದಿನದಂದು ಮಹಿಳೆಯರ ಹಕ್ಕುಗಳನ್ನು ವಿವರಿಸಲಾಗುತ್ತದೆ. ಭಾರತದಲ್ಲಿ ಮಹಿಳಾ ದಿನದ ಬಗ್ಗೆ ವಿಶೇಷ ಉತ್ಸಾಹದ ವಾತಾವರಣವಿದೆ, ಏಕೆಂದರೆ ಇಂದು ಮಹಿಳೆಯರು ಭಾರತದ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸಿದ್ದಾರೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸವು 114 ವರ್ಷಗಳಷ್ಟು ಹಳೆಯದು. ಮಹಿಳಾ ದಿನವು 1909ರಲ್ಲಿ ಪ್ರಾರಂಭವಾಯಿತು. ನ್ಯೂಯಾರ್ಕ್ ನಗರದಲ್ಲಿ ಸುದೀರ್ಘಕೆಲಸದ ಅವಧಿ, ಕಡಿಮೆ ವೇತನ ಮತ್ತು ಮತದಾನದ ಹಕ್ಕುಗಳ ಕೊರತೆಯ ವಿರುದ್ಧ ಅಮೆರಿಕಾದ ಸಮಾಜವಾದಿ ಪಕ್ಷ 15,000 ಮಹಿಳೆಯರೊಂದಿಗೆ ಪ್ರತಿಭಟಿಸಿದಾಗ ಮಹಿಳೆಯರಿಗಾಗಿ ಒಂದು ದಿನವನ್ನು ಮೀಸಲಿಡುವ ಮತ್ತು ಮಹಿಳಾ ದಿನವನ್ನು ಅಂತರರಾಷ್ಟ್ರೀಯವಾಗಿಸುವ ಕಲ್ಪನೆಯು ಕ್ಲಾರ ಜಟ್ಕಿನ್ ಎಂಬ ಮಹಿಳೆಯಿಂದ ಬಂದಿತು.1910ರಲ್ಲಿ ಕೋಪನ್ ಹ್ಯಾಂಗನ್ ನಲ್ಲಿ ನಡೆದ ದುಡಿಯುವ ಮಹಿಳೆಯರಿಗಾಗಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಲಾರಾ ಜಟ್ಕಿನ್ ಈ ಕಲ್ಪನೆಯನ್ನು ಸೂಚಿಸಿದರು. ಅಲ್ಲಿ 17 ದೇಶಗಳ 100 ಮಹಿಳೆಯರು ಇದ್ದರು ಮತ್ತು ಅವರ ಸಲಹೆಯನ್ನು ಎಲ್ಲರೂ ಸರ್ವಾನುಮತದಿಂದ ಒಪ್ಪಿಕೊಂಡರು.

ಅದರ ನಂತರ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸಿಡ್ಸರ್ಲ್ಯಾಂಡಲ್ಲಿ 1911ರಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪುರುಷರು ಯುದ್ಧದಲ್ಲಿ ದೂರವಿರುವಾಗ ಮಹಿಳೆಯರು ಆಹಾರದ ಕೊರತೆಯಿಂದ ಬಳಲುತ್ತಿದ್ದರು. ಸರ್ಕಾರಗಳು ಕೂಡ ಅವರ ಬೇಡಿಕೆಗಳಿಗೆ ಕಿವಿ ಕೊಡುತ್ತಿರಲಿಲ್ಲ. ಮಾರ್ಚ್ 1917 ರಂದು ರಷ್ಯಾದ ಸಾವಿರಾರು ಮಹಿಳೆಯರು ಬದಲಾವಣೆಗೆ ಒತ್ತಾಯಿಸಿ ಬೀದಿಗಿಳಿದರು. ರಷ್ಯಾ ನಂತರ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಅಧಿಕೃತ ರಜಾ ದಿನವಾಗಿ ಘೋಷಿಸಿತು. ಇದನ್ನು ಅಧಿಕೃತಗೊಳಿಸಲು ವಿಶ್ವಸಂಸ್ಥೆಯು 1975ರಲ್ಲಿ ಮಾರ್ಚ್ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ವಿಶ್ವಸಂಸ್ಥೆಯು 1996ರಲ್ಲಿ ಹೊಸ ವಿಷಯಗಳೊಂದಿಗೆ( ಥೀಮ್ ನೊಂದಿಗೆ) ದಿನವನ್ನು ಆಚರಿಸಿತು. ಮೊದಲ ಬಾರಿಗೆ ಮಹಿಳಾ ದಿನದ ವಿಷಯ(ಥೀಮ್)  “ಭೂತಕಾಲವನ್ನು ಆಚರಿಸುವುದು, ಭವಿಷ್ಯಕ್ಕಾಗಿ ಯೋಜನೆ” 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಮತ್ತು ಮಹತ್ವ

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವ ಉದ್ದೇಶಗಳು, ಕಾಲ ನಂತರದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರ ಬದಲಾಗುತ್ತಿರುವ ಸ್ಥಾನಮಾನದೊಂದಿಗೆ ಬದಲಾಗುತ್ತಿವೆ. ಆರಂಭದಲ್ಲಿ 19ನೇ ಶತಮಾನದಲ್ಲಿ ಮಹಿಳೆಯರಿಗೆ, ಮತದಾನದ ಹಕ್ಕು ಸಿಕ್ಕಿತು. ಆದರೆ ಈಗ ಕಾಲ ಬದಲಾವಣೆಯೊಂದಿಗೆ, ಅದರ ಉದ್ದೇಶಗಳು, ಈ ಕೆಳಗಿನಂತಿವೆ. 

  • ಮಹಿಳಾ ದಿನಾಚರಣೆಯ ಪ್ರಮುಖ ಉದ್ದೇಶವೆಂದರೆ, ಪುರುಷರು ಮತ್ತು ಮಹಿಳೆಯರ ನಡುವೆ, ಸಮಾನತೆಯನ್ನು ಕಾಪಾಡಿಕೊಳ್ಳುವುದು. ಇಂದಿಗೂ ಪ್ರಪಂಚದ ಅನೇಕ ಭಾಗಗಳಲ್ಲಿ ಮಹಿಳೆಯರಿಗೆ, ಸಮಾನ ಹಕ್ಕುಗಳಿಲ್ಲ. ಮಹಿಳೆಯರು, ಉದ್ಯೋಗದಲ್ಲಿ ಭಡ್ತಿಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ, ಮಹಿಳೆಯರು ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದ್ದಾರೆ.
  • ಅನೇಕ ದೇಶಗಳಲ್ಲಿ, ಮಹಿಳೆಯರು ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಇನ್ನೂ ಹಿಂದುಳಿದಿದ್ದಾರೆ. ಇದಲ್ಲದೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಈಗಲೂ ಕಾಣಬಹುದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಮಹಿಳಾ ದಿನಾಚರಣೆಯ ಉದ್ದೇಶಗಳಲ್ಲಿ ಒಂದಾಗಿದೆ.
  • ರಾಜಕೀಯ ದೃಷ್ಟಿಕೋನದಿಂದ ಮಹಿಳೆಯರ ಸಂಖ್ಯೆ ಇನ್ನೂ ಪುರುಷರಿಗಿಂತ ಬಹಳ ಹಿಂದುಳಿದಿದೆ, ಮತ್ತು ಮಹಿಳೆಯರ ಆರ್ಥಿಕ ಮಟ್ಟವು ಹಿಂದುಳಿದಿದೆ. ಈ  ನಿಟ್ಟಿನಲ್ಲಿ ಮಹಿಳೆಯರಲ್ಲಿ ಅರಿವು ಮೂಡಿಸುವುದು ಮತ್ತು ಮುಂದಿನ ಪ್ರಗತಿಗೆ ಅವರನ್ನು ಸಿದ್ಧಗೊಳಿಸುವುದು, ಮಹಿಳಾ ದಿನಾಚರಣೆಯ ಉದ್ದೇಶಗಳಲ್ಲಿ ಒಂದಾಗಿದೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯ ಅಥವಾ  ಥೀಮ್ 

1996 ರಿಂದ ಮಹಿಳಾ ದಿನವನ್ನು ಒಂದು ನಿರ್ದಿಷ್ಟ ವಿಷಯದೊಂದಿಗೆ ನಿರಂತರವಾಗಿ ಆಚರಿಸಲಾಗುತ್ತಿದೆ. ಮೊದಲನೆಯದಾಗಿ 1996ರಲ್ಲಿ ಅದರ ಥೀಮ್ “ಇಂದಿನ ಆಚರಣೆ ಮತ್ತು ಭವಿಷ್ಯದ ಯೋಜನೆಯಾಗಿದೆ”. ಇದರ ನಂತರ ಅನೇಕ ದೇಶಗಳು ಹೊಸ ಥೀಮ್ ಮತ್ತು ಹೊಸ ಉದ್ದೇಶದೊಂದಿಗೆ ಒಟ್ಟಾಗಿ ಆಚರಿಸುತ್ತಿವೆ.

ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯಗಳು ಹೀಗಿವೆ.

ವರ್ಷವಿಷಯ ಅಥವಾ  ಥೀಮ್ 
2009ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಪುರುಷರು ಮತ್ತು ಮಹಿಳೆಯರು, ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ಈ ವರ್ಷದ ಮಹಿಳಾ ದಿನಾಚರಣೆಯ ವಿಷಯವಾಗಿತ್ತು.
2010ಈ ವರ್ಷ ಮಹಿಳೆಯರಿಗೆ ಪುರುಷರಂತೆ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಪ್ರಗತಿಗೆ ಗಮನ ನೀಡಲಾಯಿತು. 
2011ಈ ವರ್ಷ ಶಿಕ್ಷಣ, ತರಬೇತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ, ಸಮಾನ ಹಕ್ಕುಗಳನ್ನು ನೀಡುವ ಮೂಲಕ ಮಹಿಳೆಯರ ಪ್ರಗತಿಯ ಹಾದಿಯನ್ನು ತೆರೆಯಲಾಗಿದೆ. 
2012ಈ ವರ್ಷ ಹಳ್ಳಿಯ ಮಹಿಳೆಯರಿಗೆ, ಸಮಾನ ಅವಕಾಶಗಳನ್ನು ನೀಡುವ ಮೂಲಕ ಸಬಲೀಕರಣಗೊಳಿಸುವ ಪ್ರಯತ್ನವನ್ನು ಮಾಡಲಾಯಿತು. ಮತ್ತು ಬಡತನ ಮತ್ತು ಹಸಿವಿನಂತಹ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಲಾಯಿತು. 
2013ಈ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯ ಕಡೆಗೆ ಕ್ರಮ ಕೈಗೊಳ್ಳಲು ಸಮಯ ನಿಗದಿ ಮಾಡಬೇಕೆಂಬ ಬೇಡಿಕೆ ಇತ್ತು.
2014ಈ ವರ್ಷದ ಮಹಿಳಾ ದಿನಾಚರಣೆಯ ವಿಷಯ ಮಹಿಳೆಯರಿಗೆ, ಸಮಾನತೆ ಮತ್ತು ಅವರ ಪ್ರಗತಿಯಾಗಿತ್ತು. 
2015ಈ ವರ್ಷ ಎಲ್ಲಾ ಮನುಕುಲದ ಪ್ರಗತಿಯು, ಮಹಿಳೆಯರ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ.
2016ಈ ವರ್ಷ  ಮುಂಬರುವ 12 ವರ್ಷಗಳಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತವನ್ನು ನವೀಕರಿಸಲು ನಿರ್ಧರಿಸಲಾಯಿತು. 
2017ಈ ವರ್ಷ ಬದಲಾಗುತ್ತಿರುವ ಜಗತ್ತಿನಲ್ಲಿ ಮಹಿಳೆಯರ ಸ್ಥಾನಮಾನದ ಜೊತೆಗೆ ಮುಂಬರುವ ವರ್ಷಗಳಲ್ಲಿ ಲಿಂಗ ಅನುಪಾತವನ್ನು ನವೀಕರಿಸುವತ್ತ ಗಮನ  ಹರಿಸಲಾಯಿತು.
2018ಈ ವರ್ಷದ ಥೀಮ್ ಮಹಿಳೆಯರನ್ನು ತಮ್ಮ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ
2019ಸಮಾನವಾಗಿ ಯೋಚಿಸಿ, ಸ್ಮಾರ್ಟ್ ಆಗಿ ನಿರ್ಮಿಸಿ, ಬದಲಾವಣೆಗಾಗಿ ಆವಿಷ್ಕಾರ ಮಾಡಿ. 
2020ಪ್ರತಿಯೊಂದು ಸಮಾನಕ್ಕಾಗಿ.
2021ಮಹಿಳಾ ನಾಯಕತ್ವ ಕೋವಿಡ್ 19ರ ನಂತರದ ಜಗತ್ತಿನಲ್ಲಿ, ಸಮಾನ ಭವಿಷ್ಯವನ್ನು ಸಾಧಿಸುವುದು.
2022ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ 
2023 ಡಿಜಿಟ್ ಆಲ್, DigitALL. ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ. 
2024ಅವಳನ್ನು ಎಣಿಸಿ (ಆರ್ಥಿಕ ಸಬಲೀಕರಣದ ಮೂಲಕ ಲಿಂಗ ಸಮಾನತೆಯನ್ನು ವೇಗಗೊಳಿಸುವುದು)  

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024

1911 ರಿಂದ ಹಲವಾರು ದೇಶಗಳಲ್ಲಿ, ಏಕಕಾಲದಲ್ಲಿ ಆಚರಿಸಿದ ಈ ವರ್ಷದವರೆಗೆ ನಾವು ಲೆಕ್ಕ ಹಾಕಿದರೆ 2024ರಲ್ಲಿ ಇದು 113ನೇ ಮಹಿಳಾ ದಿನವಾಗಿದ್ದು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುತ್ತದೆ. ಈ ದಿನವನ್ನು ಪ್ರಪಂಚದಾದ್ಯಂತ ಮಾರ್ಚ್ 8, 2024 ರಂದು ತನ್ನದೇ ಆದ ರೀತಿಯಲ್ಲಿ ಆಚರಿಸಲಾಗುತ್ತದೆ. 

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಹೇಗೆ ಆಚರಿಸಲಾಗುತ್ತದೆ

ಅಂತರಾಷ್ಟ್ರೀಯ ಮಹಿಳಾ ದಿನವನ್ನು 20ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತ ರಜಾ ದಿನವಾಗಿ ಆಚರಿಸಲಾಗುತ್ತದೆ ಅಂತಹ ದೇಶಗಳಲ್ಲಿ ಆಫ್ಘಾನಿಸ್ತಾನ, ಕ್ಯೂಬಾ, ಲಾವೋಸ್, ರಷ್ಯಾ ಮತ್ತು ವಿಯೆಟ್ನಾ ಇತ್ಯಾದಿ ಸೇರಿದೆ ಈ ಅನೇಕ ದೇಶಗಳಲ್ಲಿ ಪುರುಷರು ತಮ್ಮ ತಾಯಂದಿರು, ಹೆಂಡತಿಯರು, ಗೆಳತಿಯರು ಮತ್ತು ಸಹೋದ್ಯೋಗಿಗಳಿಗೆ ಹೂವುಗಳು ಮತ್ತು ಸಣ್ಣ ಉಡುಗೊರೆಗಳನ್ನು ನೀಡುವ ಮೂಲಕ ಗೌರವಿಸುವುದು, ಸಂಪ್ರದಾಯವಾಗಿದೆ.ಇತರೆ, ದೇಶಗಳಲ್ಲಿ ಇದನ್ನು ರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಮಹಿಳಾ ದಿನದಂದು ಅನೇಕ ರಾಜಕೀಯ ಮೆರವಣಿಗೆಗಳು ಮತ್ತು ವ್ಯಾಪಾರ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಈ ದಿನವನ್ನು ಆಚರಿಸುವ ವಿಧಾನವು ಪ್ರತಿಯೊಂದು ದೇಶದಲ್ಲಿಯೂ ವಿಭಿನ್ನವಾಗಿದ್ದರು ಸಹ ಅದರ ಉದ್ದೇಶವು ಎಲ್ಲೆಡೆ ಒಂದೇ ಆಗಿರುತ್ತದೆ, ಅದು ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನತೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಯಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು, ಜಾಗತಿಕ ಕೂಟಗಳು ಮತ್ತು ಮಾಹಿತಿ ಸಮ್ಮೇಳನಗಳಿಂದ ಕಲಾ ಪ್ರದರ್ಶನಗಳು ಮತ್ತು ಉತ್ಸಾಹಗಳನ್ನು ನಡೆಸಲಾಗುತ್ತದೆ. 1908ರಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟವು ಬಿಳಿ ಬಣ್ಣವನ್ನು ಮಹಿಳಾ ಸಮಾನತೆಯ ಸಂಕೇತವೆಂದು ಗುರುತಿಸಿತು. ಈ ದಿನ ಸ್ತ್ರೀಯರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಮಹಿಳಾ ದಿನಾಚರಣೆಯಂದು ಕೆಲಸ ಮಾಡುವ ಸ್ಥಳಗಳಲ್ಲಿ, ಮಹಿಳೆಯರ ಗೌರವಾರ್ಥವಾಗಿ, ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಇದಲ್ಲದೆ ದೊಡ್ಡ ದೊಡ್ಡ ನಗರಪ್ರದೇಶಗಳಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಂಗೀತ, ಕವನ, ಚರ್ಚಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉಲ್ಲೇಖಗಳು

ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ಪುರುಷ ಮಾತ್ರ ವಿದ್ಯಾವಂತನಾಗುತ್ತಾನೆ ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದಾಗ ಒಂದು ತಲೆಮಾರು ಶಿಕ್ಷಣ ಪಡೆಯುತ್ತದೆ. –   ಬ್ರಿಗಮ್ ಯಂಗ್ 

ಮಹಿಳೆಯರು, ಸಮಾಜದ ನಿಜವಾದ ವಾಸ್ತುಶಿಲ್ಪಿಗಳು – ಚೆರ್ 

ಹೆಣ್ಣು ಎಂದರೆ ಪ್ರೀತಿಸಲು, ಅರ್ಥಮಾಡಿಕೊಳ್ಳಲು ಮಾತ್ರವಲ್ಲ- ಆಸ್ಕರ್  ವೈಲ್ಡ್

ಪುರುಷನು ಮಹಿಳೆಯನ್ನು ಪ್ರೀತಿಸಿದಾಗ ಅವನು ಅವಳಿಗೆ ತನ್ನ ಜೀವನದ ಒಂದು ಭಾಗವನ್ನು ನೀಡುತ್ತಾನೆ. ಆದರೆ ಒಬ್ಬ ಮಹಿಳೆ, ಪ್ರೀತಿಸಿದಾಗ ಅವಳು ಅವನಿಗೆ ಎಲ್ಲವನ್ನೂ ನೀಡುತ್ತಾಳೆ – ಆಸ್ಕರ್ ವೈಲ್ಡ್

ಯಾವುದೇ ನಾಗರೀಕತೆಯನ್ನು ಮಹಿಳೆಯರ ನಡವಳಿಕೆಯಿಂದ ನಿರ್ಣಯಿಸಬಹುದು.-  ವಾಲ್ಡೋ ಎಮರ್ಸನ್

ಪುರುಷರು ತಮ್ಮ ಅಣೆಬರಹವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅವರಿಗೆ ಈ ಕೆಲಸವನ್ನು ಅವರ ಜೀವನಕ್ಕೆ ಸಂಬಂಧಿಸಿದ ಮಹಿಳೆಯರು ಮಾಡುತ್ತಾರೆ.- ಗ್ರೂಶೋ  ಮಾರ್ಕ್ಸ್

ಯಾವುದೇ ಸಮಾಜದ ಪ್ರಗತಿಯನ್ನು ಆ ಸಮಾಜದ ಮಹಿಳೆಯರ ಪ್ರಗತಿಯಿಂದ ಅಳೆಯಬಹುದು.- ಬಿ. ಆರ್. ಅಂಬೇಡ್ಕರ್ 

ಆ ರಾಷ್ಟ್ರದ ಮಹಿಳೆಯರಿಗೆ ಸಮಾನ ಹಕ್ಕು ಸಿಗದ ಹೊರತು ಯಾವುದೇ ರಾಷ್ಟ್ರ ಪ್ರಗತಿಯ ಶಿಖರವನ್ನು ತಲುಪಲು ಸಾಧ್ಯವಿಲ್ಲ.-  ಮೊಹಮ್ಮದ್ ಅಲಿ ಜಿನ್ನಾ

ಮಹಿಳೆಯರು ಅದ್ಭುತ, ಅವರು ತಮ್ಮ ಮುಖದಲ್ಲಿ ನಗುವಿನ ಮುಖವಾಡವನ್ನು ಧರಿಸುತ್ತಾರೆ ಮತ್ತು ಎಲ್ಲವೂ ಚೆನ್ನಾಗಿದೆ ಎಂದು ತೋರಿಸುತ್ತಾರೆ ಆದರೆ ವಾಸ್ತವದಲ್ಲಿ, ಪ್ರಪಂಚದ ಹೊರೆ ಅವರ ಹೆಗಲ ಮೇಲಿದೆ ಮತ್ತು ಅವರ ಜೀವನವು ಅವರ ಬೆರಳಿನಿಂದ ಪಟಾಕಿಯಂತೆ ಜಾರಿಕೊಳ್ಳುತ್ತಿದೆ. 

ಅನೇಕ ಮಹಾನ್ ವ್ಯಕ್ತಿಗಳು ಮಹಿಳೆಯರಿಗಾಗಿ ಈ ಅಮೂಲ್ಯವಾದ ಮಾತುಗಳನ್ನು ಹೇಳಿದ್ದಾರೆ. ಜಗತ್ತಿನ ಮಹಾನ್ ವ್ಯಕ್ತಿಗಳು ಸಹ ಮಹಿಳಾ ಶಕ್ತಿಯನ್ನು ನಂಬಿದ್ದಾರೆ ಮತ್ತು ಅವರನ್ನು ಗೌರವಿಸಿದ್ದಾರೆ. ಹೆಣ್ಣನ್ನು ಗೌರವಿಸುತ್ತಾ ಬಂದಿರುವ ದೇಶಪ್ರೇಮಿಗಳೆಲ್ಲರಿಗೂ ಸಮಾಜದಲ್ಲಿ ಉತ್ತಮ ಗೌರವ ಸಿಕ್ಕಿದೆ.  ಹೆಣ್ಣಿನ ಮೇಲೆ ಕೆಟ್ಟ ದೃಷ್ಟಿ ಬೀರಿದವರು ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸ್ವತಹ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಮಾತ್ರ ಈ ಮಹಿಳಾ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. 

ಅಂತರಾಷ್ಟ್ರೀಯ ಮಹಿಳಾ ದಿನದ ಭಾಷಣ

ಮಹಿಳೆ  ಅಥವಾ  ಸ್ತ್ರೀ ಇದು ಸಾಮಾನ್ಯ ಪದವಲ್ಲ ಇದು ದೈವತ್ವದಿಂದ ಪಡೆದ ಗೌರವ. ವೈದಿಕ ಕಾಲದಿಂದಲೂ ಸ್ತ್ರೀಯರ ಸ್ಥಾನಮಾನವು, ದೇವತೆಗಳಿಗೆ ಸಮಾನವಾಗಿದೆ, ಆದ್ದರಿಂದ ಮಹಿಳೆಯರನ್ನು ದೇವತೆ ಎಂದು ಹೇಳಲಾಗುತ್ತದೆ, ಮತ್ತು ದೇವತೆಗಳೊಂದಿಗೆ ಹೋಲಿಸಲಾಗುತ್ತದೆ. ಮನೆಯಲ್ಲಿ ಮಗಳು ಹುಟ್ಟಿದಾಗಲೆಲ್ಲ ಲಕ್ಷ್ಮಿ, ಮನೆಗೆ ಬಂದಿದ್ದಾಳೆ ಎಂದು ಹೇಳಲಾಗುತ್ತದೆ, ಅದೇ ರೀತಿ ಹೊಸದಾಗಿ ಮದುವೆಯಾದ ಸೊಸೆ ಮನೆಗೆ ಬಂದರೆ, ಅದನ್ನು ಲಕ್ಷ್ಮೀ  ಆಗಮನಕ್ಕೆ ಹೋಲಿಸಲಾಗುತ್ತದೆ. ಆದರೆ ಗಂಡು, ಮಗುವಿನ ಜನನದ ನಂತರ ಇಂತಹ ಹೋಲಿಕೆ ಮಾಡುವುದನ್ನು ನೀವು ಎಂದಾದರು ಕೇಳಿದ್ದೀರಾ? ಕುಬೇರ ಮನೆಗೆ ಬಂದಿದ್ದಾನೆ, ಅಥವಾ ವಿಷ್ಣು ಹುಟ್ಟಿದ್ದಾನೆ ಎಂದು ಯಾರು ಹೋಲಿಕೆ ಮಾಡಿ, ಹೇಳುವುದಿಲ್ಲ. ವೇದ ಪುರಾಣಗಳಿಂದ ಬರುತ್ತಿರುವ ಈ ಗೌರವ ಹೆಣ್ಣಿಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಅನೇಕ ಜನ್ಮಗಳಿಂದ ಹೆಣ್ಣಿಗೆ ಸಿಗುತ್ತಿರುವ ಗೌರವವನ್ನು ಇಂದಿನ ನಮ್ಮ ಸಮಾಜ ಹೆಣ್ಣಿಗೆ ನೀಡುತ್ತಿಲ್ಲ. 

ಮಹಿಳೆಯರನ್ನು ಯಾವಾಗಲೂ  ದುರ್ಬಲರೆಂದು ಪರಿಗಣಿಸಲಾಗುತ್ತದೆ ಮತ್ತು ಮನೆಯಲ್ಲಿ ಅಡುಗೆ ಮಾಡಲು ಮಕ್ಕಳು ಮತ್ತು ಕುಟುಂಬದವರನ್ನು ಪೋಷಿಸಲು ಮಾತ್ರ ಸೀಮಿತವೆಂದು ಪರಿಗಣಿಸಲಾಗುತ್ತದೆ.ಮಹಿಳೆಯನ್ನು ಮಕ್ಕಳಿಗೆ  ಜನ್ಮ ನೀಡುವ ಒಂದು ಅಬಲೇ ನಾರಿಯಂತೆ ನೋಡಲಾಗುತ್ತದೆ. ಮತ್ತು ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇಲ್ಲವೆಂದು ಪರಿಗಣಿಸಲಾಗುತ್ತದೆ. ಆದರೆ  ದೇವರಲ್ಲಿ ಮಹಿಳೆಯ ಸ್ಥಾನವು ವಿಭಿನ್ನವಾಗಿದೆ,  ಸಮಾಜವು ವಿದ್ಯೆಯ ಅಧಿದೇವತೆಯಾದ ತಾಯಿ ಸರಸ್ವತಿ ಯನ್ನು ಪೂಜಿಸುತ್ತದೆ. ತಾಯಿ ಸರಸ್ವತಿಯು ಹೆಣ್ಣೇ  ಆದರೂ ಈ ಸಮಾಜವು  ಹೆಣ್ಣನ್ನು  ಶಿಕ್ಷಣಕ್ಕೆ ಅರ್ಹರೆಂದು ಪರಿಗಣಿಸುವುದಿಲ್ಲ. ರಾಕ್ಷಸರನ್ನು ಸಂಹರಿಸಲು ಜನ್ಮ ನೀಡಿದ ದುರ್ಗಾ ಮಾತೆಯು ಹೆಣ್ಣೇ  ಆಗಿದ್ದರು ಈ ಸಮಾಜವು ಹೆಣ್ಣನ್ನು ದುರ್ಬಲರೆಂದು ಪರಿಗಣಿಸುತ್ತದೆ ಈ ಸಮಾಜವು ಹೆಣ್ಣನ್ನು ವಿದ್ಯಾಭ್ಯಾಸಕ್ಕೆ ಅರ್ಹರೆಂದು ಪರಿಗಣಿಸುವುದಿಲ್ಲ ಆದರೆ ಯಾವ ಪುರಾಣದಲ್ಲಿಯು ಯಾವ ವೇದದಲ್ಲಿಯೂ ಸ್ತ್ರೀಯರ ಸ್ಥಾನಮಾನವನ್ನು ಈ ಸಮಾಜ ಹೆಣ್ಣಿಗೆ ನಿಗದಿಪಡಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಒಂದಾಗಿ ನಿಲ್ಲುವ ಅವಶ್ಯಕತೆ ಇದೆ, ಮತ್ತು ವಾಸ್ತವವಾಗಿ ಮಹಿಳೆಯರಿಗೆ, ಮೀಸಲಾದ ಗೌರವವನ್ನು ತಾವೇ ಪಡೆಯಬೇಕಾಗಿದೆ.

ಪ್ರತಿವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ ಇಂದಿನ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ ಮತ್ತು ಈ ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಇಡೀ ವಿಶ್ವದಲ್ಲಿ ಈ ಸ್ಥಿತಿ ಇದೆ. ಅಲ್ಲಿ ಮಹಿಳೆಯರಿಗೆ ತಮ್ಮ ಹಕ್ಕು ಮತ್ತು ಸ್ಥಾನಮಾನ ಸಿಕ್ಕಿಲ್ಲ. ಒಂದು ದಿನ ಅವರ ಹೆಸರಿನಲ್ಲಿ, ಆಚರಣೆ ಮಾಡುವುದರಿಂದ ಕರ್ತವ್ಯ ಪೂರೈಸುವುದಿಲ್ಲ. ಇಂದಿನ ಕಾಲದಲ್ಲಿ ಮಹಿಳೆ ತನ್ನ ಅಸ್ತಿತ್ವ ಮತ್ತು ಪ್ರಗತಿಗಾಗಿ ಪ್ರತಿಕ್ಷಣವು ಹೋರಾಡಬೇಕಾಗಿದೆ. ಇಂದು ನಮ್ಮ ನಾಡಿನಲ್ಲಿ ಭೇಟಿ ಬಚಾವೋ ಎಂಬಂತಹ ಯೋಜನೆಗಳು ಜಾರಿಯಲ್ಲಿದ್ದು, ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳ ಜನನ ಮತ್ತು ಪೋಷಣೆಯನ್ನು ಪ್ರೋತ್ಸಾಹಿಸಲು ಸರ್ಕಾರ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಬದುಕಿನ ಬಗ್ಗೆ ಹೆಣ್ಣುಮಕ್ಕಳು ಯೋಚಿಸುತ್ತಾ ಬಂದಿರುತ್ತಾರೆ?ತಂದೆ ತಾಯಿಗಳು ಕೂಡ ಒಂದು ಭಯದಿಂದಲೇ, ಹೆಣ್ಣು ಮಕ್ಕಳನ್ನು ಸಾಕಿ ಸಲಹುತ್ತಾರೆ. ಸಮಾಜದ ನಿಯಮಗಳು ಸಮಾಜದಲ್ಲಿ ಹೆಣ್ಣು ಮಗುವಿನ ಸ್ಥಾನವನ್ನು ದುರ್ಬಲಗೊಳಿಸಿದ್ದು, ಈಗ ಅದನ್ನು ಬದಲಾಯಿಸಬೇಕಾಗಿದೆ. ಇಲ್ಲಿಯವರೆಗೆ ಆಗುತ್ತಿರುವುದನ್ನು ಬದಲಾಯಿಸುವ ಅವಶ್ಯಕತೆ ಇದೆ, ಅದಕ್ಕಾಗಿ ಮೊದಲು ಹೆಣ್ಣು ಮಗುವಿನ ಬದುಕುವ ಮತ್ತು ನಂತರದ ಶಿಕ್ಷಣದ ಹಕ್ಕನ್ನು ಪಡೆಯಬೇಕು, ಆಗ ಮಾತ್ರ ಈ ದೇಶದ ಮಹಿಳೆಯರ ಸ್ಥಿತಿ ಸುಧಾರಿಸುತ್ತದೆ. 

FAQs

ಪ್ರಶ್ನೆ1- ಅಂತರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ- ಅಂತರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ.

ಪ್ರಶ್ನೆ2- ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಯಿತು?

ಉತ್ತರ- ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು 1911 ರಲ್ಲಿ ಆಚರಿಸಲಾಯಿತು.

ಪ್ರಶ್ನೆ3-  ಮೊದಲ ಮಹಿಳಾ ದಿನವನ್ನು ಎಲ್ಲಿ ಆಚರಿಸಲಾಯಿತು?

ಉತ್ತರ- ಮೊದಲ ಮಹಿಳಾ ದಿನವನ್ನು  ನ್ಯೂಯಾರ್ಕ್ ನಲ್ಲಿ ಆಚರಿಸಲಾಯಿತು.

ಪ್ರಶ್ನೆ4- ಮೊದಲ ಮಹಿಳಾ ದಿನವನ್ನು ಯಾವಾಗ ಆಚರಿಸಲಾಯಿತು?

ಉತ್ತರ- ಮೊದಲ ಮಹಿಳಾ ದಿನವನ್ನು 1908ರಲ್ಲಿ ಆಚರಿಸಲಾಯಿತು.

ಮತ್ತಷ್ಟು ಓದಿ

ಭಾರತದ ಮಹಿಳಾ ಸ್ವಾತಂತ್ರ ಹೋರಾಟಗಾರರು

ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು 

Leave a Comment