ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು ಕನ್ನಡದಲ್ಲಿ 2023/ Simple Village business ideas  2023

ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು ಕನ್ನಡದಲ್ಲಿ.

 ಭಾರತದಲ್ಲಿ ಗರಿಷ್ಠ ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತದೆ. ದೇಶದ ಒಟ್ಟು ಜನಸಂಖ್ಯೆಯ 68% ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಜನರು ನಗರಕ್ಕೆ ಹೋಗಿ ಹಣ ಸಂಪಾದಿಸಲು ಸಾಧ್ಯವಿಲ್ಲ, ಹಳ್ಳಿಯಲ್ಲಿಯೇ ಸ್ವಂತ ಉದ್ಯಮ ಆರಂಭಿಸುವ ಮೂಲಕ ಉತ್ತಮ ದುಡಿಮೆ ಮಾಡಬಹುದು, ಸರಕಾರ ಕೂಡ ಈಗ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡುತ್ತಿದೆ ವಿಶೇಷವಾಗಿ ಗ್ರಾಮೀಣ ನಿವಾಸಿಗಳಿಗೆ ವಿವಿಧ ಯೋಜನೆಗಳನ್ನು ನಡೆಸಲಾಗುತ್ತಿದೆ. ಹಳ್ಳಿಯಲ್ಲಿ ವಾಸಿಸುವ ನೀವು ಯಾವ ವ್ಯವಹಾರಗಳನ್ನು ಪ್ರಾರಂಭಿಸಬಹುದು ಎಂಬುದರ ಕುರಿತು ಇಂದು ನಾವು ನಿಮಗೆ ತಿಳಿಸಲಿದ್ದೇವೆ. 

 ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು

 ಸಾರಿಗೆ ಸರಕುಗಳು-

 ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕೃಷಿ ಮಾಡುವುದರ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಕೃಷಿ ಜೊತೆಗೆ ಚಿಕ್ಕಪುಟ್ಟ ವ್ಯವಹಾರಗಳನ್ನು ಮಾಡುತ್ತಾ ಉತ್ತಮವಾದ ರೀತಿಯಲ್ಲಿ ಹಣವನ್ನು ಗಳಿಸುವ ಮೂಲಕ ಶ್ರೀಮಂತರಾಗುತ್ತಾರೆ. ಆದರೆ ಕೆಲವರು ಬಡವರಾಗಿರುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ  ಸಾರಿಗೆ ವ್ಯವಸ್ಥೆ ಸರಿಯಾಗಿರುವುದಿಲ್ಲ ರೈತರು  ತಾವು ಬೆಳೆದ  ದವಸ ಧಾನ್ಯ ಹಣ್ಣು ತರಕಾರಿ ಮಾರಲು ನಗರಕ್ಕೆ ಹೋಗಬೇಕಾದ ಸ್ಥಿತಿ ಇದೆ. ಆದರೆ ವಾಹನಗಳ ಕೊರತೆಯಿಂದ ನಗರದಿಂದ ವಾಹನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಹಳ್ಳಿಯಲ್ಲಿಯೇ ಈ ವ್ಯವಹಾರವನ್ನು ಪ್ರಾರಂಭಿಸಬಹುದು, ಇದಕ್ಕೆ ನಿಮಗೆ ಟ್ರ್ಯಾಕ್ಟರ್ ಟ್ರಾಲಿ ಅಗತ್ಯವಿರುತ್ತದೆ. ಬಾಡಿಗೆಗೆ ಹೋಗುವ ಮೂಲಕ ನೀವು ಉತ್ತಮ ಲಾಭವನ್ನು ಗಳಿಸಬಹುದು. ವಾಹನ ಖರೀದಿಸುವಾಗ ಹಣ ಹೂಡಬೇಕಾಗುತ್ತದೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಟ್ರ್ಯಾಕ್ಟರ್ ಖರೀದಿಸಲು ವಿಶೇಷ ಸಬ್ಸಿಡಿಯನ್ನು ಸಹ ನೀಡುತ್ತಿದೆ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು. 

ಬೀಜ ಗೊಬ್ಬರದ ಅಂಗಡಿ-(ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು )

 ನಗರಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳ ಮಾರಾಟವು ತುಂಬಾ ಹೆಚ್ಚಾಗಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಬೀಜಗಳು ವಿವಿಧ ರೀತಿಯ ರಸ ಗೊಬ್ಬರಗಳನ್ನು ಮತ್ತು ಕೀಟನಾಶಕಗಳನ್ನು ಮಾರುವ ಅಂಗಡಿಯನ್ನು ನೀವು ಪ್ರಾರಂಭಿಸಬಹುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು ಬೀಜ  ಗೊಬ್ಬರಗಳನ್ನು ಮತ್ತು ಕೀಟನಾಶಕಗಳನ್ನು ಕೊಳ್ಳಲು ಅನೇಕ ಬಾರಿ ನಗರಕ್ಕೆ ಹೋಗಬೇಕಾಗುತ್ತದೆ. ಉತ್ತಮ ಗುಣಮಟ್ಟದ ಈ ಎಲ್ಲಾ ಸರಕುಗಳನ್ನು ಹಳ್ಳಿಯಲ್ಲಿಯೇ ದೊರಕುವಂತೆ ಮಾಡಿದರೆ ಅವರ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ ಮತ್ತು ನಿಮಗೂ ಹೆಚ್ಚಿನ ಲಾಭ ಸಿಗುತ್ತದೆ.

 ಕೋಳಿ ಫಾರಂ-(ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು )

 ಮೊಟ್ಟೆ ಮತ್ತು ಕೋಳಿಗೆ ಎಲ್ಲೆಡೆ ಬೇಡಿಕೆ ಇದೆ ನೀವು ಹಳ್ಳಿಯಲ್ಲಿ ಈ ವ್ಯಾಪಾರವನ್ನು ಪ್ರಾರಂಭಿಸಬಹುದು ಅದರ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ ನಿಮ್ಮ ಈ  ವ್ಯವಹಾರವು ವರ್ಷವಿಡಿ ನಡೆಯುತ್ತದೆ ಇದಕ್ಕಾಗಿ ನಿಮಗೆ ತೆರೆದ   ದೊಡ್ಡ ಸ್ಥಳ ಬೇಕಾಗುತ್ತದೆ. ನಿಮ್ಮ ಹತ್ತಿರದ ಹೋಟೆಲ್ ಗಳು ಸ್ಥಳೀಯ ಅಂಗಡಿಗಳಿಗೆ ಮಾರುವುದರಿಂದ ಉತ್ತಮ ಲಾಭ ಪಡೆಯಬಹುದು

 ನರ್ಸರಿ-(ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು)

 ಸತ್ಯ ನರ್ಸರಿ ವ್ಯವಹಾರವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಮತ್ತು ಪ್ರತಿಯೊಬ್ಬರು ತಮ್ಮ ಮನೆ ಹಸಿರು ಮತ್ತು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆಯ ಮಾಳಿಗೆಯ ಮೇಲೆ ಹೂವುಗಳ  ಜೊತೆಗೆ ಹಣ್ಣು ತರಕಾರಿಗಳನ್ನು ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

 ಹೆಚ್ಚಿನ ಹಣವನ್ನು ಹೂಡಿಕೆ ಮಾಡದೆ ನಿಮ್ಮ ಹಳ್ಳಿಯಿಂದ   ವ್ಯಾಪಾರವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದರೆ ಈ ವ್ಯವಹಾರವು ನಿಮಗೆ ಸೂಕ್ತವಾಗಿದೆ. ನಿಮ್ಮ ಹಳ್ಳಿಯಿಂದ ನೀವು ಸುಲಭವಾಗಿ ಸಸ್ಯ ನರ್ಸರಿ ವ್ಯವಹಾರವನ್ನು ಪ್ರಾರಂಭಿಸಬಹುದು, ಏಕೆಂದರೆ ನಗರಗಳಲ್ಲಿ ಹೆಚ್ಚು ಜಾಗ ಪಡೆಯಲು ಸಾಕಷ್ಟು ಹಣ  ಕೊಡಬೇಕಾಗುತ್ತದೆ. ಅದೇ ಗ್ರಾಮದಲ್ಲಿ ಸ್ವಂತ ಜಮೀನಿದ್ದರೆ ಅಥವಾ ಅಲ್ಪಸ್ವಲ್ಪ ಜಮೀನು, ಬಾಡಿಗೆ ಪಡೆದು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಮುಖ್ಯ ರಸ್ತೆಗಳಿಗೆ   ಹೊಂದಿಕೊಂಡಂತೆ ನರ್ಸರಿ ಮಾಡುವುದು ಹೆಚ್ಚು ಸೂಕ್ತ.

ಕಿರಾಣಿ ಅಂಗಡಿ-(ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು)

 ಗ್ರಾಮದಲ್ಲಿ ದಿನಬಳಕೆಯ ಸಾಮಗ್ರಿಗಳು ಸಿಗುವ ಅಂಗಡಿ ಇಲ್ಲದ ಕಾರಣ ಸಣ್ಣಪುಟ್ಟ ಕೆಲಸಗಳಿಗೂ ನಗರಕ್ಕೆ ಹೋಗುವವರೇ ಹೆಚ್ಚು, ಅಂತಹ ಪರಿಸ್ಥಿತಿಯಲ್ಲಿ ಗ್ರಾಮದಲ್ಲಿ ಕಿರಾಣಿ ಅಂಗಡಿಗಳನ್ನು ತೆರೆಯುವುದು ಪ್ರಯೋಜನಕಾರಿಯಾಗಿದೆ

 ನೀವು ಕಿರಾಣಿ ಅಂಗಡಿಯಲ್ಲಿ ದೈನಂದಿನ ಬಳಕೆಯ ವಸ್ತುಗಳನ್ನು ಇರಿಸಬಹುದು ಆರಂಭಿಕ ದಿನಗಳಲ್ಲಿ ನೀವು 15,000 ದಿಂದ 20000 ಒಳಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು.  ಕಿರಾಣಿ ಅಂಗಡಿಯಿಂದ ನೀವು ಚೆನ್ನಾಗಿ  ಗಳಿಸಬಹುದು ಏಕೆಂದರೆ ಅಂತಹ ವಸ್ತುಗಳಲ್ಲಿ ಲಾಭವು ಹೆಚ್ಚು, ಇದನ್ನು ಕಡಿಮೆ ವಿದ್ಯಾವಂತ ಜನರು ಸಹ ಪ್ರಾರಂಭಿಸಬಹುದು.

ಮೊಬೈಲ್ ರಿಪೇರಿ ಮತ್ತು ರಿಚಾರ್ಜ್ ಅಂಗಡಿ-(ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು)

ನೀವು ಹಳ್ಳಿಯಲ್ಲಿ ಮೊಬೈಲ್ ರಿಚಾರ್ಜ್ ಅಂಗಡಿಯನ್ನು ತೆರೆಯಬಹುದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಫೋನ್ ಇದ್ದೆ ಇರುತ್ತದೆ. ಅದರ ರಿಚಾರ್ಜ್ ಇಂದಿನ ದಿನಗಳಲ್ಲಿ ಆನ್ಲೈನ್ನಲ್ಲಿ ಮಾಡಲಾಗುತ್ತದೆ, ಆದರೆ ಹಳ್ಳಿಯಲ್ಲಿ ಎಲ್ಲರಿಗೂ ಇದು ತಿಳಿದಿರುವುದಿಲ್ಲ, ಮೊಬೈಲ್ ರಿಚಾರ್ಜ್ ನ ಹೊರತಾಗಿ ನೀವು ಮೊಬೈಲ್ ಪರಿಕರಗಳು ಮತ್ತು ಮೊಬೈಲ್  ಫೋನ್ ಗಳನ್ನು ಇಟ್ಟು ಮಾರಾಟ ಮಾಡಬಹುದು.

ಕಟ್ಟಡ ನಿರ್ಮಾಣ ವಸ್ತುಗಳ ಅಂಗಡಿ-

 ಹಳ್ಳಿಯಾಗಿರಲಿ ನಗರವೇ ಆಗಿರಲಿ ಎಲ್ಲಾ ಕಡೆ ಮನೆಗಳು ಅತ್ಯಂತ ವೇಗವಾಗಿ ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಕೆಲವು ನಿರ್ಮಾಣ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ ಉದಾರಣೆಗೆ  ಸಿಮೆಂಟ್, ಇಟ್ಟಿಗೆ ಕಬ್ಬಿಣದ  ರಾಡುಗಳು, ಸ್ಟೀಲ್ ಪೈಪ್,  ಕಿಟಕಿ, ಬಾಗಿಲುಗಳು, ಟೈಲ್ಸ್ ಗಳು ಇತ್ಯಾದಿ ಈ ಎಲ್ಲಾ ವಸ್ತುಗಳನ್ನು ಖರೀದಿ ಮಾಡಲು ಇಂದಿಗೂ ಜನರು ನಗರ ಪ್ರದೇಶಗಳಿಗೆ ಹೋಗುತ್ತಾರೆ, ನಿಮ್ಮ ಗ್ರಾಮದಲ್ಲಿ ಈ ರೀತಿಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಇಲ್ಲದಿದ್ದಲ್ಲಿ ನೀವು ಈ ವ್ಯಾಪಾರವನ್ನು ಪ್ರಾರಂಭಿಸಬಹುದು.ಈ ನಿರ್ಮಾಣ ಸಾಮಗ್ರಿಗಳನ್ನು ನೇರವಾಗಿ ವಿತರಿಕರಿಂದ ಅಥವಾ ಕಂಪನಿಗಳಿಂದ ತಂದು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು. 

ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಷನ್ ವ್ಯವಹಾರ-

ಈ ವ್ಯವಹಾರದಲ್ಲಿ ಕಬ್ಬಿಣದ ಗೇಟ್ಗಳು ,ಗ್ರಿಲ್ ಗಳು ವಿವಿಧ ರೀತಿಯ ಕಿಟಕಿಗಳು ಮತ್ತು ಬಾಗಿಲುಗಳನ್ನು ತಯಾರಿಸಲಾಗುತ್ತದೆ. ನೀವು ನಿಮ್ಮ ಹಳ್ಳಿಯಲ್ಲಿ ಇದ್ದುಕೊಂಡು ಈ ವ್ಯವಹಾರವನ್ನು ನಡೆಸಬಹುದು. ಇಂದಿನ ದಿನಗಳಲ್ಲಿ ಎಲ್ಲೆಂದರಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಉತ್ತಮ ಸೌಲಭ್ಯಗಳನ್ನು  ಕಲ್ಪಿಸಲು ಯೋಚಿಸುವುದರಿಂದ ಈ ವ್ಯಾಪಾರವು ಹಳ್ಳಿಗಳಲ್ಲಿಯೂ ಸಾಕಷ್ಟು ಲಾಭದಾಯಕವಾಗಿದೆ. 

ಸಲೂನ್-

 ನೀವು ಸಲೂನ್ ಅಥವಾ ಬಾರ್ಬರ್ ಅಂಗಡಿಯನ್ನು ತೆರೆಯಬಹುದು ಇದು ದೈನಂದಿನ ಅವಶ್ಯಕತೆಯಾಗಿದೆ ಇದು ಎಲ್ಲೆಡೆ ಇರಬೇಕು. ನೀವು ಕ್ಷೌರಿಕನ ಬದಲಿಗೆ ಹಳ್ಳಿಯಲ್ಲಿ ಉತ್ತಮ ಸಲೂನ್ ತೆರೆಯಬಹುದು ಇಲ್ಲಿ ನೀವು ಪುರುಷರ ಶೃಂಗಾರಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬಹುದು.

 ಟೈಲರಿಂಗ್-

 ನಿಮಗೆ ಹೊಲಿಗೆ ತಿಳಿದಿದ್ದರೆ ನೀವು ಟೈಲರಿಂಗ್ ಶಾಪ್ ಅನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮಗೆ ಹೊಲಿಗೆ ಯಂತ್ರ ಮತ್ತು ಕೆಲವು ಚಿಕ್ಕಪುಟ್ಟ ವಸ್ತುಗಳು ಬೇಕಾಗುತ್ತದೆ. ನಿಮ್ಮ ಮನೆಯ ಚಿಕ್ಕ ಕೋಣೆಯಲ್ಲಿಯೂ ನೀವು ಈ ಕೆಲಸವನ್ನು ಪ್ರಾರಂಭಿಸಬಹುದು ಪುರುಷರೊಂದಿಗೆ ಮಹಿಳೆಯರು ಕೂಡ ಈ ವ್ಯವಹಾರವನ್ನು ಮಾಡಬಹುದು. ಜೊತೆಗೆ ಟೈಲರಿಂಗ್ ತರಬೇತಿಯನ್ನು ಸಹ ನೀಡಬಹುದು.

 ಇನ್ನಷ್ಟು ಓದಿ

 ವಾರಾಂತ್ಯದ ವ್ಯಾಪಾರ ಪರಿಕಲ್ಪನೆಗಳು

 ಡಿಜಿಟಲ್ ಕರೆನ್ಸಿ ಎಂದರೇನು ಅನುಕೂಲಗಳು ಮತ್ತು ಅನಾನುಕೂಲಗಳು

 

Leave a Comment