ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಚರಿತ್ರೆ /ಪ್ರಬಂಧ |First Indian queen to fight against British Rule:Kittur Rani Chennamma Biography in Kannada.2024

ಭಾರತೀಯ ರಾಜವಂಶಗಳಲ್ಲಿ ಅನೇಕ ರಾಣಿಯರಿದ್ದಾರೆ, ಅವರ ಶೌರ್ಯ ಕಥೆಗಳು ವಿಶ್ವ ಇತಿಹಾಸದಲ್ಲಿ ದಾಖಲಾಗಿವೆ. ಅಂತಹ ಧೈರ್ಯಶಾಲಿ ಮಹಿಳೆಯಾಗಿದ್ದಳು, ರಾಣಿ ಚೆನ್ನಮ್ಮ. ಬ್ರಿಟಿಷರನ್ನು ಕೆಟ್ಟದಾಗಿ ಸೋಲಿಸಿದ ಕೆಲವೇ ಭಾರತೀಯ ಆಡಳಿತಗಾರರಲ್ಲಿ ರಾಣಿ ಚೆನ್ನಮ್ಮ ಕೂಡ ಒಬ್ಬರು, ರಾಣಿ ಅಬ್ಬಕ್ಕನನ್ನು ಕಳೆದುಕೊಂಡ ನಂತರ ಪೋರ್ಚುಗೀಸರು ಪ್ರಪಂಚಾದ್ಯಂತ ಹೇಗೆ ಅವಮಾನ ಕೊಳಗಾದರೂ, ರಾಣಿ ಚೆನ್ನಮ್ಮನನ್ನು ಕಳೆದುಕೊಂಡ ನಂತರ  ಬ್ರಿಟಿಷರು ಅದೇ ಮುಜುಗರವನ್ನು ಅನುಭವಿಸಿದರು ಎಂದು ಹೇಳಲಾಗುತ್ತದೆ. 

ರಾಜ್ಯದ ಅಧಿಕಾರವನ್ನು ಪುರುಷರೆ ಚಲಾಯಿಸುತ್ತಿದ್ದ ಕಾಲ ಅದಾಗಿತ್ತು. ತಂದೆಯ ನಂತರ ಮಗನಿಗೆ ಮಾತ್ರ ರಾಜ್ಯದ ಸಿಂಹಾಸನದ  ಹಕ್ಕಿರುತ್ತಿತ್ತು.ಜೀವನಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇರಲಿಲ್ಲ. ಆ ಅವಧಿಯಲ್ಲಿ ಆಸ್ಥಾನದಲ್ಲಿ ಕುಳಿತು ಬ್ರಿಟಿಷರ ವಿರುದ್ಧ ಹೋರಾಡಿ, ರಾಜ್ಯಭಾರ ಮಾಡಿದವರು, ರಾಣಿ ಚೆನ್ನಮ್ಮ. ಕಿತ್ತೂರು ಸಂಸ್ಥಾನದಲ್ಲಿ ಪುರುಷ ದೊರೆ ಇಲ್ಲದ ಕಾರಣ ಬ್ರಿಟಿಷ್ ಸರ್ಕಾರ, ರಾಜ್ಯದ ಮೇಲೆ ಹಿಡಿತ ಸಾಧಿಸಲು ಬಯಸಿದ ಸಮಯದಲ್ಲಿ, ಅವರು ಹೋರಾಟ ನಡೆಸಿದರು. ಕಿತ್ತೂರು ರಾಜ್ಯಕ್ಕೆ ಪುರುಷ ವಾರಸುದಾರರಿಲ್ಲದ ಕಾರಣ ಬ್ರಿಟಿಷ್ ಸರ್ಕಾರವು ದುರಾಡಳಿತದ ಆರೋಪ ಹೊರಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿತು. 

ಬ್ರಿಟಿಷ್ ಸರ್ಕಾರದ ಈ ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಚನ್ನಮ್ಮನ ಹೋರಾಟ ಆ ಕಾಲದ ಯಾವ ಪುರುಷ ದೊರೆಗೂ  ಕಡಿಮೆ ಇರಲಿಲ್ಲ. ಆದರೆ, ರಾಣಿ ಚೆನ್ನಮ್ಮನ ಹೋರಾಟದ ಬದುಕಿನ ಕಥೆ, ಭಾರತೀಯ ಇತಿಹಾಸದಲ್ಲಿ ಕೆಲವೇ ಪದಗಳಲ್ಲಿ ದಾಖಲಾಗಿದೆ. ಬ್ರಿಟೀಷರ ಆಡಳಿತದ ವಿರುದ್ಧ ಹೋರಾಡಿದ ಇತರ ಪುರುಷ ರಾಜರು ಅನುಭವಿಸಿದ ಸ್ಥಾನವನ್ನು ಅವರು ಇತಿಹಾಸದಲ್ಲಿ ಪಡೆಯಲಿಲ್ಲ. 

ಇತಿಹಾಸದ ಪುಟಗಳಲ್ಲಿ ಇವರ ಕಥೆಯು ಝಾಸಿಯ ರಾಣಿ ಲಕ್ಷ್ಮೀಬಾಯಿಯಂತೆ ಇದೆ, ಆದರೆ ಬ್ರಿಟಿಷರೊಂದಿಗಿನ ಅವರ ಮುಖಾಮುಖಿಯು ರಾಣಿ ಲಕ್ಷ್ಮೀಬಾಯಿಗಿಂತ ಮುಂಚೆಯೇ ಆಗಿತ್ತು. ಭಾರತೀಯ ಇತಿಹಾಸದಲ್ಲಿ ಅವರನ್ನು ಕರ್ನಾಟಕದ  ರಾಣಿ ಲಕ್ಷ್ಮೀಬಾಯಿ ಎಂದು ಕರೆಯಲಾಗುತ್ತದೆ. ಸ್ಥಳೀಯ ಸಂಸ್ಥಾನಗಳನ್ನು ತಮ್ಮ ಹಿಡಿತಕ್ಕೆ ತರುವ ಬ್ರಿಟಿಷ್ ಸರ್ಕಾರದ ನೀತಿಯ ವಿರುದ್ಧ ರಾಣಿ ಚೆನ್ನಮ್ಮ ಎರಡು ಬಾರಿ ಬ್ರಿಟಿಷರನ್ನು ಸೋಲಿಸಿದರು. ಬ್ರಿಟಿಷರ ಆಳ್ವಿಕೆಯಿಂದ ತನ್ನ ರಾಜ್ಯವನ್ನು ಉಳಿಸುವಲ್ಲಿ ಅವರು ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದ್ದರು, ಆದರೆ ಬ್ರಿಟಿಷ್ ಸರ್ಕಾರವು ಕಿತ್ತೂರನ್ನು ವಿಶ್ವಾಸಘಾತಕವಾಗಿ ವಶಪಡಿಸಿಕೊಂಡಿತು .

ಹೆಸರುರಾಣಿ ಚೆನ್ನಮ್ಮ
ಜನನಅಕ್ಟೋಬರ್ 23,1778
ತಂದೆ ತಾಯಿ ಹೆಸರುತಂದೆ ದೂಳಪ್ಪ ತಾಯಿ ಪದ್ಮಾವತಿ 
ಪತಿಯ ಹೆಸರುರಾಜ ಮಲ್ಲಸರ್ಜ
ನಿಧನಫೆಬ್ರವರಿ 21,1829
ಪರಿಣಿತಿ ಕುದುರೆ ಸವಾರಿ, ಕತ್ತಿವರಸೆ , ಬಿಲ್ಲುಗಾರಿಕೆ 
ಬಂಡಾಯ ಬ್ರಿಟೀಷರ ವಿರುದ್ಧ 

 ಕಿತ್ತೂರು ರಾಣಿ ಚೆನ್ನಮ್ಮ ಅಕ್ಟೋಬರ್ 23,1778ರಂದು ಭಾರತದ  ಕರ್ನಾಟಕದ ಇಂದಿನ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಕಾಕತೀಯ ರಾಜವಂಶದ ರಾಜ ಧೂಳಪ್ಪ ಮತ್ತು ರಾಣಿ ಪದ್ಮಾವತಿಗೆ ಚೆನ್ನಮ್ಮ ಜನಿಸಿದರು, ಇದು ಕರ್ನಾಟಕದ ಒಂದು ಸಣ್ಣ ರಾಜ್ಯವಾಗಿತ್ತು. ಚಿಕ್ಕವಯಸ್ಸಿನಲ್ಲಿಯೇ ಕುದುರೆ ಸವಾರಿ,  ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ಪರಿಣಿತಲಾದಳು ಆಡಳಿತ ನಡೆಸುವ ಕಲೆಯನ್ನು ಕಲಿತಳು. ಚೆನ್ನಮ್ಮನ ನಿರಂತರ ಅಭ್ಯಾಸದಿಂದಾಗಿ ಯುದ್ಧ ಕಲೆಯಲ್ಲಿ ನಿಪುಣಳಾದಳು. ಯುದ್ಧ ಕಲೆಯಲ್ಲಿ ಮಾತ್ರವಲ್ಲದೆ ಕನ್ನಡ,ಸಂಸ್ಕೃತ,ಮರಾಠಿ ಮತ್ತು ಉರ್ದು ಮುಂತಾದ ಹಲವು ಭಾಷೆಗಳನ್ನು ಅವರು ತಿಳಿದಿದ್ದರು. ಅವರು ಕರ್ನಾಟಕ ರಾಜ್ಯದ ಕಿತ್ತೂರಿನ ರಾಜ ಮಲ್ಲಸರ್ಜ ದೇಸಾಯಿ ಅವರನ್ನು ವಿವಾಹವಾದರು. 

ಕಿತ್ತೂರು ಮೈಸೂರು  ರಾಜ್ಯದ ಒಂದು ಸಣ್ಣ ಸ್ವತಂತ್ರ ಸಂಸ್ಥಾನವಾಗಿತ್ತು. ಜೊತೆಗೆ ಅದು ಅತ್ಯಂತ ಸಮೃದ್ಧ ರಾಜ್ಯವು ಆಗಿತ್ತು. ಕಿತ್ತೂರಿನಲ್ಲಿ ಒಂದು ವ್ಯಾಪಾರ ಕೇಂದ್ರವಿದ್ದು ಅಲ್ಲಿಂದ ಅನೇಕ ರೀತಿಯ ವ್ಯಾಪಾರ ನಡೆಯುತ್ತಿತ್ತು. ಚಿಕ್ಕ ಸಾಮ್ರಾಜ್ಯವಾದ ಕಿತ್ತೂರು ತನ್ನ ನಿಧಿಗೆ ಹೆಸರುವಾಸಿಯಾಗಿತ್ತು. ಕಿತ್ತೂರಿನಲ್ಲಿ ಉತ್ತಮ ಪ್ರಮಾಣದ ಬೇಸಾಯವಿದ್ದು ಅದರಲ್ಲಿ ಬತ್ತದ ಬೆಳೆ ಇಳುವರಿ ಅಧಿಕವಾಗಿತ್ತು. ಇದೇ ಕಾರಣಕ್ಕೆ ಕಿತ್ತೂರಿನ ಮೇಲೆ ಬ್ರಿಟಿಷರು ನೇರ ನಿಯಂತ್ರಣ ಬಯಸಿದ್ದರು. 

ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಚರಿತ್ರೆ

1793ರಲ್ಲಿ ಕಿತ್ತೂರಿನ ರಾಜ ಮಲ್ಲಸರ್ಜನೊಂದಿಗೆ ಚೆನ್ನಮ್ಮನ ವಿವಾಹದ ಬಗ್ಗೆ ಆಸಕ್ತಿದಾಯಕ ಜಾನಪದ ಕಥೆ ಇದೆ, (ಕಿತ್ತೂರು ರಾಣಿ ಚೆನ್ನಮ್ಮ ರಾಜ ವಲ್ಲಸರ್ಜನನ್ನು ವಿವಾಹವಾದರು). ರಾಜ ಮಲ್ಲಸರ್ಜ ದೇಸಾಯಿ ವಂಶದ ರಾಜ. ಮಲ್ಲಸರ್ಜ ರಾಜನು ಪ್ರಯಾಣದ ಸಮಯದಲ್ಲಿ ಕಾಕತಿ ಗ್ರಾಮದ ಬಳಿ  ನಿಲ್ಲಿಸಿದನೆಂದು ಜಾನಪದ ಹೇಳುತ್ತದೆ. ನರಭಕ್ಷಕ ಹುಲಿಯಿಂದ ಗ್ರಾಮದ ಜನರು ಕಂಗಾಲಾಗಿದ್ದರು. ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ರಾಜ ಮಲ್ಲಸರ್ಜನ ಶಿಬಿರವನ್ನು ನೋಡಿ ಸಹಾಯಕ್ಕಾಗಿ ವಿನಂತಿಸಿದರು ರಾಜ ಮಲ್ಲಸರ್ಜ ತಕ್ಷಣವೇ ಹುಲಿಯನ್ನು ಬೇಟೆಯಾಡಲು ಹೊರಟನು. ಕಾಡಿನಲ್ಲಿ ಹುಲಿ ಕಂಡ ತಕ್ಷಣ ಬಾಣ ಬಿಟ್ಟನು. ಆದರೆ ರಾಜ ಹತ್ತಿರ ಹೋಗಿ ನೋಡಿದಾಗ ಹುಲಿಗೆ ಒಂದಲ್ಲ ಎರಡು ಬಾಣಗಳು ತಗುಲಿದ್ದವು. ಸ್ವಲ್ಪ ದೂರದಲ್ಲಿ ಚಿಕ್ಕ ಹುಡುಗಿಯೊಬ್ಬಳು ಬಿಲ್ಲು ಹಿಡಿದು ನಿಂತಿರುವುದನ್ನು ಮಲ್ಲಸರ್ಜನು ನೋಡಿದನು. ಆ ಹುಡುಗಿ ಚನ್ನಮ್ಮ. ಚೆನ್ನಮ್ಮನೂ ಆ ಹುಲಿಯನ್ನು ಹುಡುಕಿಕೊಂಡು ಹೊರಟಿದ್ದಳು. ಮಲ್ಲಸರ್ಜ ರಾಜನು ಚೆನ್ನಮ್ಮನ ಧೈರ್ಯ ಮತ್ತು ಸೌಂದರ್ಯದಿಂದ ಆಕರ್ಷಿತನಾದನು. ಇಬ್ಬರು ಮದುವೆಯಾದರು. ಚೆನ್ನಮ್ಮ ರಾಜ ಮಲ್ಲಸರ್ಜನ ಕಿರಿಯ ರಾಣಿಯಾದಳು.

ರಾಜ ಮಲ್ಲ ಸರ್ಜರ ಮೊದಲ ಪತ್ನಿ ರಾಣಿ ರುದ್ರಮ್ಮ ಕೂಡ ದೇಸಾಯಿ ವಂಶಕ್ಕೆ ಸೇರಿದವರು. ಕಿತ್ತೂರಿಗೆ ಬಂದ ರಾಣಿ ಚೆನ್ನಮ್ಮ ರಾಣಿ ರುದ್ರಮ್ಮನ ಜೊತೆ ತುಂಬಾ ಸೌಹಾರ್ದ ಸಂಬಂಧ ಬೆಳೆಸಿದಳು. ರಾಣಿ ರುದ್ರಮ್ಮನ ಮಕ್ಕಳಿಬ್ಬರಿಗೂ ಅದೇ ಪ್ರೀತಿಯನ್ನು ತೋರಿಸತೊಡಗಿದಳು. ಮೇಧಾವಿ ಚೆನ್ನಮ್ಮ ಶೀಘ್ರದಲ್ಲೇ ರಾಜ್ಯಕ್ಕೆ ಮಾರ್ಗದರ್ಶಿ ಪಾತ್ರವನ್ನು ವಹಿಸಿಕೊಂಡಳು. ಕಿತ್ತೂರಿನ ಜನರು ತಮ್ಮ ನ್ಯಾಯಯುತ ರಾಣಿ ಚೆನ್ನಮ್ಮನನ್ನು ತುಂಬಾ ಗೌರವಿಸಲು ಪ್ರಾರಂಭಿಸಿದರು. ಎಂದು ಇತಿಹಾಸಕಾರರು ಹೇಳುತ್ತಾರೆ. ರಾಜನ ಕೆಲವು ನಿರ್ಧಾರಗಳನ್ನು  ಮರುಪರಿಶೀಲಿಸಲು ಜನರು ರಾಣಿ ಚೆನ್ನಮ್ಮನ ಬಳಿಗೆ ಹೋಗುತ್ತಿದ್ದರು. 

ಕಿತ್ತೂರು ರಾಣಿ ಚೆನ್ನಮ್ಮ ಕೂಡ ಅರಮನೆಯಲ್ಲಿ ಮಗನಿಗೆ ಜನ್ಮ ನೀಡಿದಳು. ಆದರೆ ಕೆಲವು ವರ್ಷಗಳ ನಂತರ ರಾಣಿ ಚೆನ್ನಮ್ಮನ ಮಗ ತೀರಿಕೊಂಡನು. ಇದಾದ ಕೆಲವೇ ದಿನಗಳಲ್ಲಿ ರಾಣಿ ರುದ್ರಮ್ಮನ ಕಿರಿಯ ಮಗನು ತೀರಿಕೊಂಡನು. 1816ರಲ್ಲಿ ರಾಜ ಮಲ್ಲಸರ್ಜರು ಸಹ ನಿಧನರಾದರು. (ರಾಣಿ ಚೆನ್ನಮ್ಮ ಪತಿ ಮರಣ ) ಕಿತ್ತೂರಿನ ರಾಜ ಮನೆತನದವರು ದುಃಖದಿಂದ ಚೇತರಿಸಿಕೊಳ್ಳುತ್ತಿದ್ದರು. ರಾಜ ಮನೆತನದ ಮೇಲೆ ದುಃಖದ ಕಾರ್ಮೋಡ ಕವಿದಿತ್ತು. ಈ ಸಂಕಷ್ಟದ ಸಮಯದಲ್ಲಿ, ಆಡಳಿತವನ್ನು ಚೆನ್ನಮ್ಮ ವಹಿಸಿಕೊಂಡರು. ಅನಾರೋಗ್ಯದ ನಡುವೆಯೂ ರಾಣಿ ರುದ್ರಮ್ಮ ಅವರ ಹಿರಿಯ ಮಗ ಶಿವಲಿಂಗ ರುದ್ರ ಸರ್ಜಾ ಅವರನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸಲಾಯಿತು. ಆದರೆ ಅವನು ಹೆಚ್ಚು ದಿನ ಬದುಕಲು ಸಾಧ್ಯವಾಗಲಿಲ್ಲ. ಕಿತ್ತೂರು ಉತ್ತರಾಧಿಕಾರಿಯ ಬಿಕಟ್ಟನ್ನು ಎದುರಿಸಿತು. ಇದೇ ಸಮಯದಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದ್ದರು. ಅವರು ಆಡಳಿತಾತ್ಮಕ ಸಹಾಯ ಮತ್ತು ರಕ್ಷಣೆಯ ನೆಪದಲ್ಲಿ ಅನೇಕ ಭಾರತೀಯ ರಾಜಪ್ರಭುತ್ವದ ರಾಜ್ಯಗಳನ್ನು ವಶಪಡಿಸಿಕೊಂಡರು. ವಾರಸುದಾರರಿಲ್ಲದ ಕಿತ್ತೂರಿನ ಮೇಲು ಅವರ ಕಣ್ಣು ಬಿತ್ತು.

 ಆ ಸಮಯದಲ್ಲಿ ಕಿತ್ತೂರು ವಜ್ರ ಮತ್ತು ಆಭರಣದ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಎಂದು ಇತಿಹಾಸಕಾರರು ಹೇಳುತ್ತಾರೆ. ಕಿತ್ತೂರಿನಲ್ಲಿ ಬೆಳೆಬಾಳುವ ವಜ್ರ ಆಭರಣಗಳ ಜೊತೆಗೆ 15 ಲಕ್ಷ ರೂಗಳ ಒಡವೆಯು ಇತ್ತು. ಉತ್ತರಾಧಿಕಾರದ ಬಿಕ್ಕಟ್ಟನ್ನು ಕಂಡು ರಾಣಿ ಚೆನ್ನಮ್ಮ ಒಬ್ಬ ಮಗನನ್ನು ದತ್ತು ಪಡೆದರು. ಅವನ ಹೆಸರು ಶಿವಲಿಂಗಪ್ಪ. ಶಿವಲಿಂಗಪ್ಪ ಅವರನ್ನು ಕಿತ್ತೂರಿನ ಗದ್ದುಗೆಯ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಆದರೆ, ಬ್ರಿಟಿಷರು ಅದನ್ನು ತಿರಸ್ಕರಿಸಿದರು. ಬ್ರಿಟಿಷರು ಕಿತ್ತೂರನ್ನು ಧಾರವಾಡದ ಆಡಳಿತದಲ್ಲಿ ಪರಿಗಣಿಸಿದರು. ಇದರ ಉಸ್ತುವಾರಿ ಸೇಂಟ್ ಜಾನ್ ಠಾಕ್ರೆ ಮತ್ತು ಕಮಿಷನರ್ ಚಾಪ್ಲಿನ್ . ದತ್ತು ಪುತ್ರನು ರಾಜ್ಯಕ್ಕೆ ಉತ್ತರಾಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಇಬ್ಬರು ರಾಣಿಗೆ ಸಂದೇಶವನ್ನು ಕಳುಹಿಸಿದರು.

 ಈ ಶಾಸನವು ಬ್ರಿಟಿಷರ ಕಬಳಿಕೆ ನೀತಿಗೆ ನಾಂದಿಯಾಯಿತು. ಈ ನೀತಿಯ ಅಡಿಯಲ್ಲಿ, ಬ್ರಿಟಿಷರು ಉತ್ತರಾಧಿಕಾರಿ ಇಲ್ಲದ ರಾಜ ಪ್ರಭುತ್ವದ ರಾಜ್ಯಗಳನ್ನು ತಮ್ಮ ಅದೀನತೆಯನ್ನು ಒಪ್ಪಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಈ ಸುಗ್ರೀವಾಜ್ಞೆಯನ್ನು ರಾಣಿ ಚೆನ್ನಮ್ಮನಿಗೆ ಕಳುಹಿಸುವ ಹೊತ್ತಿಗೆ ಬ್ರಿಟಿಷರ ಸ್ವಾಧೀನ ನೀತಿ ಅಥವಾ  ಡಾಕಿಟ್ರನ್   ಆಫ್ ಲ್ಯಾಪ್ಸ್ ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ ಎಂಬುದು ಆಶ್ಚರ್ಯಕರವಾಗಿತ್ತು. ದಾಖಲೆಗಳ ಪ್ರಕಾರ ಈ ನೀತಿಯನ್ನು ಲಾರ್ಡ್ ಡಾಲ್ಹೌಸಿ 1848ರಲ್ಲಿ ಅಧಿಕೃತವಾಗಿ ಜಾರಿಗೆ ತಂದರು. ಅದಕ್ಕಾಗಿಯೇ 1824ರಲ್ಲಿ ರಾಣಿ ಚೆನ್ನಮ್ಮನಿಗೆ ಕಳುಹಿಸಿದ ಬ್ರಿಟಿಷ್ ಆದೇಶವು ಕಿತ್ತೂರನ್ನು ವಶಪಡಿಸಿಕೊಳ್ಳಲು ಹತಾಶ ಪ್ರಯತ್ನವಾಗಿತ್ತು ಎಂದು ಅನೇಕ ಇತಿಹಾಸಕಾರರು ಉಲ್ಲೇಖಿಸುತ್ತಾರೆ.

ಇದೆಲ್ಲದರ ಮಧ್ಯ ರಾಣಿ ಚೆನ್ನಮ್ಮ ಅವರು ಬಾಂಬೆ ಪ್ರಾಂತ್ಯದ ಲೆಫ್ಟಿನೆಂಟ್ ಜನರಲ್ ಮೌಂಟ್ ಸ್ಟುವರ್ಟ್ ಎಲ್ಫಿನ್ಸ್ಟೋನ್ ಅವರಿಗೆ ಪತ್ರ ಬರೆದರು. ರಾಣಿಯು ತನ್ನ ದತ್ತು ಪಡೆದ ಯುವರಾಜ ಶಿವಲಿಂಗಪ್ಪನನ್ನು ಕಿತ್ತೂರಿನ ಅರಸನನ್ನಾಗಿ ಸ್ವೀಕರಿಸುವಂತೆ ವಿನಂತಿಸಿದಳು. ಆದರೆ ಬ್ರಿಟಿಷರು ರಾಣಿಯ ಈ ಬೇಡಿಕೆಯನ್ನು ತಿರಸ್ಕರಿಸಿದರು. ಕೂಡಲೇ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಯುದ್ಧ ಸಾರಿದಳು. ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟದ ನಂತರ  ದಶಕಗಳ ನಂತರ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಕೂಡ ತನ್ನ ದತ್ತು ಪುತ್ರನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಮತ್ತು ಝಾನ್ಸಿಯನ್ನು ಉಳಿಸಲು ಬ್ರಿಟಿಷರ ವಿರುದ್ಧ ಹೋರಾಡಿದರು.

 ಆದರೆ 1824ರಲ್ಲಿ ನಡೆದ ಮೊದಲ ಬಂಡಾಯದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ವರ್ತನೆ ಕಂಡು ಬ್ರಿಟಿಷರು ಬೆಚ್ಚಿಬಿದ್ದರು. ವಾಸ್ತವವಾಗಿ ಆ ಸಮಯದಲ್ಲಿ ರಾಣಿ ಚೆನ್ನಮ್ಮ ಮತ್ತು ಅವಳ ಸೈನ್ಯದ ಶಕ್ತಿಯ ಬಗ್ಗೆ ಬ್ರಿಟಿಷರಿಗೆ ತಿಳಿದಿರಲಿಲ್ಲ. ಭಾರತೀಯ ರಾಣಿಯಿಂದ ಬ್ರಿಟಿಷರು ಕೆಟ್ಟದಾಗಿ ಸೋಲಿಸಲ್ಪಟ್ಟರು ಮತ್ತು ಈ ಯುದ್ಧದಲ್ಲಿ ಬ್ರಿಟಿಷ್ ಅಧಿಕಾರಿ ಜಾನ್ ಠಾಕ್ರೆ ಕೊಲ್ಲಲ್ಪಟ್ಟರು. ರಾಣಿ ಚೆನ್ನಮ್ಮ ಬ್ರಿಟಿಷ್ ಅಧಿಕಾರಿಗಳಾದ ಸರ್  ವಾಲ್ಟರ್ ಏಲಿಯಟ್ ಮತ್ತು ಸ್ಟೀವನ್ಸನ್ ಅವರನ್ನು ಸಹ ಸೆರೆ ಹಿಡಿದರು. ಈ ಸೋಲಿನಿಂದ ಬ್ರಿಟಿಷರು ದಿಗ್ಭ್ರಮೆಗೊಂಡರು. ಬ್ರಿಟಿಷರು ತಮ್ಮ ಅಧಿಕಾರಿಗಳನ್ನು ಬಿಡುಗಡೆ ಮಾಡಲು ರಾಣಿ ಚೆನ್ನಮ್ಮನಿಗೆ ಮನವಿಯನ್ನು ಮಾಡಬೇಕಾಯಿತು.

 ಬ್ರಿಟೀಷರು ರಾಣಿಗೆ  ತಮ್ಮ ಅಧಿಕಾರಿಗಳನ್ನು ಬಿಟ್ಟರೆ ಬ್ರಿಟಿಷರು ಮತ್ತೆ ಕಿತ್ತೂರಿನತ್ತ ನೋಡುವುದಿಲ್ಲ ಎಂದು ಸಂದೇಶ ಕಳುಹಿಸಿದರು. ರಾಣಿ ಅವರನ್ನು ನಂಬಿದಳು. ಬ್ರಿಟಿಷ್ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ನಂತರ ಬ್ರಿಟಿಷರು ತಮ್ಮ ಮಾತಿನಂತೆ ನಡೆದುಕೊಳ್ಳದೆ ಮತ್ತೆ ದೊಡ್ಡ ಬಲದೊಂದಿಗೆ ಕಿತ್ತೂರಿನ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ಕಿತ್ತೂರು, ಇಂತಹ ದಾಳಿಗೆ ಸಿದ್ಧವಾಗಿರಲಿಲ್ಲ. ಆದರೂ  ಕಿತ್ತೂರಿನ ಸೈನ್ಯವು ತನ್ನ ರಾಣಿಯೊಂದಿಗೆ ತನ್ನ ಎಲ್ಲಾ ಶಕ್ತಿಯಿಂದ ಹೋರಾಡಿತು. ಸುಧೀರ್ಘ ಯುದ್ಧದ ನಂತರ ಬ್ರಿಟಿಷರು ರಾಣಿಯನ್ನು ವಶಪಡಿಸಿಕೊಂಡರು. ಆದರೆ ರಾಣಿಯ ನಂಬಿಕಸ್ತ ಸೈನಿಕರು ಕಿತ್ತೂರಿನ ರಾಜಕುಮಾರ ಶಿವಲಿಂಗಪ್ಪನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು.

ಕಿತ್ತೂರಿನ ರಾಣಿ ಹಲವು ವರ್ಷಗಳ ಕಾಲ ಬ್ರಿಟಿಷರ ವಶದಲ್ಲಿದ್ದಳು. ಈ ನಡುವೆ ರಾಣಿಯ ಆಪ್ತ ಹಾಗೂ ವೀರ ಸೇನಾ ನಾಯಕ ಸಂಗೊಳ್ಳಿ ರಾಯಣ್ಣ ಭೂಗತರಾಗಿ ಬ್ರಿಟಿಷರ ಮೇಲೆ ಗೆರಿಲ್ಲಾ  ದಾಳಿ ನಡೆಸಿ ರಾಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಆದರೆ 1829ರಲ್ಲಿ ಬ್ರಿಟಿಷರು ರಾಯಣ್ಣನನ್ನು ಹಿಡಿದು ಗಲ್ಲಿಗೇರಿಸಿದರು. ಚೆನ್ನಮ್ಮನ ಕೊನೆಯ ಭರವಸೆ ರಾಯಣ್ಣ. ಅದೇ ವರ್ಷದಲ್ಲಿ ರಾಣಿ ಬ್ರಿಟಿಷ್ ಜೈಲಿನಲ್ಲಿಯೇ ಕೊನೆಯುಸಿರೆಳೆದಳು. 

ಪ್ರತಿ ವರ್ಷ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮನವರ ಜಯಂತಿ  ಆಚರಣೆ ಮಾಡಲಾಗುತ್ತದೆ. 1961ರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವರ ಜೀವನದ ಮೇಲೆ ಕನ್ನಡ ಚಲನಚಿತ್ರವನ್ನು ನಿರ್ಮಿಸಲಾಯಿತು. 23 ಅಕ್ಟೋಬರ್ 1977 ರಂದು ರಾಣಿ ಚೆನ್ನಮ್ಮನ 200ನೇ ಜನ್ಮ ವಾರ್ಷಿಕೋತ್ಸವದಂದು ಭಾರತೀಯ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. 2007ರಲ್ಲಿ ಅಶ್ವರೋಹಿ ವೀರಾಂಗಣ ಚನ್ನಮ್ಮನ ಪ್ರತಿಮೆಯನ್ನು ಸಂಸತ್ತಿನ ಸಂಕೀರ್ಣದಲ್ಲಿ ರಾಷ್ಟ್ರಪತಿಗಳು ಅನಾವರಣಗೊಳಿಸಿದರು. 

FAQs

ಪ್ರಶ್ನೆ1- ಕಿತ್ತೂರು ರಾಣಿ ಚೆನ್ನಮ್ಮ ಯಾವಾಗ ಜನಿಸಿದಳು?

ಉತ್ತರ: ಕಿತ್ತೂರು ರಾಣಿ ಚೆನ್ನಮ್ಮ ಅಕ್ಟೋಬರ್ 23 1778ರಂದು ಜನಿಸಿದರು

ಪ್ರಶ್ನೆ2- ರಾಣಿ ಚೆನ್ನಮ್ಮನ ಗಂಡನ ಹೆಸರೇನು?

ಉತ್ತರ: ರಾಣಿ ಚೆನ್ನಮ್ಮನ ಗಂಡನ ಹೆಸರು ರಾಜ ಮಲ್ಲಸರ್ಜ.

ಪ್ರಶ್ನೆ3- ರಾಣಿ ಚೆನ್ನಮ್ಮ ಯಾರ ವಿರುದ್ಧ ಹೋರಾಡಿದಳು?

ಉತ್ತರ: ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದಳು.

ಪ್ರಶ್ನೆ4- ರಾಣಿ ಚೆನ್ನಮ್ಮ ಯಾವಾಗ ಸತ್ತಳು?

ಉತ್ತರ: ರಾಣಿ ಚೆನ್ನಮ್ಮ ಫೆಬ್ರವರಿ 21 1829ರಂದು ನಿಧನರಾದರು.

ಪ್ರಶ್ನೆ5- ರಾಣಿ, ಚೆನ್ನಮ್ಮ ಯಾವುದರಲ್ಲಿ ಪರಿಣಿತಿ ಹೊಂದಿದ್ದಳು?

ಉತ್ತರ: ರಾಣಿ ಚೆನ್ನಮ್ಮ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ಪರಿಣಿತಿ  ಹೊಂದಿದ್ದಳು. 

ಪ್ರಶ್ನೆ6- ಕಿತ್ತೂರು ರಾಣಿ ಚೆನ್ನಮ್ಮನ ತಂದೆ ತಾಯಿಯ ಹೆಸರೇನು?

ಉತ್ತರ: ರಾಣಿ ಚೆನ್ನಮ್ಮನ ತಂದೆಯ ಹೆಸರು ದೂಳಪ್ಪ ತಾಯಿಯ ಹೆಸರು ಪದ್ಮಾವತಿ. 

ಪ್ರಶ್ನೆ7- ಕಿತ್ತೂರು ರಾಣಿ ಚೆನ್ನಮ್ಮ ಯಾವ ಜಾತಿಗೆ ಸೇರಿದವರು?

ಉತ್ತರ: ಕಿತ್ತೂರು ರಾಣಿ ಚನ್ನಮ್ಮ ಲಿಂಗಾಯಿತ ಜಾತಿಗೆ ಸೇರಿದವರು.

ಪ್ರಶ್ನೆ8- ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಪ್ರತಿವರ್ಷ ಅಕ್ಟೋಬರ್ 23ರಂದು ಆಚರಿಸಲಾಗುತ್ತದೆ. 

ಮತ್ತಷ್ಟು ಓದಿ

ಕರ್ನಾಟಕದ ಮಹಿಳಾ ಸ್ವಾತಂತ್ರ ಹೋರಾಟಗಾರರು

ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನ ಚರಿತ್ರೆ 

Leave a Comment