ಗಾಂಧಿ ಜಯಂತಿ ಪ್ರಬಂಧ|Gandhi Jayanti essay in Kannada 2023.(Long and Short essay for students)

ಗಾಂಧಿ ಜಯಂತಿ, ಮಹಾತ್ಮ ಗಾಂಧಿಯವರ ಜನ್ಮದಿನದಂದು ಪ್ರತಿ ವರ್ಷ (ಅಕ್ಟೋಬರ್ 2ರಂದು) ಆಚರಿಸಲಾಗುವ ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಗಾಂಧೀಜಿಯವರ ಸಮಗ್ರ ಜೀವನವನ್ನು ಅರ್ಥಮಾಡಿಕೊಳ್ಳಲು, ಇಲ್ಲಿ ನಾವು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ವಿವಿಧ ಪದಗಳ ಮಿತಿಯನ್ನು ಹೊಂದಿರುವ ಮತ್ತು ವಿವಿಧ ವರ್ಗಗಳ ಮಕ್ಕಳಿಗೆ ಸರಳ ಮತ್ತು ಸುಲಭವಾದ ಪದಗಳಲ್ಲಿ ಪ್ರಬಂಧಗಳನ್ನು ಒದಗಿಸುತ್ತಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಶಾಲಾ ಸ್ಪರ್ಧೆ ಪ್ರಬಂಧ ಬರವಣಿಗೆ ಅಥವಾ ಇತರೆ ಯಾವುದೇ ಸಂದರ್ಭದಲ್ಲಿ ಇದನ್ನು ಬಳಸಬಹುದು. 

ಗಾಂಧಿ ಜಯಂತಿ ಪ್ರಬಂಧ-1  (10 ಸಾಲುಗಳಲ್ಲಿ)

  1. ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾರತವು ಸಾರ್ವಜನಿಕ ರಜಾದಿನವನ್ನು ಆಚರಿಸುತ್ತದೆ.
  2. ಈ ದಿನವನ್ನು ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ, ಪಟ್ಟಿ ಮಾಡಲಾಗಿದೆ. ಶಾಲೆಗಳು ಮತ್ತು ಕಾಲೇಜುಗಳು ಈ ದಿನದಂದು ಅನೇಕ ಸ್ಪರ್ಧೆಗಳನ್ನು ನಡೆಸುತ್ತವೆ.
  3. ಮಹಾತ್ಮ ಗಾಂಧಿಯವರ ಪೂರ್ಣ ಹೆಸರು  ಮೋಹನ್ ದಾಸ್ ಕರಮಚಂದ್ ಗಾಂಧಿ ಅವರನ್ನು, ಬಾಪು ಅಥವಾ ರಾಷ್ಟ್ರಪಿತ ಎಂದು ಕರೆಯುತ್ತಾರೆ.
  4. ಮಹಾತ್ಮ ಗಾಂಧಿಯವರು ಅಕ್ಟೋಬರ್ 2 1869 ರಂದು ಗುಜರಾತ್ ನ  ಪೂರಬಂದರ್ ಎಂಬ ಸಣ್ಣ ಹಳ್ಳಿಯಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು.
  5. ಮಹಾತ್ಮ ಗಾಂಧಿಯವರ ತಂದೆಯ ಹೆಸರು ಕರಮಚೆಂದ ಗಾಂಧಿ ಮತ್ತು ತಾಯಿಯ ಹೆಸರು, ಪುತಲಿ ಬಾಯಿ.
  6.  ಅಕ್ಟೋಬರ್ 2 ನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯು ಆಚರಿಸಲಾಗುತ್ತದೆ.
  7. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ದ ನಿರಂತರ ತಾಳ್ಮೆ ಮತ್ತು ಧೈರ್ಯದಿಂದ ಹೋರಾಡಿದರು.
  8. ಗಾಂಧೀಜಿಯವರು ದೇಶವನ್ನು ಸ್ವತಂತ್ರಗೊಳಿಸಲು, ಅಸಹಕಾರ ಚಳುವಳಿ, ಭಾರತ ಬಿಟ್ಟು ತೊಲಗಿ ಚಳುವಳಿ, ದಂಡಿ ಯಾತ್ರೆ, ಖಿಲಾಫತ್ ಚಳುವಳಿ ಇತ್ಯಾದಿ ಅನೇಕ ಚಳುವಳಿಗಳನ್ನು ಪ್ರಾರಂಭಿಸಿದರು.
  9. ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಪುರೋಹಿತರಾಗಿದ್ದರು. ಮತ್ತು ಅವರು ಅನೇಕ ಬಾರಿ ಜೈಲಿಗೆ  ಹೋದರು.
  10. ಜನವರಿ 30, 1948 ರಂದು ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರ ಎದೆಗೆ 3 ಗುಂಡಗಳನ್ನು  ಹಾರಿಸಿ  ಕೊಂದರು.

ಗಾಂಧಿ ಜಯಂತಿಯ ಪ್ರಬಂಧ-2  (200 ಪದಗಳು)

 ಮುನ್ನುಡಿ

ಮಹಾತ್ಮ ಗಾಂಧಿಯಂತಹ ಮಹಾನ್ ಚೇತನ ಈ ಭೂಮಿಯಲ್ಲಿ ಒಮ್ಮೆ ಮಾತ್ರ ಜನಿಸುತ್ತಾರೆ, ಆದರೆ ಅವರ ಆದರ್ಶಗಳು, ತತ್ವಗಳು ಮತ್ತು ಆಲೋಚನೆಗಳು ಮುಂದಿನ ಹಲವು ತಲೆಮಾರುಗಳಿಗೆ ತಮ್ಮ ಚಾಪನ್ನು ಬಿಟ್ಟು ಹೋಗುತ್ತವೆ. ಮಹಾತ್ಮ ಗಾಂಧೀಜಿಯವರು ನಮ್ಮ ದೇಶದೊಳಗೆ ಮಾತ್ರವಲ್ಲದೆ ದೇಶದ ಹೊರಗಿನ ಜನರನ್ನು ಪ್ರೇರೇಪಿಸಿದರು ಮತ್ತು ಹಿಂಸಾಚಾರವನ್ನು ಆಶ್ರಯಿಸದೇ, ಅಹಿಂಸ ಮಾರ್ಗದಲ್ಲಿ ಒಬ್ಬರ ಹಕ್ಕುಗಳಿಗಾಗಿ ಹೋರಾಡಿ ಗೆಲ್ಲಬಹುದು ಎಂದು ಹೇಳಿದ ಮಹಾನ್ ವ್ಯಕ್ತಿತ್ವ.

 ಗಾಂಧಿ ಜಯಂತಿಯನ್ನು ಯಾವಾಗ ಮತ್ತು ಏಕೆ ಆಚರಿಸಲಾಗುತ್ತದೆ

ಭಾರತದಲ್ಲಿ ಪ್ರತಿವರ್ಷ ಅಕ್ಟೋಬರ್  2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಗಾಂಧಿ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರು 1869ರ ಅಕ್ಟೋಬರ್ 2ರಂದು ಜನಿಸಿದರು ಆದ್ದರಿಂದ ಅಕ್ಟೋಬರ್  2ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ಅಕ್ಟೋಬರ್  2ನ್ನು ಪ್ರತಿ ವರ್ಷ ಅಹಿಂಸಾ  ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಹಿಂಸಾ ದಿನವೂ 2007ರಲ್ಲಿ ಪ್ರಾರಂಭವಾಯಿತು. ದೇಶದೆಲ್ಲೆಡೆ ಗಾಂಧಿ ಜಯಂತಿಯಂದು ವಿಶೇಷವಾಗಿ ಸರ್ಕಾರಿ ರಜೆ ಘೋಷಿಸಲಾಗಿದೆ.

 ಗಾಂಧಿ ಜಯಂತಿಯ ಮಹತ್ವ

ಗಾಂಧಿಯವರ ಪೂರ್ಣ ಹೆಸರು  ಮೋಹನ್ ದಾಸ್ ಕರಮಚಂದ್ ಗಾಂಧಿ ಮತ್ತು ಅವರು ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು. ಎಲ್ಲರೂ ಅವರನ್ನು ರಾಷ್ಟ್ರಪಿತ, ಬಾಪು ಎಂದು ಸಂಬೋಧಿಸುತ್ತಾರೆ. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ತಮ್ಮ ಜೀವನದುದ್ದಕ್ಕೂ ಹೋರಾಡಿದರು. ಅಹಿಂಸೆ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಮೂಲಕ ನವ ಮತ್ತು ಸ್ವಚ್ಛ ಭಾರತವನ್ನು ನಿರ್ಮಿಸಲು ಅವರು ಬಯಸಿದ್ದರು. ಅಹಿಂಸೆಯು ಒಂದು ತತ್ವಶಾಸ್ತ್ರ, ತತ್ವ ಮತ್ತು ಅನುಭವವಾಗಿದ್ದು ಅದರ ಆಧಾರದ ಮೇಲೆ ಉತ್ತಮ ಸಮಾಜವನ್ನು ನಿರ್ಮಿಸಲು, ಸಾಧ್ಯ ಎಂದು ಅವರು ಹೇಳಿದರು. ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಅವನ ಲಿಂಗ, ಧರ್ಮ, ಬಣ್ಣ ಅಥವಾ ಜಾತಿಯನ್ನು ಲೆಕ್ಕಿಸದೆ ಸಮಾನ ಸ್ಥಾನಮಾನ ಮತ್ತು ಹಕ್ಕುಗಳನ್ನು ಪಡೆಯಬೇಕು. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸದಾ ಅಹಿಂಸೆಯ ಧರ್ಮವನ್ನು ಅನುಸರಿಸಬೇಕು ಮತ್ತು ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಗಾಂಧಿ ಜಯಂತಿಯ, ಮಹತ್ವವು ನಮಗೆ ತಿಳಿಸುತ್ತದೆ.

ತೀರ್ಮಾನ

ಕೊನೆಯಲ್ಲಿ ಗಾಂಧೀಜಿಯವರ, ಗಾಂಧಿಯಿಂದ ಮಹಾತ್ಮ ಗಾಂಧಿಯವರಿಗಿನ ಪ್ರಯಾಣ ಮತ್ತು ಅವರ ಆಲೋಚನೆಗಳು ಯಾವಾಗಲೂ ನೆನಪಿನಲ್ಲಿರುತ್ತವೆ ಮತ್ತು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತದೆ ಎಂದು ಹೇಳಬಹುದು. 

ಪ್ರಬಂಧ -3   (200 ಪದಗಳು)

ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜನ್ಮದಿನದಂದು ಪ್ರತಿವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಅವರು ರಾಷ್ಟ್ರಪಿತ ಮತ್ತು ಭಾರತದ ಬಾಪು ಎಂದು ಪ್ರಸಿದ್ಧರಾಗಿದ್ದಾರೆ.

ಅವರು ಅಧಿಕೃತವಾಗಿ ಈ ಬಿರುದನ್ನು ಸ್ವೀಕರಿಸುವುದಿಲ್ಲ ಏಕೆಂದರೆ ಯಾರಿಗಾದರೂ ರಾಷ್ಟ್ರಪಿತ ಸ್ಥಾನವನ್ನು ನೀಡುವ ಬಗ್ಗೆ ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ. 15 ಜೂನ್ 2007 ರಂದು, ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಯಿಂದ ಅಂತರರಾಷ್ಟ್ರೀಯ ಅಹಿಂಸ ದಿನ ಎಂದು ಘೋಷಿಸಲಾಯಿತು. ಗಾಂಧಿ ಜಯಂತಿಯನ್ನು ಭಾರತದಾದ್ಯಂತ ರಾಷ್ಟ್ರೀಯ ರಜಾದಿನವಾಗಿ ಮತ್ತು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ.

ಈ ದಿನದಂದು ದೇಶಾದ್ಯಂತ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುತ್ತದೆ. ಇದನ್ನು ಭಾರತದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಇದನ್ನು ಭಾರತದ ಮೂರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ (ಸ್ವಾತಂತ್ರ್ಯ ದಿನ- ಆಗಸ್ಟ್ 15, ಗಣರಾಜ್ಯೋತ್ಸವ -ಜನವರಿ 26) ನವದೆಹಲಿಯ ಗಾಂಧಿ ಸ್ಮಾರಕದಲ್ಲಿ ( ರಾಜ್ ಘಾಟ್ ನಲ್ಲಿ) ಸರ್ಕಾರಿ ಅಧಿಕಾರಿಗಳಿಂದ ಶ್ರದ್ಧಾಂಜಲಿ, ಪ್ರಾರ್ಥನೆ, ಸೇವೆಯಂತಹ ಕೆಲವು ಪ್ರಮುಖ ಚಟುವಟಿಕೆಗಳೊಂದಿಗೆ ಇದನ್ನು ಆಚರಿಸಲಾಗುತ್ತದೆ.

ಪ್ರಾರ್ಥನೆಗಳು, ಸಭೆಗಳು, ಸ್ಮರಣಾರ್ಥ ಸಮಾರಂಭಗಳು,ನಾಟಕ ಪ್ರದರ್ಶನ, ಭಾಷಣ ಉಪನ್ಯಾಸಗಳು      (ಅಹಿಂಸೆಯ ವಿಷಯದ ಕುರಿತು, ಶಾಂತಿ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರಯತ್ನಗಳನ್ನು  ಶ್ಲಾಘಿಸುವುದು) ಪ್ರಬಂಧ ಬರವಣಿಗೆ, ಪ್ರಶ್ನೋತ್ತರ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕವನ ಪಾಠಗಳು ಮುಂತಾದ ಇತರೆ, ಚಟುವಟಿಕೆಗಳು  ಶಾಲೆಗಳು ,ಕಾಲೇಜುಗಳು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಸಾಮಾಜಿಕ ರಾಜಕೀಯ ಸಂಸ್ಥೆಗಳಲ್ಲಿ ನಡೆಯುತ್ತದೆ. ಗಾಂಧಿ ಜಯಂತಿಯ ದಿನದಂದು ಯಾವುದೇ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.ಸಾಮಾನ್ಯವಾಗಿ ಈ ದಿನವನ್ನು ಆಚರಿಸುವಾಗ ಗಾಂಧಿಯವರ ನೆಚ್ಚಿನ ಗೀತೆ ರಘುಪತಿ ರಾಘವ್ ರಾಜ ರಾಮ್ ಅನ್ನು ಹಾಡಲಾಗುತ್ತದೆ.

ಪ್ರಬಂಧ -4  (300 ಪದಗಳು)

ಗಾಂಧಿ ಜಯಂತಿಯನ್ನು ಪ್ರತಿ ವರ್ಷ ಮೂರನೇ ಪ್ರಮುಖ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಲು ದೇಶದಾದ್ಯಂತ ಭಾರತೀಯ ಜನರು ಇದನ್ನು ಅಕ್ಟೋಬರ್  2ರಂದು ಆಚರಿಸುತ್ತಾರೆ. ಗಾಂಧಿಯವರು ರಾಷ್ಟ್ರಪಿತ ಮತ್ತು ಪಾಪು ಎಂದು ಪ್ರಸಿದ್ಧರಾಗಿದ್ದಾರೆ. ಅವರು ದೇಶಭಕ್ತ ನಾಯಕರಾಗಿದ್ದರು ಮತ್ತು ಅಹಿಂಸಾ ಮಾರ್ಗವನ್ನು ಅನುಸರಿಸಿ ಇಡೀ ದೇಶವನ್ನು ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮುನ್ನಡೆಸಿದರು. ಅವರ ಪ್ರಕಾರ, ಬ್ರಿಟಿಷ್ ಆಳ್ವಿಕೆಯ ವಿರುದ್ದ ಸ್ವಾತಂತ್ರಕ್ಕಾಗಿ , ಹೋರಾಡಿ ಗೆಲ್ಲಲು, ಅಹಿಂಸೆ ಮತ್ತು ಸತ್ಯವೊಂದೆ ಅಸ್ತ್ರ ಎಂದು ನಂಬಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಅಹಿಂಸಾ ಚಳುವಳಿಯನ್ನು ಮುಂದುವರಿಸಿದರು ಹಲವು ಬಾರಿ ಜೈಲಿಗೆ ಹೋದರು ಅವರು ಯಾವಾಗಲೂ ಸಾಮಾಜಿಕ ಸಮಾನತೆಯನ್ನು ನಂಬಿದ್ದರು ಮತ್ತು ಅಸ್ಪೃಶ್ಯತೆಯ ವಿರುದ್ಧ ಪ್ರಬಲವಾಗಿ ಹೋರಾಡಿದರು. 

ಗಾಂಧೀಜಿಯವರ ಸಮಾಧಿ ಅಥವಾ ನವದೆಹಲಿಯ ರಾಜ್ ಘಾಟ್ ನಲ್ಲಿ ಸರ್ಕಾರಿ ಅಧಿಕಾರಿಗಳು, ಹೆಚ್ಚಿನ ಸಿದ್ಧತೆಯೊಂದಿಗೆ, ಗಾಂಧಿ ಜಯಂತಿಯನ್ನು ಆಚರಿಸುತ್ತಾರೆ. ರಾಜ್ ಘಾಟ್ ನಲ್ಲಿರುವ ಸಮಾಧಿಯನ್ನು ಹೂಮಾಲೆ ಮತ್ತು ಹೂಗಳಿಂದ ಅಲಂಕರಿಸಲಾಗುತ್ತದೆ, ಮತ್ತು ಈ ಮಹಾನ್  ನಾಯಕನಿಗೆ ಗೌರವ ಸಲ್ಲಿಸಲಾಗುತ್ತದೆ. ಬೆಳಿಗ್ಗೆ  ಗಾಂಧೀಜಿಯವರ  ಸಮಾಧಿಯ ಸ್ಥಳದಲ್ಲಿ, ಧಾರ್ಮಿಕ ಪ್ರಾರ್ಥನೆಗಳು ನಡೆಯುತ್ತವೆ. ಇದನ್ನು ರಾಷ್ಟ್ರೀಯ ಹಬ್ಬವಾಗಿ ವಿಶೇಷವಾಗಿ ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಚರಿಸುತ್ತಾರೆ.

ವಿದ್ಯಾರ್ಥಿಗಳು ನಾಟಕ, ಕವನ ವಾಚನ, ಗಾಯನ, ಭಾಷಣ, ಪ್ರಬಂಧ ಬರವಣಿಗೆ ಮತ್ತು ಮಹಾತ್ಮ ಗಾಂಧಿಯವರ ಜೀವನ ಮತ್ತು ಕೃತಿಗಳ ಆಧಾರದ ಮೇಲೆ ಪ್ರಶ್ನೋತ್ತರ ಸ್ಪರ್ಧೆ, ಕಲಾಸ್ಪರ್ಧೆ, ಮುಂತಾದ ಇತರೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಗಾಂಧಿಯವರ ಅಚ್ಚುಮೆಚ್ಚಿನ ಹಾಡು ರಘುಪತಿ ರಾಘವ ರಾಜಾರಾಮ್ ಅನ್ನು ಸಹ ವಿದ್ಯಾರ್ಥಿಗಳು ಅವರ ನೆನಪಿಗಾಗಿ  ಹಾಡುತ್ತಾರೆ. ಈ ದಿನ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ಬಹುಮಾನ ನೀಡಲಾಗುತ್ತದೆ. ಅವರು ಅನೇಕ ರಾಜಕೀಯ ನಾಯಕರಿಗೆ ವಿಶೇಷವಾಗಿ ದೇಶದ ಯುವಕರಿಗೆ ಸ್ಪೂರ್ತಿ ಮತ್ತು ಮಾದರಿಯಾಗಿದ್ದಾರೆ. ಇತರ ಮಹಾನ್ ನಾಯಕರುಗಳಾದ ಮಾರ್ಟಿನ್ ಲುಥರ್ ಕಿಂಗ್, ನೆಲ್ಸನ್ ಮಂಡೇಲಾ, ಜೇಮ್ಸ್ ಲಾಸನ್ ಮುಂತಾದವರು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮಹಾತ್ಮ ಗಾಂಧಿಯವರ  ಅಹಿಂಸೆ ಮತ್ತು ಶಾಂತಿಯುತ ವಿಧಾನಗಳಿಂದ ಪ್ರೇರಿತರಾಗಿದ್ದರು. 

ಪ್ರಬಂಧ-5    (400 ಪದಗಳು)

ಗಾಂಧಿ ಜಯಂತಿಯ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಆಚರಿಸಲಾಗುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದನ್ನು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಅಹಿಂಸ ದಿನ ಎಂದು ಆಚರಿಸಲಾಗುತ್ತದೆ. ಜೂನ್ 15, 2007 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಯಿಂದ ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸ ದಿನ ಎಂದು ಘೋಷಿಸಲಾಯಿತು. ಕರಮ್ ಚಂದ್ ಗಾಂಧಿ (ಜನನ 2 ಅಕ್ಟೋಬರ್ 1869 )ಅವರ ಜನ್ಮದಿನವನ್ನು ನೆನಪಿಸಿಕೊಳ್ಳಲು ಗಾಂಧಿ ಜಯಂತಿಯನ್ನು ದೇಶಾದ್ಯಂತ   ರಾಷ್ಟ್ರೀಯ ರಜಾ ದಿನವಾಗಿ ಆಚರಿಸಲಾಗುತ್ತದೆ. ಇಂದಿಗೂ ದೇಶದ ರಾಜಕೀಯ ನಾಯಕರು ಹಾಗೂ ಸ್ಥಳೀಯ ಮತ್ತು ವಿದೇಶಿ ಯುವ ನಾಯಕರು ಕೂಡ ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ಅಹಿಂಸ ಚಳುವಳಿಯಿಂದ ಪ್ರಭಾವಿತರಾಗಿದ್ದಾರೆ. 

ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುವ ಉದ್ದೇಶವು ಬಾಪು ಅವರ ತತ್ವ,ಸತ್ಯ ಮತ್ತು ಅಹಿಂಸೆಯಲ್ಲಿ ನಂಬಿಕೆ  ತ್ಯಾದಿಗಳನ್ನು ಪ್ರಪಂಚದಾದ್ಯಂತ ಹರಡುವುದು. ಜನರಲ್ಲಿ ಜಾಗೃತಿ ಮೂಡಿಸಲು ಸಂಬಂಧಿತ ಚಟುವಟಿಕೆಗಳ ಆಧಾರದ ಮೇಲೆ ವಿಷಯ ಸಂಯೋಜನೆಯೊಂದಿಗೆ ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಗಾಂಧಿ ಜಯಂತಿಯು ಮಹಾತ್ಮ ಗಾಂಧಿಯವರ ಸ್ಮರಣೀಯ ಜೀವನವನ್ನು ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆಗಳನ್ನು ಸ್ಮರಿಸುತ್ತದೆ. ಅವರು ಸಣ್ಣ ಕರಾವಳಿ ಪಟ್ಟಣದಲ್ಲಿ (ಪೂರಬಂದರ್ ಗುಜರಾತ್)ಜನಿಸಿದರು, ಅವರು ತಮ್ಮ ಇಡೀ ಜೀವನವನ್ನು ದೇಶಕ್ಕೆ ಅರ್ಪಿಸಿದರು,ಅದು ಇಂದಿನ ಆಧುನಿಕ ಯುಗದಲ್ಲೂ ಜನರನ್ನು ಪ್ರಭಾವಿಸುತ್ತಿದೆ.

ಸ್ವಾತಂತ್ರ್ಯವನ್ನು ಸಾಧಿಸಲು ಸಮಾಜದಿಂದ ಅಸ್ಪೃಶ್ಯತೆ ತೊಡೆದು ಹಾಕಲು, ಇತರ ಸಾಮಾಜಿಕ ಅನಿಷ್ಠ ಗಳನ್ನು ತೊಡೆದುಹಾಕಲು, ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಮಹಿಳಾ ಸಬಲೀಕರಣಕ್ಕಾಗಿ ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸಾಧಿಸಲು ಭಾರತೀಯ ಜನರಿಗೆ ಸಹಾಯ ಮಾಡಲು, ಅವರು 1920 ರಲ್ಲಿ ಅಸಹಕಾರ ಚಳುವಳಿ, 1930ರಲ್ಲಿ ದಂಡಿ ಮಾರ್ಚ್ ಅಥವಾ ಉಪ್ಪಿನ ಸತ್ಯಾಗ್ರಹ ಮತ್ತು 1942ರಲ್ಲಿ ಕ್ವಿಟ್ ಇಂಡಿಯಾ ಇತ್ಯಾದಿಗಳನ್ನು ಪ್ರಾರಂಭಿಸಿದರು. ಅವರ ಕ್ವಿಟ್ ಇಂಡಿಯಾ ಚಳುವಳಿಯು ಬ್ರಿಟಿಷರಿಗೆ ಭಾರತವನ್ನು ತೊರೆಯಲು ಆದೇಶವಾಗಿತ್ತು. ಪ್ರತಿವರ್ಷ ಗಾಂಧಿ ಜಯಂತಿಯನ್ನು ದೇಶದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಮುಂತಾದವರು ಅತ್ಯಂತ ಹೊಸ ರೀತಿಯಲ್ಲಿ ಆಚರಿಸುತ್ತಾರೆ. ಇದನ್ನು ಸರ್ಕಾರಿ ಅಧಿಕಾರಿಗಳು ನವ ದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧಿ ಪ್ರತಿಮೆಗೆ ಹೂವುಗಳನ್ನು ಅರ್ಪಿಸುವ ಮೂಲಕ ಆಚರಿಸುತ್ತಾರೆ, ಅವರ ನೆಚ್ಚಿನ ಭಕ್ತಿಗೀತೆ ರಘುಪತಿ ರಾಘವ ರಾಜಾರಾಮ್, ಮತ್ತು ಇತರೆ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಇದು ದೇಶದ 3 ರಾಷ್ಟ್ರೀಯ ರಜಾ ದಿನಗಳಲ್ಲಿ ಒಂದಾಗಿದೆ (ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ಇತರೆ ಎರಡು) ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಇತ್ಯಾದಿಗಳಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಭಾರತದ ಈ ಮಹಾನ್ ನಾಯಕನಿಗೆ ಗೌರವ ಸಲ್ಲಿಸಲು ಕಾಲೇಜುಗಳು, ಶಾಲೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಇತ್ಯಾದಿಗಳನ್ನು ಮುಚ್ಚಲಾಗುತ್ತದೆ. ಗಾಂಧಿ ಜಯಂತಿಯನ್ನು ಆಚರಿಸುವ ಮೂಲಕ ನಾವು ಪಾಪು ಮತ್ತು ಅವರ ಮಹಾನ್ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಕವನ ಅಥವಾ ಭಾಷಣ ವಾಚನ, ನಾಟಕ ಪ್ರದರ್ಶನ, ಪ್ರಬಂಧ ಬರಹ, ಘೋಷಣೆ ಬರವಣಿಗೆ, ಗುಂಪು ಚರ್ಚೆ ಮುಂತಾದ ಮಹಾತ್ಮ ಗಾಂಧಿಯವರ ಜೀವನ ಮತ್ತು ಕೃತಿಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ಪ್ರಬಂಧ -6    500 ಪದಗಳಲ್ಲಿ

ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ.   ಗಾಂಧೀಜಿಯವರು ಅಕ್ಟೋಬರ್ 2, 1869ರಲ್ಲಿ ಜನಿಸಿದರು. ನಮ್ಮ ದೇಶದ ಸ್ವಾತಂತ್ರ್ಯದಲ್ಲಿ ರಾಷ್ಟ್ರಪಿತ ನ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಆದ್ದರಿಂದ ಅವರ ಗೌರವಾರ್ಥವಾಗಿ ಪ್ರತಿವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 2ನ್ನು ರಾಷ್ಟ್ರೀಯ ಹಬ್ಬ ಮತ್ತು ರಾಷ್ಟ್ರೀಯ ಅಹಿಂಸಾ ದಿನವಾಗಿಯು ಆಚರಿಸಲಾಗುತ್ತದೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಸರ್ಕಾರಿ ರಜೆ, ಘೋಷಿಸಲಾಗಿದೆ ಈ ಸಂದರ್ಭದಲ್ಲಿ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಎಲ್ಲಾ ಸರ್ಕಾರಿ ಸ್ಥಳಗಳಲ್ಲಿ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಗಾಂಧೀಜಿಯವರ ಆದರ್ಶಗಳ ಮಹತ್ವವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ದೇಶದ ಸ್ವಾತಂತ್ರದಲ್ಲಿ ಗಾಂಧೀಜಿಯವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಅವರು ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುವ ಮೂಲಕ ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು  ಮಾತ್ರವಲ್ಲದೆ ಭಾರತದೊಂದಿಗೆ ಇತರ ಹಲವು ದೇಶಗಳಿಗೆ ಸ್ಪೂರ್ತಿಯ ಮೂಲವಾಗಿದ್ದರು. ಗಾಂಧೀಜಿ ಅವರು ನಾಲ್ಕು ಖಂಡಗಳು ಮತ್ತು 14 ದೇಶಗಳಲ್ಲಿ ನಾಗರೀಕ ಹಕ್ಕುಗಳ ಚಳುವಳಿಗಳಿಗೆ ಜನರನ್ನು ಪ್ರೇರೇಪಿಸುವ ಕೆಲಸ ಮಾಡಿದರು.  ಭಾರತದಲ್ಲಿ ಅವರು ಬ್ರಿಟಿಷ್ ಆಡಳಿತದ ವಿರುದ್ಧ ನಾಗರೀಕ ಅಸಹಕಾರದಂತಹ ಚಳುವಳಿಗಳನ್ನು ಪ್ರಾರಂಭಿಸಿದರು. ಗಾಂಧೀಜಿಯವರು ದೇಶದ ಸ್ವಾತಂತ್ರಕ್ಕಾಗಿ ಸದಾ ಮುಂದಿದ್ದು ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದ್ದರು. ಗಾಂಧೀಜಿಯವರ ಕನಸು ದೇಶದ ಸ್ವಾತಂತ್ರ್ಯ ಮಾತ್ರವಲ್ಲ ದೇಶವನ್ನು ಏಕತೆಯ ದಾರದಲ್ಲಿ ಕಟ್ಟುವುದನ್ನು ನೋಡಲು ಬಯಸಿದ್ದರು. ಅದಕ್ಕಾಗಿ ಅವರು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು.

ಗಾಂಧೀಜಿ ತಮ್ಮ ಕೊನೆಯ  ಉಸಿರಿರುವವರೆಗೂ ಅವರ ತತ್ವಗಳಿಗೆ ಬದ್ಧರಾಗಿದ್ದರು. ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಅವರ ಕಾಲದಲ್ಲಿದ್ದಂತೆ ಇಂದಿಗೂ ಪ್ರಸ್ತುತವಾಗಿವೆ. ಗಾಂಧೀಜಿಯವರ ಚಿಂತನೆಗಳು ಮತ್ತು ತತ್ವಗಳು ಇಂದು ನಾವೆಲ್ಲರೂ ಎದುರಿಸುತ್ತಿರುವ ಇಂತಹ ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲವೂ. ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಸಂಯಮ ಮತ್ತು ಸಹಾನುಭೂತಿ ಎರಡನ್ನು ಗಾಂಧಿ ಸಲಹೆ ನೀಡಿದರು ಮತ್ತು ಸ್ವತ ಅನುಸರಿಸುವ ಮೂಲಕ ನಾಯಕತ್ವವನ್ನು ನೀಡಿದರು. ಗಾಂಧೀಜಿಯವರು ತಮ್ಮ ಸ್ವಂತ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದರು ಮತ್ತು ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಿಸಿ ಕೊಳ್ಳಬೇಕೆಂದು ಅವರು ಬಯಸಿದ್ದರು.ನೀರು ಪೋಲು ಮಾಡುವುದನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.

ಭಾರತದ ಸ್ವಾತಂತ್ರದ ಜೊತೆಗೆ ಗ್ರಾಮೀಣಾಭಿವೃದ್ಧಿ, ಕೃಷಿ, ಸ್ವಚ್ಛತೆ ಪ್ರಚಾರ, ಖಾದಿ ಪ್ರಚಾರ, ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸಮಾನತೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆಯೂ ಗಾಂಧೀಜಿ ವಿಶೇಷ ಗಮನ ಹರಿಸಿದ್ದರು. ಗಾಂಧೀಜಿಯವರ ಅತ್ಯಂತ ವಿಶೇಷವಾದ ಸಂಗತಿ ಎಂದರೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ  ಶ್ರಮಿಸುತ್ತಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯರಿಗೂ ಅರಿವಾಯಿತು. ಶಿಕ್ಷಕರು, ವಕೀಲರು, ವೈದ್ಯರು, ರೈತರು, ಕಾರ್ಮಿಕರು, ವಾಣಿಜ್ಯೋದ್ಯಮಿಗಳು ಹೀಗೆ ಯಾವುದೇ ಕೆಲಸ ಮಾಡಿದರು, ಅವರು ಭಾರತದ ಸ್ವಾತಂತ್ರ ಹೋರಾಟಕ್ಕೆ ಕೊಡುಗೆ  ನೀಡುತ್ತಿದ್ದಾರೆ ಎಂಬ ವಿಶ್ವಾಸವನ್ನು ಅವರು ತುಂಬಿದ್ದರು. ಈ ಮಹಾನ್ ಚಿಂತನೆಗಳಿಗಾಗಿ ಜಗತ್ತು ಯುಗ ಯುಗಾಂತರಗಳವರೆಗೆ ಗಾಂಧೀಜಿಯನ್ನು ಸ್ಮರಿಸುತ್ತದೆ. 

ಪ್ರಬಂಧ – 7 ( 600 ಪದಗಳಲ್ಲಿ)

ಗಾಂಧಿ ಜಯಂತಿಯನ್ನು  ಪ್ರತಿ ವರ್ಷ ಅಕ್ಟೋಬರ್ 2ರಂದು ಭಾರತದಲ್ಲಿ ಮಹಾತ್ಮ ಗಾಂಧಿಯವರ  ಜನ್ಮದಿನದಂದು ಆಚರಿಸಲಾಗುತ್ತದೆ. ಇದನ್ನು ಅಧಿಕೃತವಾಗಿ ಭಾರತದ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿ ಘೋಷಿಸಲಾಗಿದೆ ಮತ್ತು ಯು,ಎನ್ ಜನರಲ್ ಅಸೆಂಬ್ಲಿ ಇದನ್ನು ಅಂತರಾಷ್ಟ್ರೀಯ  ಅಹಿಂಸಾ ದಿನ ಎಂದು ಘೋಷಿಸಿದೆ.ಗಾಂಧೀಜಿಯವರ ಸ್ಮಾರಕಗಳು ಅವರು ಸೇವೆ ಮಾಡಿದ ಮತ್ತು ಭೇಟಿ ನೀಡಿದ ಸ್ಥಳಗಳು ಮತ್ತು ಅಂತ್ಯ ಸಂಸ್ಕಾರ ಮಾಡಿದ  ಸ್ಥಳವನ್ನು ಒಳಗೊಂಡಂತೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ, ಗಾಂಧಿ ಜಯಂತಿಯನ್ನು ಆಚರಿಸಲಾಗುವುದು.

ಅವರ ನೆನಪಿಗಾಗಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಮಾಡಿದ ಅತ್ಯುತ್ತಮ ಯೋಜನೆಗಳು ಮತ್ತು ಸೇವೆಗಳನ್ನು ಗುರುತಿಸಿ ಭಾರತದ ನಾಗರಿಕರಿಗೆ ಬಹುಮಾನಗಳು ಮತ್ತು ಗೌರವ  ಬ್ಯಾಡ್ಜ್ ಗಳನ್ನು ನೀಡುವ ಮೂಲಕ ಪುರಸ್ಕರಿಸಲಾಗುತ್ತದೆ. 

ಅಹಿಂಸಾತ್ಮಕ ಚಳುವಳಿಯು ಮಹಾತ್ಮ ಗಾಂಧಿಯವರ ಜೀವನದ ಅತ್ಯಂತ ಮಹತ್ವದ ಕಾರ್ಯಗಳಲ್ಲಿ ಒಂದಾಗಿದೆ. ಅವರು ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸಿ, ಭಾರತಕ್ಕೆ ಸ್ವಾತಂತ್ರವನ್ನು ತಂದರು. ನಾವು ಅವರ ಅಹಿಂಸಾತ್ಮಕ ತತ್ವಗಳನ್ನು ಅಳವಡಿಸಿ ಕೊಳ್ಳುವುದು ಮತ್ತು ಅದನ್ನು ಕಾರ್ಯಗತ ಗೊಳಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ದಿನದಂದು ಮಹಾತ್ಮ ಗಾಂಧಿಯವರ ನೆಚ್ಚಿನ ಭಜನೆ ರಘುಪತಿ ರಾಘವ್ ರಾಜ ರಾಮ್ ಅನ್ನು ಸಾಮಾನ್ಯವಾಗಿ ಅವರ ನೆನಪಿಗಾಗಿ ಹಾಡಲಾಗುತ್ತದೆ.

ಭಾರತದಾದ್ಯಂತ ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಹೂವುಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲಾಗುತ್ತದೆ ಮತ್ತು ಆ ದಿನದಂದು ಮಾಂಸ ಮತ್ತು ಮಧ್ಯವನ್ನು ಸೇವಿಸುವುದನ್ನು ನಿಷೇಧಿಸಲಾಗುತ್ತದೆ.ಸಾರ್ವಜನಿಕ ಕಟ್ಟಡಗಳಾದ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಒಂದು ದಿನದ ಮಟ್ಟಿಗೆ ಮುಚ್ಚಲ್ಪಡುತ್ತವೆ. ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 

ಗಾಂಧಿ ಜಯಂತಿಯ ಮಹತ್ವ 

ಮಹಾತ್ಮ ಗಾಂಧಿಯವರು, ಬ್ರಿಟಿಷರ  ನಿಯಂತ್ರಣದಲ್ಲಿದ್ದ ಭಾರತದಲ್ಲಿ ಜನಿಸಿದರು. ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ  ಪ್ರಮುಖ ನಾಯಕರಾಗಿದ್ದರು. ಭಾರತ ಸ್ವಾತಂತ್ರವನ್ನು ಪಡೆಯಲು, ಅವರ ಮಾಡಿದ ಅವಿರತ ಪ್ರಯತ್ನ ಗಳಿಂದಾಗಿ ಅವರು “ರಾಷ್ಟ್ರಪಿತ” ಎಂಬ ಬಿರುದನ್ನು ಪಡೆದರು. 

ಮಹಾತ್ಮ ಗಾಂಧಿಯವರು, ವ್ಯಾಪಾರಿ ವರ್ಗದ ಕುಟುಂಬದಿಂದ ಬಂದವರು. ಅವರು  ಚಿಕ್ಕ  ವಯಸ್ಸಿನಲ್ಲಿಯೇ ಹೆಚ್ಚಿನ  ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದರು, ನಂತರ ಅವರು ತಮ್ಮ 24 ನೇ ವಯಸ್ಸಿನಲ್ಲಿ, ವಕೀಲ ವೃತ್ತಿಯನ್ನು ಮುಂದುವರಿಸಲು, ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದರು. 1915ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದರು. ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರ ಅವಿರತ ಪ್ರಯತ್ನದಿಂದಾಗಿ ಅವರು ಶೀಘ್ರವಾಗಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪಡೆದರು. 

ಮಹಾತ್ಮ ಗಾಂಧಿಯವರ ಗುರಿಗಳು, ಭಾರತವು ಸ್ವಾತಂತ್ರ್ಯವನ್ನು  ಪಡೆಯುವುದು  ಮಾತ್ರವಲ್ಲದೆ ಅವರು ಹಲವಾರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು.ಈ ಸಾಮಾಜಿಕ ಅನಿಷ್ಟಗಳಲ್ಲಿ ಜಾತಿ ಪದ್ಧತಿ,  ಸ್ತ್ರೀ ಸಬಲೀಕರಣ ಮತ್ತು ಅಸ್ಪರ್ಶತೆ ಸೇರಿವೆ. ಅವರು, ಹಿಂದುಳಿದವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು  ಸಾಕಷ್ಟು  ಪ್ರಯತ್ನಗಳನ್ನು ಮಾಡಿದರು.

ಭಾರತದಲ್ಲಿ ಬ್ರಿಟಿಷರ ಆಡಳಿತದ ಬಗ್ಗೆ  ಮಹಾತ್ಮ ಗಾಂಧಿ ಅವರಿಗೆ ಅಪಾರವಾದ ತಿರಸ್ಕಾರವಿತ್ತು. ಆದರೂ ಅವರು ಹಿಂಸೆಯ ಮಾರ್ಗವನ್ನು ಬೆಂಬಲಿಸಲಿಲ್ಲ ಆದರೆ  ಅಹಿಂಸೆಯ ಮಾರ್ಗದಲ್ಲಿ, ಅಪಾರವಾದ ನಂಬಿಕೆ  ಇಟ್ಟಿದ್ದರು. ಇದರ  ಪರಿಣಾಮವಾಗಿ  ಮಹಾತ್ಮ ಗಾಂಧಿಯವರು, ಬ್ರಿಟಿಷ್ ಆಳ್ವಿಕೆಯನ್ನು, ಶಾಂತಿಯುತವಾಗಿ ವಿರೋಧಿಸುವಲ್ಲಿ ಯಶಸ್ವಿಯಾದರು. 

ಗಾಂಧೀಜಿಯವರ ಅಹಿಂಸಾತ್ಮಕ ಚಟುವಟಿಕೆಗಳು ಮತ್ತು ಪ್ರತಿಭಟನೆಗಳು ಸಹ ಸಾಕಷ್ಟು ಯಶಸ್ವಿಯಾದವು. ಅವರ ತಂತ್ರಗಳು ಮತ್ತು ಯೋಜನೆಗಳು ಸಮರ್ಪಕವಾಗಿದ್ದವು. ಗಾಂಧಿಜಿಯವರು ತಮ್ಮ ಅಸಾಧಾರಣ ದಕ್ಷತೆಯಿಂದ ಇತರ ವಿಶ್ವ ನಾಯಕರಿಗೆ  ಸ್ಪೂರ್ತಿ ನೀಡಿದರು.  ಮಹಾತ್ಮ ಗಾಂಧಿಯವರು ಮತ್ತೊಮ್ಮೆ “ಮಹಾತ್ಮ” ಎಂಬ ಗೌರವಾನ್ವಿತ  ಬಿರುದನ್ನು ಪಡೆದರು. “ಮಹಾತ್ಮ”: ಎಂಬ ಪದದ ಅರ್ಥವೇ ಮಹಾನ್ ಆತ್ಮ. ಅವರ ಜನ್ಮ ದಿನವನ್ನು ಬಹಳ ಗೌರವ ಮತ್ತು ಸ್ಮರಣೆ ಯೊಂದಿಗೆ ಆಚರಿಸಲಾಗುತ್ತದೆ. 

ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿಯ  ಆಚರಣೆಯು ಭಾರತದಲ್ಲಿ ದೊಡ್ಡ ಹಬ್ಬವಾಗಿದೆ. ಈ ಆಚರಣೆಯು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತದೆ.ಇಲ್ಲಿ ಮಹಾತ್ಮ ಗಾಂಧಿಯವರ ಸ್ಮರಣೆಯನ್ನು ಗೌರವಿಸಲು, ಪ್ರಾರ್ಥನೆ, ಸೇವೆಗಳು ಅಥವಾ ಶ್ರದ್ಧಾಂಜಲಿ ಗಳನ್ನು ನಡೆಸಲಾಗುತ್ತದೆ. ಅವರ ನಂತರವೂ,ಇಂದಿಗೂ ನಾವು ನೋಡುತ್ತಿರುವ ವರ್ಣ ಭೇದ ನೀತಿಯ ವಿರುದ್ಧ ಅವರ ಬದ್ಧತೆ ಸೇರಿದಂತೆ ಅನೇಕ ಸಮಾಜ ಸುಧಾರಣೆ ಕಾರ್ಯಗಳಿಗೆ  ಮಹಾತ್ಮ  ಗಾಂಧಿಯವರು ಪ್ರಮುಖ ಕಾರಣವಾಗಿದ್ದಾರೆ. 

ಗಾಂಧಿ ಜಯಂತಿಯನ್ನು ಶಾಲೆಗಳು, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಈ  ಸಂದರ್ಭದಲ್ಲಿ  ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು  ಏರ್ಪಡಿಸಲಾಗುತ್ತದೆ, ಈ ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನಗಳನ್ನು ಸಹ ವಿತರಿಸಲಾಗುತ್ತದೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ವಿವಿಧ ಶಾಲೆಗಳು ಮತ್ತು ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ಮಹಾತ್ಮ ಗಾಂಧಿಯವರ ಜೀವನ ಪ್ರಯಾಣದ ಕುರಿತು ನಾಟಕಗಳು ಮತ್ತು ಸಾಕ್ಷ ಚಿತ್ರಗಳನ್ನು ವೀಕ್ಷಿಸುತ್ತಾರೆ. 

ಗಾಂಧಿ ಜಯಂತಿಯ ಆಚರಣೆಯಂದು ಯುವಕರು ಅಹಿಂಸಾತ್ಮಕ ಜೀವನ ಶೈಲಿಯನ್ನು ಬದುಕಿನಲ್ಲಿ ರೂಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಹೆಚ್ಚುವರಿಯಾಗಿ ಗಾಂಧೀಜಿಯವರ ನೆಚ್ಚಿನ ಭಜನೆಗಳನ್ನು ಈ ಸಂದರ್ಭದಲ್ಲಿ ಹಾಡಲಾಗುತ್ತದೆ. ಮತ್ತು ಆಚರಣೆಯ ಅಂಗವಾಗಿ ಗಾಂಧೀಜಿ ಅವರ ಸ್ಮಾರಕಗಳನ್ನು ಹೂವುಗಳು ಮತ್ತು ಹೂ ಮಾಲೆಗಳಿಂದ ಅಲಂಕರಿಸಲಾಗುತ್ತದೆ. ಗಾಂಧಿ ಜಯಂತಿ  ಮಹಾತ್ಮ ಗಾಂಧಿಯವರ ಅತ್ಯುತ್ತಮ ವ್ಯಕ್ತಿತ್ವವನ್ನು ಪರಿಚಯಿಸಲು ಮತ್ತು ಪ್ರಶಂಶಿಸಲು ಒಂದು ಉತ್ತಮ ಅವಕಾಶ. ನಾವೆಲ್ಲರೂ ಕೂಡ ಅವರಂತೆ ಬದುಕುವ ಪ್ರಯತ್ನ ಮಾಡಬೇಕು, ವಾಸ್ತವವಾಗಿ  ಗಾಂಧಿ ಜಯಂತಿಯನ್ನು ಭಾರತದಲ್ಲಿ ದೇಶಭಕ್ತಿಯ ದಿನವೆಂದು ಪರಿಗಣಿಸಲಾಗುತ್ತದೆ. 

ತೀರ್ಮಾನ

ಗಾಂಧಿ  ಜಯಂತಿಯು ಲಕ್ಷಾಂತರ ಜನರ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯದಿಂದ ವಿಮೋಚನೆಗೊಳಿಸಿದ ರಾಷ್ಟ್ರದ ಶ್ರೇಷ್ಠ  ನಾಯಕನನ್ನು ಗೌರವಿಸುವ ರಾಷ್ಟ್ರೀಯ ಹಬ್ಬವಾಗಿದೆ. ಇದಲ್ಲದೆ ಗಾಂಧಿ  ಜಯಂತಿಯು ಭಾರತದ  ಮೂರು ರಾಷ್ಟ್ರೀಯ ರಜಾ ದಿನಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯು ಅಕ್ಟೋಬರ್  2ನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿದೆ. ಈ ಹಬ್ಬವು ಭಾರತದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ.

ಪ್ರಬಂಧ -8   600 ಪದಗಳು

 ಮುನ್ನುಡಿ

ಭಾರತದಲ್ಲಿ ಪಾಪು ಎಂದು ಪ್ರೀತಿಯಿಂದ ಕರೆಯಲಾಗುವ ಮೋಹನ್ ದಾಸ್ ಕರಮಚಂದ್ ಗಾಂಧಿ ಅಥವಾ ಮಹಾತ್ಮ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಗಾಂಧಿ ಜಯಂತಿಯನ್ನು ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ. ಗಾಂಧಿ ಜಯಂತಿಯನ್ನು ಭಾರತದಲ್ಲಿ ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಲಾಗಿದೆ.

ಮಹಾತ್ಮ ಗಾಂಧಿ ಬಗ್ಗೆ

ಮಹಾತ್ಮ ಗಾಂಧಿ (ಅಕ್ಟೋಬರ್ 2,1869-ಜನವರಿ 30 1949) ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು  ಅವರು ಭಾರತದ  ಸ್ವಾತಂತ್ರ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ  ಅವರು ಇಂದಿಗೂ ಗೌರವಿಸಲ್ಪಡುತ್ತಾರೆ. ಅವರ ಒಂದು ಆಗ್ನೇಯ ಮೇಲೆ ನಿಲ್ಲಲು ಸಿದ್ದರಾಗಿರುವ ಲಕ್ಷಾಂತರ ಭಾರತೀಯರಿಗೆ ಅವರು ತಂದೆಯಂತಿದ್ದರು.

ಗಾಂಧೀಜಿ 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ನಂತರ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು. ಅವರು 21 ವರ್ಷಗಳ ಕಾಲ ಆಫ್ರಿಕಾದಲ್ಲಿದ್ದರು ಮತ್ತು ಅಲ್ಲಿನ ಭಾರತೀಯರ ಹಕ್ಕುಗಳಿಗಾಗಿ ಪ್ರತಿಪಾದಿಸುವ ಮತ್ತು ಹೋರಾಡುವ ಮೂಲಕ ವಿಶ್ವದಾದ್ಯಂತ ದೊಡ್ಡ ಹೆಸರನ್ನು ಗಳಿಸಿದರು. ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸುವ ಹೊತ್ತಿಗೆ, ಗಾಂಧೀಜಿಯವರು ಅದಾಗಲೇ  ರಾಜಕೀಯ ವಲಯಗಳಲ್ಲಿ ಪ್ರಸಿದ್ಧರಾಗಿದ್ದರು.

ಅತಿ ಕಡಿಮೆ ಸಮಯದಲ್ಲಿ, ಅವರ ಸರಳ ಜೀವನ ಶೈಲಿ ಮತ್ತು ಉನ್ನತ ಚಿಂತನೆಯು ತಕ್ಷಣವೇ ಅವರನ್ನು ಭಾರತೀಯ ಸಮಾಜದ ಕೆಳವರ್ಗದ ಜನರೊಂದಿಗೆ ಸಂಪರ್ಕಿಸಿತು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಇತ್ಯಾದಿ ಮತ್ತು ಎಲ್ಲಾ ಧರ್ಮಗಳು, ಸಂಸ್ಕೃತಿಗಳು ಮತ್ತು ರಾಜ್ಯಗಳ ಜನರು ಅವರನ್ನು ತಮ್ಮ ನಾಯಕನನ್ನಾಗಿ ಮತ್ತು ಪ್ರಭಾವಿ ವ್ಯಕ್ತಿಯಾಗಿ ಸ್ವೀಕರಿಸಿದರು ಮತ್ತು ಅವರ ಸಂಕಟಗಳನ್ನು  ಪರಿಹರಿಸಬಲ್ಲ ವ್ಯಕ್ತಿ ಎಂದು ಪರಿಗಣಿಸಿದರು.

ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಮೂರು ದಶಕಗಳಲ್ಲಿ ಬ್ರಿಟಿಷರ ದಬ್ಬಾಳಿಕೆಯ ನೀತಿಗಳ ವಿರುದ್ಧ, ರೈತರು ಮತ್ತು ಬಡ ಭಾರತೀಯರ ಹಕ್ಕುಗಳಿಗಾಗಿ ಹೋರಾಡುವ ಅನೇಕ ಆಂದೋಲನಗಳನ್ನು ಮುನ್ನಡೆಸಿದರು. ಕೆಲವು ಪ್ರಸಿದ್ಧ ಚಳುವಳಿಗಳೆಂದರೆ, ಚಂಪಾರನ್ ಚಳುವಳಿ (1917), ಖೇಡ ಚಳುವಳಿ (1918), ಅಸಹಕಾರ ಚಳುವಳಿ (1920), ಉಪ್ಪಿನ ಸತ್ಯಾಗ್ರಹ (1930)ಮತ್ತು ಕ್ವಿಟ್ ಇಂಡಿಯಾ ಚಳುವಳಿ (1942).

ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿಯನ್ನು  ರಾಷ್ಟ್ರೀಯ ರಜಾ ದಿನವಾಗಿ ಆಚರಿಸಲಾಗುತ್ತದೆ, ಮತ್ತು ಎಲ್ಲಾ ಕಚೇರಿಗಳು ಮತ್ತು ಸಂಸ್ಥೆಗಳು ಸಾಮಾನ್ಯವಾಗಿ ಈ ದಿನ ಮುಚ್ಚಲ್ಪಡುತ್ತವೆ. ಭಾರತದ ಜನರು ಮಹಾತ್ಮ ಗಾಂಧಿಯವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ ಮತ್ತು ಅವರು ಗಾಂಧಿ ಜಯಂತಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಶಾಲೆಗಳು, ಕಾಲೇಜುಗಳು, ಕಚೇರಿಗಳು ಅಥವಾ ಇತರೆ ಸ್ಥಳಗಳಲ್ಲಿನ ಆಚರಣೆಗಳು ವಿಭಿನ್ನವಾಗಿರಬಹುದು ಆದರೆ ಅವುಗಳು ಉದ್ದೇಶ ಒಂದೇ ಆಗಿರುತ್ತದೆ. ಅದು ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಷ್ಟ್ರ ಪಿತ  ಮಹಾತ್ಮ ಗಾಂಧಿಯವರನ್ನು  ಗೌರವಿಸುವುದು ಮತ್ತು ಅವರ ಸತ್ಯ ಮತ್ತು ಅಹಿಂಸೆ ತತ್ವವನ್ನು ನೆನಪಿಸಿಕೊಳ್ಳುವುದು,ಮತ್ತು ಅವರ ಮಾರ್ಗದಲ್ಲಿ ನಡೆಯುವುದು. 

ಶಾಲೆಗಳಲ್ಲಿ

ಭಾರತದಾದ್ಯಂತ ಶಾಲೆಗಳಲ್ಲಿ ಗಾಂಧಿ ಜಯಂತಿ ಆಚರಣೆಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಚಿಕ್ಕ ಮಕ್ಕಳು ಧೋತಿಯನ್ನು ಧರಿಸುತ್ತಾರೆ ಮತ್ತು ಕೋಲು ಹಿಡಿದು ಗಾಂಧಿಯಂತೆ ಕಾಣಲು ಪ್ರಯತ್ನಿಸುತ್ತಾರೆ. ಶಾಲೆಗಳಲ್ಲಿ  ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಮತ್ತು  ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ  ಬಹುಮಾನ ವಿತರಿಸಲಾಗುತ್ತದೆ. ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿವಿಧ ಚಳುವಳಿಗಳ ಆಧಾರದ ಮೇಲೆ ಮಕ್ಕಳು ಹಲವಾರು ನಾಟಕಗಳನ್ನು ಪ್ರದರ್ಶಿಸುತ್ತಾರೆ. 

ಕಚೇರಿಗಳಲ್ಲಿ

ಗಾಂಧಿ ಜಯಂತಿಯ ಪ್ರಯುಕ್ತ ಸರ್ಕಾರಿ  ಕಚೇರಿಗಳಿಗೆ ರಜೆ ಘೋಷಿಸಲಾದರು ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನೌಕರರು ಕಡ್ಡಾಯವಾಗಿ ಕಚೇರಿಗೆ ಹಾಜರಿರಬೇಕು. ನೌಕರರ ಸಮ್ಮುಖದಲ್ಲಿ ಗಾಂಧಿ ಜಯಂತಿಯನ್ನು, ಆಚರಿಸಲಾಗುತ್ತದೆ ಮತ್ತು ಗಾಂಧೀಜಿಯವರ ಜೀವನ ಮತ್ತು ಕಾರ್ಯಗಳ ಕುರಿತು ಚರ್ಚೆಗಳು ನಡೆಯುತ್ತವೆ. ನೌಕರರು ತಮ್ಮ ಜೀವನದುದ್ದಕ್ಕೂ ಗಾಂಧಿ ಪ್ರತಿಪಾದಿಸಿದಂತೆ ಪ್ರಾಮಾಣಿಕತೆ ಮತ್ತು ಅಹಿಂಸೆಯಲ್ಲಿ ತಮ್ಮ ನಂಬಿಕೆಯನ್ನು ದೃಢೀಕರಿಸುತ್ತಾರೆ.

ಇತರೆ ಸ್ಥಳಗಳು

ದೇಶದಾದ್ಯಂತ ಹಲವಾರು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಭಾರತದ ಪ್ರತಿಯೊಂದು ನಗರವು ಮಹಾತ್ಮ ಗಾಂಧಿಯವರ ಹೆಸರಿನ ವೃತ್ತಗಳು ಅಥವಾ ರಸ್ತೆಗಳನ್ನು ಹೊಂದಿದೆ, ಮತ್ತು ಅವರ ಪ್ರತಿಮೆಯನ್ನು ವೃತ್ತಾ ಅಥವಾ ಉದ್ಯಾನವನಗಳಲ್ಲಿ ಇರಿಸಲಾಗಿದೆ. ಜನರು ಮತ್ತು ಸ್ಥಳೀಯ ರಾಜಕಾರಣಿಗಳು ಬೆಳಿಗ್ಗೆ ಆ ಸ್ಥಳಗಳಲ್ಲಿ ಸೇರುತ್ತಾರೆ ಮತ್ತು ಗಾಂಧಿ ಪ್ರತಿಮೆಗೆ ಹಾರ ಹಾಕಿ ರಾಷ್ಟ್ರಪಿತನ್ನು ಅಭಿನಂದಿಸುತ್ತಾರೆ.

ದೆಹಲಿಯ ರಾಜಘಾಟ್ ನಲ್ಲಿ

ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿರುವ ರಾಜಘಟ್ ಮಹಾತ್ಮ ಗಾಂಧಿಯವರ ಅಂತ್ಯಕ್ರಿಯೆಯ ಸ್ಥಳವಾಗಿದೆ.ಆ ದಿನದಂದು  ರಾಜಕಾರಣಿಗಳು ಪಕ್ಷಾತೀತವಾಗಿ ರಾಜ್ ಘಾಟ್ ಗೆ ಭೇಟಿ ನೀಡುತ್ತಾರೆ ಅಲ್ಲಿ ಬಾಪು ಅವರಿಗೆ ಗೌರವ ಸಲ್ಲಿಸುತ್ತಾರೆ. ಗಾಂಧಿ ಜಯಂತಿಯಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಇತರೆ ಹಿರಿಯ ಸಚಿವರು ರಾಜ್ ಘಾಟ್ ಗೆ ಭೇಟಿ ನೀಡುವುದು ಸರ್ವೇಸಾಮಾನ್ಯ

ತೀರ್ಮಾನ

ಮಹಾತ್ಮ ಗಾಂಧಿಯವರು ಅಸಾಧಾರಣ ನಾಯಕತ್ವದ ಗುಣ ಮತ್ತು ಧೈರ್ಯದ ವ್ಯಕ್ತಿಯಾಗಿದ್ದು ಅವರು ಭಾರತವನ್ನು ಸ್ವಾತಂತ್ರ್ಯದ ಹಾದಿಯಲ್ಲಿ ಮುನ್ನಡೆಸಿದರು ಅವರ ಜಯಂತಿಯನ್ನು ಆಚರಿಸುವುದು ಸ್ವಾತಂತ್ರ್ಯ ಹೋರಾಟದತ್ತ ಹಿಂತಿರುಗಿ ನೋಡಲು ಮತ್ತು ನಮ್ಮ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಗೌರವಿಸಲು ಒಂದು ಅವಕಾಶ ನೀಡುತ್ತದೆ. 

FAQ

ಪ್ರಶ್ನೆ 1-  ಗಾಂಧೀಜಿಯವರು ತಮ್ಮ ಮೊದಲ ಸತ್ಯಗ್ರಹವನ್ನು ಎಲ್ಲಿ ನಡೆಸಿದರು?

ಉತ್ತರ- ಗಾಂಧೀಜಿ 1906 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸತ್ಯಾಗ್ರಹವನ್ನು ನಡೆಸಿದರು.

ಪ್ರಶ್ನೆ 2- ಮಹಾತ್ಮ ಗಾಂಧಿಯವರ  ಆಧ್ಯಾತ್ಮಿಕ ಗುರು ಯಾರು?

ಉತ್ತರ- ಮಹಾತ್ಮ ಗಾಂಧಿಯವರ ಆಧ್ಯಾತ್ಮಿಕ ಗುರು ಲಿಯೋ ಟಾಲ್ ಸ್ಟಾಯ.

ಪ್ರಶ್ನೆ 3- ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ-  ಅಕ್ಟೋಬರ್ 2 ಗಾಂಧೀಜಿಯವರ  ಜನ್ಮ ದಿನದಂದು ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ. 

ಪ್ರಶ್ನೆ 4-  ಯಾವ  ವಿಶ್ವವಿದ್ಯಾಲಯವು ತನ್ನ ಸಂಸ್ಥಾಪನ ದಿನದಂದು ಗಾಂಧೀಜಿಯನ್ನು ಆಹ್ವಾನಿಸಿತ್ತು?

ಉತ್ತರ- ಬನಾರಸ್ ಹಿಂದೂ  ವಿಶ್ವವಿದ್ಯಾಲಯವು ತನ್ನ ಸಂಸ್ಥಾಪನ ದಿನದಂದು ಗಾಂಧೀಜಿಯನ್ನು ಆಹ್ವಾನಿಸಿತ್ತು.

ಪ್ರಶ್ನೆ 5-  ಮಹಾತ್ಮ ಗಾಂಧಿ ರಣಿಯ ಬ್ಯಾಂಕ್ ನೋಟ್ ಗಳನ್ನು RBI ಯಾವಾಗ ಬಿಡುಗಡೆ ಮಾಡಿತು ?

ಉತ್ತರ- ಮಹಾತ್ಮ ಗಾಂಧಿ ಸರಣಿಯ ನೋಟುಗಳನ್ನು RBI 1996ರಲ್ಲಿ ಬಿಡುಗಡೆ ಮಾಡಿತು. 

ಇನ್ನಷ್ಟು ಓದಿ

ಮಹಾತ್ಮ ಗಾಂಧಿಯವರ ಜೀವನ ಚರಿತ್ರೆ

ಕನ್ನಡ ರಾಜ್ಯೋತ್ಸವ,ಇತಿಹಾಸ, ಮಹತ್ವ ಮತ್ತು ಆಚರಣೆ

Leave a Comment