ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯು ಎಲ್ಲರನ್ನೂ ಬಾಧಿಸುತ್ತಿದೆ. ಕೂದಲು ಉದುರುವಿಕೆಗೆ ಅನೇಕ ಕಾರಣಗಳಿವೆ ಅವುಗಳನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ. ಇದೇ ಸಮಯದಲ್ಲಿ ಈ ಸಮಸ್ಯೆಗಳನ್ನು ತಡೆದು ಹಾಕಲು ಅನೇಕ ಜನರು ಆಧುನಿಕ ಪರಿಹಾರಗಳನ್ನು ಅನುಸರಿಸುತ್ತಾರೆ. ಇದರ ಅಡ್ಡ ಪರಿಣಾಮಗಳಿಂದ ಕೂದಲಿನ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತದೆ. ಈ ಲೇಖನದಲ್ಲಿ, ಕೂದಲು ಉದುರುವಿಕೆಯನ್ನು ತಡೆಯುವ ಮಾರ್ಗಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇಲ್ಲಿ ಹೇಳಿರುವ ಮನೆಮದ್ದುಗಳು ನಿಮ್ಮ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯಕವಾಗಬಹುದು. ಈ ಮನೆಮದ್ದುಗಳನ್ನು ಕೂದಲು ಉದುರುವಿಕೆಗೆ ಚಿಕಿತ್ಸೆ ಎಂದು ಪರಿಗಣಿಸಬಾರದು. ಸಮಸ್ಯೆ ಗಂಭೀರವಾಗಿದ್ದರೆ ಸಂಬಂಧ ಪಟ್ಟ ವೈದ್ಯರನ್ನು ಸಂಪರ್ಕಿಸಿ.
ಕೂದಲು ಉದುರುವುದನ್ನು ತಡೆಯುವುದು ಹೇಗೆ ಎಂದು ತಿಳಿಯುವ ಮೊದಲು ಕೂದಲು ಹೆಚ್ಚಾಗಿ ಉದುರುವಿಕೆಗೆ ಕಾರಣಗಳೇನು ಎಂಬುದನ್ನು ತಿಳಿಯೋಣ
ಪರಿವಿಡಿ 1. ಕೂದಲು ಉದುರುವಿಕೆಗೆ ಕಾರಣಗಳು. 2. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮನೆಮದ್ದುಗಳು. 3. ಕೂದಲು ಉದುರುವಿಕೆಯನ್ನು ತಡೆಯಲು ಇನ್ನೂ ಕೆಲವು ವಿಧಾನಗಳು. |
ಕೂದಲು ಉದುರುವಿಕೆಗೆ ಕಾರಣಗಳು ( Reasons for Hair fall in Kannada)
ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ, ಅದರಲ್ಲಿ ಕೆಲವು ಪ್ರಮುಖ ಕಾರಣಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.
ಅನುವಂಶಿಯತೆ- ಕೂದಲು ಉದುರುವಿಕೆಗೆ ಅನುವಂಶಿಯತೆಯು ಒಂದು ಪ್ರಮುಖ ಕಾರಣವಾಗಿದೆ. ಕುಟುಂಬದಲ್ಲಿ ಯಾರಾದರೂ ಮೊದಲು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೊಂದಿದ್ದರೆ ನಂತರ ಕುಟುಂಬದ ಇತರೆ ಸದಸ್ಯರು ಸಹ ಇದನ್ನು ಎದುರಿಸಬೇಕಾಗಬಹುದು.
ದೈಹಿಕ ಅಥವಾ ಭಾವನಾತ್ಮಕ ಒತ್ತಡ- ದೈಹಿಕ ಅಥವಾ ಭಾವನಾತ್ಮಕ ಒತ್ತಡವು ಕೂದಲು ಉದುರುವಿಕೆಗೆ ಕಾರಣವಾಗಬಹುದು, ಈ ರೀತಿಯ ಕೂದಲು ಉದುರುವಿಕೆಯನ್ನು ಟೆಲೋಜೆನ್ ಏಪ್ಲೋಮಿಯಂ ಎಂದು ಕರೆಯಲಾಗುತ್ತದೆ. ನೀವು ಶಾಂಪೂ ಮಾಡಿದಾಗ, ಕೂದಲನ್ನು ಬಾಚಿದಾಗ ಅಥವಾ ಕೂದಲಿನಲ್ಲಿ ನಿಮ್ಮ ಬೆರಳುಗಳನ್ನು ಆಡಿಸಿದಾಗ ಕೂದಲು ಹೆಚ್ಚಾಗಿ ಉದುರುತ್ತದೆ.
ದೈಹಿಕ ಅಥವಾ ಭಾವನಾತ್ಮಕ ಒತ್ತಡದಿಂದ ಕೂದಲು ಉದುರಲು ಕೆಲವು ಕಾರಣಗಳು.
- ಅಧಿಕ ಜ್ವರ ಅಥವಾ ತೀವ್ರ ಸೊಂಕು.
- ಹೆರಿಗೆ.
- ಪ್ರಮುಖ ಶಸ್ತ್ರಚಿಕಿತ್ಸೆ, ಅತಿಯಾದ ಅನಾರೋಗ್ಯ ಅಥವಾ ರಕ್ತದ ನಷ್ಟ.
- ತೀವ್ರ ಭಾವನಾತ್ಮಕ ಒತ್ತಡ.
- ಅತಿಯಾದ ಔಷಧಿಗಳ ಸೇವನೆ.
- ರಕ್ತ ಹೀನತೆ.
- ಉಷ್ಣತೆಯಿಂದ
- ಅತಿಯಾದ ಶಾಂಪು ಮತ್ತು ಬ್ಲೋ ಡ್ರೈಯಿಂಗ್ .
- ಹಾರ್ಮೋನ್ ಗಳ ಬದಲಾವಣೆ.
- ಥೈರಾಯಿಡ್ ರೋಗ.
- ಬ್ಯಾಕ್ಟೀರಿಯಾದ ಸೋಂಕು
ಕೂದಲು ಹೆಚ್ಚಾಗಿ ಉದುರುವಿಕೆಗೆ ಕಾರಣಗಳನ್ನು ತಿಳಿದ ನಂತರ ಈಗ ನಾವು ಕೂದಲು ಹೆಚ್ಚಾಗಿ ಉದುರುವಿಕೆಗೆ ಮಾಡಬಹುದಾದಂತಹ ಮನೆ ಮದ್ದುಗಳ ಬಗ್ಗೆ ತಿಳಿಯೋಣ.
ತೆಂಗಿನ ಎಣ್ಣೆ
ಅಗತ್ಯವಿರುವಷ್ಟು ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲು ಮತ್ತು ಬುರುಡೆಯನ್ನು ಚೆನ್ನಾಗಿ ಮಸಾಜ್ ಮಾಡಿ. ಮರುದಿನ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಈ ರೀತಿ ತೆಂಗಿನ ಎಣ್ಣೆಯನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಬಳಸಿ.
ತೆಂಗಿನ ಎಣ್ಣೆಯನ್ನು ವಿವಿಧ ಕೂದಲು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಕೂದಲಿನ ಹಾನಿಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆ ಉಪಯುಕ್ತವಾಗಿದೆ. ಇದು ತುಂಬಾ ಸೌಮ್ಯವಾಗಿರುತ್ತದೆ ಮತ್ತು ಕೂದಲಿಗೆ ಆಳವಾದ ಪೋಷಣೆಯನ್ನು ನೀಡುತ್ತದೆ. ಕೂದಲು ತೊಳೆಯುವ ಮೊದಲು ಅಥವಾ ನಂತರ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಪ್ರೊಟೀನ್ ಗಳನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಲ್ಲದೆ ತೆಂಗಿನ ಎಣ್ಣೆಯ ಬಳಕೆಯು ಕೂದಲು ಹಾನಿ ಅಥವಾ ಒಡೆಯುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ರಸ
ಒಂದು ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಅದರ ರಸವನ್ನು ತೆಗೆಯಿರಿ. ನಂತರ ಹತ್ತಿಯ ಸಹಾಯದಿಂದ, ರಸವನ್ನು ಕೂದಲಿನ ಬೇರುಗಳಿಗೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ಕೂದಲನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ, ನಂತರ ಶಾಂಪೂ ಮಾಡಿ.
ಕೂದಲಿನ ಬುಡಕ್ಕೆ ಹಸಿ ಈರುಳ್ಳಿಯ ರಸವನ್ನು ಬಳಸುವುದರಿಂದ ಕೂದಲು ಮರು ಬೆಳವಣಿಗೆಗೆ ಇದು ಉಪಯುಕ್ತವಾಗಿದೆ.
ಕರಿಬೇವಿನ ಎಲೆಗಳು
ಅರ್ಧ ಕಪ್ ತೆಂಗಿನ ಎಣ್ಣೆಗೆ ಒಂದು ಇಡಿ ಕರಿಬೇವಿನ ಎಲೆಗಳನ್ನು ಹಾಕಿ ಅದನ್ನು ಲೋಹದ ಪಾತ್ರೆಯಲ್ಲಿ ಬಿಸಿ ಮಾಡಿ. ಮಿಶ್ರಣವು ತಿಳಿ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ ಗ್ಯಾಸ್ ಆಫ್ ಮಾಡಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಮಿಶ್ರಣವು ತಂಪಾದ ನಂತರ ಅದನ್ನು ಫಿಲ್ಟರ್ ಮಾಡಿ ನಂತರ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ 2 ರಿಂದ 3 ಗಂಟೆಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ಕಂಡಿಷ್ನರ್ ಬಳಸಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಬಳಸಿ.
ಕರಿಬೇವಿನ ಎಲೆಗಳನ್ನು ಕೂದಲಿಗೆ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದು ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಲು ಮತ್ತು ಹೊಸ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕರಿಬೇವಿನ ಎಲೆಗಳು ಕೂದಲು ಬಿಳಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೊಟ್ಟೆ
ಒಂದು ಮೊಟ್ಟೆಯ ಬಿಳಿ ಭಾಗವನ್ನು ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧ ಗಂಟೆಯ ನಂತರ ಕೂದಲನ್ನುಬೆಚ್ಚನೆಯ ನೀರಿನಿಂದ ಶಾಂಪೂ ಬಳಸಿ ತೊಳೆಯಿರಿ.
ಕೂದಲು ಆರೋಗ್ಯಕರವಾಗಿರಲು ಮೊಟ್ಟೆಯು ಪರಿಣಾಮಕಾರಿ ಅಂಶವಾಗಿದೆ. ಇದು ಕೂದಲನ್ನು ಆರೋಗ್ಯಕರವಾಗಿಡಲು ಮಾತ್ರವಲ್ಲದೆ ಕೂದಲು ಒಡೆಯುವಿಕೆಯನ್ನು ತಡೆಯುತ್ತದೆ.ಕೂದಲಿಗೆ ಮೊಟ್ಟೆಯನ್ನು ಆಲಿವ್ ಎಣ್ಣೆ, ಜೇನುತುಪ್ಪ,ನಿಂಬೆ ರಸ ಮತ್ತು ಮೊಸರಿನಂತಹ ಅನೇಕ ಇತರ ಪದಾರ್ಥಗಳೊಂದಿಗೆ ಬಳಸಬಹುದು. ಇದು ಮಾತ್ರವಲ್ಲದೆ ಮೊಟ್ಟೆಯ ಹಳದಿ ಲೋಳೆಯು ಕೂದಲಿಗೆ ಪ್ರಯೋಜನಕಾರಿಯಾಗಿದೆ, ಮತ್ತು ಕೂದಲು ಉದುರುವಿಕೆಗೆ ಉಪಯುಕ್ತ ಚಿಕಿತ್ಸೆಯಾಗಿ ಕಾರ್ಯ ನಿರ್ವಹಿಸುತ್ತದೆ.
ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಸಣ್ಣಗೆ ಪುಡಿ ಮಾಡಿ ತೆಂಗಿನ ಎಣ್ಣೆಯಲ್ಲಿ ಎಣ್ಣೆ ಕಪ್ಪಾಗುವವರೆಗೆ ಕುದಿಸಿ. ಎಣ್ಣೆ ತಣ್ಣಗಾದ ನಂತರ ತಲೆಗೆ ಮಸಾಜ್ ಮಾಡಿ, ಸುಮಾರು ಒಂದು ಗಂಟೆಗಳ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ನೆಲ್ಲಿಕಾಯಿಯ ಬಳಕೆಯು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯೊಂದಿಗೆ ನೆಲ್ಲಿಕಾಯಿಯನ್ನು ಬಳಸಿದರೆ ಕೂದಲು ಉದುರುವಿಕೆಯನ್ನುತಡೆಯಬಹುದು. ಜೊತೆಗೆ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆಯಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುವುದರಿಂದ ಇದು ಕೂದಲು ಉದುರುಕೆಯನ್ನು ತಡೆಗಟ್ಟುತ್ತದೆ.
ಮೊಸರು
ಸ್ವಲ್ಪ ಮೆಂತ್ಯ ಕಾಳುಗಳನ್ನುಸಣ್ಣಗೆ ಪುಡಿ ಮಾಡಿ, ಅದನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ. ಆ ಮಿಶ್ರಣವನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ಸುಮಾರು 30 ರಿಂದ 45 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಕೂದಲನ್ನು ತೊಳೆಯಿರಿ ನಂತರ ಶಾಂಪೂ ಮಾಡಿ.
ಮೊಸರು ಪ್ರೊಬಯಟಿಕಗಳ ಮೂಲವಾಗಿದೆ. ಸಂಶೋಧನೆಯ ಪ್ರಕಾರ ಪ್ರೊ ಬಯಾಟಿಕಳ ಬಳಕೆಯು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ದಾಸವಾಳ
ಎರಡು ಕಪ್ ತೆಂಗಿನ ಎಣ್ಣೆಯಲ್ಲಿ ಹತ್ತು ದಾಸವಾಳದ ಹೂಗಳನ್ನು ಬೆರೆಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ.ಈ ಎಣ್ಣೆಯನ್ನು ಪ್ರತಿದಿನ ರಾತ್ರಿ ತಲೆ ಮತ್ತು ಕೂದಲಿಗೆ ಹಚ್ಚಿ ಮರುದಿನ ಬೆಳಿಗ್ಗೆ ತೊಳೆಯಿರಿ. ಇದಲ್ಲದೆ ದಾಸವಾಳದ ಎಲೆಗಳನ್ನು ಸಹ ಬಳಸಬಹುದು ,ಎರಡು ದಾಸವಾಳದ ಹೂಗಳು 5 ರಿಂದ 6 ದಾಸವಾಳದ ಎಲೆಗಳು ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ, ನಂತರ ಅದನ್ನು ಸೋಸಿ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ 30 ರಿಂದ 60 ನಿಮಿಷಗಳ ನಂತರ ಶಾಂಪೂ ಮತ್ತು ಕಂಡಿಷನರ್ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಇದನ್ನು ಬಳಸುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.
ದಾಸವಾಳದ ಹೂಗಳು ಮತ್ತು ಎಲೆಗಳು ಕೂದಲಿಗೆ ಪ್ರಯೋಜನಕಾರಿಯಾಗಿದೆ. ದಾಸವಾಳದ ಹೂಗಳು ಮತ್ತು ಎಲೆಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹೂವುಗಳಿಗಿಂತ ಎಲೆಗಳು ಹೆಚ್ಚು ಉಪಯುಕ್ತವೆಂದು ಸಂಶೋಧನೆಯಿಂದ ತಿಳಿದಿದೆ. ಇದರ ಬಳಕೆಯು ಹೆಚ್ಚಿನ ಪ್ರಮಾಣದಲ್ಲಿ ಕೂದಲು ಹೆಚ್ಚಾಗಿ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಅಲೋವೆರಾ ಜೆಲ್/ ಲೋಳೆಸರ
ಅಲೋವೆರಾ ಎಲೆಗಳ ಮಧ್ಯದಲ್ಲಿರುವ ಲೋಳೆಯನ್ನು ತೆಗೆದು ಅದನ್ನು ರುಬ್ಬಿ ಪೇಸ್ಟ್ ಮಾಡಿ. ನಂತರ ಅದನ್ನು ಕೂದಲಿಗೆ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. 30 ರಿಂದ 40 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಇದನ್ನು ಪುನರಾವರ್ತಿಸಿ.
ಅಲೋವೆರಾ ಚರ್ಮದ ಜೊತೆಗೆ ಕೂದಲಿನ ಆರೋಗ್ಯಕ್ಕೂ ಸಹ ಪ್ರಯೋಜನಕಾರಿಯಾಗಿದೆ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲು ಬೆಳವಣಿಗೆಗೆ ಇದು ಸಹಕಾರಿಯಾಗಿದೆ
ರೋಸ್ಮೆರಿ ಎಣ್ಣೆ
ಅಗತ್ಯವಿರುವಷ್ಟು ಆಲಿವ್ ಅಥವಾ ತೆಂಗಿನ ಎಣ್ಣೆಗೆ 8 ರಿಂದ 10 ಹನಿಗಳಷ್ಟು ರೋಸ್ಮರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ತಲೆಗೆ ಹಚ್ಚಿ ಮರುದಿನ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೆ ಒಂದರಿಂದ ಎರಡು ಬಾರಿ ಬಳಸಬಹುದು.
ರೋಸ್ ಮೇರಿ ಎಣ್ಣೆಯ ಬಳಕೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ರೋಸ್ಮರಿ ಎಣ್ಣೆ ಅಥವಾ ಅದರ ಎಲೆಗಳ ಬಳಕೆಯು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹಸಿರು ಚಹಾ
ಎರಡು ಹಸಿರು ಚಹಾ ಚೀಲಗಳನ್ನು ಮೂರು ಕಪ್ ಬಿಸಿ ನೀರಿನಲ್ಲಿ ಹಾಕಿ, ನೀರು ತಣ್ಣಗಾಗುವವರೆಗೂ ಕಾಯಿರಿ. ನಂತರ ಬ್ಯಾಗ್ ಗಳನ್ನು ತೆಗೆದು ಆ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ ಜೊತೆಗೆ ತಲೆಗೆ ಮಸಾಜ್ ಮಾಡಿ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು ಇನ್ನೂ ಕೆಲವು ವಿಧಾನಗಳು.
ಕೂದಲು ಉದುರುವಿಕೆಗೆ ಚಿಕಿತ್ಸೆ ಮತ್ತು ಮನೆಮದ್ದುಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.
- ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ.
- ಬಾಚಣಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
- ನಿಮ್ಮ ಕೈಗಳನ್ನು ಕೂದಲಿನ ಮೇಲೆ ಮತ್ತೆ ಮತ್ತೆ ಆಡಿಸಬೇಡಿ.
- ಬಿಸಿ ನೀರಿನಿಂದ ಕೂದಲನ್ನು ತೊಳೆಯಬೇಡಿ.
- ನಿಮ್ಮ ಕೂದಲನ್ನು ಹಾನಿಕಾರಕ ಸೂರ್ಯನ ಕಿರಣಗಳು ಮತ್ತು ಮಾಲಿನ್ಯದಿಂದ ರಕ್ಷಿಸಿ.
- ಮಾರುಕಟ್ಟೆಯಲ್ಲಿ ಸಿಗುವ ಏರ್ ಕಲರ್ ಅಥವಾ ಇನ್ಯಾವುದೇ ತರದ ಕೆಮಿಕಲ್ ಗಳನ್ನು ಬಳಸಬೇಡಿ.
- ಪ್ರತಿದಿನ ವ್ಯಾಯಾಮ ಮಾಡಿ.
- ಒತ್ತಡ ಮತ್ತು ಆತಂಕದಿಂದ ದೂರವಿರಿ.
- ಯೋಗ ಅಥವಾ ಧ್ಯಾನ ಮಾಡಿ.
FAQ
ಪ್ರಶ್ನೆ 1. ಕೂದಲು ಕತ್ತರಿಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದೇ?
ಉತ್ತರ ಇಲ್ಲ, ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದಿಲ್
ಪ್ರಶ್ನೆ2., ಉದ್ದ ಕೂದಲು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆಯೇ?
ಉತ್ತರ ಇಲ್ಲ, ಉದ್ದನೆಯ ಕೂದಲನ್ನು ಹೊಂದಿರುವುದು ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ.
ಪ್ರಶ್ನೆ3 ಯಾವ ಆಹಾರಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ?
ಉತ್ತರ ವಿಟಮಿನ್ ಎ ಸಮೃದ್ಧವಾಗಿರುವ ಆಹಾರಗಳು ಸಕ್ಕರೆ, ಪಾನಿಯಗಳು ,ಆಲ್ಕೋಹಾಲ್, ಜಂಕ್ ಫುಡ್, ಚಹಾ ಮತ್ತು ಕಾಫಿ, ಅತಿಯಾದ ಸೇವನೆಯೂ ಕೂದಲು ಉದುರುವಿಕೆಗೆ ಕಾರಣವಾಗಬಹುದು.