ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು
ಮಿಸೈಲ್ ಮ್ಯಾನ್ ಎಂದೆ ಪ್ರಖ್ಯಾತರಾಗಿರುವ ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳನ್ನು ಈ ಕೆಳಗೆ ಕನ್ನಡದಲ್ಲಿ ಬರೆಯಲಾಗಿದೆ.
ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು, ಔಲ್ ಫಕೀರ್ ಜೈನ ಲಬ್ಧಿನ್ ಅಬ್ದುಲ್ ಕಲಾಂ, ಅವರನ್ನು ಮಿಸೈಲ್ ಮ್ಯಾನ್ ಎಂದು ಕರೆಯುತ್ತಾರೆ. ಅವರು ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ. ಮತ್ತು ದೇಶಕ್ಕೆ ಅಗ್ನಿ, ಪೃಥ್ವಿ ಮತ್ತು ಇತರ ಕ್ಷಿಪಣಿಗಳನ್ನು ನೀಡಿದ್ದಾರೆ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿಗಳು ಆಗಿದ್ದರು, ಅವರ ಅಧಿಕಾರವಧಿ 2002 ರಿಂದ 2007 ರ ವರೆಗೆ ಇತ್ತು. ಬಡ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಎಲ್ಲಾ ಶಕ್ತಿಶಾಲಿ ದೇಶಗಳಲ್ಲಿ ಭಾರತ ದೇಶದ ಹೆಸರನ್ನು ಸೇರಿಸುವಲ್ಲಿ ತಮ್ಮ ವಿಶೇಷ ಕೊಡುಗೆ ನೀಡಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15 , 1931 ರಂದು ತಮಿಳುನಾಡಿನಲ್ಲಿ ಜನಿಸಿದರು. ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ನೀಡಿ ಗೌರವಿಸಲಾಗಿದೆ.
ಎಪಿಜೆ ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು / APJ Abdul kalam Quotes
1.ನೀವು ಸೂರ್ಯನಂತೆ ಬೆಳಗಬೇಕಾದರೆ, ಮೊದಲು ಸೂರ್ಯನಂತೆ ದಹಿಸಬೇಕು.
-ಅಬ್ದುಲ್ ಕಲಾಂ
2. ನಾವು ಸೋಲಬಾರದು, ಮತ್ತು ಸಮಸ್ಯೆಗಳು ನಮ್ಮನ್ನು ಸೋಲಿಸಲು ನಾವು ಬಿಡಬಾರದು.
-ಅಬ್ದುಲ್ ಕಲಾಂ
3. ಕನಸನ್ನು ನನಸಾಗಿಸುವ ಮೊದಲು ಕನಸು ಕಾಣುವುದು ಅವಶ್ಯಕ.
-ಅಬ್ದುಲ್ ಕಲಾಂ
4. ಬದುಕಿನಲ್ಲಿ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ವ್ಯಕ್ತಿಗೆ ಮಾತ್ರ.
-ಅಬ್ದುಲ್ ಕಲಾಂ
5. ನಮ್ಮ ಮಕ್ಕಳು ಸುಂದರ ಭವಿಷ್ಯವನ್ನು ಪಡೆಯಲು ಇಂದೇ ತ್ಯಾಗ ಮಾಡೋಣ.
-ಅಬ್ದುಲ್ ಕಲಾಂ
6. ನೀವು ನಿಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ, ನೀವು ಏಕ ಮನಸ್ಸಿನಿಂದ ನಿರಂತರ ಪ್ರಯತ್ನ ಮಾಡಬೇಕು.
-ಅಬ್ದುಲ್ ಕಲಾಂ
7. ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಬೇಕಾದರೆ, ಮತ್ತು ಒಂದು ಸುಂದರ ರಾಷ್ಟ್ರವಾಗಬೇಕಾದರೆ, ಸಮಾಜದ ಮೂರು ಪ್ರಮುಖ ಸದಸ್ಯರು ಬದಲಾವಣೆಯನ್ನು ಮಾಡಬಹುದು ಎಂದು ನಾನು ಬಲವಾಗಿ ನಂಬುತ್ತೇನೆ, ಅವರೇ ತಂದೆ, ತಾಯಿ ಮತ್ತು ಗುರು.
-ಅಬ್ದುಲ್ ಕಲಾಂ
8. ನಿಮ್ಮ ಗುರಿಯನ್ನು ನೀವು ತಲುಪುವವರೆಗೆ ಎಂದಿಗೂ ಹೋರಾಟವನ್ನು ನಿಲ್ಲಿಸಬೇಡಿ. ನೀವು ಅನನ್ಯರು, ಜೀವನದಲ್ಲಿ ಗುರಿಯನ್ನು ಹೊಂದಿರಿ, ನಿರಂತರವಾಗಿ ಜ್ಞಾನವನ್ನು ಸಂಪಾದಿಸಿ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠ ಜೀವನವನ್ನು ಅರಿತುಕೊಂಡು ಮುಂದೆಸಾಗಿ.
-ಅಬ್ದುಲ್ ಕಲಾಂ
9.ಜೀವನದಲ್ಲಿ ಈ ನಾಲ್ಕು ವಿಷಯಗಳನ್ನು ಅನುಸರಿಸಿ- ಮಹತ್ತರವಾದ ಗುರಿಯನ್ನು ಹೊಂದುವುದು, ಜ್ಞಾನವನ್ನು ಸಂಪಾದಿಸುವುದು, ಕಠಿಣ ಪರಿಶ್ರಮ ಮತ್ತು ಪರಿತ್ಯಾಗ ಆಗ ಏನನ್ನಾದರೂ ಸಾಧಿಸಬಹುದು.
-ಅಬ್ದುಲ್ ಕಲಾಂ
10.ನಾವು ಸ್ವತಂತ್ರರೆಲ್ಲದಿದ್ದರೆ ಯಾರು ನಮ್ಮನ್ನು ಗೌರವಿಸುವುದಿಲ್ಲ.
-ಅಬ್ದುಲ್ ಕಲಾಂ
ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು
12.ಎತ್ತರವನ್ನು ತಲುಪಲು ಶಕ್ತಿ, ಎಂದರೆ ಸಾಮರ್ಥ್ಯ ಬೇಕು, ಅದು ಎವರೆಸ್ಟ್ ನ ಎತ್ತರವಾಗಿರಲಿ ಅಥವಾ ನಿಮ್ಮ ವೃತ್ತಿಜೀವನವಾಗಿರಲಿ.
-ಅಬ್ದುಲ್ ಕಲಾಂ
11.ಧರ್ಮ ಸ್ಥಾಪನೆಗಾಗಿ ಯಾರನ್ನಾದರೂ ಕೊಲ್ಲುವುದನ್ನು ಯಾವುದೇ ಧರ್ಮದಲ್ಲಿ ಉಲ್ಲೇಖಿಸಲಾಗಿಲ್ಲ.
-ಅಬ್ದುಲ್ ಕಲಾಂ
13.ಯುದ್ಧವು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.
-ಅಬ್ದುಲ್ ಕಲಾಂ
14.ನೀವು ನೋಡಿ, ಕಷ್ಟಪಟ್ಟು ಕೆಲಸ ಮಾಡುವವರಿಗೆ ಮಾತ್ರ ದೇವರು ಸಹಾಯ ಮಾಡುತ್ತಾನೆ. ಈ ತತ್ವವು ತುಂಬಾ ಸ್ಪಷ್ಟವಾಗಿದೆ.
-ಅಬ್ದುಲ್ ಕಲಾಂ
15. ಪ್ರಶ್ನೆಗಳನ್ನು ಕೇಳುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವಾಗಿದೆ. ಆದ್ದರಿಂದ ಅವರು ಪ್ರಶ್ನೆಗಳನ್ನು ಕೇಳಲಿ.
-ಅಬ್ದುಲ್ ಕಲಾಂ
16. ಕಾವ್ಯವು ಅತ್ಯುನ್ನತ ಸಂತೋಷ ಅಥವಾ ಆಳವಾದ ದುಃಖದಿಂದ ಹೊರ ಒಮ್ಮುತ್ತದೆ.
-ಅಬ್ದುಲ್ ಕಲಾಂ
17. ಶ್ರೇಷ್ಠ ಶಿಕ್ಷಕರು, ಜ್ಞಾನ, ಉತ್ಸಾಹ,ಮತ್ತು ಸಹಾನುಭೂತಿಯಿಂದ ಹೊರ ಹೊಮ್ಮುತ್ತಾರೆ.
-ಅಬ್ದುಲ್ ಕಲಾಂ
18. ಸ್ವಾವಲಂಬನೆ ಯೊಂದಿಗೆ ಸ್ವಾಭಿಮಾನ ಬರುತ್ತದೆ . ಎಂದು ನಿಮಗೆ ತಿಳಿದಿಲ್ಲವೇ ?
-ಅಬ್ದುಲ್ ಕಲಾಂ
19. ಸಣ್ಣ ಗುರಿ ಹೊಂದುವುದು ಅಪರಾಧ, ದೊಡ್ಡ ಗುರಿಯನ್ನು ಹೊಂದಿರಬೇಕು.
-ಅಬ್ದುಲ್ ಕಲಾಂ
20. ವಿಜ್ಞಾನವು ಮಾನವೀಯತೆಗೆ ಒಂದು ಸುಂದರ ಕೊಡುಗೆಯಾಗಿದೆ. ನಾವು ಅದನ್ನು ವಿರೂಪಗೊಳಿಸಬಾರದು.
-ಅಬ್ದುಲ್ ಕಲಾಂ
21. ಅಂತಿಮವಾಗಿ ಶಿಕ್ಷಣದ ನಿಜವಾದ ಅರ್ಥ, ಸತ್ಯದ ಅನ್ವೇಷಣೆಯಾಗಿದೆ, ಇದು ಜ್ಞಾನ ಮತ್ತು ಜ್ಞಾನೋದಯದ ಮೂಲಕ ಅಂತ್ಯವಿಲ್ಲದ ಪ್ರಯಾಣವಾಗಿದೆ.
-ಅಬ್ದುಲ್ ಕಲಾಂ
22.ಸೋಲಿನ ಕಹಿ ಮಾತ್ರೆಯನ್ನು ಸವಿಯದ ಹೊರತು ಯಶಸ್ಸಿಗೆ ಹಂಬಲಿಸಲು ಸಾಧ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ
-ಅಬ್ದುಲ್ ಕಲಾಂ
23.ಹೃದಯದಲ್ಲಿ ಸದಾಚಾರ ಇದ್ದಾಗ ಮನೆಯಲ್ಲಿ ಸಾಮರಸ್ಯ ಇರುತ್ತದೆ. ಮನೆಯಲ್ಲಿ ಸಾಮರಸ್ಯ ಇದ್ದಾಗ ರಾಷ್ಟ್ರದಲ್ಲಿ ಸುವ್ಯವಸ್ಥೆ ಇರುತ್ತದೆ. ರಾಷ್ಟ್ರದಲ್ಲಿ ಸುವ್ಯವಸ್ಥೆ ಇದ್ದಾಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.
-ಅಬ್ದುಲ್ ಕಲಾಂ
24. ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದ್ದು, ಆದರೆ ಪ್ರತಿಯೊಂದು ಕಪ್ಪು ಅಲಗೆಯು ಹಲಗೆ ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.
-ಅಬ್ದುಲ್ ಕಲಾಂ
25. ಒಂದು ಉತ್ತಮ ಪುಸ್ತಕ 100 ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
-ಅಬ್ದುಲ್ ಕಲಾಂ
26. ಇತರರಿಗಾಗಿ ನಿಮ್ಮ ನಂಬಿಕೆಯನ್ನು ಎಂದಿಗೂ ಬಿಟ್ಟು ಕೊಡಬೇಡಿ, ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರು ನಿಭಾಯಿಸಲು ಸಾಧ್ಯವಿಲ್ಲ.
-ಅಬ್ದುಲ್ ಕಲಾಂ
27. ನಾವು ಕನಸು ಕಾಣಬೇಕು, ಆ ಕನಸು ನಮ್ಮ ನಿದ್ದೆ ಗೆಡಿಸುವಂತಿರಬೇಕು.
-ಅಬ್ದುಲ್ ಕಲಾಂ
28. ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ, ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ.
-ಅಬ್ದುಲ್ ಕಲಾಂ
29. ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮಗಳು ಅತ್ಯುತ್ತಮ ಔಷಧಿಗಳಾಗಿವೆ.
-ಅಬ್ದುಲ್ ಕಲಾಂ
30. ಶಿಕ್ಷಕರಿಗೆ ಸೃಜನಶೀಲ ಮನಸ್ಸಿರಬೇಕು.
-ಅಬ್ದುಲ್ ಕಲಾಂ